ವೆನಿಜುವೆಲಾ ಆಯ್ತ ಈಗ ಪರ್ಷಿಯಾ ಮೇಲೆ ಕಣ್ಣು: ಡೊನಾಲ್ಡ್ ಟ್ರಂಪ್ ರಹಸ್ಯ ಯೋಜನೆ

Published : Jan 12, 2026, 07:07 AM IST
Donald trump

ಸಾರಾಂಶ

ಇರಾನ್‌ನಲ್ಲಿನ ಆಂತರಿಕ ದಂಗೆಯನ್ನು ಮುಂದಿಟ್ಟುಕೊಂಡು ಅಮೆರಿಕವು ದಾಳಿಯ ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದ್ದು, ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ.

ಜೆರುಸಲೆಂ: ಇರಾನ್‌ನಲ್ಲಿ ಸಂಘರ್ಷ ಹೆಚ್ಚಾದ ಬೆನ್ನಲ್ಲೇ, ‘ಇರಾನ್‌ ದಂಗೆಕೋರರಿಗೆ ನನ್ನ ಬೆಂಬಲವಿದೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬೆಂಬಲಿಸಿದ್ದಾರೆ. ಜೊತೆಗೆ ಸಂಭಾವ್ಯ ಇರಾನ್‌ ದಾಳಿ ತಡೆಗೆ ದೇಶದಲ್ಲಿ ಕಟ್ಟೆಚ್ಚರ ಸಾರಿದ್ದಾರೆ. ಇದು ಈ ಪ್ರದೇಶದಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ.

ಅಮೆರಿಕಕ್ಕೆ ಇರಾನ್‌ ಸ್ಪೀಕರ್‌ ಬಘೇರ್‌ ಎಚ್ಚರಿಕೆ

ಟೆಹ್ರಾನ್‌ ಒಂದು ವೇಳೆ ‘ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಸುಮ್ಮನಿರಲ್ಲ, ಇಸ್ರೇಲ್‌ ಅನ್ನು ಗುರಿಯಾಗಿಸಿ ದಾಳಿ ನಡೆಸಲಿದ್ದೇವೆ. ಅಮೆರಿಕದ ಹಡಗು, ಮಿಲಿಟರಿ ನೆಲೆಗಳೂ ನಮ್ಮ ದಾಳಿಯ ಗುರಿ ಆಗಲಿವೆ ಎಂದು ಇರಾನ್‌ನ ಸ್ಪೀಕರ್‌ ಮೊಹಮ್ಮದ್‌ ಬಘೇರ್‌ ಗಾಲಿಬಾಫ್‌ ಗುಡುಗಿದ್ದಾರೆ

ಟೆಹ್ರಾನ್‌/ವಾಷಿಂಗ್ಟನ್: ಇರಾನಿ ಸರ್ವಾಧಿಕಾರಿ ಆಯತೊಲ್ಲಾ ಖಮೇನಿ ಸರ್ಕಾರದ ವಿರುದ್ಧದ ಜನರ ದಂಗೆ ತೀವ್ರಗೊಳ್ಳುತ್ತಿರುವ ನಡುವೆಯೇ, ಖಮೇನಿ ವಿರೋಧಿ ಅಮೆರಿಕವು ಇರಾನ್‌ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ಸಾಧ್ಯತೆ ಕುರಿತು ಪರಿಶೀಲನೆ ಆರಂಭಿಸಿದೆ ಎನ್ನಲಾಗುತ್ತಿದೆ. ಇಂಥ ಸುದ್ದಿಗಳಿಗೆ ಪೂರಕ ಎನ್ನುವಂತೆ ಅಮೆರಿಕವು ಇರಾನ್‌ ಸುತ್ತ ತನ್ನ ಪಡೆಗಳ ಜಮಾವಣೆ ಹೆಚ್ಚಿಸಿದೆ ಹಾಗೂ ಸ್ನೇಹಿತ ದೇಶ ಇಸ್ರೇಲ್‌ ಜತೆ ಮಾತುಕತೆ ನಡೆಸಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಇದಕ್ಕೆ ಇರಾನ್‌ ಕೂಡ ತಿರುಗೇಟು ನೀಡಲು ರೆಡಿ ಎಂದಿದ್ದು ಅಮೆರಿಕ ಪಡೆಗಳಲ್ಲದೆ ಇಸ್ರೇಲ್‌ ಮೇಲೂ ಪ್ರತಿದಾಳಿಯ ಬೆದರಿಕೆ ಹಾಕಿದೆ,

