ಮೃತ ಪತಿಯ ವೀರ್ಯ ಸಂಗ್ರಹಣೆಗೆ ಕೋರ್ಟ್ ಅನುಮತಿ ಪಡೆದ 62ರ ಮಹಿಳೆ!

By Suvarna News  |  First Published Jan 3, 2024, 11:52 AM IST

ಈ ಮಹಿಳೆಗೆ ಈಗಾಗಲೇ 62 ವಯಸ್ಸು. ಆದರೂ ಡಿ.17ರಂದು ಮೃತಪಟ್ಟ ತನ್ನ ಪತಿಯ  ವೀರ್ಯವನ್ನು ಸಂಗ್ರಹಿಸಿ ಶೇಖರಿಸಿಡಲು ಆಸ್ಪತ್ರೆಯ ಶವಾಗಾರವನ್ನು ಕೇಳಿ, ಈ ಸಂಬಂಧ ಕಾನೂನು ಹೋರಾಟ ಮಾಡಿ ಗೆದ್ದಿದ್ದಾರೆ! 


ಆಕೆಗೆ ಈಗಾಗಲೇ 62 ವಯಸ್ಸು. ಪತಿಗೆ 61. ಆದರೂ ಗಂಡ ಹೆಂಡತಿಗೆ ಮಗುವೊಂದನ್ನು ಪಡೆಯುವ ಬಯಕೆ ಇತ್ತು. ಈ ಸಂಬಂಧ ಅವರು ಮಾತುಕತೆ ನಡೆಸುತ್ತಿದ್ದರು. ಆದರೆ, ಅಷ್ಟರಲ್ಲಾಗಲೇ ಪತಿ ಮೃತರಾಗಿದ್ದಾರೆ. ಆದರೆ, ಅಷ್ಟಕ್ಕೇ ಆಸೆ ಕೈ ಬಿಡದ ಪತ್ನಿ ತನ್ನ ಪತಿಯ ವೀರ್ಯವನ್ನು ಸಂಗ್ರಹಿಸಿ ಶೇಖರಿಸಿಡಲು ಆಸ್ಪತ್ರೆಯ ಶವಾಗಾರವನ್ನು ಕೇಳಿ, ಈ ಸಂಬಂಧ ಕಾನೂನು ಹೋರಾಟ ಮಾಡಿ ಗೆದ್ದಿದ್ದಾರೆ! 

ಇದೊಂದು ವಿಲಕ್ಷಣ ಸುದ್ದಿ ಎನಿಸಬಹುದು. ಆದರೆ, ಈ ಆಸ್ಟ್ರೇಲಿಯನ್ ಮಹಿಳೆಗೆ ತನ್ನ ನಿರ್ಧಾರಕ್ಕೆ ತನ್ನದೇ ಕಾರಣಗಳಿವೆ. ಹೌದು, ಈ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರು. ಆದರೆ, ಆರು ವರ್ಷಗಳ ಹಿಂದೆ, ಅವರ 29 ವರ್ಷದ ಮಗಳು ಮೀನುಗಾರಿಕೆ ಪ್ರವಾಸದಲ್ಲಿ ಮುಳುಗಿ ಸಾವನ್ನಪ್ಪಿದ್ದಳು. 2019ರಲ್ಲಿ ಅವರ 31 ವರ್ಷದ ಮಗ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ನಂತರ ದಂಪತಿ ಮತ್ತೊಂದು ಮಗುವನ್ನು ಹೊಂದುವ ಬಗ್ಗೆ ಯೋಚಿಸಲು ಪ್ರಾರಂಭಿಸಿದರು.

Tap to resize

Latest Videos

ತನಗೆ ಕಡಿದ ಇಲಿಯನ್ನ ಹಿಡಿದು ಕಚ್ಚಿ ಸಾಯಿಸಿದ ಯುವತಿ ಆಸ್ಪತ್ರೆಗೆ!

