9 ವರ್ಷದ ಹಿಂದೆ ಮೃತಪಟ್ಟವ ಧುತ್ತನೇ ಪ್ರತ್ಯಕ್ಷ : ಡಿಎನ್‌ಎ ಪರೀಕ್ಷೆ ನಡೆಸಿದ ಪೊಲೀಸರಿಗೆ ಶಾಕ್

Published : Mar 23, 2023, 12:40 PM IST
9 ವರ್ಷದ ಹಿಂದೆ ಮೃತಪಟ್ಟವ ಧುತ್ತನೇ ಪ್ರತ್ಯಕ್ಷ : ಡಿಎನ್‌ಎ ಪರೀಕ್ಷೆ ನಡೆಸಿದ ಪೊಲೀಸರಿಗೆ ಶಾಕ್

ಸಾರಾಂಶ

9 ವರ್ಷದ ಹಿಂದೆ ಸತ್ತನೆಂದು ಭಾವಿಸಿದ ವ್ಯಕ್ತಿ ಅಥವಾ ನಿಮ್ಮ ಆತ್ಮೀಯರು, ಕುಟುಂಬ ಸದಸ್ಯರು ನಿಮ್ಮೆದುರು ಧುತ್ತನೇ ಪ್ರತ್ಯಕ್ಷರಾದರೇ ಹೇಗಿರುತ್ತೆ. ಅಚ್ಚರಿಯ ಜೊತೆ ಭಯ ಎಲ್ಲವೂ ಆಗುವುದಲ್ಲವೇ. ಅದೇ ರೀತಿಯ ಘಟನೆಯೊಂದು ಈಗ ಚೀನಾದಲ್ಲಿ ನಡೆದಿದೆ.  

ಬೀಜಿಂಗ್‌: 9 ವರ್ಷದ ಹಿಂದೆ ಸತ್ತನೆಂದು ಭಾವಿಸಿದ ವ್ಯಕ್ತಿ ಅಥವಾ ನಿಮ್ಮ ಆತ್ಮೀಯರು, ಕುಟುಂಬ ಸದಸ್ಯರು ನಿಮ್ಮೆದುರು ಧುತ್ತನೇ ಪ್ರತ್ಯಕ್ಷರಾದರೇ ಹೇಗಿರುತ್ತೆ. ಅಚ್ಚರಿಯ ಜೊತೆ ಭಯ ಎಲ್ಲವೂ ಆಗುವುದಲ್ಲವೇ. ಅದೇ ರೀತಿಯ ಘಟನೆಯೊಂದು ಈಗ ಚೀನಾದಲ್ಲಿ ನಡೆದಿದೆ.  ಚೀನಾದ ಕುಟುಂಬವೊಂದು 2014ರಲ್ಲಿ ತಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಿತ್ತು.  ಆದರೆ ಆತನನ್ನೇ ಹೋಲುವ ವ್ಯಕ್ತಿಯೊಬ್ಬ ಈಗ ಗ್ರಾಮದಲ್ಲಿ ಓಡಾಡುತ್ತಿದ್ದು, ಕುಟುಂಬದವರ ಅಚ್ಚರಿಗೆ ಕಾರಣವಾಗಿದ್ದಲ್ಲದೇ, ಆತನ ವಿಚಿತ್ರ ನಡವಳಿಕೆ ಗಮನಿಸಿದ ಅಲ್ಲಿನ ಪೊಲೀಸರು ಆತನನ್ನು ಹಿಡಿದು ಡಿಎನ್‌ಎ ತಪಾಸಣೆ ಮಾಡಿದ್ದಾರೆ. ಈ ವೇಳೆ ಆತ 2014ರಲ್ಲಿ ಮೃತಪಟ್ಟಿದ್ದಾನೆ ಎಂದು ಗುರುತಿಸಲಾದ ಝು ಕಂಗ್ಲು ಎಂಬ ವ್ಯಕ್ತಿ ಎಂದು ತಿಳಿದು ಬಂದಿದೆ. ಘಟನೆಯಿಂದ ವ್ಯಕ್ತಿಯ ಕುಟುಂಬದವರಲ್ಲದೇ ಪೊಲೀಸರು ಊರವರು ಕೂಡ ಅಚ್ಚರಿಗೊಳಗಾಗಿದ್ದಾರೆ. 

