
ಕಾರ್ಪೋರೇಟ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ಸವಾಲು. ಹೀಗೆ ಉತ್ತಮ ಸ್ಯಾಲರಿ ಕೆಲಸವನ್ನು ಬಿಡಲು ಗಟ್ಟಿ ಗುಂಡಿಗೆ ಬೇಕು. ಹೀಗೆ ರಿಸ್ಕ್ ತೆಗೆದುಕೊಂಡು ಯುವಕನೊಬ್ಬ ತನ್ನ ಕಾರ್ಪೋರೇಟ್ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟ ಹಳ್ಳಿಗೆ ಮರಳಿದ್ದ. ತಂದೆ ತಾಯಿ ಜೊತೆ ಇದ್ದುಕೊಂಡು ಆದಾಯಗಳಿಸಬೇಕು ಎಂದು ನಿರ್ಧರಿಸಿದ್ದ. ಆದರೆ ಪೋಷಕರು ಆತಂಕಗೊಂಡಿದ್ದರೆ, ಹಲವರು ಯುವಕನ ಪ್ರಶ್ನಿಸಿದ್ದರು. ಉತ್ತಮ ಸ್ಯಾಲರಿ ಕೆಲಸ ಯಾಕೆ ಬಿಟ್ಟು, ಈ ಹಳ್ಳಿಯಲ್ಲಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದರು. ಆದರೆ ಯುವಕ ತನ್ನ ಸತತ ಪ್ರಯತ್ನದ ಮೂಲಕ ಇದೀಗ ಸ್ವಂತ ಕಂಪನಿ ಆರಂಭಿಸಿ, ಮನೆಯಲ್ಲೇ ಕುಳಿತು ತಿಂಗಳಿಗೆ 1.8 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾನೆ. ಈತ ತನ್ನ ಯಶಸ್ಸಿನ ಕತೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ.
ಈ ಯುವಕನ ರೆಡ್ಡಿಟ್ ಪೋಸ್ಟ್ ಪ್ರಕಾರ, 2024ರ ಮಧ್ಯಭಾಗದಲ್ಲಿ ಈತ ಕಾರ್ಪೋರೇಟ್ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ತನ್ನ ಹಳ್ಳಿಯಲ್ಲಿ ಅಂದರೆ ಮನೆಯೆಲ್ಲೇ ಕುಳಿತು ಸ್ವಂತ ಕಂಪನಿ ಆರಂಭಿಸಿ ಅದರಲ್ಲಿ ಆದಾಯಗಳಿಸಲು ಪ್ಲಾನ್ ಮಾಡಿದ್ದ. ಹೀಗಾಗಿ ಆಪ್ತರು, ಕುಟುಂಬಸ್ಥರು ಅದೇನೇ ಹೇಳಿದರೂ ಈತ ಮಾತ್ರ ಜಗ್ಗಲಿಲ್ಲ. ಪೋಷರೊಂದಿಗೆ ಮನೆಯಲ್ಲೇ ಇದ್ದು, ಸ್ವಂತ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಆರಂಭಿಸಿದ್ದ. ಕೇವಲ ಎರಡೇ ವರ್ಷದಲ್ಲಿ ಈತನ ಕಂಪನಿ ಲಾಭದಾಯಕವಾಗಿದೆ. ಇದೀಗ ತಿಂಗಳಿಗೆ 1.8 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾನೆ. ಪ್ರತಿ ದಿನ ಬೆಳಗ್ಗೆ ಎದ್ದು ರೆಡಿಯಾಗಿ ಪ್ರಯಾಣ ಮಾಡುತ್ತಾ ಕಚೇರಿಲಗೆ ಹೋಗಬೇಕಿಲ್ಲ. ತನ್ನ ಮನೆಯಲ್ಲಿ ಪೋಷಕರ ಜೊತೆ ಹಾಯಾಗಿ ಇದ್ದುಕೊಂಡು ತಿಂಗಳಿಗೆ 1.8 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾನೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾನೆ.
