ಮಹಿಳೆಯರ ಒಳ ಉಡುಪಿನ ಹುಕ್‌ ತೆಗೆದು ಗಿನ್ನೆಸ್‌ ದಾಖಲೆ ಬರೆದ! ವಿಡಿಯೋ ನೋಡಿ ಸುಸ್ತಾದ ಜನರು

Published : Jul 02, 2026, 08:06 PM IST
Guinness World Record

ಸಾರಾಂಶ

ಟರ್ಕಿಯ ವ್ಯಕ್ತಿಯೊಬ್ಬ ಒಂದು ನಿಮಿಷದಲ್ಲಿ ಒಂದೇ ಕೈಯಿಂದ 100 ಮಹಿಳೆಯರ ಬ್ರಾ ಹುಕ್‌ಗಳನ್ನು ತೆಗೆದು ಹೊಸ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 2013ರ 91 ಬ್ರಾಗಳ ಹಿಂದಿನ ದಾಖಲೆಯನ್ನು ಮುರಿದ ಈ ವಿಚಿತ್ರ ಸಾಧನೆಯು ಇದೀಗ ಅಧಿಕೃತವಾಗಿ ದಾಖಲೆ ಪುಸ್ತಕ ಸೇರಿದೆ.

ವಿಶ್ವ ದಾಖಲೆಯ ಪುಟಗಳನ್ನು ತಿರುವಿ ಹಾಕಿದಾಗ ಚಿತ್ರ-ವಿಚಿತ್ರ ದಾಖಲೆಗಳಾಗಿರುವುದನ್ನು ನೋಡಬಹುದು. ಕೆಲವೊಂದು ದಾಖಲೆಗಳನ್ನು ನೋಡಿದಾಗ ಅಬ್ಬಾ, ಮನುಷ್ಯರಿಂದ ಇಂಥ ಸಾಹಸಗಳೂ ಸಾಧ್ಯವೇ ಎಂದು ಅಚ್ಚರಿಗೊಂಡರೆ, ಇನ್ನು ಕೆಲವು ದಾಖಲೆಗಳನ್ನು ನೋಡಿದರೆ ಮುಖ ತಿವುಚಬೇಕಾಗುತ್ತದೆ, ಥೂ ಅಸಹ್ಯ, ಇಂಥದ್ದೆಲ್ಲಾ ದಾಖಲೆ ಆಗತ್ತಾ ಎನ್ನುವುದು ಉಂಟು. ಮತ್ತೆ ಕೆಲವು ಹಾಸ್ಯಾಸ್ಪದ ಎನ್ನಿಸಿದರೂ ಅದನ್ನು ವಿಶ್ವದ ಯಾರೂ ಮಾಡದ ಕಾರಣ ಅದು ದಾಖಲೆಯಾಗಿ ಉಳಿದುಬಿಡುತ್ತವೆ.

ಇದೀಗ ವ್ಯಕ್ತಿಯೊಬ್ಬ ಮಾಡಿದ ದಾಖಲೆ ನೋಡಿ ಹಲವರು ತಲೆ ಚಚ್ಚಿಕೊಂಡಿದ್ದರೆ, ಮತ್ತೆ ಕೆಲವರು ಹುಬ್ಬೇರಿಸಿದ್ದಾರೆ, ಇನ್ನು ಕೆಲವರು ಥೂ ಎನ್ನುತ್ತಿದ್ದಾರೆ, ಮತ್ತಷ್ಟು ಮಂದಿ ಅಬ್ಬಾ ಇದು ಗೊತ್ತಿದ್ದರೆ ನಾನೂ ಟ್ರೈ ಮಾಡ್ತಿದ್ದೆ, ಇಂಥದ್ದೆಲ್ಲಾ ಮಾಡಬಹುದು ಎಂದು ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ. ಅಷ್ಟಕ್ಕೂ ಅಂಥದ್ದೇನು ದಾಖಲೆ ಎಂದರೆ, ಮಹಿಳೆಯರ ಒಳ ಉಡುಪು (ಬ್ರಾ) ಹುಕ್‌ ತೆಗೆದು ದಾಖಲೆ ಬರೆದಿದ್ದಾನೆ ಒಬ್ಬ ಆಸಾಮಿ. ಟರ್ಕಿಯ ವ್ಯಕ್ತಿಯೊಬ್ಬ ಅಂತರ್ಜಾಲದ ಈ ಅನಿರೀಕ್ಷಿತ ಗಿನ್ನೆಸ್ ವಿಶ್ವ ದಾಖಲೆ ಮಾಡಿ ಸಕತ್‌ ವೈರಲ್‌ ಆಗಿದ್ದಾನೆ.

