ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್‌ ನಾಯಕ ರಹೀಮುಲ್ಲಾ ಹಕ್ಕಾನಿ ಸಾವು!

By Santosh Naik  |  First Published Aug 11, 2022, 6:03 PM IST

ಅಲ್‌ಖೈದಾ ನಾಯಕ ಆಯ್ಮುನ್‌ ಅಲ್‌ ಜವಾಹರಿ ಅಮೆರಿಕದ ಡ್ರೋಣ್‌ ದಾಳಿಯಲ್ಲಿ ಸಾವು ಕಂಡ ಬೆನ್ನಲ್ಲಿಯೇ, ಅಫ್ಘಾನಿಸ್ತಾದಲ್ಲಿ ಅಧಿಕಾರ ಹಿಡಿದುಕೊಂಡಿರುವ ತಾಲಿಬಾನ್‌ ಸಂಘಟನೆಯ ಪ್ರಮುಖ ನಾಯಕ ರಹೀಮುಲ್ಲಾ ಹಕ್ಕಾನಿ ಆತ್ಮಹತ್ಯಾ ದಾಳಿಯಲ್ಲಿ ಸಾವು ಕಂಡಿದ್ದಾನೆ ಎಂದು ವರದಿಯಾಗಿದೆ.
 


ಕಾಬೂಲ್‌ (ಆ. 11): ಅಫ್ಘಾನಿಸ್ತಾನ ತಾಲಿಬಾನ್‌ನ ಪ್ರಭಾವಿ ನಾಯಕ ರಹೀಮುಲ್ಲಾ ಹಕ್ಕಾಗಿ ಆತ್ಮಹತ್ಯಾ ದಾಳಿಯಲ್ಲಿ ಸಾವು ಕಂಡಿದ್ದಾನೆ ಎಂದು ವರದಿಯಾಗಿದೆ. ಕಾಬೂಲ್‌ನಲ್ಲಿನ ಅವರ ಮದರಸಾದಲ್ಲಿ ಇರುವಾಗಲೇ ಅವರ ಮೇಲೆ ಆತ್ಮಹತ್ಯಾ ದಾಳಿ ನಡೆದಿದೆ ಎಂದು ವರದಿಯಾಗಿದೆ. ಪ್ರಮುಖ ತಾಲಿಬಾನ್ ಧಾರ್ಮಿಕ ವಿದ್ವಾಂಸ ಮತ್ತು ಕಮಾಂಡರ್ ಶೇಖ್ ರಹೀಮುಲ್ಲಾ ಹಕ್ಕಾನಿ ಅವರು ಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿಯಲ್ಲಿ ಸಾವು ಕಂಡಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್ 2020 ರಲ್ಲಿ ಪೇಶಾವರದ ಅವರ ಮದರಸಾದಲ್ಲಿ ಅವರ ಮೇಲೆ ನಡೆದ ಆತ್ಮಹತ್ಯಾ ದಾಳಿಯಿಂದ ವೇಳೆ ಅವರು ಪವಾಡಸದೃಶ್ಯವಾಗಿ ಪಾರಾಗಿದ್ದರು. ಆ ದಾಳಿಯ ಹೊಣೆಯನ್ನು ಐಎಸ್‌ಕೆ ವಹಿಸಿಕೊಂಡಿತ್ತು. ರಹೀಮುಲ್ಲಾ ಹಕ್ಕಾನಿ ಅಫ್ಘಾನಿಸ್ತಾನದ ನಂಗರ್‌ಹಾರ್‌ಗೆ ಸೇರಿದವರಾಗಿದ್ದಾರೆ. ವರದಿಗಳ ಪ್ರಕಾರ, ದಾಳಿಕೋರ ಹಕ್ಕಾನಿ ಸ್ಕೂಲ್‌ ಬಳಿ ಆಗಮಿಸಿ ದಾಳಿ ನಡೆಸಿದ್ದಾನೆ. ಇದರಲ್ಲಿ ರಹೀಮುಲ್ಲಾ ಹಕ್ಕಾನಿಯ ಜೊತೆ ಇತರ ನಾಲ್ವರು ಕೂಡ ಸಾವು ಕಂಡಿದ್ದಾರೆ ಎನ್ನಲಾಗಿದೆ.
 

click me!