
ಯಾವುದೇ ಶಸ್ತ್ರಚಿಕಿತ್ಸೆ ನಡೆಸುವ ಮುನ್ನ ವೈದ್ಯರು ಸಾಮಾನ್ಯವಾಗಿ ರೋಗಿಯ ಬಳಿ ಆರೋಗ್ಯ ಪರಿಸ್ಥಿತಿ, ಔಷಧಿಗಳ ಅಲರ್ಜಿ ಬಗ್ಗೆ ಕೇಳುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ನೀವು ಯಾವ ಸಮುದಾಯಕ್ಕೆ ಸೇರಿದವರು? ಅಥವಾ ಯಾವ ಜಾತಿಯವರು ಎಂದು ಪ್ರಶ್ನಿಸಿ ತಿಳಿದುಕೊಳ್ಳುತ್ತಾರೆ. ಅದರಲ್ಲೂ ಅನಸ್ತೇಷಿಯಾಲಜಿಸ್ಟ್ ಈ ಪ್ರಶ್ನೆ ಕೇಳುವುದು ಸಾಮಾನ್ಯ ಸಂಗತಿ.
ನಿಮ್ಮ ದೇಹದಲ್ಲಿ ಸ್ಯೂಡೋಕೋಲಿನೆಸ್ಟರೇಸ್ ಎಂಬ ಕ್ವಿಣದ ಕೊರತೆಯ ಬಗ್ಗೆ ತಿಳಿದುಕೊಳ್ಳುವುದು ಇದರ ಉದ್ದೇಶವಾಗಿರುತ್ತದೆ. ಏಕೆಂದರೆ ಈ ಸಮಸ್ಯೆ ತಮಿಳುನಾಡಿನಲ್ಲಿ ತೆಲುಗು ಮಾತನಾಡುವ ಆರ್ಯ ವೈಶ್ಯ, ಕೋಮಟಿ ಚೆಟ್ಟಿಯಾರ್ ಮತ್ತು ವೈಶ್ಯ ಚೆಟ್ಟಿ ಸಮುದಾಯದ ಕೆಲವು ಜನರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.
ಈ ಸಮುದಾಯದ ಜನರು ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಕಂಡುಬರುತ್ತಾರೆ. ಈ ಕೊರತೆಯಿರುವ ಜನರು ಶಸ್ತ್ರಚಿಕಿತ್ಸೆಗೆ ಬಳಸುವ ಸ್ನಾಯು ಸಡಿಲಗೊಳಿಸುವ ಸಕ್ಸಿನೈಲ್ಕೋಲಿನ್ ಪರಿಣಾವು ನಿರೀಕ್ಷೆಗಿಂತ ಕೆಲವು ಗಂಟೆಗಳ ಕಾಲ ಹೆಚ್ಚು ಉಳಿಯುತ್ತದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬೆಂಗಳೂರಿನ ಹೊಸ್ಮಾಟ್ ಆಸ್ಪತ್ರೆಯ ಅರಿವಳಿಕೆ ತಜ್ಙರಾದ ಡಾ ಸಂತೋಷ್ ಚಿಬ್ರೆ, ಶಸ್ತ್ರಚಿಕಿತ್ಸೆಗೆ ಮುನ್ನ ನೀಡಲಾಗುವ ಅರಿವಳಿಕೆಗಳಲ್ಲಿ ಒಂದಾದ ಸ್ಕೋಲಿನ್, ರೋಗಿಯ ಉತಿರಾಟವನ್ನು ಸ್ವಲ್ಪ ಸಮಯದ ವರೆಗು ನಿಲ್ಲುಸುವಂತೆ ಮಾಡುತ್ತದೆ. ಈ ಸಮಯದಲ್ಲಿ ಶ್ವಾಸನಾಳಕ್ಕೆ ಒಂದು ಟ್ಯೂಬ್ ಸೇರಿಸಲಾಗುತ್ತದೆ. ಸಾಮಾನ್ಯವಾಗಿ ರೋಗಿಯು ಹತ್ತು ನಿಮಿಷಗಳಲ್ಲಿ ಸ್ವತಃ ಉಸಿರಾಡಲು ಪ್ರಾರಂಭಿಸುತ್ತಾರೆ. ಆದರೆ ಸ್ಯೂಡೋಕೋಲಿನೆಸ್ಟರೇಸ್ ಕೊರತೆ ಇರುವ ಜನರಲ್ಲಿ, ಉಸಿರಾಟ ಸಾಮಾನ್ಯವಾಗಲು ಕೆಲವು ಗಂಟೆಗಳು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ ಎಂದು ಬಿಸಿಸಿ ವರದಿ ಮಾಡಿದೆ.
