ವಾರ ಭವಿಷ್ಯ: ಈ ರಾಶಿಯವರು ಖರ್ಚಿಗೆ ಕಡಿವಾಣ ಹಾಕುವುದು ಸೂಕ್ತ!

By Kannadaprabha News  |  First Published Apr 26, 2020, 7:02 AM IST

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ


ಮೇಷ - ದಿನದ ಆರಂಭವನ್ನು ಚೆನ್ನಾಗಿ ಮಾಡಿದರೆ ಇಡೀ ದಿನ ಚೆನ್ನಾಗಿ ಇರಲಿದೆ. ಯಾರದ್ದೋ ಮಾತಿಗೆ ಸೊಪ್ಪು ಹಾಕದೆ ನಿಮ್ ಆರೋಗ್ಯದ ಕಾಳಜಿಯನ್ನು ನೀವು ನೋಡಿಕೊಳ್ಳಿ. ಬೇರೆಯವರು ಏನು ಮಾಡುತ್ತಾರೆಂಬ ಚಿಂತೆ ನಿಮಗೆ ಬೇಡ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳ್ಳೆಯದು.

ವೃಷಭ - ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಿಕೊಳ್ಳಬೇಡಿ. ನಿತ್ಯವೂ ನಿಯಮಿತವಾದ ಧ್ಯಾನ, ವ್ಯಾಯಾಮ ಇತರಲಿ. ದೇಹವನ್ನು ದಂಡಿಸಿದಷ್ಟು ಮನಸ್ಸು ಆರೋಗ್ಯವಾಗಿರುತ್ತದೆ. ಹಳಡಯ ಸ್ನೇಹಿತರೊಂದಿಗೆ ಮಾತನಾಡಲಿದ್ದೀರಿ. ಆಗುವುಎಲ್ಲವೂ ಒಳ್ಳೆಯದಕ್ಕೆ ನಿಮ್ಮ ಕನಸುಗಳು, ನನಸಾಗಿಸಲು ಮತ್ತಷ್ಟು ಸಮಯ ಬೇಕಾಗುತ್ತದೆ.

Latest Videos

undefined

ಮಿಥುನ - ಕಷ್ಟ ಎಂದು ಸುಮ್ಮನೆ ಕೂತರೆ ಅದು ಬಗೆ ಹರಿಯುವುದಿಲ್ಲ. ಅದರ ಬದಲಾಗಿ ಪರಿಹಾರಗಳ ಬಗ್ಗೆ ಚಿಂತನೆ ನಡೆಸಿ. ನಿಮ್ಮ ಪ್ರೀತಿ ಪಾತ್ರರುನಿಮ್ಮ ಮೇಲೆ ಹೆಚ್ಚು ಕಾಳಜಿ ವ್ಯಕ್ತಪಡಿಸುತ್ತಾರೆ. ಖರ್ಚಿಗೆ ಕಡಿವಾಣ ಹಾಕಿದಷ್ಟು ನಿಮ್ಮ ಭವಿಷ್ಯಕ್ಕೆ ಒಳ್ಳೆಯದು. ಪರಿಸ್ಥಿತಿ ಮುನ್ನಡೆಸಿದಂತೆ ನಡೆಯಿರಿ.

ಕಟಕ - ಕಷ್ಟಗಳು ಬಂದವರೆಂದು ಕೊರಗುತ್ತಾ ಕೂರುವುದು ಬೇಡ. ಅವುಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಬೆಳೆಸಿಕೊಳ್ಳಿ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣಎನ್ನುವಂತೆ ನಿಮ್ಮ ವರ್ತನೆ ಇರದಿರಲಿ. ಮನೆಯಲ್ಲಿರುವಾಗ ಕಿರಿ ಕಿರಿ ಉಂಟಾಯಿತು ಎಂದು ಕೋಪದ ಕೈಗೆ ಬುದ್ಧಿ ಕೊಡುವುದು ಬೇಡ..

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಸಿಂಹ - ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು. ನಿಮ್ಮ ಪಾಲಿಗೆ ತೊಂದರೆಯುಂಡು ಮಾಡುತ್ತದೆ ಎಂಬ ವಿಚಾರದಿಂದ ಸೂಕ್ತವಾದ ಅಂತರ ಕಾಯ್ದುಕೊಳ್ಳಿ. ಯಾವುದೇ ರೀತಿಯ ಅಂತರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬೇಡ..

ಕನ್ಯಾ - ಮನೆಯ ಜವಾಬ್ದಾರಿಯಲ್ಲಿ ಮಹಿಳೆಯರ ಪಾತ್ರ ಹೆಚ್ಚು. ಹಿರಿಯರು ಮತ್ತು ಮಕ್ಕಳ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿ. ಆಹಾರದ ಕ್ರಮದಲ್ಲಿ ಹೆಚ್ಚು ವ್ಯತ್ಯಯವಾಗದಂತೆ ಕಾಳಜಿ ವಹಿಸಿ. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ. ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದದ್ದೀರಿ.