ಆದಾಯ ಬರುತ್ತಿದ್ದಂತೆ ಹಲವರು ಯುವಕ ಹಣ ಮಾಡಲು ಕೆಲಸ ಬಿಟ್ಟ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ಹಣಕ್ಕಾಗಿ ನನಗೆ ಕೆಲಸ ಬಿಡುವ ಅಗತ್ಯವಿರಲಿಲ್ಲ. ಕಾರ್ಪೋರೇಟ್ ಉದ್ಯೋಗದಲ್ಲಿ ನನ್ನ ಸ್ಯಾಲರಿ ಉತ್ತಮವಾಗಿತ್ತು. ಅದೇ ಸಂಬಂಳ ನನಗೆ ಸಾಕಿತ್ತು. ಆದರೆ ನನಗೆ ನನ್ನ ಇಷ್ಟದಂತೆ ಕೆಲಸ ಮಾಡಬೇಕಿತ್ತು. ಪಟ್ಟಣದಲ್ಲಿ, ನಗರದಲ್ಲಿ ಇರುವುದಕ್ಕಂತೆ ನನ್ನ ಪೋಷಕರ ಜೊತೆಗೆ ನಾನಿರಹಬಬೇಕಿತ್ತು. ನನ್ನ ಹಳ್ಳಿಯಲ್ಲೇ ಇದ್ದುಕೊಂಡು ಎಲ್ಲ ಆಪ್ತರು, ಗೆಳೆಯರ ಜೊತೆಗೆ ನಾನು ಉತ್ತಮ ಆದಾಯಕಗಳಿಸುವ ಆಲೋಚನೆಯಿಂದ ನಾನು ಹಳ್ಳಿಯಲ್ಲೇ ಸ್ವಂತ ಕಂಪನಿ ಕಟ್ಟಿದೆ ಎಂದು ಯುವ ಉದ್ಯಮಿ ಹೇಳಿದ್ದಾನೆ.
ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಆರಂಭಿಸಿದ ಬಳಿಕ ಆರಂಭಿಕ ದಿನಗಳು ಸುಲಭವಾಗಿರಿಲ್ಲ. ಹೊಸ ಕ್ಲೈಂಟ್ಸ್ ಹುಡುಕುವುದು, ಸಣ್ಣ ಕಂಪನಿ ಕುರಿತು ವಿವರಿಸಿ ಅವರನ್ನು ಒಪ್ಪಿಸುವುದು ಕಷ್ಟವಾಗಿತ್ತು. ಹಲವು ಹಿಂದೆ ಸರಿಯುತ್ತಿದ್ದರು. ಇದೀಗ ಅಮೆರಿಕನ್ ಕೆಲ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಳಾಗಿದೆ. ಶೀಘ್ರದಲ್ಲೇ ಮತ್ತೆರೆಡು ಬಹುರಾಷ್ಟ್ರೀಯ ಕಂಪನಿಗಳು ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದಿದ್ದಾನೆ.
ಯಶಸ್ವಿ ಉದ್ಯಮಿಯಾಗಿರುವ ಯುವಕ ಪ್ರಮುಖ ಮೂರು ಸಲಹೆ ನೀಡಿದ್ದಾನೆ. ಕೆಲಸ ಬಿಡಲು ಪ್ಲಾನ್ ಮಾಡಿದರೆ, ನಿಮ್ಮ ಮುಂದಿನ ಆಯ್ಕೆ ಅದರಲ್ಲಿ ಆದಾಯ ಬರವು ಸಮಯ ಲೆಕ್ಕಾಚಾರ ಮಾಡಿ ಅಲ್ಲೀವರೆಗೆ ಆರ್ಥಿಕತೆ ಸಾಗಲು ಬ್ಯಾಕ್ ಅಪ್ ಪ್ಲಾನ್ ಮಾಡಿಕೊಳ್ಳಿ. ದೊಡ್ಡ ಆದಾಯದ ನಿರೀಕ್ಷೆ ಮಾಡಬೇಡಿ. ಸ್ವಂತವಾಗಿ ಆರಂಭಿಸುವಾಗ 9 ರಿಂದ 5 ಗಂಟೆ ಉದ್ಯೋಗ ಇರುವುದಿಲ್ಲ. ಸಮಯ ಇರುವುದಿಲ್ಲ. ಎಲ್ಲದ್ಧಕ್ಕೂ ಸಿದ್ದವಾಗಬೇಕು ಎಂದು ಈತ ಮೂರು ಸಲಹೆ ನೀಡಿದ್ದಾನೆ.