ಬೆಂಗಳೂರು(ನ.13 ): ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ಇದೀಗ ತನ್ನ ಗ್ರಾಹಕರಿಗೆ ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ ನೀಡುವ ಗ್ರೂಪ್ ಇನ್ಶೂರೆನ್ಸ್ ಅನ್ನು ಘೋಷಣೆ ಮಾಡಿದೆ. ದೇಶಾದ್ಯಂತ ಇರುವ ತನ್ನ ಗ್ರಾಹಕರಿಗೆ ಈ ಗ್ರೂಪ್ ಇನ್ಶೂರೆನ್ಸ್ ಸೌಲಭ್ಯವನ್ನು ಫ್ಲಿಪ್ ಕಾರ್ಟ್ ಒದಗಿಸುತ್ತಿದೆ. ಸಾಂಕ್ರಾಮಿಕದಿಂದ ಉಂಟಾಗಿರುವ ಪರಿಣಾಮಗಳ ವಿರುದ್ಧ ಇಡೀ ಭಾರತ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಕಾಳಜಿ ಹೆಚ್ಚಾಗತೊಡಗಿದೆ ಮತ್ತು ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ಸಮರ್ಪಕವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದ ಹೆಚ್ಚಾಗಿದೆ.
ಗ್ರಾಹಕರ ಫ್ಯಾಷನ್ ಅನುಭವವನ್ನು ಹೆಚ್ಚಿಸಲು ABFRL ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!.
ಇನ್ಶೂರೆನ್ಸ್ ಉದ್ಯಮದ ವರದಿಗಳ ಪ್ರಕಾರ ಭಾರತದಲ್ಲಿ ಶೇ.56 ಮಂದಿ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡಿಲ್ಲ. ಬಹುತೇಕ ಶೇ.36 ರಷ್ಟು ಅಸಮರ್ಪಕವಾಗಿ ಕವರ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಆರೋಗ್ಯ ವಿಮೆಯ ಕುರಿತಾದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಫ್ಲಿಪ್ ಕಾರ್ಟ್ ಈ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪರಿಚಯಿಸುತ್ತಿದೆ. ಈ ಗ್ರೂಪ್ ಯೋಜನೆಗಳ ಮೂಲಕ ಗ್ರಾಹಕರಿಗೆ ಆಸ್ಪತ್ರೆಗೆ ದಾಖಲಾಗುವುದು ಮತ್ತು ಚಿಕಿತ್ಸೆ ವೆಚ್ಚಗಳು ಸೇರಿದಂತೆ ಇನ್ನಿತರೆ ಪ್ರಯೋಜನಗಳನ್ನು ನೀಡಲಿದೆ.
ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ನಲ್ಲಿ ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರು ಯಾವುದೇ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿಲ್ಲ. ಉತ್ತಮ ಆರೋಗ್ಯದ ಪ್ರಮಾಣಪತ್ರದ ಆಧಾರದಲ್ಲಿ ಪಾಲಿಸಿಯನ್ನು ನೀಡಲಾಗುತ್ತದೆ. ಈ ಮೂಲಕ ಗ್ರಾಹಕರ ಆರೋಗ್ಯಕ್ಕೆ ಸಂಬಂಧಿಸಿದ ಭೀತಿಯನ್ನು ಹೋಗಲಾಡಿಸುತ್ತದೆ. ಈ ಪಾಲಿಸಿಗಳು ಪಾಲಿಸಿದಾರರಿಗೆ ವೈದ್ಯಕೀಯ ವೆಚ್ಚಗಳು ಮತ್ತು ಆಸ್ಪತ್ರೆಗೆ ದಾಖಲಾದಾಗ ಆಗುವ ವೆಚ್ಚಗಳಿಂದ ರಕ್ಷಣೆ ನೀಡುತ್ತವೆ. ಈ ವಿಮೆಯನ್ನು ಪಡೆಯಲು 18 ರಿಂದ 50 ವರ್ಷವರಿಗೆ ಅವಕಾಶವಿರುತ್ತದೆ. 3 ರಿಂದ 5 ಲಕ್ಷ ರೂಪಾಯಿವರೆಗಿನ ಆರೋಗ್ಯ ವಿಮೆಯ ಕವರೇಜ್ ಸಿಗಲಿದೆ.