ತುಲಾ - ಯಾವುದೇ ಕಾರ್ಯವನ್ನು ಅರ್ಧಕ್ಕೇ ನಿಲ್ಲಿಸಬೇಡಿ. ಮನೆಯಲ್ಲೇ ಇರುವುದರಿಂದ ಹೆಚ್ಚುಆಲಸ್ಯ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ಮಾಡಿಕೊಡದೇ ದಿನಚರಿಯನ್ನು ಪಟ್ಟಿ ಮಾಡಿಕೊಂಡು ಅದರ ಪ್ರಕಾರ ನಡೆದುಕೊಳ್ಳಿ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬ ಛಲದಿಂದ ಮುನ್ನಡೆಯಿರಿ.

ವೃಶ್ಚಿಕ -ಖಾಲಿ ಡಬ್ಬಗಳು ಹೆಚ್ಚು ಸದ್ದು ಮಾಡುತ್ತವೆ, ಹಾಗೇ ಸುಳ್ಳು ವಾರ್ತೆಗಳು ಹೆಚ್ಚು ಬೇಗ ಹರಡುತ್ತವೆ. ಇದಕ್ಕೆ ತಲೆ ಕೆಡಿಸಿಕೊಳ್ಳದೇ ತಾಳ್ಮೆಯಿಂದ ಸತ್ಯ ತಿಳಿದು ಮುನ್ನಡೆಯಿರಿ. ಧ್ಯಾನ ಯೋಗದಿಂದ ಮನಸ್ಸು ಹಿಡಿತಕ್ಕೆ ತಂದುಕೊಳ್ಳಿ.

ಈ ಅಕ್ಷಯ ತೃತೀಯ ನಂತರ ಇವರ ಭವಿಷ್ಯ ಮುಂಚಿನಂತಿರೋಲ್ಲ!

ಧನುಸ್ಸು - ನಿಮ್ಮದಲ್ಲದ ವಸ್ತುವಿಗೆ ಆಸೆ ಪಡುವುದು ಬೇಡ. ದೇವರ ಪ್ರಾರ್ಥನೆ ಹೆಚ್ಚಿದಷ್ಟು ಆತ್ಮ ಸಂತೋಷ ಹೆಚ್ಚಾಗುತ್ತದೆ. ಮಡದಿ, ಮಕ್ಕಳೊಂದಿಗೆ ಪ್ರೀತಿಯಿಂದ ವ್ಯವಹರಿಸಿ, ಹೊಸ ಆಲೋಚನೆಗಳು ಹುಟ್ಟಿಕೊಳ್ಳಲಿವೆ. ಹಳ್ಳಿಯ ಬದುಕನನ್ನು ಚೆನ್ನಾಗಿ ಸವಿಯಿರಿ.

ಮಕರ - ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದನ್ನು ಅವಲಂಭಿಸಿ. ಹೆಚ್ಚಾಗಿ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಮನೆಯ ಹಿರಿಯರು ಹೇಳಿದಂಂತೆ ನಡೆದುಕೊಳ್ಳಿ. ಮೂರ್ಖರ ಮಾತಿಗೆ ಮನ್ನಣೆ ಕೊಡುವುದು ಬೇಡ. 

ಕುಂಭ - ಅತಿಯಾದ ನಿದ್ದೆ ಒಳ್ಳೆಯದಲ್ಲ. ವಿವಿಧ ರೀತಿಯ ಹವ್ಯಾಸಗಳಲ್ಲಿ ತೊಡಗಿಕೊಳ್ಳಿರಿ. ಇಡೀ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಸುಮ್ಮನೆ ಆರೋಪ ಮಾಡಬೇಕೆಂದು ಆರೋಪ ಮಾಡುವುದು ಸರಿಯಲ್ಲ.

ಮೀನ - ಇದೇ ಬೇಕು. ಅದೇ ಬೇಕು ಎಂದು ಹಠ ಮಾಡುವ ಕಾಲ ಅಲ್ಲವಿದು. ಸಿಕ್ಕಿದರಲ್ಲಿ ತೃಪ್ತಿ ಪಟ್ಟುಕೊಳ್ಳಿ, ಸೂಕ್ತ ವ್ಯಕ್ತಿಯೊಂದಿಗೆ ಮಾತ್ರವೇ ಸಂವಹನ ಇರಲಿ. ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಆಧುನಿಕ ಸೌಲಭ್ಯ ಬಳಕೆ ಮಾಡಿಕೊಳ್ಳಲಿದ್ದೀರಿ.

click me!