ಎಲ್‌ಜಿಯ ಬಿ2ಬಿ ಇನ್ನೋವೇಶನ್ ಗ್ಯಾಲರಿಯಲ್ಲಿ ಏನೆಲ್ಲ ಲಾಭವಿದೆ ಗೊತ್ತಾ..?

By Suvarna NewsFirst Published Dec 12, 2020, 8:04 PM IST
Highlights

ಗ್ರಾಹಕರಲ್ಲಿ ವಿಶ್ವಾಸಾರ್ಹತೆ ಹಾಗೂ ಮೌಲ್ಯಯುತ ನಂಬಿಕೆಯನ್ನು ಗಳಿಸುವ ನಿಟ್ಟಿನಲ್ಲಿ ಎಲ್‌ಜಿ ಯಾವಾಗಲೂ ಮುಂದಿರುತ್ತದೆ. ಕೋವಿಡ್-19ರ ಬಿಕ್ಕಟ್ಟಿನಿಂದ ಜಗತ್ತು ಚೇತರಿಸಿಕೊಳ್ಳುತ್ತಿದ್ದು, ಎಲ್‌ಜಿ ತನ್ನ ಪಾಲುದಾರರೊಂದಿಗೆ ಕೈಜೋಡಿಸಿದೆ. ಅಲ್ಲದೆ, ವ್ಯವಹಾರದ ನಿರಂತರತೆಗಾಗಿ ಹಲವು ಪರಿಹಾರೋಪಾಯಗಳನ್ನು ರಚಿಸುವತ್ತಲೂ ಗಮನಹರಿಸಿದೆ. ಹಾಗಾದರೆ, ಎಲ್‌ಜಿಯ ಬಿ2ಬಿ ಇನ್ನೋವೇಶನ್ ಗ್ಯಾಲರಿಯಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ನೋಡೋಣ...

ವ್ಯವಹಾರ ಇಲ್ಲವೇ ಉದ್ದಿಮೆಯ ಸಮರ್ಪಕ ಅನುಷ್ಠಾನ ಮತ್ತು ಉತ್ಪಾದನೆಯ ಬಗ್ಗೆ ಇಂದಿನ ಬಿ 2 ಬಿ ಗ್ರಾಹಕರು ಬಯಸುತ್ತಾರೆ. ಅಲ್ಲದೆ, ಅವರು ತಮ್ಮ ಹೂಡಿಕೆಯ ಮೇಲೆ ಸಹ ಅದೇ ರೀತಿಯಾಗಿ ಲಾಭವನ್ನು ನಿರೀಕ್ಷಿಸುತ್ತಾರೆ. ಆದರೆ, ಪ್ರಸ್ತುತ ಎದುರಾಗಿರುವ ಸಾಂಕ್ರಾಮಿಕ ರೋಗವು ಬಿ2ಬಿ ಕ್ಷೇತ್ರದ ಬೆಳವಣಿಗೆಯ ಮೇಲೆ ಬೀರಿರುವ ಪರಿಣಾಮಗಳು ಈ ಗ್ರಾಹಕರಿಗೆ ಎದುರಾಗಿದೆ. ಹಾಲಿ ಈ ಸಾಂಕ್ರಾಮಿಕ ರೋಗದಿಂದ ಎಲ್ಲ ಕಡೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ವಿಶ್ವದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗಿರುವ ಬಿ2ಬಿ ಪರಿಕಲ್ಪನೆಗಳನ್ನು ನೋಡುವ ಅವಕಾಶವನ್ನು ಸಹ ಗ್ರಾಹಕರಿಂದ ಕಸಿದುಕೊಂಡಂತಾಗಿದೆ. ಈ ಮೂಲಕ ಹಲವು ಬ್ರಾಂಡ್ ಸೈಟ್‌ಗಳಿಗೆ ಭೇಟಿ ನೀಡುವ ಅವಕಾಶಗಳೂ ಕೈತಪ್ಪಿವೆ. ಇದರಿಂದ ಗ್ರಾಹಕರಲ್ಲಿ ವಿಶ್ವಾಸಾರ್ಹತೆ ಹಾಗೂ ಮೌಲ್ಯಯುತ ನಂಬಿಕೆಯನ್ನು ಗಳಿಸಲು ಅಡ್ಡಿಯಾಗಿದೆ. ಇದು ಸಹಜವಾಗಿಯೇ ಬಿ2ಬಿ (ವ್ಯವಹಾರದಿಂದ ವ್ಯವಹಾರ) ನಡುವಿನ ಒಂದು ಸ್ಪೇಸ್ ಅನ್ನು ತುಂಬಿಕೊಳ್ಳಲು ಅವಕಾಶ ಕೊಡದೆ, ಗ್ರಾಹಕರ ಎಲ್ಲ ಕೆಲಸಗಳಿಗೆ ಅಡ್ಡಿಯಾಗುವ ಮೂಲಕ ಸಾಂಪ್ರದಾಯಿಕ ವಿಧಾನಗಳ ಮೂಲಕ ವ್ಯವಹರಿಸಲು ಅವಕಾಶಗಳು ಸಿಗುತ್ತಿಲ್ಲ.


