ಪ್ರೀತಿ ಮಾಯೆ ಹುಷಾರು ಎಂಬ ಮಾತನ್ನು ನೀವು ಕೇಳಿರುತ್ತಿರಿ. ಈ ಪ್ರೀತಿ ಯಾರಿಗೆ ಹೇಗೆ ಯಾವಾಗ ಹುಟ್ಟುವುದು ಎಂದು ಹೇಳಲು ಸಾಧ್ಯವಿಲ್ಲ, ಅದೇ ರೀತಿ ಇಲ್ಲೊಬ್ಬಳು ಹುಡುಗಿಗೆ ತನ್ನ ಫೋನ್ ಕದ್ದ ಕಳ್ಳನ ಮೇಲೆಯೇ ಮನಸ್ಸಾಗಿದೆ. ಬ್ರೆಜಿಲ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಇವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೀತಿ ಮಾಯೆ ಹುಷಾರು ಎಂಬ ಮಾತನ್ನು ನೀವು ಕೇಳಿರುತ್ತಿರಿ. ಈ ಪ್ರೀತಿ ಯಾರಿಗೆ ಹೇಗೆ ಯಾವಾಗ ಹುಟ್ಟುವುದು ಎಂದು ಹೇಳಲು ಸಾಧ್ಯವಿಲ್ಲ, ಅದೇ ರೀತಿ ಇಲ್ಲೊಬ್ಬಳು ಹುಡುಗಿಗೆ ತನ್ನ ಫೋನ್ ಕದ್ದ ಕಳ್ಳನ ಮೇಲೆಯೇ ಮನಸ್ಸಾಗಿದೆ. ಬ್ರೆಜಿಲ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಇವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರಗಳೆಲ್ಲಾ ನಡೆಯುತ್ತೆ ನೋಡಿ ಹೃದಯ ಕದ್ದ ಹುಡುಗರನ್ನು ಹೆಣ್ಣು ಮಕ್ಕಳು ಪ್ರೀತಿ ಮಾಡಿ ಮದ್ವೆಯಾಗೋದನ್ನು ನೀವ್ ಕೇಳಿರ್ತಿರಾ ನೋಡಿರ್ತೀರಾ. ಆದರೆ ಫೋನ್ ಕದ್ದ ಕಳ್ಳನ ಲವ್ ಮಾಡೋಕೆ ಶುರು ಮಾಡ್ತಾರೆ ಅಂದ್ರೆ ಈ ಕಿವಿಯಲ್ಲಿ ಇನ್ನೆನ್ನೆಲ್ಲಾ ಕೇಳ್ಬೇಕೋ ಅಂತ ನಿಮಗೆ ಅನಿಸದೇ ಇರದು.
ಅಂದಹಾಗೆ ಬ್ರೆಜಿಲ್‌ನ ಇಮ್ಯಾನುವೆಲ್ಲಾ ಎಂಬಾಕೆಯೇ ಹೀಗೆ ಕಳ್ಳನೊಂದಿಗೆ ಕಳ್ಳಾಟ ಆಡ್ತಿರುವ ಮಳ್ಳಿ. ಎರಡು ವರ್ಷದ ಹಿಂದೆ ಈಕೆಯ ಫೋನ್ ಎಬ್ಬಿಸಿದ್ದ ಕಳ್ಳ ಈಗ ಈಕೆಯ ಬಾಯ್‌ಫ್ರೆಂಡ್ ಆಗಿದ್ದು, ಎರಡು ವರ್ಷದಿಂದ ತಾವು ಡೇಟಿಂಗ್ ಮಾಡ್ತಿರೋದಾಗಿ ಈ ಜೋಡಿ ಹೇಳಿಕೊಂಡಿದ್ದಾರೆ. ಆದರೆ ರಾಬರಿ ಮಾಡುವ ಹುಡುಗ ನಮ್ಮ ಮಗಳ ಗೆಳೆಯ ಎಂಬುದು ಈ ಯುವತಿಯ ಪೋಷಕರಿಗೆ ತಿಳಿದಿದೆಯೋ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ನಾನು ಅವನು ವಾಸಿಸುವ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಒಮ್ಮೆಗೆ ನನ್ನನ್ನು ಅಪರಿಚಿತನೋರ್ವ ದರೋಡೆ ಮಾಡಲಾಯಿತು ಎಂದು ಬ್ರೆಜಿಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಮ್ಯಾನುವೆಲ್ಲಾ ತನ್ನ ಹಾಗೂ ಆತನ ಮೊದಲ ಭೇಟಿ ಹೇಗಾಯ್ತು ಎಂಬುದನ್ನು ಹೇಳಿಕೊಂಡಿದ್ದಾಳೆ. ಆದರೆ ಮತ್ತೊಂದೆಡೆ ಅವಳ ಫೋನ್ ಕದ್ದಿದ್ದ ಕಳ್ಳ ಫೋನ್‌ನಲ್ಲಿ ಇವಳ ಫೋಟೋಗಳನ್ನು ನೋಡಿ ತನ್ನ ಮನಸ್ಸು ಬದಲಿಸಿದ್ದ,
