
ವಾಷಿಂಗ್ಟನ್(ಡಿ.19) ಕೊರೋನಾ ವಿರುದ್ಧ ಹೋರಾಡಿ, ಕೊನೆಯುಸಿರೆಳೆದ ಮೆಕ್ಸಿಕೋ ದೇಶದ ಶಿಕ್ಷಕಿಯೊಬ್ಬರ ಮನಮಿಡಿಯುವ ಕಥೆ ಇದು. ಕೊನೆಯುಸಿರೆಳೆಯುವ ಸಂದರ್ಭದಲ್ಲೂ ವೃತ್ತಿಧರ್ಮ ಮೆರೆದ ಫಿಲೋಮಿನಾ ಬೆಲೋನ್ ಎಂಬ ಶಿಕ್ಷಕಿ ಮತ್ತು ಮಕ್ಕಳ ಮೇಲಿನ ಆಕೆಯ ಕಾಳಜಿಯು ಎಲ್ಲರ ಹೃದಯ ಗೆದ್ದಿದೆ.
ಅಲ್ಬುಕರ್ಕ್ ನಗರದಲ್ಲಿ ದಿನದ ವೇಳೆ ವಿಶೇಷ ಮಕ್ಕಳಿಗೆ, ರಾತ್ರಿ ಹೊತ್ತಿನಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದ ಮಕ್ಕಳಿಗೆ ಪಾಠ ಮಾಡುವ ಫಿಲೋಮಿನಾ ಎಂಬ ಶಿಕ್ಷಕಿಗೆ ಕೊರೋನಾ ವಕ್ಕರಿಸಿತ್ತು. ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಹಲವುದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದರು.
ಅದಾಗ್ಯೂ, ತನ್ನೊಳಗಿನ ಶಿಕ್ಷಕಿ ಮತ್ತು ಮಕ್ಕಳ ಮೇಲಿನ ಪ್ರೀತಿಯು, ಕಲಿಸುವ ಹಂಬಲವು ಇನ್ನೂ ಗಟ್ಟಿಯಾಗಿತ್ತು. ಆಕೆಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲೂ, ತನ್ನ ಕೊನೆಯ ದಿನಗಳಲ್ಲಿ ಆಕ್ಸಿಜನ್ ಮಾಸ್ಕ್ ಧರಿಸಿಯೇ ಮಕ್ಕಳಿಗೆ ಪಾಠ ಹೇಳಿಕೊಟ್ಟ ಫಿಲೋಮಿನಾ, ನಂತರ ಈ ಜಗತ್ತಿಗೆ ವಿದಾಯ ಹೇಳಿದ್ದಾರೆ.
ಹೋಗಿಬನ್ನಿ ಫಿಲೋಮಿನಾ, ಈ ಜಗತ್ತಿಗೆ ನಿಮ್ಮಂತ ಶಿಕ್ಷಕಿಯರ ಅಗತ್ಯ ತುಂಬಾ ತುಂಬಾ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