ಸಾರ್ವಜನಿಕ ಸ್ಥಳಗಳಲ್ಲಿ ಅಡಿಯಿಂದ ಮುಡಿವರೆಗೆ ಮಹಿಳೆಯರಿಗೆ ಬುರ್ಖಾ ಕಡ್ಡಾಯ ಮಾಡಿದ ತಾಲಿಬಾನ್!

By Santosh NaikFirst Published May 8, 2022, 10:13 AM IST
Highlights

"ಇಸ್ಲಾಮಿಕ್ ಎಮಿರೇಟ್ ಮತ್ತು ಅಫ್ಘಾನಿಸ್ತಾನದ ಜನರೊಂದಿಗೆ ಸಹಕರಿಸಲು ನಾವು ಜಗತ್ತಿಗೆ ಕರೆ ನೀಡುತ್ತಿದ್ದೇವೆ. ನಮಗೆ ತೊಂದರೆ ನೀಡಬೇಡಿ. ಹೆಚ್ಚಿನ ಒತ್ತಡವನ್ನು ತರಬೇಡಿ, ಆಫ್ಘನ್ನರು ಒತ್ತಡದಿಂದ ಪ್ರಭಾವಿತರಾಗುವುದಿಲ್ಲ ಎನ್ನುವುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ' ಎಂದು ತಾಲಿಬಾನ್ ತನ್ನ ಆದೇಶದಲ್ಲಿ ಹೇಳಿದೆ.

ಕಾಬೂಲ್ (ಮೇ.8): ನಿರೀಕ್ಷೆಯಂತೆಯೇ ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಆಡಳಿತ (Taliban rulers ) ತನ್ನ "ಅಂಧಾ ಕಾನೂನು'ಗಳನ್ನು ಜಾರಿಗೆ ತರಲು ಮುಂದಾಗಿದೆ. ಶನಿವಾರ ನೀಡಿರುವ ಸ್ಪಷ್ಟ ಹಾಗೂ ನಿಖರ ಆದೇಶದಲ್ಲಿ, ಅಫ್ಘಾನಿಸ್ತಾನದ ಮಹಿಳೆಯರು (Womens) ಸಾವರ್ಜನಿಕ ಸ್ಥಳಗಳಲ್ಲಿ ತಲೆಯಿಂದ ಕಾಲಿನವರೆಗೂ ಮುಚ್ಚುವಂಥ ಬುರ್ಖಾ (burqa) ಧರಿಸಿ ಓಡಾಡಬೇಕು ಎಂದು ಹೇಳಿದೆ. ನಮ್ಮ ಸಹೋದರಿಯರು ಘನತೆಯಿಂದ ಬದುಕಬೇಕು ಎಂದು ನಾವು ಬಯಸುವುದಾಗಿ ತಾಲಿಬಾನ್ ಈ ಆದೇಶದಲ್ಲಿ ಹೇಳಿದೆ.

ತಾಲಿಬಾನ್ ಆಡಳಿತ ಬಂದರೆ ದೇಶದ ಮಹಿಳೆಯರ ಪರಿಸ್ಥಿತಿ ಯಾವ ರೀತಿ ಬದಲಾಗಲಿದೆ ಎಂದು ಊಹೆ ಮಾಡಲಾಗಿತ್ತೋ ಅದೇ ರೀತಿಯಲ್ಲಿ ತಾಲಿಬಾನ್ ತನ್ನ ಹಿಂದಿನ ಕಠಿಣ ನೀತಿ ನಿಯಮಗಳಿಗೆ ಹಿಂತಿರುಗಿದೆ. ತಾಲಿಬಾನ್ ಸರ್ವೋಚ್ಚ ನಾಯಕ (group's supreme leader) ಹೈಬತುಲ್ಲಾ ಅಖುಂದ್ಜಾದಾ (Haibatullah Akhundzada) ಈ ಆದೇಶ ನೀಡಿದ್ದು,  ಮಹಿಳೆಯು ಮನೆಯ ಹೊರಗೆ ತನ್ನ ಮುಖದಿಂದ ಕಾಲಿನವರೆಗೂ ಮುಚ್ಚುವ ಬುರ್ಖಾ ಧರಿಸದೇ ಇದ್ದಲ್ಲಿ, ಆಕೆಯ ತಂದೆ ಅಥವಾ ಹತ್ತಿರದ ಪುರುಷ ಸಂಬಂಧಿಗೆ ಜೈಲು ಶಿಕ್ಷೆ ಅಥವಾ ಸರ್ಕಾರಿ ಉದ್ಯೋಗದಿಂದ ಆತನನ್ನು ವಜಾ ಮಾಡಲಾಗುವುದು ಎಂದು ಹೇಳಿದೆ.

