124 ವರ್ಷ ಹಳೆ ಸಂಪ್ರದಾಯಕ್ಕೆ ಬೀಳುತ್ತಾ ಬ್ರೇಕ್?| ಬೈಡೆನ್ ಗೆಲುವು, ಟ್ರಂಪ್ ಪೆಚ್ಚು| ಫೇರ್‌ವೆಲ್ ಸ್ಪೀಚ್ ನಿಲ್ಲುತ್ತಾ?
ವಾಷಿಂಗ್ಟನ್(ನ.08): ಅಮೆರಿಕ ಚುನಾವಣೆ ಬಳಿಕ ಸದ್ಯ ಫಲಿತಾಂಶ ಬಂದಿದೆ. ಈ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 273 ಎಲೆಕ್ಟೋರಲ್ ಮತ ಗಳಿಸಿರುವ ಬೈಡೆನ್ ಈ ಮೂಲಕ ಈವರೆಗೆ ಅಧ್ಯಕ್ಷರಾಗಿದ್ದ ಟ್ರಂಪ್‌ರನ್ನು ಸೋಲಿಸಿದ್ದಾರೆ. ಆದರೆ ಇವೆಲ್ಲದರ ನಡುವೆ ಈ ಚುನಾವಣೆ ಅಮೆರಿಕದ ರಾಜಕೀಯದಲ್ಲಿ ಕಹಿಯನ್ನು ತುಂಬಿದೆ. ಒಂದು ಶತಮಾನಕ್ಕಿಂತಲೂ ಹೆಚ್ಚಿನ ಸಮಯದಿಂದ ಇಲ್ಲಿ ಸೋಲನುಭವಿಸಿದ ಅಭ್ಯರ್ಥಿ ಗೆದ್ದವರಿಗೆ ಶುಭ ಕೋರುವ ಪರಂಪರೆ ಇದೆ. ಇಇದನ್ನು ಕನ್ಸೆಶನ್ ಅಥವಾ ಫೇರ್‌ವೆಲ್ ಸ್ಪೀಚ್ ಎನ್ನಲಾಗುತ್ತದೆ. ಆಧರೆ ಇದು ಈ ಬಾರಿ ನಡೆಯುವುದು ಅನುಮಾನ ಎನ್ನಲಾಗಿದೆ.
undefined
ಈ ಚುನಾವಣೆ ಇಬ್ಬರೂ ಅಭ್ಯರ್ಥಿಗಳ ನಡುವಿನ ಕಹಿ ತುಂಬಿದ್ದಲ್ಲದೇ ವಾಗ್ದಾಳಿಯನ್ನೂ ಮಿತಿ ಮೀರಿ ನಡೆಸಿದ್ದಾರೆ. ಗೆಲ್ಲಬೇಕೆಂಬ ಧಾವಂತದಲ್ಲಿ ವೈಯುಕ್ತಿಕವಾಗಿಯೂ ತಿವಿದಿದ್ದಾರೆ. ಇದರಲ್ಲಿ ಟ್ರಂಪ್ ಕೊಂಚ ಜಾಸ್ತಿಯೇ ತೊಡಗಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ಕನ್ವೆಂಧಶನ್ ನಡೆಯುವ ಸಾಧ್ಯತೆ ಇಲ್ಲ ಎಂಬ ಸದ್ದಯ ಅಮೆರಿಕದ ಮಾಧ್ಯಮಗಳಲ್ಲಿ ಜೋರಾಗಿದೆ. ಬಹುಶಃ ಟ್ರಂಪ್ ಬೈಡೆನ್‌ಗೆ ಶುಭ ಕೋರಲಿಕ್ಕಿಲ್ಲ ಎನ್ನಲಾಗಿದೆ.