ಇದರ ಬೆನ್ನಲ್ಲೇ, ‘ಇರಾನ್‌ ದಂಗೆಕೋರರಿಗೆ ನನ್ನ ಬೆಂಬಲವಿದೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬೆಂಬಲಿಸಿದ್ದಾರೆ ಹಾಗೂ ಸಂಭಾವ್ಯ ಇರಾನ್‌ ದಾಳಿ ತಡೆಗೆ ಕಟ್ಟೆಚ್ಚರ ಸಾರಿದ್ದಾರೆ. ಇದು ಈ ಪ್ರದೇಶದಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ.

ಟ್ರಂಪ್‌ ಹೇಳಿದ್ದೇನು?:

ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್. ‘ಇರಾನ್‌ ಹಿಂದೆಂದಿಗಿಂತಲೂ ಹೆಚ್ಚಾಗಿ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದೆ. ಅಮೆರಿಕವು ನೆರವು ನೀಡಲು ಸಿದ್ಧವಿದೆ’ ಎಂದು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ ಸೋಷಲ್‌ನಲ್ಲಿ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಮಿಲಿಟರಿ ಕಾರ್ಯಾಚರಣೆಗಳ ಸಾಧ್ಯಾಸಾಧ್ಯತೆಗಳ ಕುರಿತು ವಿವರಣೆ ನೀಡಲಾಗಿದೆ.

ಇನ್ನು, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಮೆರಿಕವು ತನ್ನ ಸೇನಾ ನಿಯೋಜನೆಯನ್ನೂ ಹೆಚ್ಚಿಸಿದೆ ಎಂದು ಮಾಜಿ ಸೇನಾ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಇದು ಈ ಹಿಂದೆ ಪರ್ಷಿಯಾ ಎಂದು ಕರೆಸಿಕೊಳ್ಳುತ್ತಿದ್ದ ಇರಾನ್‌ ಮೇಲೆ ಅಮೆರಿಕದ ದಾಳಿ ಸಾಧ್ಯತೆಯನ್ನು ಹೆಚ್ಚಿಸಿದೆ.

ಆದರೆ, ‘ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಸುಮ್ಮನಿರಲ್ಲ, ಇಸ್ರೇಲ್‌ ಅನ್ನು ಗುರಿಯಾಗಿಸಿ ದಾಳಿ ನಡೆಸಲಿದ್ದೇವೆ. ಅಮೆರಿಕದ ಹಡಗು, ಮಿಲಿಟರಿ ನೆಲೆಗಳೂ ನಮ್ಮ ದಾಳಿಯ ಗುರಿ ಆಗಲಿವೆ ಎಂದು ಇರಾನ್‌ನ ಸ್ಪೀಕರ್‌ ಮೊಹಮ್ಮದ್‌ ಬಘೇರ್‌ ಗಾಲಿಬಾಫ್‌ ಗುಡುಗಿದ್ದಾರೆ.

ಇಸ್ರೇಲ್‌ನಲ್ಲಿ ಹೈ ಅಲರ್ಟ್‌:

‘ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಮೆರಿಕ ಮಿತ್ರ ಇಸ್ರೇಲ್‌ ಮೇಲೆ ದಾಳಿ ನಡೆಸಲಿದ್ದೇವೆ’ ಎಂದು ಇರಾನ್‌ ಹೇಳಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಹೈಅಲರ್ಟ್‌ ಸಾರಲಾಗಿದೆ. ಸಂಭಾವ್ಯ ಅಮೆರಿಕದ ದಾಳಿ ಬಳಿಕ ಎದುರಾಗಬಹುದಾದ ಭದ್ರತಾ ಬೆದರಿಕೆಗಳನ್ನು ಎದುರಿಸಲು ಈಗಾಗಲೇ ಇಸ್ರೇಲ್‌ ಸಿದ್ಧತೆ ಆರಂಭಿಸಿದೆ.

