700 ಕಾರ್, 58 ವಿಮಾನ, 20 ಅರಮನೆ, 22  ಬೋಗಿಯ ಘೋಸ್ಟ್ ರೈಲು,  $200 ಬಿಲಿಯನ್ ಆಸ್ತಿ; ಇವರೇ ನೋಡಿ ವಿಶ್ವದ ಶ್ರೀಮಂತ ರಾಜಕಾರಣಿ

Published : Jan 27, 2025, 03:12 PM IST
700 ಕಾರ್, 58 ವಿಮಾನ, 20 ಅರಮನೆ, 22  ಬೋಗಿಯ ಘೋಸ್ಟ್ ರೈಲು,  $200 ಬಿಲಿಯನ್ ಆಸ್ತಿ; ಇವರೇ ನೋಡಿ ವಿಶ್ವದ ಶ್ರೀಮಂತ ರಾಜಕಾರಣಿ

ಸಾರಾಂಶ

700 ಕಾರುಗಳು, 58 ವಿಮಾನಗಳು, 20 ಅರಮನೆಗಳು ಮತ್ತು $200 ಬಿಲಿಯನ್ ಆಸ್ತಿಯನ್ನು ಹೊಂದಿರುವ ವಿಶ್ವದ ಶ್ರೀಮಂತ ರಾಜಕಾರಣಿ ಯಾರೆಂದು ತಿಳಿಯಿರಿ. ಈ ಲೇಖನವು ಅವರ ಅಗಾಧ ಸಂಪತ್ತು ಮತ್ತು ಐಷಾರಾಮಿ ಜೀವನಶೈಲಿಯನ್ನು ಬಹಿರಂಗಪಡಿಸುತ್ತದೆ.

ನವದೆಹಲಿ: ಟೆಸ್ಲಾ ಕಂಪನಿ,  ಎಕ್ಸ್ ಪ್ಲಾಟ್‌ಫಾರಂ ಮಾಲೀಕ ಎಲಾನ್  ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ರಾಜಕೀಯ ನಾಯಕರೊಬ್ಬರು ಎಲಾನ್ ಮಸ್ಕ್ ಆಸ್ತಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದ್ದಾರೆ. ಈ ರಾಜಕೀಯ ನಾಯಕ ವಿಶ್ವದ ಶ್ರೀಮಂತ ರಾಜಕಾರಣಿ ಎಂದು ಕರೆಸಿಕೊಳ್ಳುತ್ತಾರೆ. ಈ ರಾಜಕೀಯ ನಾಯಕನ ಬಳಿ 700 ಕಾರ್, 58 ವಿಮಾನ, 20 ಅರಮನೆ , 200 ಬಿಲಿಯನ್ ಡಾಲರ್ ಆಸ್ತಿ ಇದೆ ಎಂದು ವರದಿಯಾಗಿದೆ. ವಾರ್ಷಿಕವಾಗಿ 1 ಕೋಟಿ ರೂ.ಗಳಿಗೂ ಅಧಿಕ ಸಂಬಳ ಪಡೆಯುತ್ತಿದ್ದಾರೆ. ಸಂಬಳ ಸೇರಿದಂತೆ ವಿವಿಧ ಮೂಲಗಳಿಂದಲೂ ನಿರಂತರ ಆದಾಯವನ್ನು  ಪಡೆಯುತ್ತಿದ್ದಾರೆ. ಯಾರು ಈ ಶ್ರೀಮಂತ ರಾಜಕೀಯ ಮುಖಂಡ ಎಂಬುದನ್ನು ಈ ಲೇಖನದಲ್ಲಿ ನೋಡೋಣ. 

ಅತ್ಯಂತ ಶ್ರೀಮಂತ ನಾಯಕನ ಹೆಸರು ವ್ಲಾಡಿಮಿರ್ ಪುಟಿನ್. ರಷ್ಯಾ ಅಧ್ಯಕ್ಷರಾಗಿರವ ವ್ಲಾಡಿಮಿರ್ ಪುಟಿನ್ ಶ್ರೀಮಂತ ರಾಜಕೀಯ ಮುಖಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟು ಮಾತ್ರವಲ್ಲ ವ್ಲಾಡಿಮಿರ್ ಪುಟಿನ್ ವಿಶ್ವದ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ. ರಷ್ಯಾದ ಅಧ್ಯಕ್ಷರಾಗಿರುವ ಪುಟಿನ್ ವಾರ್ಷಿಕ 1,40,000 ಡಾಲರ್ (ಸುಮಾರು 1.17 ಕೋಟಿ ರೂಪಾಯಿ) ಸಂಬಳ ಪಡೆಯುತ್ತಾರೆ. 

