ಜಿಯೋ, ಬಿಎಸ್‌ಎನ್ಎಲ್ ಹಿಂದಿಕ್ಕಿದ ಏರ್‌ಟೆಲ್, ಅತ್ಯುತ್ತಮ ಹೋಮ್ ಇಂಟರ್ನೆಟ್ ಪ್ರಶಸ್ತಿ ಗರಿ

Published : Nov 15, 2026, 06:02 PM IST
Airtel Home internet

ಸಾರಾಂಶ

ಭಾರತದ ಅತ್ಯುತ್ತಮ ಹೋಮ್ ಇಂಟರ್ನೆಟ್ ಅನ್ನೋ ಹೆಗ್ಗಳಿಕೆಗೆ ಏರ್‌ಟೆಲ್ ಪಾತ್ರವಾಗಿದೆ. ಜಿಯೋ, ಬಿಎಸ್‌ಎನ್ಎಲ್‌ಗಿಂತ ಏರ್‌ಟೆಲ್ ಅಪ್‍‌ಲೋಡ್ ಹಾಗೂ ಡೌನ್ಲೋಡ್ ಸ್ಪೀಡ್ ಎಷ್ಟು? ಏರ್‌ಟೆಲ್ ಇಂಟರ್ನೆಟ್ ವಿಶೇಷತೆ ಏನು?

ಬೆಂಗಳೂರು (ನ.15) ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ತೀವ್ರವಾಗಿದೆ. ಇದರ ನಡುವೆ ಏರ್‌ಟೆಲ್ ಮಹತ್ವದ ಸಾಧನೆ ಮಾಡಿದೆ. ಭಾರತದ ಅತ್ಯುತ್ತಮ ಹೋಮ್ ಇಂಟರ್ನೆಟ್ ಅನ್ನೋ ಹೆಗ್ಗಳಿಕೆಗೆ ಏರ್‌ಟೆಲ್ ಪಾತ್ರವಾಗಿದೆ. ವಿಶ್ವಾಸಾರ್ಹತೆ, ಸ್ಥಿರ ಗುಣಮಟ್ಟ, ಡೌನ್‌ಲೋಡ್ ವೇಗ, ಅಪ್‌ಲೋಡ್ ವೇಗ ಮತ್ತು ವಿಡಿಯೋ ಅನುಭವದ ಆಧಾರದ ಮೇಲೆ ಏರ್‌ಟೆಲ್ ಬೆಸ್ಟ್ ಇಂಟರ್ನೆಟ್ ಅನ್ನೋ ಸಾಧನೆ ಮಾಡಿದೆ.

ಓಪನ್ ಸಿಗ್ನಲ್ ವರದಿ

ಭಾರತದ ಫಿಕ್ಸ್‌ಡ್ ಬ್ರಾಡ್‌ಬ್ಯಾಂಡ್ ಅನುಭವದ ಕುರಿತು ಓಪನ್‌ಸಿಗ್ನಲ್ ಹೊಸ ವರದಿ ಪ್ರಕಟಿಸಿದೆ. ಏರ್‌ಟೆಲ್, ಬಿಎಸ್‌ಎನ್‌ಎಲ್, ಜಿಯೋ ಸೇರಿದಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳ ಸೇವೆ ಪರಿಶೀಲಿಸಿ ಈ ವರದಿ ನೀಡಿದೆ. ಇದರಲ್ಲಿ ಏರ್‌ಟೆಲ್ ಭಾರತದ ಅತ್ಯುತ್ತಮ ಹೋಮ್ ಇಂಟರ್ನೆಟ್ ಅನ್ನೋ ದಾಖಲೆ ಬರೆದಿದೆ. ವಿಶ್ವಾಸಾರ್ಹತೆ, ಸ್ಥಿರ ಗುಣಮಟ್ಟ, ಡೌನ್‌ಲೋಡ್ ವೇಗ, ಅಪ್‌ಲೋಡ್ ವೇಗ ಮತ್ತು ವಿಡಿಯೋ- ಈ ಎಲ್ಲಾ ಐದು ಒಟ್ಟಾರೆ ಅನುಭವ ವಿಭಾಗಗಳ ಪ್ರಶಸ್ತಿಗಳನ್ನು ಏರ್‌ಟೆಲ್ ಗೆದ್ದುಕೊಂಡಿದೆ. ವಿಶ್ವಾಸಾರ್ಹತೆಯಲ್ಲಿ ಏರ್‌ಟೆಲ್ ಸೇವೆ ಜಿಯೋಗಿಂತ 15% ರಷ್ಟು ಮತ್ತು ಒಟ್ಟಾರೆ ವೇಗದಲ್ಲಿ 26-27% ರಷ್ಟು ಮುನ್ನಡೆ ಸಾಧಿಸಿದೆ. 100-1,000 ವಿಶ್ವಾಸಾರ್ಹತೆ ಮಾಪಕದಲ್ಲಿ ಜಿಯೋದ 423 ಅಂಕಗಳಿಗೆ ಪ್ರತಿಯಾಗಿ ಏರ್‌ಟೆಲ್ 486 ಅಂಕಗಳನ್ನು ಗಳಿಸಿದ್ದು, 63 ಅಂಕಗಳ ಅಂತರವನ್ನು ಕಾಯ್ದುಕೊಂಡಿದೆ. ವೇಗದ ವಿಭಾಗದಲ್ಲಿ ಬಿಎಸ್‌ಎನ್‌ಎಲ್ ನಿಕಟ ಪೈಪೋಟಿ ನೀಡಿದ್ದು, ಡೌನ್‌ಲೋಡ್‌ನಲ್ಲಿ ಏರ್‌ಟೆಲ್‌ಗಿಂತ ಕೇವಲ 0.5 ಎಂಬಿಪಿಎಸ್ ಮತ್ತು ಅಪ್‌ಲೋಡ್‌ನಲ್ಲಿ 0.8 ಎಂಬಿಪಿಎಸ್ ನಷ್ಟು ಮಾತ್ರ ಹಿಂದಿದೆ.