ಇಂತಹ ಪರಿಸ್ಥಿಯನ್ನು ಎದುರಿಸಿ ಗ್ರಾಹಕರ ಬೆಳವಣಿಗೆ ದೃಷ್ಟಿಯಿಂದ ಅವರಿಗೆ ಪೂರಕವಾಗಿ ನವೀನ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೀಡುವ ನಿಟ್ಟಿನಲ್ಲಿ ಎಲ್‌ಜಿ ಯಾವಾಗಲೂ ಚಿಂತಿಸುತ್ತದೆ. ಅಲ್ಲದೆ, ಈ ತತ್ವದ ಮೇಲೆ ನಂಬಿಕೆಯನ್ನೂ ಇಟ್ಟಿದೆ. ಅನುಭವಿ ಮಾರ್ಕೆಟಿಂಗ್ ಮೂಲಕ ಗ್ರಾಹಕರಿಗೆ ಮೌಲ್ಯದ ಅರಿವು ಮೂಡಿಸುವುದು ಎಲ್‌ಜಿಯ ಮೂಲ ಮಂತ್ರವಾಗಿದೆ. ಇದೀಗ ಕೋವಿಡ್-19ರ ಬಿಕ್ಕಟ್ಟಿನಿಂದ ಜಗತ್ತು ಚೇತರಿಸಿಕೊಳ್ಳುತ್ತಿದ್ದು, ಎಲ್‌ಜಿ ತನ್ನ ಪಾಲುದಾರರೊಂದಿಗೆ ಕೈಜೋಡಿಸಿದೆ. ಅಲ್ಲದೆ, ವ್ಯವಹಾರದ ನಿರಂತರತೆಗಾಗಿ ಹಲವು ಪರಿಹಾರೋಪಾಯಗಳನ್ನು ರಚಿಸುವತ್ತಲೂ ಗಮನಹರಿಸಿದೆ. 
ಇಂಥ ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ ಎಲ್‌ಜಿ ತನ್ನ ವ್ಯಾಪ್ತಿ ಮೀರಿ ಚಿಂತನೆಯನ್ನು ನಡೆಸಿದ್ದು, ಬಿ2ಬಿ ಮಾರ್ಕೆಟಿಂಗ್‌ನ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುವ ಮುಖಾಂತರ ತನ್ನದೇ ಆದ  ಸ್ಪೇಸ್ ಅನ್ನು ಸೃಷ್ಟಿಸಿದೆ. 

