540 ಉದ್ಯೋಗಿಗಳನ್ನ ಕೋಟ್ಯಾಧಿಪತಿಗಳಾಗಿ ಮಾಡಿದ ಸಿಇಒ, ಪ್ರತಿಯೊಬ್ಬರಿಗೂ ಸಿಕ್ಕಿದ್ದು ₹3.7 ಕೋಟಿ ಬೋನಸ್

Published : Dec 27, 2025, 02:29 PM IST
graham walker

ಸಾರಾಂಶ

American CEO bonus: ಅಮೆರಿಕದ ಉದ್ಯಮಿ ಗ್ರಹಾಂ ವಾಕರ್ ತಮ್ಮ ಕಂಪನಿಯನ್ನು ಮಾರಾಟ ಮಾಡುವ ಮೊದಲು 540 ಉದ್ಯೋಗಿಗಳಿಗೆ ₹2,100 ಕೋಟಿ ಬೋನಸ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ಜನರು ಅವರನ್ನು "ನಿಜ ಜೀವನದ ಸಾಂತಾ" ಎಂದು ಕರೆಯುತ್ತಿದ್ದಾರೆ.

ಕ್ರಿಸ್‌ಮಸ್‌ನಲ್ಲಿ ಎಲ್ಲರೂ ಸಾಂತಾಕ್ಲಾಸ್‌ಗಾಗಿ ಕಾತರದಿಂದ ಕಾಯುತ್ತಾರೆ. ಈ ಬಾರಿ ತಮಗೆ ಯಾವ ಉಡುಗೊರೆ ಸಿಗುತ್ತದೆ ಎಂದು ತಿಳಿಯಲು ಕುತೂಹಲದಲ್ಲಿ ಎದುರು ನೋಡುತ್ತಿರುತ್ತಾರೆ. ಇದೇ ಸಮಯಕ್ಕೆ ಅಮೆರಿಕದ ಲೂಸಿಯಾನದ ಉದ್ಯಮಿಯೊಬ್ಬರ ಹೃದಯಸ್ಪರ್ಶಿ ಕೆಲಸವೊಂದು ವೈರಲ್ ಆಗಿದೆ. ಅದು ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ "ರಿಯಲ್ ಲೈಫ್ ಸಾಂತಾ" ಎಂಬ ಬಿರುದನ್ನು ತಂದುಕೊಟ್ಟಿದೆ.

ಗ್ರಹಾಂ ವಾಕರ್ ಫೈಬರ್‌ಬಾಂಡ್ ಎಂಬ ಕಂಪನಿಯ ಸಿಇಒ ಆಗಿದ್ದರು. 46 ವರ್ಷದ ಇವರು ತಮ್ಮ ಬಳಿ ಕೆಲಸ ಮಾಡುತ್ತಿದ್ದ 540 ಉದ್ಯೋಗಿಗಳಿಗೆ ಸುಮಾರು 2,155 ಕೋಟಿ ರೂ. ($240 ಮಿಲಿಯನ್) ಬೋನಸ್‌ ನೀಡಿದ್ದಾರೆ. ಈ ಕಂಪನಿಯು ವಿದ್ಯುತ್ ಉಪಕರಣಗಳನ್ನು ತಯಾರಿಸುತ್ತಿತ್ತು. ಅವರ ವ್ಯವಹಾರವು ಎಷ್ಟು ಚೆನ್ನಾಗಿತ್ತೆಂದರೆ, ಈಡನ್ ಕಾರ್ಪೊರೇಷನ್ ಎಂಬ ಕಂಪನಿಯು ಫೈಬರ್‌ಬಾಂಡ್ ಕಂಪನಿಯನ್ನು ಖರೀದಿಸಲು ಆಸಕ್ತಿ ತೋರಿಸಿತು. ಅದರಂತೆ ಅದನ್ನು ಸುಮಾರು 15,265 ಕೋಟಿ ರೂ.ಗಳಿಗೆ ($1.7 ಬಿಲಿಯನ್) ಮಾರಾಟ ಮಾಡಲಾಯಿತು. ಗ್ರಹಾಂ ಅವರು ಗಳಿಸಿದ ಲಾಭದ ಒಂದು ಭಾಗವನ್ನು ಬೋನಸ್‌ ಆಗಿ ತಮ್ಮ ಉದ್ಯೋಗಿಗಳಿಗೆ ವಿತರಿಸಿದರು.