ಐದು FWA ಪ್ರಶಸ್ತಿ ಗರಿ

ಎಲ್ಲಾ ಐದು FWA ಪ್ರಶಸ್ತಿಗಳನ್ನು ಏಕಪಕ್ಷೀಯವಾಗಿ ಗೆಲ್ಲುವ ಮೂಲಕ ಏರ್‌ಟೆಲ್ ಅತ್ಯುತ್ತಮ ಫಿಕ್ಸ್‌ಡ್ ವೈರ್‌ಲೆಸ್ ಹೋಮ್ ಇಂಟರ್ನೆಟ್ ಆಗಿ ಹೊರಹೊಮ್ಮಿದೆ. ಇದು 32.4 ಎಂಬಿಪಿಎಸ್ ಡೌನ್‌ಲೋಡ್ ಮತ್ತು 20.7 ಎಂಬಿಪಿಎಸ್ ಅಪ್‌ಲೋಡ್ ವೇಗವನ್ನು ದಾಖಲಿಸಿದೆ. ಜಿಯೋದ 25.7 ಎಂಬಿಪಿಎಸ್ ಮತ್ತು 17.1 ಎಂಬಿಪಿಎಸ್ ವೇಗಕ್ಕಿಂತ ಕ್ರಮವಾಗಿ 6.7 ಎಂಬಿಪಿಎಸ್ ಮತ್ತು 3.6 ಎಂಬಿಪಿಎಸ್ ನಷ್ಟು ಮುಂದಿದೆ.

FWA ಸ್ಥಿರತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಏರ್‌ಟೆಲ್ ಜಿಯೋವನ್ನು ಹಿಂದಿಕ್ಕಿದೆ. ಜಿಯೋದ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಪರೀಕ್ಷೆಗಳು (55.0%) ಮಾತ್ರ ಸ್ಥಿರ ಗುಣಮಟ್ಟದ ಮಾನದಂಡಗಳನ್ನು ತಲುಪಿದ್ದರೆ, ಏರ್‌ಟೆಲ್‌ನ ಸುಮಾರು ಮೂರನೇ ಎರಡರಷ್ಟು ಪರೀಕ್ಷೆಗಳು (66.2%) ಈ ಮಾನದಂಡಗಳನ್ನು ಪೂರೈಸಿವೆ- ಇದು 11.2 ಶೇಕಡಾವಾರು ಅಂಕಗಳ ಅಂತರವಾಗಿದೆ. ಎಫ್‌ಡಬ್ಲ್ಯೂಎ ವಿಶ್ವಾಸಾರ್ಹತೆಯಲ್ಲಿ ಏರ್‌ಟೆಲ್ 450 ಅಂಕಗಳನ್ನು ಗಳಿಸಿದ್ದು, ಜಿಯೋದ 382 ಅಂಕಗಳಿಗಿಂತ 68 ಅಂಕಗಳಷ್ಟು (18%) ಮುಂದಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಗೂಗಲ್ ಸ್ಮಾರ್ಟ್ ಗ್ಲಾಸ್‌ಗೆ ಬಂತು Hey Gemini ಫೀಚರ್: ಮಾತನಾಡಿದ ತಕ್ಷಣ ಆ್ಯಕ್ಟಿವೇಟ್ ಆಗಲಿದೆ AI ಅಸಿಸ್ಟೆಂಟ್, ಬೆಲೆ ಎಷ್ಟು?
ಟಿವಿ, OTT ನೋಡುತ್ತಲೇ ಕನ್ನಡವನ್ನು ಇನ್ನಷ್ಟು ನಿರರ್ಗಳವಾಗಿ ಓದಿ: ಡಿಡಿ ಚಂದನ, WAVES ಒಟಿಟಿಯಲ್ಲಿ ಸೇಮ್ ಲ್ಯಾಂಗ್ವೇಜ್ ಸಬ್‌ಟೈಟ್ಲಿಂಗ್ ಅಭಿಯಾನ