ಬಿ2ಬಿ ಇನ್ನೋವೇಶನ್ ಗ್ಯಾಲರಿ
ಎಲ್‌ಜಿಯ ನೂತನ ಕಾರ್ಪೋರೇಟ್ ಕಚೇರಿಯಲ್ಲಿ 14,300 ಚದರಡಿ ವಿಸ್ತೀರ್ಣದಲ್ಲಿ ಬಿ2ಬಿ ಇನ್ನೋವೇಶನ್ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಎಲ್ಜಿಯ ಎಲ್ಲ ಉನ್ನತ ಶ್ರೇಣಿಯ ಬಿ2ಬಿ ಮತ್ತು ಬಿ2ಬಿಸಿ ಉತ್ಪನ್ನಗಳು ಹಾಗೂ ಸೇವೆಗಳು ಲಭ್ಯವಿದ್ದು, ದೇಶದಲ್ಲಿಯೇ ಇಂತಹ ಸೌಲಭ್ಯ ಹೊಂದಿರುವ ಏಕೈಕ ತಾಣ ಇದಾಗಿದೆ. ಇಲ್ಲಿ ಗ್ರಾಹಕರ ಅನುಭವವನ್ನು ಮರು ವ್ಯಾಖ್ಯಾನಿಸಲು ಅನುವು ಮಾಡಿಕೊಡುವುದಲ್ಲದೆ, ಎಲ್‌ಜಿ ಬಿ2ಬಿ ಇನ್ನೋವೇಶನ್ ಗ್ಯಾಲರಿಯು ಪಾಲುದಾರರು ಹಾಗೂ ಸಿಸ್ಟಮ್ ಇಂಟಿಗ್ರೇಟರ್ ಗಳಿಂದ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಪರೀಕ್ಷಿಸಲು ಹಾಗೂ ಪ್ರಾಯೋಗಿಕವಾಗಿ ಬಳಸಲು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಕಾರ್ಪೋರೇಟ್, ಶಿಕ್ಷಣ, ಚಿಲ್ಲರೆ ವ್ಯಾಪಾರ, ಆತಿಥ್ಯ, ಸಾರಿಗೆ, ಸರ್ಕಾರ ಮತ್ತು ಪಿಎಸ್‌ಯು, ವಸತಿಗಾಗಿ ನಿರ್ಮಿಸಲಾದ ಕೆಲವೊಂದು ರಿಯಲ್ ಟೈಂ ಅಪ್ಲಿಕೇಶನ್‌ಗಳನ್ನು ಅನುಭವಿಸಲು ಗ್ರಾಹಕರಿಗೆ ಇದೊಂದು ವೇದಿಕೆಯಾಗಿದೆ.
ಗ್ಯಾಲರಿಯನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳನ್ನು ಪ್ರವೇಶ, ಮಾಹಿತಿ ಪ್ರದರ್ಶನ, ಸಿಸ್ಟಮ್ ಏರ್ ಕಂಡೀಷನರ್ ವಲಯ, ಐಟಿ ವಲಯ, ಬಿ2ಬಿಸಿ ವಲಯ ಮತ್ತು ಮುಕ್ತ ಸಂವಹನ ಸ್ಥಳ ಎಂದು ವಿಂಗಡಿಸಲಾಗಿದೆ. 

ಗ್ರಾಹಕರು ಮಳಿಗೆಯನ್ನು ಪ್ರವೇಶಿಸುತ್ತಿದ್ದಂತೆ, ಎಲ್‌ಜಿಯ ಸಿಗ್ನೇಚರ್ ಉತ್ಪನ್ನಗಳಾದ ಸೈಡ್ ಬೈ ಸೈಡ್ ರೆಫ್ರಿಜರೇಟರ್, ಒಎಲ್ಇಡಿ ಡಿಸ್ಪ್ಲೇ ಮತ್ತು ವಾಷಿಂಗ್ ಮಷಿನ್‌ಗಳು ಸ್ವಾಗತಿಸುತ್ತವೆ. ಈ ಮೂಲಕ ಎಲ್‌ಜಿಯ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶ್ವದರ್ಜೆಯ ವಿನ್ಯಾಸಗಳನ್ನು ಪ್ರದರ್ಶಿಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.
ಗ್ಯಾಲರಿಯ ಮಾಹಿತಿ ಪ್ರದರ್ಶನ ವಲಯದಲ್ಲಿ ಎಲ್‌ಜಿಯ ಅತ್ಯಂತ ಪ್ರೀಮಿಯಂ ಹಾಗೂ ಸುಧಾರಿತ ಎಲ್ಇಡಿ ಸಿಗ್ನೇಜ್, ಡಿಜಿಟಲ್ ಸಿಗ್ನೇಜ್ ಮತ್ತು ವಾಣಿಜ್ಯ ಟಿವಿಗಳನ್ನು ಕಾಣಬಹುದಾಗಿದ್ದು, ಈ ಮೂಲಕ ವ್ಯವಹಾರದ ವಿವಿಧ ಆಯಾಮಗಳಿಗೆ ಸಹಾಯಕವಾಗಿದೆ.. 

