
ನವದೆಹಲಿ: ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿಗರು ಅಮೆರಿಕಕ್ಕೆ ಬರುವುದನ್ನು ತಡೆಯಲು ಎಚ್-1ಬಿ ವೀಸಾ ದರ ಹೆಚ್ಚಳದಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಇತ್ತ ಭಾರತೀಯರಿಗೆ ನಿಗದಿತ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ವೀಸಾಗಳನ್ನು ವಿತರಿಸಲಾಗಿದೆ ಹಾಗೂ ಇದರಲ್ಲಿ ಬಹುತೇಕರು ಅನರ್ಹರಿದ್ದಾರೆ ಎಂದು ಚೆನ್ನೈ ಅಮೆರಿಕದ ದೂತಾವಾಸದ ಮಾಜಿ ಸಿಬ್ಬಂದಿ ಹಾಗೂ ಅಮೆರಿಕದ ಮಾಜಿ ಸಂಸದರೊಬ್ಬರು ಆರೋಪ ಮಾಡಿದ್ದಾರೆ.
ಅರ್ಥಶಾಸ್ತ್ರಜ್ಞರೂ ಆಗಿರುವ ಮಾಜಿ ಸಂಸದ ಡಾ। ಡೇವ್ ಬ್ರಾಟ್ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿ, ‘ಕೇವಲ ಶೇ.12ರಷ್ಟು ಎಚ್-1ಬಿ ವೀಸಾವನ್ನು ಚೀನೀಯರು ಪಡೆಯುತ್ತಿದ್ದರೆ, ಶೇ.71ರಷ್ಟು ಭಾರತೀಯರ ಪಾಲಾಗುತ್ತಿದೆ. ವರ್ಷಕ್ಕೆ 85,000 ವೀಸಾಗಳನ್ನಷ್ಟೇ ನೀಡಬಹುದು ಎಂಬ ಮಿತಿಯಿದೆ. ಆದರೆ ಚೆನ್ನೈನಲ್ಲಿ 2024ರಲ್ಲಿ ಅದರ ಎರಡೂವರೆ ಪಟ್ಟು, ಅಂದರೆ 220,000 ಎಚ್-1ಬಿ ವೀಸಾಗಳನ್ನು ವಿತರಿಸಲಾಗಿದೆ. ಅಂತೆಯೇ, ಅವರ ಅವಲಂಬಿತರಿಗೆ ನೀಡಲಾಗುವ ಎಚ್-4 ವೀಸಾ 140,000ದಷ್ಟು ವಿತರಣೆಯಾಗಿದೆ. ಇಲ್ಲಿ ಹಗರಣ ನಡೆದಿದೆ’ ಎಂದು ದೂಷಿಸಿದ್ದಾರೆ.
ಅತ್ತ 2005-07 ಅವಧಿಯಲ್ಲಿ ಚೆನ್ನೈ ದೂತಾವಾಸದಲ್ಲೇ ಕಾರ್ಯನಿರ್ವಹಿಸಿದ್ದ ಮಹ್ವಾಶ್ ಸಿದ್ದಿಕಿ ಎಂಬಾಕೆ ಪ್ರತ್ಯೇಕ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿ, ‘ಎಚ್-1ಬಿ ವೀಸಾ ಪಡೆಯುವವರಲ್ಲಿ ಶೇ.80ರಿಂದ 90ರಷ್ಟು ಮಂದಿ ಅದಕ್ಕೆ ಅನರ್ಹರಾಗಿರುತ್ತಾರೆ. ನಕಲಿ ಪ್ರಮಾಣಪತ್ರ, ದಾಖಲೆಗಳನ್ನು ಸಲ್ಲಿಸಿ ಅಥವಾ ಸಂದರ್ಶನಕ್ಕೆ ನಕಲಿ ಅಭ್ಯರ್ಥಿಯನ್ನು ಕಳಿಸುತ್ತಾರೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದೆವು. ಆದರೆ ರಾಜಕೀಯ ಒತ್ತಡವಿದ್ದ ಕಾರಣ, ಭಾರತೀಯ ರಾಜಕಾರಣಿಗಳನ್ನು ಓಲೈಸುವ ಸಲುವಾಗಿ ಆ ಬಗ್ಗೆ ತನಿಖೆಯನ್ನೇ ನಡೆಸಲಿಲ್ಲ’ ಎಂದು ಆಪಾದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