
ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಹಲವು ಹೊಸ ಕ್ಷೇತ್ರಗಳಲ್ಲಿ ಮಿಂಚಿನ ಸಂಚಲನ ಮೂಡಿಸುತ್ತಿದೆ. ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ ಬಾಹ್ಯಾಕಾಶದಲ್ಲಿ ಕ್ರಾಂತಿ ಮಾಡುತ್ತಿದ್ದರೆ, ಇತ್ತ ಟೆಸ್ಲಾ ಸಂಶೋಧನೆ, ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಉಪಕರಣಗಳ ಮೂಲಕ ಕ್ರಾಂತಿ ಮಾಡುತ್ತಿದೆ. ಇತ್ತೀಚೆಗೆ ಪಾಪ್‌ಕಾರ್ನ್ ನೀಡುತ್ತಿರುವ ಟೆಸ್ಲಾ ರೋಬೋಟ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಲಾನ್ ಮಸ್ಕ್ ಸ್ಪಷ್ಟೆ ನೀಡಿದ್ದಾರೆ. ಶೀಘ್ರದಲ್ಲೇ ಪಾಪ್‌ಕಾರ್ನ್ ಮಾರಾಟ ಮಾಡುತ್ತಿರುವ ಟೆಸ್ಲಾ ರೋಬೋಟ್ ಎಲ್ಲೆಡೆ ಕಾಣಸಿಗಲಿದೆ ಎಂದಿದ್ದಾರೆ.
ಟೆಸ್ಲಾ ರೊಬೋಟ್‌ನಿಂದ ಪಾಪ್‌ಕಾರ್ನ್ ವಿತರಣೆ
ಲಾಸ್ ಎಂಜಲ್ಸ್‌ನ ಹಾಲಿವುಡ್‌ನಲ್ಲಿ ಮಹತ್ವದ ಕಾರ್ಯಕ್ರಮ ಒಂದ ಆಯೋಜನೆಗೊಂಡಿತ್ತು. ಟೆಸ್ಲಾ ಡಿನ್ನರ್ ಹಾಗೂ ಸೂಪರ್‌ಚಾರ್ಜರ್ ಕಾರ್ಯಕ್ರಮದಲ್ಲಿ ಟೆಸ್ಲಾದ ಹಲವು ಆವಿಷ್ಕಾರಗಳ ಪ್ರದರ್ಶನವೂ ಇತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ವಿಶೇಷ ಭೂಜನಕೂಟ ಆಯೋಜಿಸಲಾಗಿತ್ತು. ಇಲ್ಲಿ ಪಾಪ್‌ಕಾರ್ನ್ ವಿತರಣೆ ಮಾಡುತ್ತಿದ್ದ ಟೆಸ್ಲಾ ರೋಬೋಟ್
ಅತಿಥಿಗಳಿಗೆ ಪಾಪ್‌ಕಾರ್ನ್ ವಿತರಿಸಿದ ಟೆಸ್ಲಾ ರೊಬೋಟ್
ಎಲಾನ್ ಮಸ್ಕ್ ಇದೀಗ ಪಾಪ್‌ಕಾರ್ನ್ ಮಾರಾಟ ಮಾಡುತ್ತಿರುವ ಟೆಸ್ಲಾ ರೋಬೋಟ್‌ಗಳನ್ನು ಪರಿಚಯಿಸಿದ್ದರು. ಅತಿಥಿಗಳಿಗೆ ಭೂಜನ ವ್ಯವಸ್ಥೆಯಲ್ಲಿ ಹಲವು ಖಾದ್ಯಗಳನ್ನು ಇಡಲಾಗಿತ್ತು. ಸರ್ವೀಸ್‌ಗೆ ಹಲವರು ನಿಯೋಜನೆಗೊಂಡಿದ್ದರು. ಈ ಪೈಕಿ ಪಾಪ್‌ಕಾರ್ನ್ ಇಡಲಾಗಿತ್ತು. ಆದರೆ ಪಾಪ್‌ಕಾರ್ನ್ ನೀಡಲು ಮಾತ್ರ ಟೆಸ್ಲಾ ರೋಬೋಟ್ ನಿಯೋಜಿಸಲಾಗಿತ್ತು. ಬಂದ ಅತಿಥಿಗಳಿಗೆ ಟೆಸ್ಲಾ ರೋಬೋಟ್ ಪಾಪ್‌ಕಾರ್ನ್ ವಿತರಣೆ ಮಾಡಿತ್ತು. ಮನುಷ್ಯರಂತೆ ಅಚ್ಚುಕಟ್ಟಾಗಿ ಪಾಪ್‌ಕಾರ್ನ್ ತುಂಬಿಸಿ ನೀಡಿತ್ತು. ಇನ್ನು ನೀವು ಥ್ಯಾಂಕ್ಯೂ, ಟಾಟಾ ಹೇಳಿದರೂ ಈ ಟೆಸ್ಲಾ ರೋಬೋಟ್ ಪ್ರತಿಕ್ರಿಯೆ ನೀಡುತ್ತಿತ್ತು.
ಎಲ್ಲೆಡೆ ಸಾಮಾನ್ಯವಾಗುವ ದಿನ ದೂರವಿಲ್ಲ
ಟೆಸ್ಲಾ ರೊಬೋಟ್ ಪಾಪ್‌ಕಾರ್ನ್ ವಿತರಿಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ದಿನ ದೂರವಿಲ್ಲ. ಕೆಲವೇ ವರ್ಷಗಳಲ್ಲಿ ಈ ಚಿತ್ರಣ ಎಲ್ಲೆಡೆ ಸಾಮಾನ್ಯವಾಗಲಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಈ ಮೂಲಕ ಟೆಸ್ಲಾ ರೊಬೋಟ್ ಎಲ್್ಲಾ ಕ್ಷೇತ್ರಕ್ಕೆ ಲಗ್ಗೆ ಇಡಲಿದೆ ಅನ್ನೋ ಸ್ಪಷ್ಟ ಸಂದೇಶ ನೀಡಿದ್ದಾರೆ.
ಟೆಸ್ಲಾ ರೊಬೋಟ್ ಪಾಪ್‌ಕಾರ್ನ್ ವಿತರಣೆ ವೇಳೆ ವಿಳಂಬ
ಟೆಸ್ಲಾ ಕಾರ್ಯ್ರಮದಲ್ಲಿ ನಿಯೋಜನೆಗೊಂಡಿದ್ದ ರೋಬೋಟ್ ವಿಚರಣೆ ಕೊಂಚ ವಿಳಂಬವಾಗಿತ್ತು. ರೋಬೋಟ್ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಸೇರಿದ್ದರು. ಆದರೆ ರೋಬೋಟ್ ವಿತರಣೆ ವಿಳಂಬವಾಗಿತ್ತು. ಪಾಪ್‌ಕಾರ್ನ್ ತುಂಬಿಸಿ ನೀಡಲು ಹೆಚ್ಚಿನ ಸಮಯ ಹಿಡಿಯುತ್ತಿತ್ತು. ಆದರೆ ಕೆಲ ಅಪ್‌ಡೇಟ್‌ನೊಂದಿಗೆ ರೋಬೋಟ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಮಸ್ಕ್ ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.