ಈ ಫೇರ್‌ವೆಲ್ ಸ್ಪೀಚ್ ಸಾಮಾನ್ಯವಾಗಿ ಎರಡು ಬಾರಿ ನಡೆಯುತ್ತದೆ. ಅನೇಕ ಬಾರಿ ಒಂದು ಬಾರಿ ನಡೆದಿದ್ದುಂಟು. ಅದೇನಿದ್ದರೂ 1896ರಿಂದ ಇಂತಹುದ್ದೊಂದು ಸಂಪ್ರದಾಯ ಇಲ್ಲಿ ನಡೆದು ಬಂದಿದೆ. ಅಂಂದು ಬಿಲಿಯಂ ಜೆಸಿಂಗ್ಸ್ ಬ್ರಾಯನ್ ಹಾಗೂ ವಿಲಿಯಂ ಮ್ಯಾಕಿನ್ಲೆ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಭಾರೀ ವಾಗ್ದಾಳಿಯೂ ನಡೆದಿತ್ತು. ಆದರೆ ಇದಾದ ಬಳಿಕ ಮ್ಯಾಕಿನ್ಲೆ ಟೆಲಿಗ್ರಾಂ ಒಂದರ ಮೂಲಕ ಭಾವುಕರಾಗಿ ಶುಭ ಕೋರಿದ್ದರು. ಬಹುಶಃ ಇದು ಆ ಚುನಾವಣೆಗೂ ಮೊದಲು ನಡೆದಿರಬಹುದು, ಆದರೆ ಸೂಕ್ತ ಸಾಕ್ಷಿಗಳಿಲ್ಲ. ಹೀಗಾಗಿ ಈ ಟೆಲಿಗ್ರಾಂ ಮೂಲಕ ಆರಂಭವಾದ ಈ ಸಂಪ್ರದಾಯ ಕಳೆದ ಅಂದರೆ 2016ರ ಚುನಾವಣೆವರೆಗೂ ಮುಂದುವರೆದಿದೆ. ಹಿಲರಿ ಕ್ಲಿಂಟನ್ ಪಾಪ್ಯುಲರ್ ಮತಗಳಲ್ಲಿ ಗೆದ್ದರು, ಆದರೆ ಇಲೆಕ್ಟೋರಲ್ ಮತಗಳಲ್ಲಿ ಸೋಲನುಭವಿಸಿದರು. ಆದರೆ ಅವರು ಟ್ರಂಪ್‌ಗೆ ಶುಭ ಕೋರಿದ್ದರು.
ಈ ಬಾರಿ ನಾಲಗೆ ಹರಿತಗೊಳಿಸಿದ್ದ ಅಭ್ಯರ್ಥಿಗಳು:
ಈ ಬಾರಿ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿದಿದ್ದ ಟ್ರಂಪ್ ಹಾಗೂ ಬೈಡೆನ್ ತೀವ್ರ ವಾಗ್ದಾಳಿ ನಡೆಸಿದ್ದರು. ಬೈಡೆನ್‌ಗೆ ತಲೆ ಸರಿ ಇಲ್ಲ, ಯಾವತ್ತೂ ನಿದ್ರಿಸುವ ವ್ಯಕ್ತಿ. ಅವರು ಹಾಗೂ ಅವರ ಇಡೀ ಕುಟುಂಬ ಭ್ರಷ್ಟಾಚಾರವೆಸಗಿದೆ. ಅವರು ಅಮೆರಿಕವನ್ನು ಚೀನಾಗೆ ಮಾರುವ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಬೈಡೆನ್ ಸದ್ಯ ಶಾಂತ ಹಾಗೂ ಶಿಸ್ತಿನ ವ್ಯಕ್ತಿಯಂತೆ ಕಂಡು ಬಂದರೂ ಚುನಾವಣಾ ಪ್ರಚಾರದಲ್ಲಿ ಹೀಗಿರಲಿಲ್ಲ. ಟ್ರಂಣಪ್ ವಿರುದ್ಧ ಕಿಡಿ ಕಾರಿದ್ದ ಬೈಡೆನ್ ಅವರು ಅಧ್ಯಕ್ಷರಾಗಲು ಯೋಗ್ಯರಲ್ಲ. ಅವರೊಬ್ಬ ಉದ್ಯಮಿ, ಕೊರೋನಾ ವಿಚಾರದಲ್ಲೂ ಉದ್ಯಮವನ್ನೇ ನನೋಡುತ್ತಿದ್ದಾರೆ. ಡಿಬೆಟ್‌ನಲ್ಲಿ ಅವರ ಮುಖ ನೋಡಲು ಇಷ್ಟವಿರಲಿಲ್ಲ ಎಂದಿದ್ದರು.