₹2,100 ಕೋಟಿ ಬೋನಸ್

ವರದಿಗಳ ಪ್ರಕಾರ, ಕಂಪನಿಯ ಒಟ್ಟು ಮಾರಾಟದ ಆದಾಯದ 15% ಅಂದರೆ ಸರಿಸುಮಾರು $240 ಮಿಲಿಯನ್ (ಸರಿಸುಮಾರು ₹2,157 ಕೋಟಿ) ಅನ್ನು 540 ಉದ್ಯೋಗಿಗಳಿಗೆ ವಿತರಿಸಲಾಗಿದೆ. ಇದರರ್ಥ ಪ್ರತಿ ಉದ್ಯೋಗಿಗೆ ಸರಾಸರಿ $443,000 (ಸರಿಸುಮಾರು ₹3.7 ಕೋಟಿ) ಬೋನಸ್ ಸಿಗುತ್ತದೆ. ಕಳೆದ ಜೂನ್‌ನಲ್ಲಿ ಅವರು ತಮ್ಮ ಕಂಪನಿ ಮಾರಿ ಬಂದ ಹಣವನ್ನು ಉದ್ಯೋಗಿಗಳಿಗೆ ಹಂಚಿದರು. ಅನೇಕ ಉದ್ಯೋಗಿಗಳು ತಮಗೆ ಬೋನಸ್ ಸಿಕ್ಕಿದೆ ಎಂದು ನಂಬಲು ಸಾಧ್ಯವಾಗಲಿಲ್ಲ. ಮೊದಲು ಘೋಷಣೆ ಮಾಡಿದಾಗ ಇದು ಕೇವಲ ತಮಾಷೆ ಇರಬೇಕು ಎಂದು ಭಾವಿಸಿದ್ದರು. ಆದರೆ ಬೋನಸ್ ಮೊತ್ತ ಬಂದಾಗಲಂತೂ ನಂಬಲು ಸಾಧ್ಯವಾಗಲಿಲ್ಲ.

ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಯಿತು?
ಈ ನಿರ್ಧಾರವು ನೌಕರರ ಪ್ರಾಮಾಣಿಕತೆಯಿಂದ ಪ್ರೇರಿತವಾಗಿದೆ ಎಂದು ಗ್ರಹಾಂ ವಾಕರ್ ವಿವರಿಸಿದರು. ಕಷ್ಟದ ಸಮಯದಲ್ಲೂ ಅನೇಕ ಉದ್ಯೋಗಿಗಳು ಕಂಪನಿಯೊಂದಿಗಿದ್ದಾರೆ. ಆದ್ದರಿಂದ ಅವರ ನಿಷ್ಠೆಯನ್ನು ಗೌರವಿಸಲು ಬಯಸುವುದಾಗಿ ಗ್ರಹಾಂ ವಾಕರ್ ತಿಳಿಸಿದ್ದಾರೆ. ಜೂನ್‌ನಲ್ಲಿ ಬೋನಸ್ ನೀಡಲು ಪ್ರಾರಂಭಿಸಿದಾಗ ಆರಂಭದಲ್ಲಿ ಅನೇಕ ಉದ್ಯೋಗಿಗಳಿಗೆ ಇದು ಖಚಿತವಾಗಿರಲಿಲ್ಲ. ಕೆಲವರು ಆರಂಭದಲ್ಲಿ ಇದನ್ನು ತಮಾಷೆ ಎಂದು ಭಾವಿಸಿದರೆ, ಇತರರು ಭಾವನಾತ್ಮಕವಾಗಿ ಅತ್ತರು.

