IISc Param Pravega: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶಕ್ತಿಶಾಲಿ ಸೂಪರ್‌ ಕಂಪ್ಯೂಟರ್‌!

By Suvarna News  |  First Published Feb 4, 2022, 1:46 PM IST

*‘ಪರಮ್‌ ಪ್ರವೇಗ’ ಕಂಪ್ಯೂಟರ್‌ ಕಾರ‍್ಯನಿರ್ವಹಣೆ ಆರಂಭ
*3.3. ಪೆಟಾಫ್ಲಾಫ್ಸ್‌ ಸಾಮರ್ಥ್ಯ: ಸಂಶೋಧನೆಗೆ ಅನುಕೂಲ
*ವೈವಿಧ್ಯಮಯ ಸಂಶೋಧನೆ: ಶೈಕ್ಷಣಿಕ ಅನ್ವೇಷಣೆಗಳಿಗೆ ಶಕ್ತಿ ನೀಡುವ ನಿರೀಕ್ಷೆ


ನವದೆಹಲಿ/ಬೆಂಗಳೂರು (ಫೆ. 04): ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ  ಪ್ರತಿಷ್ಠಿತ ಭಾರತೀಯ ವಿಜ್ಞಾನ ಮಂದಿರ (IISc Bengaluru)ದಲ್ಲಿ ‘ಪರಮ್‌ ಪ್ರವೇಗ’ (Param Pravega) ಎಂಬ ಸೂಪರ್‌ ಕಂಪ್ಯೂಟರ್‌ ಕಾರ್ಯಾಚರಣೆ ಆರಂಭಿಸಿದೆ. ಇದು ದೇಶದಲ್ಲಿ ಈಗಾಗಲೇ ಇರುವ ಅತ್ಯಂತ ಶಕ್ತಿಶಾಲಿ ಸೂಪರ್‌ ಕಂಪ್ಯೂಟರ್‌ಗಳಲ್ಲಿ ಒಂದಾಗಿದೆ. 3.3 ಪೆಟಾಫ್ಲಾಫ್ಸ್‌ ವೇಗದಲ್ಲಿ ಲೆಕ್ಕ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. 1 ಪೆಟಾಫ್ಲಾಫ್ಸ್‌ ಎಬುದು ಒಂದು ಕ್ವಾಡ್ರಿಲಿಯನ್‌ಗೆ ಸಮ. ಅಂದರೆ ಒಂದೇ ಸೆಕೆಂಡ್‌ನಲ್ಲಿ 1015 ಕಾರ್ಯಚಟುವಟಿಕೆ ಮಾಡಬಲ್ಲದು.

ಐಐಎಸ್ಸಿಯಲ್ಲಿರುವ ಈ ಸೂಪರ್‌ ಕಂಪ್ಯೂಟರ್‌ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವುದು  ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ಸಂಸ್ಥೆ. ಇದರಲ್ಲಿ ಬಳಕೆಯಾಗಿರುವ ಬಹುತೇಕ ಬಿಡಿಭಾಗಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಸಾಫ್ಟ್‌ವೇರ್‌ ಅನ್ನೂ ಸಹ. ಸಂಶೋಧನೆ ಹಾಗೂ ಶೈಕ್ಷಣಿಕ ಉದ್ದೇಶಕ್ಕೆ ಈ ಕಂಪ್ಯೂಟರ್‌ ಬಳಕೆಯಾಗಲಿದೆ.