ಎಲ್ಇಡಿ ಸಿಗ್ನೇಜ್ (ಸಂಕೇತ) ಮೂಲಕ ಎಲ್‌ಜಿ ತನ್ನ ಪ್ರಮುಖ ಪ್ರದರ್ಶನ (ಡಿಸ್ಪ್ಲೇ) ತಂತ್ರಜ್ಞಾನವನ್ನು ವಿಸ್ತರಿಸಿ ಅಭೂತಪೂರ್ವ ದೃಶ್ಯ ಕಾರ್ಯಕ್ಷಮತೆ ಹಾಗೂ ಸ್ಥಿರತೆಯನ್ನು ಹೊಂದಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆಲ್ಫಾ 7 ಇಂಟೆಲಿಜೆಂಟ್ ಪ್ರೊಸೆಸರ್, ಎಚ್‌ಡಿಆರ್ ಪ್ರೊಸೆಸರ್, ಎಚ್‌ಡಿಆರ್ 10 ಪ್ರೋನಿಂದಾಗಿ ಎಲ್‌ಜಿ ಎಲ್ಇಡಿಯನ್ನು ವಿಶಾಲ ದೃಷ್ಟಿಕೋನದಲ್ಲಿ ವೀಕ್ಷಿಸುವ ನಿಟ್ಟಿನಲ್ಲಿ ಕಲರ್ ಡಿಸ್ಟೋರೇಷನ್ ಅನ್ನೂ ಕಡಿಮೆ ಮಾಡಲಾಗಿದೆ. ಸಭಾ ಕೊಠಡಿಗಳು, ಬೋರ್ಡ್ ರೂಂಗಳು, ಲಾಬಿ, ಸಭಾಂಗಣ, ಹೋಂ ಸಿನಿಮಾ ಥಿಯೇಟರ್, ಕಂಟ್ರೋಲ್ ರೂಂ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಒಳಾಂಗಣ 1.5 / 2.0/2.5 ಪಿಕ್ಸ್ ಪಿಚ್ ಸಹತಿ ಎಲ್ಇಡಿಯನ್ನು ಈ ವಲಯದ ಮೂಲಕ ಕಾಣಬಹುದಾಗಿದೆ. 

ಎಲ್‌ಜಿ ಎಲ್ಇಡಿಯು ಬ್ಲಾಕ್-ಎಲ್ಎಸ್ಎಎ ಸರಣಿಯ ಬ್ಲಾಕ್-ಅಸೆಂಬ್ಲಿ ವಿನ್ಯಾಸವನ್ನು ಹೊಂದಿದೆ. ಈ ಮೂಲಕ ಹೆಚ್ಚುವರಿ ಕೇಬಲ್‌ಗಳನ್ನು ಬಳಸದೆಯೇ ಪವರ್ ಮತ್ತು ಸಿಗ್ನಲ್ ಅನ್ನು ಕ್ಯಾಬಿನೆಟ್‌ಗೆ ಎಲ್ಲ ಸಂಕೇತಗಳೊಂದಿಗೆ ರವಾನಿಸುತ್ತದೆ. ಇದರಿಂದ ಸಮಯ, ವೆಚ್ಚ ಉಳಿಯುವುದಲ್ಲದೆ, ಯಾವುದೇ ತೊಡಕಿದೆಲ್ಲದೆಯೇ 4ಕೆ ಯುಹೆಚ್ಡಿ ರೆಸಲ್ಯೂಶನ್ ಮತ್ತು 16:9 ಆಸ್ಪೆಕ್ಟ್ ಅನುಪಾತದಲ್ಲಿ ಸಿಗ್ನಲ್ ಅನ್ನು ತಲುಪಿಸುತ್ತದೆ.