ಸ್ಲೋಲಿನ್ ನೀಡುವುದು ಜೀವಕ್ಕೆ ಅಪಾಯ ಅಲ್ಲ. ಆದರೆ ರೋಗಿ ಸ್ವತಃ ಉಸಿರಾಡಲು ಸಾಧ್ಯವಾಗುವವರೆಗೂ ವೆಂಟಿಲೇಟರ್‌ನಲ್ಲಿ ಇಡಬೇಕಾಗುತ್ತದೆ. ಅವರನ್ನು ಉಸಿರಾಡುವಂತೆ ಮಾಡಲು ತಕ್ಷಣ ಯಾವುದೇ ಮಾರ್ಗವಿಲ್ಲ. ಕೆಲ ಸಮಯದ ಬಳಿಕ ಸ್ವತಃ ಉಚಿರಾಡುತ್ತಾರೆ ಎಂದು ವೈದ್ಯರು ಹೇಳುತ್ತಾರೆ.
ಡಾ. ಸಂತೋಷ್ ಅವರ ಪ್ರಕಾರ, ತೆಲುಗು ಮಾತನಾಡುವ ವೈಶ್ಯ ಚೆಟ್ಟಿ ಸಮುದಾಯದ ಕೆಲವು ಜನರಲ್ಲಿ ಈ ಸ್ಥಿತಿ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದಲೇ ಅರವಳಿಕೆ ನೀಡುವ ಮೊದಲು ಕುಟುಂಬಸ್ಥರ ಹಿನ್ನೆಲೆಯ ಬಗ್ಗೆ ಮಾಹಿತಿ ಕೇಳುತ್ತಾರೆ. ಆದರೆ ಇಂತಹ ಸಮುದಾಯಗಳ ಎಲ್ಲರಿಗೂ ಇದು ಇರುತ್ತೆ ಅಂತ ಭಾವಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ಘಟನೆಯೊಂದರ ಬಗ್ಗೆ ಚಿದಂಬರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ ಎಂ ಮಹೇಂದ್ರನ್, ಒಮ್ಮೆ ನಾವು ನೌಕಾಪಡೆಯ ಅಧಿಕಾರಿಯೊಬ್ಬರಿಗೆ ಪಿತ್ತಗಲ್ಲು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ನಡೆಸಿದ್ದೇವು. ಈ ಸಮಯದಲ್ಲಿ ಶಸ್ತ್ರಚಿಕಿತ್ಸೆ ಅರ್ಧ ಗಂಟೆಯಲ್ಲಿ ಮುಕ್ತಾಯ ಆಯ್ತು, ಆದರೆ ಅವರು ಎಚ್ಚರಗೊಳ್ಳುವುದು ತಡವಾಯಿತು. ಆ ನಂತರ ನಾವು ಅವರ ಕುಟುಂಬಸ್ಥರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಮಾಹಿತಿ ತಿಳಿಯಿತು. ಇದರೊಂದಿಗೆ 6 ಗಂಟೆಗಳ ಕಾಲ ವೆಂಟಿಲೇಟರ್‌ನಲ್ಲಿ ಇಟ್ಟಿದ್ದೇವು. ಆ ಬಳಿಕ ಅವರು ಸ್ವತಃ ಉಸಿರಾಡಲು ಪ್ರಾರಂಭಿಸಿದರು.