Smartphone Security: ಸೈಬರ್ ದಾಳಿಗೆ ಈಡಾಗದಂತೆ ಫೋನ್ ರಕ್ಷಿಸಿಕೊಳ್ಳುವುದು ಹೇಗೆ?

By Suvarna News  |  First Published Feb 4, 2022, 11:29 AM IST

* ಪೆಗಾಸಸ್ ಪ್ರಕರಣ ಮತ್ತೆ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಫೋನ್ ಸುರಕ್ಷಿತವಾಗಿಡುವುದು ಹೇಗೆ
* ವೈಯಕ್ತಿಕ ಮತ್ತು ಸಾಂಸ್ಥಿಕ ಮಾಹಿತಿಯನ್ನು ಕಾಪಾಡಲು ಕೆಲವು ಟಿಪ್ಸ್ ಅನುಸರಿಸಬೇಕು
* ತನ್ನ ಟ್ವಿಟರ್ ಖಾತೆ ಮೂಲಕ ಜನರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿದ ಗೃಹ ಸಚಿವಾಲಯ


Tech Desk: ಪೆಗಾಸಸ್ ಗೂಢಚರ್ಯೆ ಸಾಫ್ಟ್ ವೇರ್ ವಿವಾದ ಮತ್ತೆ ಚರ್ಚೆಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಅಮೆರಿಕ ನ್ಯೂಯಾರ್ಕ್ ಟೈಮ್ಸ್ (New York Times) ಪತ್ರಿಕೆಯು ಪೆಗಾಸಸ್ (Pegasus) ಸ್ನೂಪಿಂಗ್ ಪ್ರಕರಣ ವರದಿಯನ್ನು ಪ್ರಕಟಿಸಿತ್ತು. ಇದರಿಂದಾಗಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಈ ಪೆಗಾಸಸ್ ಗೂಢಚರ್ಯ ಹಗರಣ ಮತ್ತೆ ಮಗ್ಗಲು ಮುಳ್ಳಾಗಿದೆ. ಈ ಹಿನ್ನೆಲೆಯಲ್ಲೇ ಕೇಂದ್ರ ಗೃಹ ಸಚಿವಾಲಯವು ಫೋನ್ ಸುರಕ್ಷತೆ ಸಂಬಂಧಿಸಿದಂತೆ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದೆ. ಕೇಂದ್ರ ಗೃಹ ಸಚಿವಾಲಯವು, ವೈಯಕ್ತಿಕ ಮತ್ತು ಸಾಂಸ್ಥಿಕ ಡೇಟಾ ರಕ್ಷಣೆಗಾಗಿ ಮೊಬೈಲ್ ಫೋನುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಟ್ವಿಟರ್‌ (Twitter)ನ ತನ್ನ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಆ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಜಾಗೃತಿ ಮೂಡಿಸುವ ಪ್ರಯತ್ನವನ್ನು ಸರ್ಕಾರವು ಮಾಡಿದೆ. ಸೈಬರ್ ದಾಳಿಯನ್ನು ತಡೆಗಟ್ಟಲು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಸರಣಿಯನ್ನು ಕೇಂದ್ರ ಗೃಹ ಸಚಿವಾಲಯವು (MHA) ಟ್ಟಿಮಾಡಿದೆ. ಈ ಮೂಲಕ ಸ್ಮಾರ್ಟ್ ಫೋನ್ ಬಳಕೆದಾರರನ್ನು ಎಚ್ಚರಿಸುವ ಕೆಲಸವನ್ನು ಸರಕಾರ ಮಾಡಿದೆ ಎಂದು ಹೇಳಬಹುದು. ಸ್ಮಾರ್ಟ್ ಫೋನ್ ರಕ್ಷಿಸಲು ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ:

Tap to resize

Latest Videos

undefined

* ಸಾರ್ವಜನಿಕ ನೆಟ್‌ವರ್ಕ್‌ಗಳಲ್ಲಿ ಹಂಚಿಕೊಳ್ಳಲಾದ ಮಾಹಿತಿಯು ದುರುಪಯೋಗವಾಗಬಹುದಾದ್ದರಿಂದ ಸಾರ್ವಜನಿಕ ವೈ-ಫೈ (WiFi) ಬಳಸಲು ಹೋಗಬೇಡಿ. ಒಂದೊಮ್ಮೆ ಬಳಸಿದರೆ ಎಚ್ಚರಿಕೆಯಿಂದ ಬಳಸಿರಿ.

* ಸ್ಮಾರ್ಟ್‌ಫೋನ್ (Smartphone), ಮೊಬೈಲ್ ಅಪ್ಲಿಕೇಶನ್‌(Apps)ಗಳು ಮತ್ತು ಸಾಮಾಜಿಕ ಮಾಧ್ಯಮ (Social Media) ಖಾತೆಗಳ ಡೀಫಾಲ್ಟ್ ಗೌಪ್ಯತೆ ಸೆಟ್ಟಿಂಗ್ ಅನ್ನು ಆಗಾಗ ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೈಯಕ್ತಿಕ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳಬಹುದಾದ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಇದನ್ನೂ ಓದಿ: Redmi Smart TV X43: ಫೆ.9ಕ್ಕೆ ಭಾರತದಲ್ಲಿ ‌ಆ್ಯಂಡ್ರಾಯ್ಡ್ ಟಿವಿ ಲಾಂಚ್, ಬೆಲೆ ಎಷ್ಟು? ಏನೆಲ್ಲ ವಿಶೇಷತೆ?