LG MAGNIT  (ಎಲ್‌ಜಿ ಮ್ಯಾಗ್ನಿಟ್) – ಹೊಸ ಮೈಕ್ರೋ ಎಲ್ಇಡಿ ಸಿಗ್ನೇಜ್ ಸೊಲ್ಯೂಷನ್‌ವು ಎಲ್‌ಜಿ ಸ್ವಾಮ್ಯದ ಬ್ಲ್ಯಾಕ್ ಕೋಟಿಂಗ್ ಡಿಸ್ಪ್ಲೇ ತಂತ್ರಜ್ಞಾನದ ಜೊತೆಗೆ ಅತ್ಯುತ್ತಮ ವೀಕ್ಷಣಾ ಗುಣಮಟ್ಟ ಮತ್ತು ಬಾಳಿಕೆಯನ್ನು ನೀಡುತ್ತದೆ.
ಮೈಕ್ರೋ ಎಲ್ಇಡಿ ಸೆಲ್ಫ್-ಎಮಿಸ್ಸೀವ್ ಮೈಕ್ರೋಮೀಟರ್ ಹಾಗೂ ಸ್ಕೇಲ್ ಪಿಕ್ಸಲ್ ಅನ್ನು ಸಬ್ ಸ್ಟ್ರೇಟ್ ಬೋರ್ಡ್‌ಗೆ ನೇರವಾಗಿ ಅಳವಡಿಸಲಾಗಿರುತ್ತದೆ. ಏಕೆಂದರೆ, ತೀಕ್ಷ್ಣ ದೃಶ್ಯಾವಳಿಗಳ ಜೊತೆಗೆ ಸುಧಾರಿತ ಕಾಂಟ್ರಾಸ್ಟ್ ಹಾಗೂ ವಿಶಾಲವಾಗಿ ವೀಕ್ಷಣಾ ಆಯಾಮವನ್ನು ಇದು ಒದಗಿಸುತ್ತದೆ. 
ಎಚ್ ಡಿ ಆರ್ 10 ಪ್ರೋ ಮತ್ತು ಇಮ್ಮೆಸ್ಸೀವ್ ಸರ್ಫೇಸ್ ಸೌಂಡ್ ಕಪಲ್ಡ್‌ನಿಂದ “130 ಆಲ್ – ಇನ್ – ಒನ್ ಪ್ರೀಮಿಯಂ” ಚಾಲನೆಗೊಂಡಿದೆ. ಜೊತೆಗೆ ಇದನ್ನು ಸುಲಭವಾಗಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಅಲ್ಲದೆ, ವಿವಿಧ AV ಕಂಟ್ರೋಲ್ ಸಿಸ್ಟಮ್ ಅನ್ನು ಹೊಂದಾಣಿಕ ಮೂಲಕ ಒದಗಿಸುತ್ತದೆ. ಇದು ಕಾರ್ಪೋರೇಟ್ ಬೋರ್ಡ್ ರೂಂಗಳಿಗೆ ಮತ್ತು ಮೀಟಿಂಗ್ ರೂಂಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಇಂಟರ್ಯಾಕ್ಟೀವ್ ಡಿಜಿಟಲ್ ಬೋರ್ಡ್, ಒಎಲ್ಇಡಿ ಶ್ರೇಣಿ (ಪಾರದರ್ಶಕ, ಕರ್ವ್ಡ್, ಹೋಟೆಲ್ ಟಿವಿ, ವಾಲ್ ಪೇಪರ್ ಸಿಗ್ನೇಜ್), ದೊಡ್ಡ ಸ್ವರೂಪದ ಡಿಸ್ಪ್ಲೇ, ಸೂಪರ್ ನ್ಯಾರೋ ಈವನ್ ಬೇಸೆಲ್ ವಿಡಿಯೋ ವಾಲ್, ಹೈ-ಬ್ರೈಟ್ನೆಸ್ ಹೊರಾಂಗಣ ಮತ್ತು 88 ಅಲ್ಟ್ರಾ ಸ್ಟ್ರೆಚ್ ಸಿಗ್ನೇಜ್ ಸೇರಿದಂತೆ ಇನ್ನಿತರ ಪ್ರಮುಖ ಉತ್ಪನ್ನಗಳು ಡಿಸ್ಪೇನಲ್ಲಿ ಒಳಗೊಂಡಿದೆ. 

ಇದು 'ಎಲ್‌ಜಿ ಕನೆಕ್ಟರ್ ಕೇರ್' ಅನ್ನು ಸಹ ಹೊಂದಿದ್ದು, ಗ್ರಾಹಕ ಸಂಬಂಧಿ ಸ್ಥಳಗಳಲ್ಲಿ ಸ್ಥಾಪಿಸಲಾದ ಸಂಕೇತ ಪ್ರದರ್ಶನಗಳ ಕಾರ್ಯಾಚರಣೆಯ ಸ್ಥಿತಿಯನ್ನು ದೂರದಿಂದಲೇ ನಿರ್ವಹಿಸಲು ಕ್ಲೌಡ್ ಸರ್ವಿಸ್ ಸೌಲಭ್ಯವನ್ನು ಹೊಂದಿದೆ. ಎಲ್‌ಜಿ ಸೇವಾ ತಂಡವು ಎಲ್ಲ ಸಮಯದಲ್ಲೂ ಸಹ ಮೇಲ್ವಿಚಾರಣೆ ನಡೆಸಲಿದ್ದು, ಈ ಮೂಲಕ ದೋಷ ಪತ್ತೆ ಮತ್ತು ರಿಮೋಟ್ ಕಂಟ್ರೋಲ್ ಸೇವೆಗಳನ್ನು ಒದಗಿಸುತ್ತದೆ.