Tap to resize

Latest Videos

undefined

2015ರಲ್ಲಿ ಐಐಎಸ್ಸಿಯಲ್ಲಿ ‘ಸಹಸ್ರಟಿ’ ಎಂಬ ಸೂಪರ್‌ ಕಂಪ್ಯೂಟರ್‌ ಅನ್ನು ಅಳವಡಿಕೆ ಮಾಡಲಾಗಿತ್ತು. ಅದು ಆ ಕಾಲಕ್ಕೆ ದೇಶದಲ್ಲೇ ಅತ್ಯಂತ ವೇಗದ ಸೂಪರ್‌ ಕಂಪ್ಯೂಟರ್‌ ಆಗಿತ್ತು. ಅದನ್ನು ಕೋವಿಡ್‌-19 ಹಾಗೂ ಇನ್ನಿತರೆ ಸಾಂಕ್ರಾಮಿಕ ರೋಗಗಳ ಅಧ್ಯಯನಕ್ಕೂ ಬಳಸಿಕೊಳ್ಳಲಾಗಿತ್ತು.

ಇದನ್ನೂ ಓದಿ: Meta Fastest Super Computer: ಫೇಸ್‌ಬುಕ್‌ನಿಂದ ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್!

ಬಹುತೇಕ ಬಿಡಿಭಾಗ ಭಾರತದಲ್ಲಿ ಅಭಿವೃದ್ಧಿ: "ವೈವಿಧ್ಯಮಯ ಸಂಶೋಧನೆ ಮತ್ತು ಶೈಕ್ಷಣಿಕ ಅನ್ವೇಷಣೆಗಳಿಗೆ ಶಕ್ತಿ ನೀಡುವ ನಿರೀಕ್ಷೆಯಿರುವ ಈ ವ್ಯವಸ್ಥೆಯು 3.3 ಪೆಟಾಫ್ಲಾಪ್‌ಗಳ ಒಟ್ಟು ಸೂಪರ್‌ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಹೊಂದಿದೆ (1 ಪೆಟಾಫ್ಲಾಪ್ ಒಂದು ಕ್ವಾಡ್ರಿಲಿಯನ್ ಅಥವಾ ಪ್ರತಿ ಸೆಕೆಂಡಿಗೆ 1,015 ಕಾರ್ಯಚಟುವಟಿಕೆ ಸಮನಾಗಿರುತ್ತದೆ). ಇದನ್ನು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ವಿನ್ಯಾಸಗೊಳಿಸಿದೆ. ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿ ಸಿ-ಡಿಎಸಿ ಅಭಿವೃದ್ಧಿಪಡಿಸಿದ ಸ್ಥಳೀಯ ಸಾಫ್ಟ್‌ವೇರ್ ಸ್ಟ್ಯಾಕ್‌ನೊಂದಿಗೆ ಈ ವ್ಯವಸ್ಥೆಯನ್ನು ನಿರ್ಮಿಸಲು ಬಳಸಲಾದ ಬಹುಪಾಲು ಘಟಕಗಳನ್ನು ದೇಶದೊಳಗೆ ತಯಾರಿಸಲಾಗಿದೆ ಮತ್ತು ಜೋಡಿಸಲಾಗಿದೆ, ”ಎಂದು ಐಐಎಸ್‌ಸಿ  ಹೇಳಿಕೆಯಲ್ಲಿ ತಿಳಿಸಿದೆ.

ಸೂಪರ್‌ ಕಂಪ್ಯೂಟಿಂಗ್‌ ಮಿಷನ್: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಜಂಟಿ ಯೋಜನೆಯಲ್ಲಿ,  ನ್ಯಾಷನಲ್ಲ ಸೂಪರ್‌ ಕಂಪ್ಯೂಟಿಂಗ್‌ ಮಿಷನನ್ನು C-DAC ಮತ್ತು IISc ಮೂಲಕ ಅಳವಡಿಸಲಾಗಿದೆ. 17 ಪೆಟಾಫ್ಲಾಪ್‌ಗಳ ಸಂಚಿತ ಕಂಪ್ಯೂಟಿಂಗ್ ಶಕ್ತಿಯೊಂದಿಗೆ IISc, IITಗಳು, IISER ಪುಣೆ, JNCASR, NABI-ಮೊಹಾಲಿ ಮತ್ತು C-DAC ನಲ್ಲಿ ಇದುವರೆಗೆ 10 ಸೂಪರ್‌ಕಂಪ್ಯೂಟರ್ ಸಿಸ್ಟಮ್‌ಗಳ ನಿಯೋಜನೆಯನ್ನು ಮಿಷನ್ ಬೆಂಬಲಿಸಿದೆ.