2014ರಲ್ಲಿ ಕಾರು ಅಪಘಾತದಲ್ಲಿ (Car Accident) ಝು ಕಂಗ್ಲು ಮೃತಪಟ್ಟಿದ್ದ,  ಆತನ ಕುಟುಂಬ ಹಾಗೂ ಸ್ನೇಹಿತರು  ಅಪಘಾತವಾದ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಝು ಕಂಗ್ಲು ಶವವನ್ನು ಪತ್ತೆ ಮಾಡಿದ್ದರು. ಇದಾದ ನಂತರ  ಅವರು  ಝು ಕಂಗ್ಲು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು.  ಮನೆಯ ಸದಸ್ಯರು ಬಂಧುಗಳು ಎಲ್ಲರೂ ಶವ ಝು ಕಂಗ್ಲುದೇ ಎಂದು ಗುರುತಿಸಿದ ನಂತರ ಝು ಕಂಗ್ಲುವಿನ ಅಳಿಯ ಆತನ ಅಂತಿಮ ವಿಧಿವಿಧಾನಗಳನ್ನು ನಡೆಸಿದ್ದರು.  ಆದರೆ ಕುಟುಂಬ ಸದಸ್ಯರು ಆತನ ಮರಣೋತ್ತರ ಪರೀಕ್ಷೆಯನ್ನು ನಡೆಸಿರಲಿಲ್ಲ.  ಹೀಗಾಗಿ ಅಂತಿಮ ವಿಧಿವಿಧಾನ (Final ritual) ನಡೆಸಿದ ಕುಟುಂಬ ಆತ ಮೃತನಾದನೆಂದೇ ಭಾವಿಸಿ ಸಹಜವಾಗಿ ಜೀವನ ನಡೆಸಲು ಆರಂಭಿಸಿದರು. 

Death Experience: ಐದು ವರ್ಷಗಳ ಕಾಲ ಸ್ವರ್ಗದಲ್ಲಿದ್ದೆ ಎಂದ ಮಹಿಳೆ, ಸಾವಿನ ನಂತರದ ಅನುಭವವೇ?

ಆದರೆ ಈ ಝು ಕಂಗ್ಲು ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಝು ಕಂಗ್ಲು (Zhuo Kangluo) ಗ್ರಾಮಕ್ಕೆ ಇತ್ತೀಚೆಗೆ  ವ್ಯಕ್ತಿಯೊಬ್ಬ ಆಗಮಿಸಿದ್ದು, ಆತ ವಿಚಿತ್ರವಾಗಿ ವರ್ತಿಸುತ್ತಿದ್ದ. ಅಪರಿಚಿತ ಗ್ರಾಮದಲ್ಲಿ ಓಡಾಡುವುದು ಸ್ಥಳೀಯಾಡಳಿತದ ಗಮನಕ್ಕೂ ಬಂದಿತ್ತು. ಹೀಗಾಗಿ ಅವರು ಈತ ಯಾರು ಎಂದು ತಿಳಿಯಲು ಹಾಗೂ ಗೊಂದಲಕ್ಕೆ ತೆರೆ ಎಳೆಯಲು ಡಿಎನ್‌ಎ ಪರೀಕ್ಷೆಗೆ ಮುಂದಾದರು. 

ಆದರೆ ಡಿಎನ್‌ಎ ವರದಿ ನೋಡಿದ ಝು ಕುಟುಂಬ ಸೇರಿದಂತೆ ಸ್ಥಳೀಯಾಡಳಿತ ಹಾಗೂ ಪೊಲೀಸರಿಗೆ ಶಾಕ್ ಆಗಿತ್ತು, ಏಕೆಂದರೆ ಆ ವ್ಯಕ್ತಿ  ಬೇರೆ ಯಾರೂ ಅಲ್ಲ, ಆತ 2014ರಲ್ಲಿ ಮೃತಪಟ್ಟ ಝು ಎಂಬುದು ಡಿಎನ್‌ಎ ಪರೀಕ್ಷೆಯಿಂದ (DNA test) ಸಾಬೀತಾಯ್ತು. ನಂತರ ಆಡಳಿತಾಧಿಕಾರಿಗಳು ಹಾಗೂ ಪೊಲೀಸರು  ಆತನನ್ನು ಆತನ ಕುಟುಂಬದ ಬಳಿಗೆ ಕರೆದೊಯ್ದಿದ್ದಾರೆ.  ಹೀಗಾಗಿ ಒಮ್ಮೆ ಸತ್ತನೆಂದು ಭಾವಿಸಿದ ಕುಟುಂಬ ಆತನನ್ನು 9 ವರ್ಷಗಳ ಬಳಿಕ ಮತ್ತೆ ಸೇರಿಸಿಕೊಂಡಿದೆ.  ಈ ವೇಳೆ ಝು ತನ್ನ ಮೊಮ್ಮಗನನ್ನು ಭೇಟಿ ಆಗಿದ್ದು,  ಭಾವುಕನಾಗಿದ್ದಾನೆ. ಜೊತೆಗೆ ತನ್ನ ಆಪ್ತರೆಲ್ಲರ ಹೆಸರನ್ನು ಆತ ಬರೆದು ತೋರಿಸಿದ್ದಾನಂತೆ. 

ಸಾವಿನ ನಂತರ ಆತ್ಮ ಮರುಜನ್ಮ ಪಡೆಯೋ ರಹಸ್ಯ ಏನು?

ಆದರೆ ಆತ ಇಷ್ಟು ದಿನ ಎಲ್ಲಿದ್ದ ಏನಾಗಿದ್ದ ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇತ್ತ ಝು ಸಿಕ್ಕಿರುವುದರಿಂದ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಅಂದು ಮೃತಪಟ್ಟವ ಝು ಅಲ್ಲ ಅಂದಾದ ಮೇಲೆ ಅಲ್ಲಿ ಸತ್ತವನಾರು ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