ಆರೋಗ್ಯಕರ ವಾತಾವರಣಕ್ಕೆ LG ಬದ್ಧತೆ
ನಮ್ಮ ಬದಲಾಗುತ್ತಿರುವ ಜಗತ್ತಿಗೆ ಆರೋಗ್ಯಕರ ವಾತಾವರಣವನ್ನು ನೀಡುವ ನಿಟ್ಟಿನಲ್ಲಿ ಎಲ್‌ಜಿ ಬದ್ಧತೆಯನ್ನು ತೋರಿದ್ದು, ತನ್ನ ಉತ್ಪನ್ನಗಳಲ್ಲಿ ಕಲಾತ್ಮಕ ವಿನ್ಯಾಸ, ಸುಸ್ಥಿರ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ತಳಹದಿಯಲ್ಲಿ ಸಿಸ್ಟಮ್ ಏರ್ ಕಂಡೀಷನರ್ ವಲಯವನ್ನು ರಚಿಸಲಾಗಿದೆ. 
ಇದು ಪ್ರಮುಖ ನವೀನ ಉತ್ಪನ್ನಗಳಾದ ಸ್ಲೇಕೆಸ್ಟ್ 1-ವೇ ಮತ್ತು 4-ವೇ ಕ್ಯಾಸೆಟ್‌ಗಳನ್ನು ವಿಶಿಷ್ಟ ಮತ್ತು ಪರಿಣಾಮಕಾರಿ 5 ಹಂತದ ಏರ್ ಫಿಲ್ಟ್ರೇಶನ್ ಕಿಟ್ ಅನ್ನು ಒಳಗೊಂಡಿದೆ. ಇದು 99% PM 1.0 ಅನ್ನು ಮಾತ್ರವಲ್ಲದೆ, ಬ್ಯಾಕ್ಟೀರಿಯಾ, ವಾಸನೆ ಮತ್ತು ಅಲ್ಟ್ರಾಫೈನ್ ಧೂಳಿನ ಕಣಗಳನ್ನು ತೆಗೆದುಹಾಕುತ್ತದೆ. ಇದು ನಿಮಗೆ ಆರೋಗ್ಯಕರ ವಾತಾವರಣವನ್ನು ನೀಡುತ್ತದೆ. ಇದರ ಜೊತೆಗೆ 4-ವೇ ಕ್ಯಾಸೆಟ್ ವು ಆಶ್ಚರ್ಯಕರ ಹಾಗೂ ಪರಿಣಾಮಕಾರಿಯಾದ ಹ್ಯೂಮನ್ ಡಿಟೆಕ್ಟೀವ್ ಸೆನ್ಸಾರ್ (ಮಾನವ ಪತ್ತೆ ಸಂವೇದಕ) ಅನ್ನು ಹೊಂದಿದೆ. ಇದು ಕೋಣೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಇರುವಿಕೆಯನ್ನು ಪತ್ತೆಮಾಡುವುದಲ್ಲದೆ, ಆರಾಮಕ್ಕಾಗಿ ಗಾಳಿಯ ಹರಿವನ್ನು ನಿರ್ವಹಿಸುತ್ತದೆ.
ತೆಳುವಾಗಿರುವ ಉತ್ಕೃಷ್ಟ ಗುಣಮಟ್ಟದ ವೃತ್ತಾಕಾರದ ಕ್ಯಾಸೆಟ್‌ಗಳನ್ನು ಇದು ಹೊಂದಿದೆ. ನೋಡಲು ಕಾಂಪ್ಯಾಕ್ಟ್ ಆಗಿದ್ದು, 360 ಡಿಗ್ರಿ ಗಾಳಿಯಾಡುವಿಕೆಗೆ ಇದು ಸಹಕಾರಿಯಾಗಿದೆ. ಜೊತೆಗೆ ಶೇ.30ರಷ್ಟು ಹೆಚ್ಚು ಗಾಳಿಯನ್ನು ಒದಗಿಸುತ್ತದೆ. ಈ ವಿನ್ಯಾಸಕ್ಕೆ 1-ವೇ ಕ್ಯಾಸೆಟ್ ಜೊತೆಗೆ ರೆಡ್ ಡಾಟ್ ಡಿಸೈನ್ ಅವಾರ್ಡ್ ಒಲಿದು ಬಂದಿದೆ. ಎಲ್‌ಜಿಯ ಮತ್ತೊಂದು ಸುಸ್ಥಿರ ಆವಿಷ್ಕಾರವೆಂದರೆ ಹೈಡ್ರೋಕಿಟ್ ಆಗಿದೆ. ಇದು ಸಮರ್ಪಕ ಬಿಸಿ ನೀರನ್ನು ಒದಗಿಸಲಿದ್ದು, ಸ್ನಾನಕ್ಕೆ, ಬಿಸಿನೀರಿನ ಪೂಲ್‌ಗಳು, ಸ್ಪಾಗಳು ಮತ್ತು ಆಸ್ಪತ್ರೆಗಳಂತಹ ಸೌಲಭ್ಯಗಳಿಗೆ ಸೂಕ್ತವಾಗಿದೆ. LG BECON ವು ಕಟ್ಟಡ ನಿಯಂತ್ರಣ ಮತ್ತು ಶಕ್ತಿ ನಿರ್ವಹಣೆಯನ್ನು ಮಾಡುತ್ತದೆ. ಇದು HVAC ಸಿಸ್ಟಮ್ ಮೇಲ್ವಿಚಾರಣೆಯನ್ನು ಎಲ್ಲ ಸಮಯದಲ್ಲೂ ನಿರ್ವಹಿಸುತ್ತದೆ. 