ಈ ಬಗ್ಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಅಮೆರಿಕ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಅವರು ದೂರವಾಣಿ ಕರೆ ಮೂಲಕ ಇರಾನ್‌ನಲ್ಲಿ ಅಮೆರಿಕದ ಮಧ್ಯಪ್ರವೇಶ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ಗುಪ್ತಚರನ ಬಂಧನ?:

ದೇಶದೊಳಗೆ ನಡೆಯುತ್ತಿರುವ ದಂಗೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂದು ಆರೋಪಿಸುತ್ತಲೇ ಬಂದಿರುವ ಇರಾನ್‌ ಸರ್ಕಾರ ಇದೀಗ, ವಿದೇಶಿ ಗೂಢಚಾರಿಯೊಬ್ಬನನ್ನು ಬಂಧಿಸಿದ್ದಾಗಿ ತಿಳಿಸಿದೆ. ಈ ಮೂಲಕ ದಂಗೆಯ ಹಿಂದಿನ ವಿದೇಶಿ ಕೈವಾಡ ಬಯಲಿಗೆಳೆಯುವುದಾಗಿ ತಿಳಿಸಿದೆ.

ಕ್ಯೂಬಾಗೆ ಹೊಡೆತ ಹೇಗೆ?:

ಕ್ಯೂಬಾ ತೈಲಕ್ಕೆ ವೆನಿಜುವೆಲಾನ್ನೇ ಆಧರಿಸಿದೆ. ಇದಕ್ಕೆ ಪ್ರತಿಯಾಗಿ ಅದು ವೆನಿಜುವೆಲಾಕ್ಕೆ ಸೇನಾ ನೆರವು ನೀಡುತ್ತಿತ್ತು. ಮತ್ತೊಂದೆಡೆ ಕ್ಯೂಬಾದ ಆರ್ಥಿಕ ಸ್ಥಿತಿ ಸರಿಯಿಲ್ಲ. ಕ್ಯೂಬಾಗೆ ವೆನೆಜುವೆಲಾದ ತೈಲ ನಿರ್ಬಂಧಿಸಿದರೆ ಭೀಕರವಾಗಿ ಪರಿಣಮಿಸಲಿದೆ. ಕಳೆದ ವರ್ಷದ ಜನವರಿ ಮತ್ತು ನವೆಂಬರ್ ನಡುವೆ, ವೆನಿಜುವೆಲಾದಿಂದ ಮಾಸಿಕ 27 ಸಾವಿರ ಬ್ಯಾರೆಲ್‌ ತೈಲ ಕ್ಯೂಬಾಗೆ ಹೋಗಿದೆ. ಕ್ಯೂಬಾದ ಶೇ.50ರಷ್ಟು ತೈಲ ಬೇಡಿಕೆಯನ್ನು ವೆನಿಜುವೆಲಾ ನೀಗಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ಮೇಲೆ ದಾಳಿಗಾಗಿ 1000 ಉಗ್ರರು ರೆಡಿ: ಅಜರ್‌ - ನಿಜ ಸಂಖ್ಯೆ ಹೇಳಿದರೆ ವಿಶ್ವ ಬೆಚ್ಚಿ ಬೀಳುತ್ತೆ -
ಡೀಲ್‌ ಮಾಡಿಕೊಳ್ಳದೇ ಇದ್ರೆ, ಗಂಭೀರ ಪರಿಣಾಮ: ಕ್ಯೂಬಾಗೆ ಟ್ರಂಪ್‌ ಧಮಕಿ