"ಇಸ್ಲಾಮಿಕ್ ಎಮಿರೇಟ್ ಮತ್ತು ಅಫ್ಘಾನಿಸ್ತಾನದ ಜನರೊಂದಿಗೆ ಸಹಕರಿಸಲು ನಾವು ಜಗತ್ತಿಗೆ ಕರೆ ನೀಡುತ್ತಿದ್ದೇವೆ. ನಮಗೆ ತೊಂದರೆ ನೀಡಬೇಡಿ. ಹೆಚ್ಚಿನ ಒತ್ತಡವನ್ನು ತರಬೇಡಿ, ಏಕೆಂದರೆ ಇತಿಹಾಸವು ಸಾಕ್ಷಿಯಾಗಿದೆ, ಆಫ್ಘನ್ನರು ಒತ್ತಡದಿಂದ ಪ್ರಭಾವಿತರಾಗುವುದಿಲ್ಲ," ಸದ್ಗುಣಗಳ ಪ್ರಚಾರ ಮತ್ತು ದುಶ್ಚಟ ತಡೆ ಸಚಿವ ಮೊಹಮ್ಮದ್ ಖಾಲಿದ್ ಹನಫಿ (Mohammad Khalid Hanafi) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಿಂದಿನ 1996-2001ರ ಆಳ್ವಿಕೆಯಲ್ಲಿ ಸಾರ್ವಜನಿಕವಾಗಿ ಮಹಿಳೆಯರಿಗೆ ಕಡ್ಡಾಯವಾಗಿದ್ದ ಉಡುಪನ್ನು ತಾಲಿಬಾನ್ ಉಲ್ಲೇಖಿಸಿದ್ದು, ಸಂಪೂರ್ಣ ಮುಖವನ್ನು ಮುಚ್ಚುವ ನೀಲಿ ಬಣ್ಣದ ಬುರ್ಖಾ ಉತ್ತಮವಾದುದು ಎಂದು ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಮಹಿಳೆಯರು ಧಾರ್ಮಿಕ ಕಾರಣಗಳಿಗಾಗಿ ಹಿಜಾಬ್ ಅನ್ನು ಧರಿಸುತ್ತಾರೆ ಆದರೆ ಕಾಬೂಲ್‌ನಂತಹ ನಗರ ಪ್ರದೇಶಗಳಲ್ಲಿ ಅನೇಕರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳುವುದಿಲ್ಲ. ತಾಲಿಬಾನ್ ಈಗಾಗಲೇ ಪಾಶ್ಚಿಮಾತ್ಯ ಸರ್ಕಾರಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದೆ.   ಹೆಣ್ಣುಮಕ್ಕಳ ಪ್ರೌಢಶಾಲೆಗಳನ್ನು ಮುಚ್ಚುವುದು ಸೇರಿದಂತೆ ಮಹಿಳೆಯರ ಹಕ್ಕುಗಳನ್ನು ಸೀಮಿತಗೊಳಿಸಿದ್ದಕ್ಕಾಗಿ ಕೆಲವು ಧಾರ್ಮಿಕ ವಿದ್ವಾಂಸರು ಮತ್ತು ಇಸ್ಲಾಮಿಕ್ ರಾಷ್ಟ್ರಗಳಿಂದಲೂ ತಾಲಿಬಾನ್ ಟೀಕೆಯನ್ನು ಎದುರಿಸಿದೆ.

ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ಮಿಷನ್ (UNAMA) ಶನಿವಾರದ ಹೇಳಿಕೆಯಲ್ಲಿ ತಾನು ಈ ವಿಷಯದ ಕುರಿತು ತಾಲಿಬಾನ್‌ನೊಂದಿಗೆ ತಕ್ಷಣ ಸಭೆಗಳನ್ನು ನಡೆಸುವುದಾಗಿ ಹೇಳಿದೆ, ತೀರ್ಪಿನ ಪರಿಣಾಮಗಳ ಕುರಿತು ಅಂತರರಾಷ್ಟ್ರೀಯ ಸಮುದಾಯದ ಇತರರೊಂದಿಗೆ ಸಮಾಲೋಚಿಸುವುದಾಗಿ ಹೇಳಿದೆ. "ತಾಲಿಬಾನ್ಅಧಿಕಾರಿಗಳ ಇಂದಿನ ಪ್ರಕಟಣೆಯ ಬಗ್ಗೆ ಯುಎನ್ಎಎಂಎ ತೀವ್ರತರವಾದ ಕಾಳಜಿ ವ್ಯಕ್ತಪಡಿಸಿದೆ. ಈ ನಿರ್ಧಾರವು ಎಲ್ಲಾ ಆಫ್ಘನ್ನರ ಮಾನವ ಹಕ್ಕುಗಳ ಗೌರವ ಮತ್ತು ರಕ್ಷಣೆಗೆ ಸಂಬಂಧಿಸಿದ ಹಲವಾರು ಭರವಸೆಗಳಿಗೆ ವಿರುದ್ಧವಾಗಿದೆ" ಎಂದು ಹೇಳಿಕೆ ತಿಳಿಸಿದೆ.

ಮತೀಯವಾದ ಮುಂದಿಟ್ಟುಕೊಂಡು ರಾಷ್ಟ್ರೀಯವಾದಕ್ಕೆ ಸೆಡ್ಡು ಹೊಡೆಯೋ ಕೆಲಸ ನಡೆದಿದೆ: ಸಚಿವ ಕೋಟಾ

ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಈಗಾಗಲೇ ಅಭಿವೃದ್ಧಿ ನೆರವನ್ನು ಕಡಿತಗೊಳಿಸಿದ್ದಾರೆ ಮತ್ತು ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೂ ನಿಷೇಧ ಹೇರಿದ್ದಾರೆ. ಇದು ಅಫ್ಘಾನಿಸ್ತಾನವನ್ನು ಆರ್ಥಿಕ ಬಿಕ್ಕಟ್ಟಿನತ್ತ ತಳ್ಳಿದೆ.

ತಾಲಿಬಾನ್ ಸಂಸ್ಕೃತಿ ಕರ್ನಾಟಕದಲ್ಲಾಗಲಿ, ಭಾರತದಲ್ಲಾಗಲಿ ಬರಲು ಬಿಡುವುದಿಲ್ಲ: ಸಚಿವ ಬಿ.ಸಿ ಪಾಟೀಲ್

ಮಹಿಳೆ ಹಿಜಾಬ್ ಧರಿಸದಿದ್ದರೆ, ಮೊದಲು ಆಕೆಯ ಪೋಷಕರಿಗೆ (ತಂದೆ, ಸಹೋದರ ಅಥವಾ ಪತಿ) ಎಚ್ಚರಿಕೆ ನೀಡಲಿದೆ. ಆಕೆ ಮತ್ತೆ ತಪ್ಪಿತಸ್ಥಳೆಂದು ಕಂಡುಬಂದರೆ, ಆಕೆಯ ರಕ್ಷಕನನ್ನು ಕರೆಸಲಾಗುವುದು ಮತ್ತು ನಂತರ ಪುನರಾವರ್ತನೆಯಾದರೆ, ರಕ್ಷಕನನ್ನು ಮೂರು ದಿನಗಳ ಕಾಲ ಜೈಲಿನಲ್ಲಿಡಲಾಗುವುದು ಎಂದು ಟೋಲೋ ನ್ಯೂಸ್  ವರದಿ ಮಾಡಿದೆ. ಇದಲ್ಲದೆ, ಮಹಿಳೆ ಮತ್ತೆ ತಪ್ಪಿತಸ್ಥರೆಂದು ಕಂಡುಬಂದರೆ, ಹೆಚ್ಚಿನ ಶಿಕ್ಷೆಗಾಗಿ ಆಕೆಯ ಪೋಷಕರನ್ನು ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಇದಲ್ಲದೆ, ಮಹಿಳಾ ಸಾರ್ವಜನಿಕ ಉದ್ಯೋಗಿಗಳು ಹಿಜಾಬ್ ಧರಿಸದಿದ್ದರೆ ಅವರನ್ನು ವಜಾಗೊಳಿಸಲಾಗುತ್ತದೆ. ಅದಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಪುರುಷ ನೌಕರರು ಅವರ ಕುಟುಂಬದ ಮಹಿಳಾ ಸದಸ್ಯರು ಹಿಜಾಬ್ ಧರಿಸದಿದ್ದರೆ ಅವರ ಕೆಲಸದಿಂದ ಅಮಾನತುಗೊಳಿಸಲಾಗುತ್ತದೆ.

click me!