ಎಲ್‌ಜಿಯ ಜಿಲ್ಲರ್ಸ್ ವಿಶಾಲವಾದ ಪೋರ್ಟ್ಫೋಲಿಯೋ ಹೊಂದಿದ್ದು, ಎಲ್ಲ ಗಾತ್ರದ ಪ್ರತಿ ಏರ್ ಕಂಡೀಷನರ್‌ಗೂ ಇದು ಅವಶ್ಯಕವಾಗಿದೆ. 
ಎಲ್‌ಜಿಯ ಹೀರೋ ಪ್ರಾಡಕ್ಟ್‌ನಲ್ಲೊಂದಾದ ಮಲ್ಟಿ V 5 ಉತ್ಪನ್ನವು ಭಾರತದಲ್ಲಿ ಈಗಷ್ಟೇ ಬಿಡುಗಡೆಗೊಂಡಿದೆ. ಇದು ಯುನೀಕ್ ಫೀಚರ್‌ಗಳನ್ನು ಹೊಂದಿದ್ದು, ಡ್ಯುಯಲ್ ಸೆನ್ಸಿಂಗ್ ಇದೆ. ಇದು ಸಿಸ್ಟಮ್ ದಕ್ಷತೆಯನ್ನು ಸುಧಾರಿಸುವುದಲ್ಲದೆ, ಪವರ್ಫುಲ್ ಇನ್ವರ್ಟರ್ ಕಂಪ್ರೆಸರ್ ಆಗಿದೆ. ಓಷನ್ ಬ್ಲ್ಯಾಕ್ ಫಿನ್ ಟೆಕ್ನಾಲಜಿಯು ದೀರ್ಘಕಾಲೀನ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಇದೊಂದು ಜಾಗತಿಕ ಉತ್ಪನ್ನವಾಗಿದ್ದು, ಭಾರತಕ್ಕೆ ಅನುಗುಣವಾಗುಂತೆ ಕಸ್ಟಮೈಸ್ ಮಾಡಲಾಗಿದೆ. 

ಐಟಿ ಸೊಲ್ಯೂಷನ್ ವಲಯವು ವೃತ್ತಿಪರ ಮಾನಿಟರ್‌ಗಳಲ್ಲಿ ಎಲ್‌ಜಿಯ ನವೀನ ತಂತ್ರಜ್ಞಾನವನ್ನು ಹೊಂದಿದೆ. ಉದಾಹರಣೆಗೆ ಸೂಪರ್ ಡಿಸೈನ್ ಮತ್ತು ಅತ್ಯಾಧುನಿಕ ಕಾರ್ಯಕ್ಷಮತೆಯೊಂದಿಗೆ ಅಲ್ಟ್ರಾವೈಡ್ ಮತ್ತು ಅಲ್ಟ್ರಾ ಫೈನ್ ಡಿಸ್ಪ್ಲೇಗಳನ್ನು ಹೊಂದಿದೆ. ವೈದ್ಯಕೀಯ ದರ್ಜೆಯ ಮಾನಿಟರ್‌ಗಳನ್ನು ನಿಖರವಾದ ರೋಗ ಪತ್ತೆ ಮತ್ತು ಆಪ್ಟಿಮೈಸ್ಟ್ ಕಲರ್ ರೀಪ್ರೋಡಕ್ಷನ್, ಕ್ಲೌಡ್ ಡಿವೈಸ್ ಜೊತೆಗೆ ವರ್ಧಿತ ಭದ್ರತೆ ಹಾಗೂ ಕಡಿಮೆ ವೆಚ್ಚದಲ್ಲಿ ಇದನ್ನು ಒದಗಿಸಲಾಗುತ್ತದೆ. ಹಗುರ ಲ್ಯಾಪ್‌ಟಾಪ್, ಉತ್ತಮ ಕಾರ್ಯಕ್ಷಮತೆ ಜೊತೆಗೆ ಪೋರ್ಟಬಿಲಿಟಿ ಹಾಗೂ ವಿವಿಧ ರೀತಿಯ ವ್ಯವಹಾರಗಳಿಗೆ ಅನುಕೂಲವಾಗುವಂತೆ 4ಕೆ ಪ್ರೊಜೆಕ್ಟರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 
ಇದು ವಿಶ್ವದ ಮೊದಲ ಗೇಮ್ ಚೇಂಜರ್ ತಂತ್ರಜ್ಞಾನದೊಂದಿಗೆ ವರ್ಚುವಲ್ ಗೇಮಿಂಗ್‌ನಲ್ಲಿ ಸಾಟಿಯಿಲ್ಲದ ನೈಜತೆಗಾಗಿ 4ಕೆ ನ್ಯಾನೋ ಐಪಿಎಸ್ 1 ಎಂಎಸ್ ಅಲ್ಟ್ರಾಗಿಯರ್ ಮಾನಿಟರ್‌ವುಳ್ಳ ಗೇಮಿಂಗ್ ವಲಯವನ್ನು ಹೊಂದಿದೆ. 