* ಯಾವುದೇ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅದರ ಖ್ಯಾತಿ ಅಥವಾ ದೃಢೀಕರಣವನ್ನು ಪರಿಶೀಲಿಸಿಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು ಮಾರಾಟಗಾರರ ಗೌಪ್ಯತೆ ನೀತಿಗಳನ್ನು ಓದಿ ಮತ್ತು ಅಪ್ಲಿಕೇಶನ್ ಅನುಮತಿಗಳನ್ನು ಪರಿಶೀಲಿಸಿಕೊಳ್ಳಬೇಕು.

* ಅಧಿಕೃತ ಮೂಲಗಳಿಂದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಆದ್ಯತೆ ನೀಡಬೇಕು. ಥರ್ಡ್ ಪಾರ್ಟಿ ಆಪ್‌ಗಳು ಅಪಾಯಕಾರಿಯಾಗಲೂಬಹುದು. ಅನಗತ್ಯ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿ ಅಥವಾ ತೆಗೆದುಹಾಕಿ.

* ಟೆಲಿಕಾಂ ಆಪರೇಟರ್‌ಗಳೊಂದಿಗೆ ಅಡಚಣೆ ಮಾಡಬೇಡಿ (Do Not Disturb) ಸೇವೆಗಾಗಿ ನೋಂದಾಯಿಸಿ.

* ಮಕ್ಕಳು ಅಥವಾ ಅಪ್ರಾಪ್ತರಿಗೆ ಮೊಬೈಲ್ ಫೋನ್ ಹಸ್ತಾಂತರಿಸುವಾಗ ಪೋಷಕರ ನಿಯಂತ್ರಣ ಮೋಡ್ ಬಳಸಿ.

* ಗೌಪ್ಯ ಡೇಟಾವನ್ನು ರಕ್ಷಿಸಲು ಸಾಧನ ಅಥವಾ SD ಕಾರ್ಡ್ ಎನ್‌ಕ್ರಿಪ್ಶನ್ ಬಳಸಿ.

ಇದನ್ನೂ ಓದಿ: Second Hand Smartphoneಗಳಿಗೆ ಸಿಕ್ಕಾಪಟ್ಟೆ ಬೇಡಿಕೆ, 2025ರ ಹೊತ್ತಿಗೆ 34 ಸಾವಿರ ಕೋಟಿ ವಹಿವಾಟು!

* ನಿಮ್ಮ ಸಾಧನವನ್ನು ಬಲವಾದ ಪಿನ್ ಅಥವಾ ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್‌ಗಳೊಂದಿಗೆ ರಕ್ಷಿಸಿ ಮತ್ತು ಮೊಬೈಲ್ ಫೋನ್‌ನಲ್ಲಿ ಸ್ವಯಂ-ಲಾಕ್ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿ. ಇದರಿಂದ ಫೋನ್ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದು.

* ನಿಮ್ಮ ಸಂಪರ್ಕಗಳು, ವೈಯಕ್ತಿಕ ಫೋಟೋಗಳು ಇತ್ಯಾದಿಗಳನ್ನು ಒಳಗೊಂಡಂತೆ ಯಾವಾಗಲೂ ಡೇಟಾವನ್ನು ಬ್ಯಾಕಪ್ ಮಾಡಿಟ್ಟುಕೊಳ್ಳುವುದು ಉತ್ತಮ ನಡೆ ಎನಿಸಿಕೊಳ್ಳುತ್ತದೆ.

* ಅಪರಿಚಿತರು SMS / ಮೇಲ್ ಅಥವಾ ಚಾಟ್ ಮೆಸೆಂಜರ್ ಮೂಲಕ ಕಳುಹಿಸಲಾದ ಲಿಂಕ್‌(Links)ಗಳಿಗೆ ಪ್ರತ್ಯುತ್ತರಿಸಬೇಡಿ ಅಥವಾ ಕ್ಲಿಕ್ ಮಾಡಬೇಡಿ. ಒಂದೊಮ್ಮೆ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಫೋನ್ ಹ್ಯಾಕ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

* ಸ್ಮಾರ್ಟ್‌ಫೋನ್ ಗಳಲ್ಲಿ ತೀರಾ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಬೇಡಿ. 

* ಸಾರ್ವಜನಿಕ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಬಳಸುವಾಗ ಖಾತೆಗಳಿಗೆ ವಿಶೇಷವಾಗಿ ಹಣಕಾಸು ಖಾತೆಗಳಿಗೆ ಲಾಗ್ ಇನ್ ಮಾಡಬೇಡಿ.

ಈ ಕೆಲವು ಟಿಪ್ಸ್‌ಗಳನ್ನು ಅನುಸರಿಸುವುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸಂಭಾವ್ಯ ಸೈಬರ್ ಅಟ್ಯಾಕ್ ಆಗುವುದನ್ನು ತಡೆಯಬಹುದಾಗಿದೆ. ಸ್ಮಾರ್ಟ್‌ಫೋನ್ ಸುರಕ್ಷಿತವಾಗಿದ್ದರೆ, ನಿಮ್ಮ ಎಲ್ಲ ಸಾಮಾಜಿಕ ಮತ್ತು ಖಾಸಗಿ ಮಾಹಿತಿ ಸುರಕ್ಷಿತವಾಗಿದ್ದಂತೆಯೇ ಸರಿ. ಹಾಗಾಗಿ, ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು, ಹುಷಾರಾಗಿರಬೇಕು.

click me!