ಇವರೆಲ್ಲರಿಗಿಂತಲೂ ಶ್ರೀಮಂತ
2007ರಲ್ಲಿ ಯುಎಸ್ ಸೆನೆಟ್ ಜ್ಯುಡಿಷಿಯಲ್‌ಗೆ ಸಲ್ಲಿಸಿದ ವರದಿ ಪ್ರಕಾರ, ವ್ಲಾಡಿಮಿರ್ ಪುಟಿನ್ 200 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ  ಮಾಡುವ ಫೋರ್ಬ್ಸ್‌ಗೂ ವ್ಲಾಡಿಮಿರ್ ಪುಟಿನ್ ಆಸ್ತಿಯ ಪರಿಶೀಲನೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪುಟಿನ್ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಕೆಲ ವರದಿಗಳ ಪ್ರಕಾರ, ಅಮೆಜಾನ್ ಸ್ಥಾಪಕ ಬೆಜೊಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಮತ್ತು ಫ್ರಾನ್ಸ್ ಶ್ರೀಮಂತ ವ್ಯಕ್ತಿಯಾಗಿರುವ ಬರ್ನಾಲ್ಡ್ ಅರ್ನಾಲ್ಡ್ ಅವರಿಗಿಂತಲೂ ವ್ಲಾಡಿಮಿರ್ ಪುಟಿನ್ ಶ್ರೀಮಂತ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ: ಅಂಬಾನಿ ಮತ್ತು ಅದಾನಿ ಬ್ಲೂಮ್‌ಬರ್ಗ್‌ನ 100 ಬಿಲಿಯನೇರ್ ಪಟ್ಟಿಯಿಂದ ಔಟ್! ದಿಢೀರ್ ಸಂಪತ್ತು ಕುಸಿತಕ್ಕೆ ಕಾರಣವೇನು?

900 ಕೋಟಿ ಮೌಲ್ಯದ ಬೋಟ್‌ ಹೌಸ್
ಅಮೆರಿಕಾದ ಪ್ರತಿಷ್ಠಿತ ನಿಯತಕಾಲಿಕೆ ಪತ್ರಿಕೆ "ಫಾರ್ಚೂನ್" ವರದಿ ಪ್ರಕಾರ, ವ್ಲಾಡಿಮಿರ್ ಪುಟಿನ್ ಬಳಿ  20ಕ್ಕೂ ಅಧಿಕ ಐಷಾರಾಮಿ ಅರಮನೆಗಳು, 700ಕ್ಕೂ ಹಚ್ಚು ವಿಲಾಸಿಮಯ  ಕಾರ್‌ಗಳನ್ನು ಹೊಂದಿದ್ದಾರೆ. ಇಷ್ಟು ಮಾತ್ರವಲ್ಲ 900 ಕೋಟಿ ಮೌಲ್ಯದ ಬೋಟ್‌ ಹೌಸ್ ಸಹ ಪುಟಿನ್ ಬಳಿಯಲ್ಲಿದೆಯಂತೆ. 60 ಸಾವಿರದಿಂದ 5 ಲಕ್ಷ ಡಾಲರ್ ಬೆಲೆ ಬಾಳುವ  ಐಷಾರಾಮಿ ವಾಚ್‌ಗಳನ್ನು ಪುಟಿನ್ ಹೊಂದಿದ್ದಾರೆ. 

 22  ಬೋಗಿಯ ಬುಲೆಟ್ ಪ್ರೂಫ್ ರೈಲು
ಬ್ಲ್ಯಾಕ್ ಸಮುದ್ರ ದಡದಲ್ಲಿ 1,90,000  ಚದರ ಅಡಿ  ವಿಸ್ತಾರದ 1 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಅರಮನೆಯನ್ನು ಹೊಂದಿದ್ದಾರೆ. ಈ ಮನೆಯಲ್ಲಿ ಈಜುಕೊಳ, ಜಿಮ್, ಸಿನಿಮಾ ಹಾಲ್, ಕ್ಯಾಸಿ ನೋ ಸೇರಿದಂತೆ ಎಲ್ಲಾ ಐಷಾರಾಮಿ ಸೌಲಭ್ಯಗಳಿವೆ. ಇದರ ಜೊತೆ 22  ಬೋಗಿಯ ಬುಲೆಟ್ ಪ್ರೂಫ್ ರೈಲು ಹೊಂದಿದ್ದಾರೆ. ಇದನ್ನು ಘೋಸ್ಟ್ ರೈಲು ಅಂತಾನೂ ಕರೆಯಲಾಗುತ್ತದೆ. ಅರಮನೆಯಲ್ಲಿ ಬಂಕರ್‌ಗಳನ್ನು ಸಹ ನಿರ್ಮಾಣ ಮಾಡಲಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಕರ್ನಾಟಕದ ಟಾಪ್ 5 ಆಗರ್ಭ ಶ್ರೀಮಂತರು ಯಾರು ಗೊತ್ತಾ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?