ಆಪ್ತರ ಬರ್ತ್‌ಡೇ ವಿಶ್ ಮಾಡಲು ಮರೆತು ಹೋಗ್ತಿದೆಯಾ? ವ್ಯಾಟ್ಸಾಪ್ ಈ ಫೀಚರ್ ಆ್ಯಕ್ಟಿವೇಟ್ ಮಾಡಿ ಚಿಂತೆ ಬಿಡಿ

Published : Jul 10, 2026, 11:56 AM IST
WhatsApp Birthday Reminders

ಸಾರಾಂಶ

ನಿಮಗೆ ಆಪ್ತರು, ಗೆಳೆಯರು, ಕುಟುಂಬಸ್ಥರ ಹುಟ್ಟ ಹಬ್ಬ ದಿನಾಂಕ ನೆನಪಾಗದೇ ವಿಶ್ ಮಾಡಲು ಮರೆತು ಹೋಗುತ್ತಿದೆಯಾ? ಇನ್ಮುಂದೆ ವ್ಯಾಟ್ಸಾಪ್ ನಿಮಗೆ ಆಪ್ತರ ಹುಟ್ಟಹಬ್ಬಗಳನ್ನು ನೆನಪಿಸುತ್ತದೆ. ಬರ್ತ್ ವಿಶ್ ಮಾಡಲು ಸಹಾಯ ಮಾಡುತ್ತದೆ.

ಬೆಂಗಳೂರು (ಜು.10) ವ್ಯಾಟ್ಸಾಪ್ ಈಗಾಗಲೇ ಹಲವು ಫೀಚರ್ ಮೂಲಕ ಗ್ರಾಹಕರ ಕೆಲಸಗಳನ್ನು ಸುಲಭ ಮಾಡುತ್ತಿದೆ. ವ್ಯಾಟ್ಸಾಪ್ ಬಂದ ಬಳಿಕ ಎಲ್ಲರ ಜೊತೆ ಸಂಪರ್ಕ ಸುಲಭವಾಗಿದ್ದು ಮಾತ್ರವಲ್ಲ, ಕುಟುಂಬಸ್ಥರು, ಆಪ್ತರು, ಗೆಳೆಯರು ಎಲ್ಲರೂ ನಿರಂತರ ಸಂಪರ್ಕದಲ್ಲಿರುವಂತೆ ಮಾಡಿದೆ. ಕೆಲಸದ ಒತ್ತಡ ಸೇರಿದಂತೆ ಹಲವು ಕಾರಣಗಳಿಂದ ಆಪ್ತರ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಮರೆತು ಹೋಗುವುದು ಸಾಮಾನ್ಯ. ಇದಕ್ಕಾಗಿ ವ್ಯಾಟ್ಸಾಪ್ ಇದೀಗ ಹೊಸ ಫೀಚರ್ ತರುತ್ತಿದೆ. ಇನ್ಮುಂದೆ ನಿಮ್ಮ ಆಪ್ತರ ಹುಟ್ಟಹಬ್ಬವನ್ನು ವ್ಯಾಟ್ಸಾಪ್ ನೆನಪಿಸುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಆಪ್ತರಿಗೆ ಬರ್ತ್‌ಡೇ ವಿಶ್ ಮಾಡಲು ಸಾಧ್ಯವಿದೆ.

ಅತ್ಯಾಧುನಿಕ ತಂತ್ರಜ್ಞಾನದ ಬರ್ತ್ ಡೇ ವಿಶ್ ಫೀಚರ್

ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ಇದೀಗ ಹೊಸ ಫೀಚರ್ ತರುತ್ತಿದೆ. ಸದ್ಯ ಈ ಬರ್ತ್ ಡೇ ಫೀಚರ್ ಬಿಟಾ ವರ್ಶನ್‌ನಲ್ಲಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಸದ್ಯ ಹಲವರು ಈ ರೀತಿ ಬರ್ತ್‌ಡೇ ಮರೆತು ಹೋಗದಂತೆ ಥರ್ಡ್ ಪಾರ್ಟಿ ಆ್ಯಪ್ ಕ್ಯಾಲೆಂಡರ್ ಬಳಸುತ್ತಾರೆ. ಇನ್ನು ಟೆಲಿಗ್ರಾಂನಲ್ಲಿ ರಿಮೈಂಡರ್ ಫೀಚರ್ ಲಭ್ಯವಿದೆ. ಇದೀಗ ಈ ವ್ಯಾಟ್ಸಾಪ್ ಬಳಕೆದಾರರಿಗೆ ಅಡ್ವಾನ್ಸ್ ತಂತ್ರಜ್ಞಾನದ ಮೂಲಕ ರಿಮೈಂಡರ್ ಫೀಚರ್ ನೀಡಲಾಗುತ್ತಿದೆ.