ಪತಿಯ ವೀರ್ಯವನ್ನು ಬಳಸಿ ಬಾಡಿಗೆ ತಾಯಿಯ ಸಹಾಯದಿಂದ ತಾವು ಮಗು ಪಡೆಯಬಹುದೇ ಎಂಬ ಬಗ್ಗೆ ತನಿಖೆ ಮಾಡಲು ಪ್ರಾರಂಭಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಪತಿಯು ಡಿ.17, 2023ರಂದು ಸಾವನ್ನಪ್ಪಿದ. ಇದರಿಂದ ಪತ್ನಿ ತನ್ನವರಾರೂ ಇಲ್ಲದೆ ಕಂಗಾಲಾಗಿದ್ದಾಳೆ. ಕಡೆಗೆ, ತನ್ನ ಹಾಗೂ ಪತಿಯ ಆಸೆಯನ್ನು ಈಗಲೂ ಕೈಗೂಡಿಸಿಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಯೋಚಿಸಿದ ಆಕೆ ಪತಿಯ ವೀರ್ಯವನ್ನು ಸಂಗ್ರಹಿಸಿ ಶೇಖರಿಸಿಡಲು ಆಸ್ಪತ್ರೆಯ ಶವಾಗಾರದ ಮೇಲ್ವಿಚಾರಕರಲ್ಲಿ ಕೇಳಿಕೊಂಡಿದ್ದಾರೆ. ಆದರೆ, ಆಸ್ಪತ್ರೆಯು ಇದಕ್ಕೆ ಕಾನೂನು ಒಪ್ಪಬೇಕು ಎಂಬ ಷರತ್ತು ವಿಧಿಸಿತು. 

ಕಡೆಗೆ ಪಶ್ಚಿಮ ಆಸ್ಟ್ರೇಲಿಯಾದ ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ಆದೇಶವನ್ನು ಪಡೆಯಲು ಮಹಿಳೆ ಮುಂದಾದರು. 

ರನ್‌ವೇಯಲ್ಲಿ ಬೆಂಕಿ ಹೊತ್ತಿಕೊಂಡ ಜಪಾನ್ ಏರ್‌ಲೈನ್ಸ್ ವಿಮಾನ, ಐವರು ಸಿಬ್ಬಂದಿ ಸಾವು!

ಸಾವಿನ ನಂತರ ಒಂದು ಮತ್ತು ಎರಡು ದಿನಗಳ ನಡುವೆ ಸಂತಾನೋತ್ಪತ್ತಿ ಅಂಗಾಂಶವನ್ನು ಸಂಗ್ರಹಿಸಬೇಕು ಎಂದು ಸಂಶೋಧಕರು ಹೇಳುತ್ತಾರೆ. ಹಾಗಾಗಿ ಮಹಿಳೆ ಈ ಸಂಬಂಧ ಗಂಡನ ಸಾವಿನ ಮರುದಿನವೇ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಧೀಶ ಫಿಯೋನಾ ಸೀವಾರ್ಡ್ ವೀರ್ಯವನ್ನು  ಸಂಗ್ರಹಿಸಬಹುದು ಎಂದು ಒಪ್ಪಿಕೊಂಡರು. ಆದರೆ ಅದನ್ನು ಬಳಸುವ ಮೊದಲು ಪ್ರತ್ಯೇಕ ನ್ಯಾಯಾಲಯದ ಆದೇಶಗಳು ಬೇಕಾಗುತ್ತವೆ ಎಂದು ಹೇಳಿದರು. ಅದರಂತೆ ಮಹಿಳೆಯ ಮೃತ ಪತಿಯ ವೀರ್ಯ ಸಂಗ್ರಹಿಸಿಡಲಾಗಿದೆ. 

ಈ ಆದೇಶ ಡಿಸೆಂಬರ್ 21ರಂದೇ ಹೊರ ಬಿದ್ದಿದ್ದರೂ, ಇದನ್ನು ಇತ್ತೀಚೆಗೆ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ.

click me!