ಒಂದು ನಿಮಿಷದಲ್ಲಿ 100 ಬ್ರಾಗಳ ಹುಕ್ಸ್‌

ಕೇವಲ ಒಂದು ಕೈಯಿಂದ, ಒಂದೇ ನಿಮಿಷದಲ್ಲಿ 100 ಬ್ರಾಗಳ ಹುಕ್ಸ್‌ ತೆಗೆಯುವಲ್ಲಿ ಯಶಸ್ವಿಯಾದ ಅವರು, 2013 ರಿಂದ ಇದ್ದ 91 ಬ್ರಾಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಈ ಪ್ರಯತ್ನದ ಸಮಯದಲ್ಲಿ ಗಿನ್ನೆಸ್ ತೀರ್ಪುಗಾರರು ಹಾಜರಿದ್ದರು ಮತ್ತು ಕ್ಲಿಪ್ ಮಾಡದ ಪ್ರತಿಯೊಂದು ಬ್ರಾವನ್ನು ಸ್ಥಳದಲ್ಲೇ ಪರಿಶೀಲಿಸಿದರು. ಜನರನ್ನು ಇನ್ನಷ್ಟು ಆಘಾತಗೊಳಿಸಿದ್ದು ಏನೆಂದರೆ, ಬೆವರು ಸುರಿಸದೆ ದಶಕದ ಹಳೆಯ ದಾಖಲೆಯನ್ನು ಮುರಿದದ್ದು. ದೃಶ್ಯಗಳನ್ನು ಪರಿಶೀಲಿಸಿದ ನಂತರ, ಗಿನ್ನೆಸ್ ವಿಶ್ವ ದಾಖಲೆಗಳು ಅವರ ಸಾಧನೆಯನ್ನು ಅಧಿಕೃತವಾಗಿ ದೃಢಪಡಿಸಿದವು ಮತ್ತು ವಿಲಕ್ಷಣ ದಾಖಲೆ ಈಗ ಪುಸ್ತಕ ಸೇರಿದೆ.

ಮಹಿಳೆಯರ ಸಹಕಾರ!

ಇಂಟರ್ನೆಟ್ ಬಳಕೆದಾರರು ಇದನ್ನು ಇದುವರೆಗೆ ನೋಡಿದ ವಿಚಿತ್ರವಾದ ಆದರೆ ಅತ್ಯಂತ ಮನರಂಜನೆಯ ದಾಖಲೆಗಳಲ್ಲಿ ಒಂದಾಗಿದೆ ಎಂದು ಕರೆಯುತ್ತಿದ್ದಾರೆ. ಈ ದಾಖಲೆ ಮುರಿಯಲು ಸಹಕರಿಸಿದ ಮಹಿಳೆಯರ ಕ್ರಮಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಂಸದೆಯ ಮನೆಯಲ್ಲಿ 27 ಕೆಜಿ ಚಿನ್ನದ ಒಳ ಉಡುಪು, 927 ಕೋಟಿ ನಗದು! ಜಾಗತಿಕ ಸಂಚಲನ
ಇರಾಕ್ ಸಂಸದೆ ಮನೆಯಲ್ಲಿ ಕಂತೆ ಕಂತೆ ಹಣ, 27 ಕೆಜಿ ಬಂಗಾರ, ಬಂಗಾರದ ಒಳ ಉಡುಪು ಪತ್ತೆ!