ನನಗೆ ಯಾರೂ ಗೆಳತಿಯರಿಲ್ಲದ್ದ ಕಾರಣ ನಾನು ಬಹಳ ಸಂಕಷ್ಟದಲ್ಲಿದ್ದೆ ಎಂದು ಆ ಕಳ್ಳ ಹೇಳಿದ್ದಾನೆ. ಆದರೆ ಈಕೆಯ ಫೋಟೋಗಳನ್ನು ಮೊಬೈಲ್‌ನಲ್ಲಿ ನೋಡುತ್ತಿದ್ದಂತೆ ಕಳ್ಳನಿಗೆ ಫೋನ್ ಮಾತ್ರವಲ್ಲ, ಆಕೆಯ ಹೃದಯಕ್ಕೂ ಕನ್ನ ಹಾಕುವ ಮನಸ್ಸಾಗಿದೆ. ಫೋಟೋ ನೋಡಿದ ನಾನುಎಂಥಾ ಸುಂದರ ಕೃಷ್ಣ ಸುಂದರಿ ಈಕೆ, ನೀನು ಇಂತಹ ಸುಂದರಿಯನ್ನು ದಿನವೂ ನೋಡಲು ಸಾಧ್ಯವಿಲ್ಲ ಎಂದು ನನ್ನಷ್ಟಕ್ಕೆ ಹೇಳಿಕೊಂಡೆ. ಅಲ್ಲದೇ ಆಕೆಯ ಫೋನ್ ಕದ್ದಿದ್ದಕ್ಕೆ ಪಶ್ಚಾತ್ತಾಪ ಪಟ್ಟೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ವಿಚಿತ್ರ ಪ್ರೇಮಿಗಳನ್ನು ಅಲ್ಲೊಬ್ಬರು ಸಂದರ್ಶನ ಮಾಡಿದ್ದು, ಆತ ಫೋನ್ ಕಳ್ಳನಿಗೆ, ಸೋ ನೀವು ಮೊದಲು ಆಕೆಯ ಫೋನ್ ಕದ್ದು ಮತ್ತೆ ಹೃದಯಕ್ಕೆ ಕನ್ನ ಹಾಕಿದ್ರಾ ಎಂದು ಕೇಳಿದ್ದಾನೆ. ಅದಕ್ಕೆ ಕಳ್ಳ ನಿಜವಾಗಿಯೂ ಅದೇ ಮಾಡಿದ್ದು ಎಂದು ಹೇಳಿದ್ದಾನೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಪೋಸ್ಟ ಪ್ರಕಾರ, ಈ ಕಳ್ಳಮಳ್ಳಿ ಜೋಡಿ ಎರಡು ವರ್ಷದಿಂದ ಡೇಟಿಂಗ್ ಮಾಡುತ್ತಿದೆಯಂತೆ. ಆದರೆ ಇವರ ಈ ವಿಚಿತ್ರ ಸ್ಟೋರಿ ಎಲ್ಲರಿಗೂ ಇಷ್ಟವಾಗಿಲ್ಲ. ಕೆಲವರು ಇಂತಹ ವಿಚಿತ್ರಗಳೆಲ್ಲಾ ನಿಮ್ಮ ಬ್ರೆಜಿಲ್‌ನಲ್ಲೇ ನಡೆಯಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರೀತಿ ಎಲ್ಲಿ ಹೇಗೆ ಬೇಕಾದರೂ ಹುಟ್ಟಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದು ಕೇಳಲು ತಮಾಷೆ ಎನಿಸುತ್ತಿದ್ದರೂ ನಿಜವಾಗಿ ನಡೆದಿದ್ದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
É só no Brasil mesmo….kkkkkkkkkkk. pic.twitter.com/EmrqKfUzZM
— Milton Neves (@Miltonneves)