ನೌಕರರ ಜೀವನದಲ್ಲಿ ಬದಲಾವಣೆ

ಅನೇಕ ಉದ್ಯೋಗಿಗಳು ತಮ್ಮ ಕನಸುಗಳನ್ನು ನನಸಾಗಿಸಲು ಈ ಹಣವನ್ನು ಬಳಸಿಕೊಂಡರು. ಕೆಲವರು ಗೃಹ ಸಾಲ ಕಟ್ಟಿದರು, ಮತ್ತೆ ಕೆಲವರು ಸಾಲವನ್ನು ತೀರಿಸಿದರು ಮತ್ತು ಇತರರು ತಮ್ಮ ಮಕ್ಕಳ ಕಾಲೇಜು ಶುಲ್ಕವನ್ನು ಪಾವತಿಸಿದರು. 1995 ರಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಮಹಿಳಾ ಉದ್ಯೋಗಿ, ತನ್ನದೇ ಆದ ಅಂಗಡಿಯನ್ನು ತೆರೆಯುವ ಕನಸನ್ನು ನನಸಾಗಿಸಲು ಹಣವನ್ನು ಬಳಸಿದರು. ಇನ್ನೂ ಅನೇಕರು ಹಣವನ್ನು ಇತರ ಪ್ರಮುಖ ಅಗತ್ಯಗಳಿಗಾಗಿ ಬಳಸಿದರು.

ಈ ಹೆಜ್ಜೆ ಏಕೆ ವಿಶೇಷವಾಗಿದೆ?
ಸಾಮಾನ್ಯವಾಗಿ ಕಂಪನಿಯನ್ನು ಮಾರಾಟ ಮಾಡಿದಾಗ ಷೇರುದಾರರು ಬೋನಸ್‌ಗಳನ್ನು ಪಡೆಯುತ್ತಾರೆ. ಆದರೆ ಇಲ್ಲಿ ಉದ್ಯೋಗಿಗಳು ಕಂಪನಿಯಲ್ಲಿ ಷೇರುಗಳನ್ನು ಹೊಂದಿಲ್ಲದಿದ್ದರೂ ಸಹ ಈ ಪ್ರಯೋಜನವನ್ನು ಪಡೆದರು. ಅದಕ್ಕಾಗಿಯೇ ಈ ನಡೆಯನ್ನು "ನಿಜವಾದ ಲೀಡರ್‌ಶಿಪ್" ಮತ್ತು "ಮಾನವೀಯತೆಯ ಮೇಲಿನ ನಂಬಿಕೆ" ಎಂದು ವಿವರಿಸಿರುವುದನ್ನು ನಾವಿಲ್ಲಿ ನೋಡಬಹುದು.

1982 ರಲ್ಲಿ, ವಾಕರ್ ಅವರ ತಂದೆ ಕ್ಲೌಡ್ ವಾಕರ್ ಮತ್ತು ಇತರ 11 ಜನರು ಫೈಬರ್‌ಬಾಂಡ್ ಕಂಪನಿಯನ್ನು ಪ್ರಾರಂಭಿಸಿದರು. 1998 ರಲ್ಲಿ, ಒಂದು ದೊಡ್ಡ ಕಾರ್ಖಾನೆ ಅಪಘಾತ ಸಂಭವಿಸಿತು. ಅವರು ಡಾಟ್-ಕಾಮ್ ಬಿಕ್ಕಟ್ಟು ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸಿದರು. ಈ ಕಷ್ಟದ ಸಮಯದಲ್ಲೂ ತಮ್ಮೊಂದಿಗೆ ನಿಂತವರಿಗೆ ವಾಕರ್ ಬೋನಸ್‌ಗಳನ್ನು ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿರಿಯಾ: ಶುಕ್ರವಾರದ ನಮಾಜ್ ವೇಳೆ ಮಸೀದಿಯಲ್ಲಿ ಸ್ಫೋಟ, 8 ಸಾವು, 18 ಮಂದಿಗೆ ಗಾಯ, ಎಲ್ಲೆಡೆ ಆಂಬ್ಯುಲೆನ್ಸ್ ಸೈರನ್‌ಗಳದ್ದೇ ಸದ್ದು!
ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