ಬಿ2ಬಿ2ಸಿ ವಲಯವು ಎಲ್‌ಜಿಯ ನವೀನ ತಂತ್ರಜ್ಞಾನವನ್ನು ಹೊಂದಿದ್ದು, ಗೃಹೋಪಯೋಗಿ ಉಪಕರಣಗಳು ಮತ್ತು ಅಡುಗೆ ಕೋಣೆಗೆ ಸಂಬಂಧಪಟ್ಟ ವಸ್ತುಗಳನ್ನೊಳಗೊಂಡಿದೆ. ಅವುಗಳಾದ ಇನ್ಸ್ಟಾ ವ್ಯೂ ಡೋರ್ – ಇನ್-ಡೋರ್ ಮತ್ತು ಎಲ್‌ಜಿ ಥಿಂಕ್ಯೂ, ವಾಟರ್ ಪ್ಯೂರಿಫೈಯರ್, ಏರ್ ಪ್ಯೂರಿಫೈಯರ್, ಡ್ಯುಯಲ್ ಇನ್ವರ್ಟರ್ ಕಂಪ್ರೆಸ್ಸರ್, ವಾಷರ್, ಡ್ರೈಯರ್ ಇತ್ಯಾದಿಗಳನ್ನು ಒಳಗೊಂಡಿದೆ. ಒಎಲ್ಇಡಿ ಮತ್ತು ನ್ಯಾನೋಸೆಲ್ ಟಿವಿಗಳು ಹೋಂ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಪ್ರಮುಖವಾಗಿವೆ. ಎಕ್ಸ್-ಬೂಮ್ ಆಡಿಯೋ ಶ್ರೇಣಿ ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಡ್ಯುಯಲ್ ಸ್ಕ್ರೀನ್ ಮೊಬೈಲ್ ಫೋನ್‌ಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗುತ್ತದೆ. 
ಬ್ಯಸಿನೆಸ್ ಮೀಟಿಂಗ್‌ಗಳಿಗೆ, ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಅರ್ಥೈಸಿಕೊಳ್ಳಲು, ಉತ್ಪನ್ನಗಳ ತಾಂತ್ರಿಕ ತರಬೇತಿಗೆ ಓಪನ್ ಕಮ್ಯುನಿಷನ್ ಸ್ಪೇಸ್ ಅನ್ನು ಸಂದರ್ಶಕರಿಗಾಗಿ ಮೀಸಲಿಡಲಾಗಿದೆ. 

ಗ್ರಾಹಕರಿಗೆ ಸ್ಪರ್ಶದ ಅನುಭವವನ್ನು ಸೃಷ್ಟಿಸುತ್ತದೆ. ಈ ಮೂಲಕ ಎಲ್‌ಜಿಯ ಬಿ2ಬಿ ಇನ್ನೋವೇಶನ್ ಗ್ಯಾಲರಿಯು ಗ್ರಾಹಕರು ಮತ್ತು ಪಾಲುದಾರರೊಂದಿಗಿನ ದೀರ್ಘಕಾಲದ ಬಾಂಧವ್ಯವನ್ನು ಉತ್ತಮವಾಗಿಟ್ಟುಕೊಳ್ಳುವ ವಿಶ್ವಾಸವನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

click me!