ಇದನ್ನೂ ಓದಿ: ಪ್ರಪಂಚದ 90 ದೇಶಗಳಲ್ಲಿ ಒಟ್ಟು 44 ಮಿಲಿಯನ್ ಮರಗಳು: 73,300 ಪ್ರಭೇದಗಳನ್ನು ಗುರುತಿಸಿದ ವಿಜ್ಞಾನಿಗಳು!

ಹಲವು ಸಂಶೋಧನೆಗಳಲ್ಲಿ ಬಳಕೆ: "ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿವಿಧ ಪ್ರಭಾವಶಾಲಿ ಮತ್ತು ಸಾಮಾಜಿಕ-ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಈ ಸೌಲಭ್ಯವನ್ನು ಬಳಸುತ್ತಿದ್ದಾರೆ. ಇವುಗಳಲ್ಲಿ ಕೋವಿಡ್ -19 ಮತ್ತು ಇತರ ಸಾಂಕ್ರಾಮಿಕ ರೋಗಗಳ ಸಂಶೋಧನೆ ಸೇರಿವೆ, ಉದಾಹರಣೆಗೆ ಮಾಡೆಲಿಂಗ್ ವೈರಲ್ ಸೋಂಕು ಎಂಟ್ರಿ ಮತ್ತು ಬೈಂಡಿಂಗ್, ಬ್ಯಾಕ್ಟೀರಿಯಾ ಮತ್ತು ವೈರಲ್ ಕಾಯಿಲೆಗಳಲ್ಲಿ ಪ್ರೋಟೀನ್‌ಗಳ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡುವುದು ಮತ್ತು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳೊಂದಿಗೆ ಹೊಸ ಅಣುಗಳನ್ನು ವಿನ್ಯಾಸಗೊಳಿಸುವುದು, ”ಎಂದು ಐಐಎಸ್‌ಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಲ್ಲಿಯವರೆಗೆ ದೇಶದಾದ್ಯಂತ ಸುಮಾರು 2,600 ಸಂಶೋಧಕರು ಸುಮಾರು 31 ಲಕ್ಷ ಕಂಪ್ಯೂಟೇಶನಲ್ ಉದ್ಯೋಗಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು IISc ಹೇಳಿದೆ. ಜೀನೋಮಿಕ್ಸ್ ಮತ್ತು ಡ್ರಗ್ ಅನ್ವೇಷಣೆಗಾಗಿ ವೇದಿಕೆಗಳನ್ನು ಅಭಿವೃದ್ಧಿಪಡಿಸುವುದು, ನಗರ ಪರಿಸರ ಸಮಸ್ಯೆಗಳನ್ನು ಅಧ್ಯಯನ ಮಾಡುವುದು, ಪ್ರವಾಹ ಎಚ್ಚರಿಕೆ ಮತ್ತು ಮುನ್ಸೂಚನೆ ವ್ಯವಸ್ಥೆಗಳನ್ನು ಸ್ಥಾಪಿಸುವುದು ಮತ್ತು ಟೆಲಿಕಾಂ ನೆಟ್‌ವರ್ಕ್‌ಗಳನ್ನು ಉತ್ತಮಗೊಳಿಸುವುದು ಸೇರಿದಂತೆ ಪ್ರಮುಖ ಆರ್ & ಡಿ (Research and Development) ಚಟುವಟಿಕೆಗಳನ್ನು ಕೈಗೊಳ್ಳಲು ಈ ವ್ಯವಸ್ಥೆಗಳು ಅಧ್ಯಾಪಕ ಸದಸ್ಯರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯ ಮಾಡಿದೆ ಎಂದು ಅದು ಹೇಳಿದೆ.

click me!