
ನವದೆಹಲಿ(ಸೆ.19): ಭಾರತದ ಪರಮವೈರಿ ಚೀನಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ನೇಪಾಳ, ಈಗ ಭಾರತವನ್ನು ಕೆರಳಿಸುವ ಮತ್ತೊಂದು ಹೆಜ್ಜೆ ಇರಿಸಿದೆ. ತನ್ನ ದೇಶವನ್ನು ‘ಗ್ರೇಟರ್ ನೇಪಾಳ’ ಎಂದು ಕರೆಯಬೇಕು. ಈ ಗ್ರೇಟರ್ ನೇಪಾಳದಲ್ಲಿ ಭಾರತದಲ್ಲಿರುವ ಡೆಹ್ರಾಡೂನ್ ಹಾಗೂ ನೈನಿತಾಲ್ ಕೂಡ ತನ್ನವು ಎಂಬ ಹೊಸ ಆಂದೋಲನ ಆರಂಭಿಸಿದೆ.
ಚೀನಾಕ್ಕೆ ಠಕ್ಕರ್ ನೀಡಲು ಸರ್ವ ಸಿದ್ಧತೆ, ನೇಪಾಳ-ಭೂತಾನ್ ಗಡಿ ಮೇಲೂ ಹದ್ದಿನ ಕಣ್ಣು
ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಸಂಯುಕ್ತ ನೇಪಾಳ ರಾಷ್ಟ್ರೀಯ ರಂಗದೊಂದಿಗೆ ಸೇರಿಕೊಂಡು ಈ ವಿವಾದಾತ್ಮಕ ಆಂದೋಲನ ಆರಂಭಿಸಿದೆ. ಇದಲ್ಲದೆ, ಕಮ್ಯುನಿಸ್ಟ್ ಪಕ್ಷವ ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗೂ ಸಿಕ್ಕಿಂನ ಕೆಲವು ಭಾಗಗಳೂ ತನ್ನದು ಎಂದು ಹೇಳಿಕೊಳ್ಳುತ್ತಿದೆ.
ಇತ್ತೀಚೆಗೆ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಚೀನಾ ಜತೆ ಕೈಜೋಡಿಸಿರುವ ನೇಪಾಳ, ಸಿಕ್ಕಿಂ, ಕುಮಾವುನ್, ಗಢವಾಲ್ ಹಾಗೂ ಕಾಂಗ್ರಾ ಪ್ರದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಹುನ್ನಾರ ನಡೆಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
7 ಜಿಲ್ಲೆಗಳನ್ನು ಕಬಳಿಸಿದ ಚೀನಾ: ನೇಪಾಳ ಪ್ರಧಾನಿ ಮೌನ!
ಗ್ರೇಟರ್ ನೇಪಾಳ ಸ್ಥಾಪನೆಯ ವಿಚಾರವು ಚೀನಾದ ಪರಮಸ್ನೇಹಿತ ಕೆ.ಪಿ. ಶರ್ಮಾ ಓಲಿ ಅವರು ಪ್ರಧಾನಿಯಾದ ನಂತರ ಮರುಜೀವ ಪಡೆದಿದೆ. 2019ರಲ್ಲಿ ವಿಶ್ವಂಸ್ಥೆಯಲ್ಲಿ ಕೂಡ ನೇಪಾಳ ಈ ವಿಷಯವನ್ನು ಪ್ರಸ್ತಾಪಿಸಿತ್ತು.
ನೇಪಾಳ ಇದಕ್ಕೆ ನೀಡುವ ಕಾರಣವೇನು?:
1816ರಲ್ಲಿ ಬ್ರಿಟಿಷರು ಆಳ್ವಿಕೆ ನಡೆಸುತ್ತಿರುವ ವೇಳೆ ಗೂರ್ಖಾ ರಾಜನು ಬ್ರಿಟಿಷರ ವಿರುದ್ಧ ಸೋತಿದ್ದ. ಆಗ ನೇಪಾಳವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ಭಾರತದ ನೈನಿತಾಲ್, ಡೆಹ್ರಾಡೂನ್ ಹಾಗೂ ಇತರ ಕೆಲವು ಭಾಗಗಳು ನೇಪಾಳಕ್ಕೆ ಸೇರಿದ್ದವು ಎಂಬುದು ನೇಪಾಳದ ವಾದ.
ಇತ್ತೀಚೆಗೆ ಭಾರತದ ಲಿಪುಲೇಖ್ ಪಾಸ್ ಸೇರಿದಂತೆ ಕೆಲವು ಪ್ರದೇಶಗಳನ್ನು ತನ್ನದು ಎಂದು ಹೇಳಿ ನೇಪಾಳ ನಕ್ಷೆಯೊಂದನ್ನು ಬಿಡುಗಡೆ ಮಾಡಿತ್ತು. ಅದು ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