ಆಫ್ಘನ್‌ ಸಿಖ್ಖರ ಭಾರತ ಭೇಟಿಗೆ ಹೈಕಮಾಂಡ್‌ ಸಮ್ಮತಿ ಕೋರಿದ ಉಗ್ರರು!

By Suvarna NewsFirst Published Aug 31, 2021, 11:27 AM IST
Highlights

ಗುರು ತೇಜ್‌ ಬಹದ್ದೂರ್‌ ಸಾಹಿಬ್‌ ಅವರ 400ನೇ ಜನ್ಮ ಜಯಂತಿ 

ಭಾರತಕ್ಕೆ ತೆರಳಲು ಬಯಸಿರುವ 140 ಆಫ್ಘನ್‌ ಸಿಖ್ಖರಿಗೆ ಅನುಮತಿ ನೀಡುವ ವಿಷಯದಲ್ಲಿ ಸಂಘಟನೆಯ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ

ಕಾಬೂಲ್‌(ಆ.31): ಗುರು ತೇಜ್‌ ಬಹದ್ದೂರ್‌ ಸಾಹಿಬ್‌ ಅವರ 400ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾರತಕ್ಕೆ ತೆರಳಲು ಬಯಸಿರುವ 140 ಆಫ್ಘನ್‌ ಸಿಖ್ಖರಿಗೆ ಅನುಮತಿ ನೀಡುವ ವಿಷಯದಲ್ಲಿ ಸಂಘಟನೆಯ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಎಂದು ತಾಲಿಬಾನಿ ಉಗ್ರರು ಹೇಳಿದ್ದಾರೆ.

ಕಳೆದ ವಾರ ಈ ಸಿಖ್ಖರು, ವಿಮಾನ ಏರಲು ಹೊರಟಾಗ ಅವರನ್ನು ಉಗ್ರರು ಬೆದರಿಸಿ ಹಿಂದಕ್ಕೆ ಕಳಿಸಿದ್ದರು. ಬಳಿಕ ಅವರೆಲ್ಲಾ ಸ್ಥಳೀಯ ಗುರುದ್ವಾರವೊಂದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅದಾದ ಬಳಿಕ ಸ್ಥಳೀಯ ಸಿಖ್‌ ಮುಖಂಡರು, ಸ್ಥಳೀಯ ತಾಲಿಬಾನಿಗಳಿಗೆ ಭಾರತಕ್ಕೆ ತೆರಳುವ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದರು.

ಈ ವೇಳೆ ಕೇಂದ್ರ ನಾಯಕರೊಂದಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಸ್ಥಳೀಯ ತಾಲಿಬಾನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಬೂಲ್‌ನಲ್ಲಿ ಇದ್ದ ಆಫ್ಘನ್‌ ಸಿಖ್ಖರು ಇದೀಗ ತವರಾದ ಘಜ್ನಿ, ಜಲಾಲಾಬಾದ್‌ಗೆ ಮರಳಿದ್ದಾರೆ.

click me!