
ನ್ಯೂಯಾರ್ಕ್: ಕಳೆದ ಮೂರೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಪ್ರಯತ್ನದ ಭಾಗವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲಸ್ಕಾದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗಿನ ಸಭೆ ವಿಫಲವಾದ ಬೆನ್ನಲ್ಲೇ ಮತ್ತೊಂದು ಮಹತ್ವದ ಸಭೆ ಆಯೋಜನೆಗೊಂಡಿದೆ.
ಕಳೆದ ಫೆಬ್ರವರಿಯಲ್ಲಿ ಅಮೆರಿಕಕ್ಕೆ ಜೆಲೆನ್‌ಸ್ಕಿ ಬಂದಾಗ ನಡೆದಿದ್ದ, ಅಹಿತಕರ ವಾತಾವರಣವನ್ನು ಮತ್ತೆ ಸೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ಈ ಬಾರಿ ಜೆಲೆನ್‌ಸ್ಕಿ ಜತೆಗೆ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅಥವಾ ನ್ಯಾಟೋ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರು ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಚರ್ಚೆ ವೇಳೆ, ಉಕ್ರೇನ್- ಅಮೆರಿಕ ಅಧ್ಯಕ್ಷರ ಸಭೆ ವೇಳೆ ಅಲಾಸ್ಕಾ ಶೃಂಗದಲ್ಲಿ ಪುಟಿನ್ ಇಟ್ಟಿದ್ದ ಡೊನೆಟ್ಸ್ಕ್ ಮತ್ತು ಲುಗನ್ಸ್ಕ್ ಪ್ರಾಂತ್ಯದ ಕೈವಶದ ಬೇಡಿಕೆಯನ್ನು ಟ್ರಂಪ್ ಜೆಲೆನ್‌ಸ್ಕಿ ಅವರ ಮುಂದಿಡಲಿದ್ದಾರೆ
ಪುಟಿನ್- ಟ್ರಂಪ್ ಸಭೆ ವಿಫಲವಾಗಿದ್ದೇಕೆ?
ಈಗಾಗಲೇ ತಾನು ವಶಪಡಿಸಿಕೊಂಡ ಡೊನೆಟ್ಸ್ಕ್‌ನ ಉಕ್ರೇನ್ ತನಗೇ ಬಿಟ್ಟುಕೊಡಲು ರಷ್ಯಾ ಪಟ್ಟು
ಇದಕ್ಕೆ ಪ್ರತಿಯಾಗಿ ಉಲೀದ ಭಾಗದಲ್ಲಿ ತನ್ನ ಅತಿಕ್ರಮಣ ನಿಲ್ಲಿಸುವುದಾಗಿ ರಷ್ಯಾದಿಂದ ಆಶ್ವಾಸನೆ
ಉಕ್ರೇನ್‌ನಲ್ಲಿ ರಷ್ಯನ್ ಭಾಷೆಯನ್ನು ಅಧಿಕೃತಗೊಳಿಸಬೇಕು ಎಂದು ಉಕ್ರೇನ್‌ಗೆ ಪುಟಿನ್ ತಾಕೀತು
2014ರಲ್ಲಿ ತಾನುಆಕ್ರಮಿಸಿಕೊಂಡಿರುವ ಕ್ರೆಮಿಯಾ ಮುಂದೆಯೂ ತನ್ನ ಬಳಿಯೇ ಉಳಿಯಬೇಕು
ಉಕ್ರೇನ್‌ನಲ್ಲಿನ ರಷ್ಯಾದ ಆರ್ಥೋಡಾಕ್ಸ್ ಚರ್ಚ್‌ಗೆ ಅಲ್ಲಿನ ಸರ್ಕಾರ ಸ್ವಾತಂತ್ರ್ಯ ನೀಡಬೇಕು
ಈ ಯಾವುದೇ ಅಂಶಗಳಿಗೆ ಜೆಲೆನ್ಸ್ಕಿ ಒಪ್ಪುವ ಸಾಧ್ಯತೆ ದೂರವಿದ್ದ ಕಾರಣ ಟ್ರಂಪ್- ಪುಟಿನ್ ಚರ್ಚೆ ವಿಫಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