ಸಾವಿಗೂ ಮುನ್ನ ವಿಮೆ ಮಾಡಿಸಿದ್ದ ತಾಲಿಬಾನ್ ಉಗ್ರ!

Published : Dec 14, 2020, 12:10 PM IST
ಸಾವಿಗೂ ಮುನ್ನ ವಿಮೆ ಮಾಡಿಸಿದ್ದ ತಾಲಿಬಾನ್ ಉಗ್ರ!

ಸಾರಾಂಶ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮುಖ್ಯಸ್ಥನಾಗಿ 2015ರ ಜುಲೈನಲ್ಲಿ ಮುಲ್ಲಾ ಅಖ್ತರ್ ಮನ್ಸೂರ್ ನೇಮಕ| ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ನಾಯಕನಾಗಿದ್ದ ಮುಲ್ಲಾ ಅಖ್ತರ್ ಮನ್ಸೂನ್ ಸಾವಿಗೂ ಮುನ್ನ ಜೀವ ವಿಮೆ ಮಾಡಿಸಿದ್ದ| 

ಇಸ್ಲಾಮಾಬಾದ್(ಡಿ.14): ಸಾಮಾನ್ಯ ಜನರು ತಮ್ಮ ಭವಿಷ್ಯದ ಉದ್ದೇಶದಿಂದ ಜೀವ ವಿಮೆ ಮಾಡಿಸುವುದು ಸಾಮಾನ್ಯ. ಆದರೆ, ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ನಾಯಕನಾಗಿದ್ದ ಮುಲ್ಲಾ ಅಖ್ತರ್ ಮನ್ಸೂನ್ ಸಾವಿಗೂ ಮುನ್ನ ಜೀವ ವಿಮೆ ಮಾಡಿಸಿದ್ದ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮುಖ್ಯಸ್ಥನಾಗಿ 2015ರ ಜುಲೈನಲ್ಲಿ ಮುಲ್ಲಾ ಅಖ್ತರ್ ಮನ್ಸೂರ್ ನೇಮಕವಾಗಿದ್ದ. ಇದಾದ ಬಳಿಕ ಆತ ಮುನ್ನ ನಕಲಿ ಗುರುತಿನ ಚೀಟಿ ಬಳಸಿಕೊಂಡು ಪಾಕಿಸ್ತಾನದಲ್ಲಿ ಜೀವ ವಿಮೆಯೊಂದನ್ನು ಖರೀದಿಸಿದ್ದ. ಇದಕ್ಕಾಗಿ 3.50 ಲಕ್ಷ ರು. ಪ್ರೀಮಿಯಂ ಕೂಡಾ ಪಾವತಿಸಿದ್ದ. ಆದರೆ 2016ರ ಮೇ 21ರಂದು ಅಮೆರಿಕ ನಡೆಸಿದ ಡೊ್ರೀನ್ ದಾಳಿಯ ಲ್ಲಲಿ ಮನ್ಸೂರ್ ಹತನಾಗಿದ್ದ.

ಇಲ್ಲಿಯವರೆಗೂ ರಹಸ್ಯವಾಗಿಯೇ ಇದ್ದ ಈ ವಿಷಯ ಇದೀಗ, ಪಾಕಿಸ್ತಾನದಲ್ಲಿ ಉಗ್ರರಿಗೆ ಹಣ ನೀಡಿಕೆ ಪ್ರಕರಣವೊಂದರ ತನಿಖೆಯ ವೇಳೆ ವಿಮಾ ಕಂಪನಿ ಭಯೋತ್ಪಾದಕ ನಿಗ್ರಹ ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಮೂಲಕ ಬೆಳ ಕಿಗೆ ಬಂದಿದೆ. ಅಲ್ಲದೇ ಪ್ರೀಮಿಯಂ ಸಮೇತ 3.50 ಲಕ್ಷ ರು. ಗಳನ್ನು ಹಿಂದಿರುಗಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