ವ್ಯಾಟ್ಸಾಪ್ ಇನ್‌ಸ್ಟಾಲ್ ಮಾಡುವಾಗ ವಯಸ್ಸಿನ ವೆರಿಫಿಕೇಶನ್‌ಗಾಗಿ ಡೇಟ್ ಆಫ್ ಬರ್ತ್ ಹಾಕುವ ನೀತಿಯನ್ನು ತಂದಿದೆ. ಇದೀಗ ವ್ಯಾಟ್ಸಾಪ್ ನೋಟಿಫಿಕೇಶನ್ ಮೂಲಕ ಬಳಕೆದಾರರು ತಮ್ಮ ಕಾಂಟಾಕ್ಟ್‌ನಲ್ಲಿದ್ದವರ ಬರ್ತ್ ಡೇಯನ್ನು ನೋಟಿಫಿಕೇಶನ್ ಮೂಲಕ ನೀಡಲಿದೆ. ಪ್ರತಿ ದಿನ ಯಾರ ಹುಟ್ಟು ಹಬ್ಬ ಇದೆ ಅನ್ನೋದನ್ನು ವ್ಯಾಟ್ಸಾಪ್ ಸೂಚಿಸಲಿದೆ. ಇದರಿಂದ ಆಪ್ತರಿಗೆ ತಕ್ಕ ಸಮಯದಲ್ಲಿ ಹುಟ್ಟು ಹಬ್ಬ ವಿಶ್ ಮಾಡಲು ಸಾಧ್ಯವಾಗಲಿದೆ. ನಿಮ್ಮ ಕಾಂಟಾಕ್ಟ್‌ನಲ್ಲಿರುವ ಯಾರೆಲ್ಲಾ ವ್ಯಾಟ್ಸಾಪ್ ಇನ್‌ಸ್ಟಾಲ್ ಮಾಡಿದಾಗ ಡೇಟ್ ಆಫ್ ಬರ್ತ್ ನೀಡಿದ್ದಾರೋ ಅವರ ಹುಟ್ಟು ಹಬ್ಬದ ದಿನಾಂಕವನ್ನು ವ್ಯಾಟ್ಸಾರ್ ರಿಮೈಂಡರ್ ಮಾಡಲಿದೆ.

ಪ್ರೈವೈಸಿ ಪ್ರಶ್ನೆ

ಇದೀಗ ಕಾಂಟಾಕ್ಟ್‌ನಲ್ಲಿರುವ ವ್ಯಕ್ತಿಗಳ ಹುಟ್ಟಿದ ದಿನಾಂಕವನ್ನು ಬಹಿರಂಗಪಡಿಸುವುದು ಪ್ರೈವೈಸಿ ನೀತಿಗೆ ಧಕ್ಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹುಟ್ಟಿದ ದಿನಾಂಕ ಬಹಿರಂಗಪಡಿಸುವುದು ಹಲವರಿಗೆ ನೆಚ್ಚಿನ ವಿಷಯವಲ್ಲ, ಇಷ್ಟೇ ಅಲ್ಲ ಇದರಿಂದ ಅವಕ ಖಾಸಗೀತನಕ್ಕೆ ಧಕ್ಕೆಯಾಗಲಿದೆ ಅನ್ನೋ ವಾದಗಳು ಹುಟ್ಟಿಕೊಂಡಿದೆ. ಹೀಗಾಗಿ ವ್ಯಾಟ್ಸಾಪ್ ಹೊಸ ಫೀಚರ್‌ನಲ್ಲಿ ಕೆಲ ಆಯ್ಕೆಗಳನ್ನು ನೀಡುವ ಸಾಧ್ಯತೆ ಇದೆ.

ವ್ಯಾಟ್ಸಾಪ್ ಹೊಸ ಫೀಚರ್ ಸದ್ಯ ಬೀಟಾವರ್ಶನ್‌ನಲ್ಲಿ ಮಾತ್ರ ಲಭ್ಯವಿದೆ. ಟೆಸ್ಟಿಂಗ್ ಹಂತದಲ್ಲಿರುವ ಕಾರಣ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ. ಟೆಸ್ಟಿಂಗ್ ಬಳಿಕ ಸಾಧಕ ಬಾಧಕಗಳ ಚರ್ಚಿಸಿ ಶೀಘ್ರದಲ್ಲೇ ಹೊಸ ಫೀಚರ್ ಎಲ್ಲಾ ವ್ಯಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗಲಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಒಪ್ಪೋ ರೆನೋ16 ಸಿರೀಸ್‌ ಅನಾವರಣ: ನಿಮ್ಮೊಳಗಿನ ಸೃಜನಶೀಲತೆಯನ್ನು ಅನಾವರಣಗೊಳಿಸುವ ಸ್ಮಾರ್ಟ್‌ಫೋನ್‌
ಜಿಯೋ ಟಿವಿ ಪ್ರೋ ಪ್ಯಾಕ್ ಲಾಂಚ್, ಕೇವಲ 55 ರೂಪಾಯಿಗೆ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಲಭ್ಯ