
ನವದೆಹಲಿ(ನ.10) ಲೈವ್ ವಿಡಿಯೋ ಚಾಟ್ ಪ್ಲಾಟ್‌ಫಾರ್ಮ್ ಒಮೆಗ್ಲೆ ಕಳೆದ 15 ವರ್ಷದಿಂದ ಸಂವಹನ ಸೇವೆ ನೀಡುತ್ತಿದೆ. ಪ್ರಮುಖವಾಗಿ ಕೊರೋನಾ ಕಾಲದಲ್ಲಿ ಒಮೆಗ್ಲೆ ಅತೀ ಹೆಚ್ಚಿನ ಆದಾಯಗಳಿಸಿತ್ತು. ಲಾಕ್‌ಡಾನ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅನಿವಾರ್ಯತೆ ಕಾರಣ ಎಲ್ಲರೂ ಡಿಜಿಟಲ್ ಸಂವಹನದ ಮೊರೆ ಹೋಗಿದ್ದರು. ಹೀಗಾಗಿ ಜೂಮ್, ಗೂಗಲ್ ಮೀಟ್ ಸೇರಿದಂತೆ ಹಲವು ಡಿಜಿಟಲ್ ಪ್ಲಾಟ್‌ಫಾರ್ಮ್ ಜನಪ್ರಿಯತೆ ಪಡೆದುಕೊಂಡಿತ್ತು. ಇದೇ ವೇಳೆ ಒಮೆಗ್ಲೆ ಕೂಡ ಲೈವ್ ವಿಡಿಯೋ ಚಾಟ್ ಮೂಲಕ ಭಾರತ ಸೇರಿದಂತೆ ವಿಶ್ವಾದ್ಯಂತ ನೆಚ್ಚಿನ ಕಮ್ಯೂನಿಕೇಶನ್ ಪ್ಲಾಟ್‌ಫಾರ್ಮ್ ಆಗಿ ರೂಪುಗೊಂಡಿತ್ತು. ಆದರೆ ಈ ಒಮೆಗ್ಲೆ ಕಂಪನಿ ಬಂದ್ ಆಗಿದೆ. ಕಂಪನಿ ಸಿಇಒ ದಿಢೀರ್ ನಿರ್ಧಾರ ಘೋಷಿಸಿದ್ದಾರೆ.
ವರ್ಚುವಲ್ ವಿಡಿಯೋ ಹಾಗೂ ಟೆಕ್ಸ್ಟ್ ಕಮ್ಯೂನಿಕೇಶನ್ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಒಮೆಗ್ಲೆ ಇದೀಗ ಸ್ಥಗಿತಗೊಂಡಿದೆ. ಕಂಪನಿ ಸಿಇಒ ಲೀಫ್ ಕೆ ಬ್ರೂಕ್ಸ್ ಈ ನಿರ್ಧಾರ ಘೋಷಿಸಿದ್ದಾರೆ. ಕುಟುಂಬಸ್ಥರು, ಆಪ್ತರು, ಗೆಳೆಯರು ಜೊತೆ ಸಂಪರ್ಕ ಸಾಧಿಸಲು ಒಮೆಗ್ಲೆ ಅತ್ಯುತ್ತಮ ಫ್ಲಾಟ್‌ಫಾರ್ಮ್ ಆಗಿ ಕಾರ್ಯನಿರ್ವಹಿಸಿತ್ತು. ಕಚೇರಿಗಳ ಮೀಟಿಂಗ್, ಚಾಟಿಂಗ್ ಸೇರಿದಂತೆ ಹಲವು ರೀತಿಯಲ್ಲಿ ಒಮೆಗ್ಲೆಯನ್ನು ಜನರು ಬಳಕೆ ಮಾಡಿದ್ದರು. ಇದರ ನಡುವೆ ಹಲವು ಸವಾಲು ಎದುರಿಸಿದ್ದೇನೆ. ಒಮೆಗ್ಲೆಯನ್ನು ಉಳಿಸಿಕೊಳ್ಳಲು ಸತತ ಹೋರಾಟ ನಡೆಸಿ ಸೋತಿದ್ದೇನೆ. ಆರ್ಥಿಕವಾಗಿ ಹಾಗೂ ಮಾನಸಿಕವಾಗಿಯೂ ನಾನು ಸೋತು ಹೋಗಿದ್ದೇನೆ ಎಂದು ಬ್ರೂಕ್ಸ್ ಹೇಳಿದ್ದಾರೆ.
ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿ ವಾಯ್ಸ್ ರೀತಿ ವಿಡಿಯೋ ಮೆಸೇಜ್ ಕಳುಹಿಸಿ, ಹೊಸ ಫೀಚರ್ ಬಳಕೆ ಹೇಗೆ?
ಇನ್ನು ಒಮೆಗ್ಲೆ ಸವಾಲು ಎದುರಿಸಲು ನನ್ನಿಂದ ಸಾಧ್ಯವಿಲ್ಲ. 30ರ ಹರೆಯದಲ್ಲಿ ನನಗೆ ಹಾರ್ಟ್ ಆ್ಯಟಾಕ್ ಆಗುವುದು ಬೇಡ. ಹೀಗಾಗಿ ಕಂಪನಿ ಮುಚ್ಚುತ್ತಿದ್ದೇನೆ ಎಂದು ಬ್ರೂಕ್ಸ್ ಹೇಳಿದ್ದಾರೆ. 2009ರಲ್ಲಿ ಲೀಫ್ ಕೆ ಬ್ರೂಕ್ಸ್ ಒಮೆಗ್ಲೆ ಕಂಪನಿ ಸ್ಥಾಪಿಸಿದ್ದರು. 18ರ ಹರೆಯದ ಹೈಸ್ಕೂಲ್ ವಿದ್ಯಾರ್ಥಿ ಬ್ರೂಕ್ಸ್ ಪ್ರೋಗ್ರಾಂ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು. ಇದೇ ಜೋಶ್‌ನಲ್ಲಿ ಆರಂಭಿಸಿದ ಕಂಪನಿ ಒಮೆಗ್ಲೆ.
2021ರಲ್ಲಿ ನಡೆದ ತನಿಖೆಯಲ್ಲಿ ಒಮೆಗ್ಲೆ ಪ್ಲಾಟ್‌ಫಾರ್ಮ್ ಅಕ್ರಮವಾಗಿ ಬಳಕೆಯಾಗುತ್ತಿರುವುದು ಪತ್ತೆಯಾಗಿತ್ತು. ಅಪ್ರಾಪ್ತ ವಯಸ್ಕರು ಅಪರಿಚಿತರ ಜೊತೆ ನಗ್ನವಾಗಿ ಕಾಣಿಸಿಕೊಳ್ಳುತ್ತಿರುವುದು, ಪೋರ್ನ್ ವಿಡಿಯೋ ಲಿಂಕ್ ಸೇರಿದಂತೆ ಕೆಲ ಅಕ್ರಮಗಳು ಈ ತನಿಖೆಯಲ್ಲಿ ಬಹಿರಂಗವಾಗಿತ್ತು. ಅಲ್ಲಿಂದ ಆರಂಭಗೊಂಡ ಕಾನೂನು ಹೋರಾಟದಲ್ಲಿ ಒಮೆಗ್ಲೆ ಇದೀಗ ಸೋತಿದೆ. ಹೀಗಾಗಿ ಕಂಪನಿ ಸಿಇಒ ಒಮೆಗ್ಲೆ ಸ್ಥಗಿತಗೊಳಿಸಿದ್ದರೆ.
ಜಾರ್ಖಂಡ್ ಆರೋಗ್ಯ ಸಚಿವನ ಅನಾರೋಗ್ಯಕಾರಿ ವರ್ತನೆ: ಅಶ್ಲೀಲ ವಿಡಿಯೋ ಚಾಟ್ ವೈರಲ್
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.