ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು

Kannadaprabha News   | Kannada Prabha
Published : Feb 04, 2026, 05:03 AM IST
Gandhi

ಸಾರಾಂಶ

ಮಹಾತ್ಮ ಗಾಂಧಿಯವರ ಕಂಚಿನ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ, ಕಳ್ಳತನ ಮಾಡಿದ ಘಟನೆ ಸೋಮವಾರ ನಡೆದಿದೆ. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಡಿಸಿದ್ದು, ಪುತ್ಥಳಿಯನ್ನು ಪುನಃ ಪ್ರತಿಷ್ಟಾಪಿಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟುವಂತೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಆಗ್ರಹಿಸಿದೆ.

ಮೆಲ್ಬರ್ನ್‌: ಇಲ್ಲಿನ ಭಾರತೀಯ ಸಮುದಾಯ ಕೇಂದ್ರದ ಆವರಣದಲ್ಲಿದ್ದ ಮಹಾತ್ಮ ಗಾಂಧಿಯವರ ಕಂಚಿನ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ, ಕಳ್ಳತನ ಮಾಡಿದ ಘಟನೆ ಸೋಮವಾರ ನಡೆದಿದೆ. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಡಿಸಿದ್ದು, ಪುತ್ಥಳಿಯನ್ನು ಪುನಃ ಪ್ರತಿಷ್ಟಾಪಿಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟುವಂತೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಆಗ್ರಹಿಸಿದೆ.

426 ಕೆ.ಜಿ ತೂಕದ ಪ್ರತಿಮೆ

426 ಕೆ.ಜಿ ತೂಕದ ಪ್ರತಿಮೆಯನ್ನು ಕತ್ತರಿಸಿರುವ ದುಷ್ಕರ್ಮಿಗಳು, ಪಾದವನ್ನಷ್ಟೇ ಉಳಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿರುವ ಆಸ್ಟ್ರೇಲಿಯಾ ಪೊಲೀಸರು, ಯಾವುದೇ ವ್ಯಕ್ತಿ ಕದ್ದ ಕಂಚನ್ನು ಮಾರಲು ಬಂದರೆ ಎಚ್ಚರದಿಂದಿರುವಂತೆ ಲೋಹದ ವ್ಯಾಪಾರಿಗಳಿಗೆ ಎಚ್ಚರಿಸಿದೆ.

ಪ್ರತಿಮೆಯನ್ನು ನವದೆಹಲಿಯಲ್ಲಿರುವ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್‌) ಉಡುಗೊರೆಯಾಗಿ ನೀಡಿದ್ದು ವಿಶೇಷ.

ಭಾರತ ಖಂಡನೆ :

ಘಟನೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್‌ ಜೈಸ್ವಾಲ್‌ ಖಂಡಿಸಿದ್ದಾರೆ. ‘ಈ ವಿಷಯವನ್ನು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಬಲವಾಗಿ ಪ್ರಸ್ತಾಪಿಸಿದ್ದೇವೆ. ಪ್ರತಿಮೆಯನ್ನು ಮರುಸ್ಥಾಪಿಸಿ, ಅಪರಾಧಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ’ ಎಂದು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಳೇ ಸಿಮ್‌ ಕಾರ್ಡ್‌ನಲ್ಲಿದ್ಯಾ ಚಿನ್ನ? ಇ-ವೇಸ್ಟ್‌ನಿಂದ 26 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಯುವಕ!
Epstein Files: 'ಮಕ್ಕಳ ಮಾಂಸ ತಿನ್ನುತ್ತಿದ್ದಾರೆ..' ಎಲೈಟ್‌ ಪಾರ್ಟಿಯಿಂದ ಓಡಿ ಬಂದು ಹೇಳಿದ್ದ ಮಾಡೆಲ್‌ ನಾಪತ್ತೆಯಾಗಿದ್ದು ಹೇಗೆ?