
ಸಾಮಾನ್ಯವಾಗಿ ಮಹಿಳೆಯರ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಡಿಸ್ಪೆನ್ಸರ್ ಅಳವಡಿಸಿರೋದು ನೋಡಿರ್ತಿರಿ. ಆದರೆ ಪುರುಷರ ಶೌಚಾಲಯದಲ್ಲೂ ಸ್ಯಾನಿಟರಿ ಪ್ಯಾಡ್ ಇಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲ, ವಾಶ್ ರೂಂ ಹೋದ ಹುಡುಗರು ಸ್ಯಾನಿಟರಿ ಬೋರ್ಡ್ ಕಂಡು ಶಾಕ್ ಆಗಿದ್ದಾರೆ.
ವೈರಲ್ ಆಗಿರೋ ವಿಡಿಯೋ ಉತ್ತರಾಖಂಡ ರಾಜ್ಯದ್ದು ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಮೊದಲಿಗೆ ಅರ್ಥವಾಗುವುದಿಲ್ಲ. ವಿಡಿಯೋ ಪೂರ್ತಿ ನೋಡಿದ ಬಳಿಕವೇ ಅರ್ಥವಾಗುವುದು ಈ ವಿಡಿಯೋ ಸಹ ಅದೇ ರೀತಿಯದ್ದಾಗಿದೆ. ಪುರುಷರ ಶೌಚಾಲಯದೊಳಗೆ ಸ್ಯಾನಿಟರಿ ಪ್ಯಾಡ್ ಯಾಕೆ ಇಟ್ಟರು ಎಂದು ನಿಮ್ಮ ತಲೆಯಲ್ಲೂ ಪ್ರಶ್ನೆಗಳು ಎದ್ದಿವೆಯಲ್ಲವೇ?
ವಿಡಿಯೋದಲ್ಲಿ ಪುರುಷರ ಶೌಚಾಲಯದ ಗೋಡೆಯ ಮೇಲೆ ಸ್ಯಾನಿಟರಿ ನ್ಯಾಪ್ಕಿನ್ (ಪ್ಯಾಡ್) ವೆಂಡಿಂಗ್ ಮೆಷಿನ್ ಇಟ್ಟಿರುವುದು ಕಾಣುತ್ತದೆ. ಮೊದಲಿಗೆ ಇದು ನೊಡಿದಾಗ ಮಹಿಳೆಯರ ಶೌಚಾಲಯ ಇರಬಹುದು ಎನಿಸುತ್ತದೆ. ಆದರೆ ಕ್ಯಾಮೆರಾ ಶೌಚಾಲಯದ ಬಾಗಿಲಿನಿಂದ ಹೊರಗೆ ಚಲಿಸುತ್ತಿದ್ದಂತೆ ಕಾಣುವ ಆ ಬೋರ್ಡ್ ಕಂಡು ನಗಬೇಕೋ ಅಳಬೇಕೋ ಎಂಬುವಂತೆ ಮಾಡುತ್ತದೆ.
ಈ ವೈರಲ್ ವಿಡಿಯೋವು ಮೊದಲು ಶೌಚಾಲಯದೊಳಗಿಂದಲೇ ಶುರುವಾಗುತ್ತದೆ. ಅಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್ ಗೋಡೆಯ ಮೇಲೆ ಇಟ್ಟಿರುವುದು ಕಾಣುತ್ತದೆ. ಇದು ಮಹಿಳೆಯರ ಅನುಕೂಲಕ್ಕಾಗಿ ಎಂದು ನಾವು ಭಾವಿಸುತ್ತೇವೆ. ಅದು ಸಾರ್ವಜನಿಕ ಶೌಚಾಲಯದ ವಿಶಿಷ್ಟ ಕ್ಲಿಪ್‌ನಂತೆ ಕಾಣುತ್ತದೆ. ನಂತರ ವಿಡಿಯೋ ರೆಕಾರ್ಡ್ ಮಾಡುವ ವ್ಯಕ್ತಿ ಶೌಚಾಲಯದಿಂದ ಹೊರಬಂದು ಹೊರಗಿನ ಬೋರ್ಡ್ ಮೇಲೆ ಕ್ಯಾಮೆರಾ ತಿರುಗಿಸಿದಾಗ ಶಾಕಿಂಗ್ ಟ್ವಿಸ್ಟ್. 'ಜೆಂಟ್ಸ್ ವಾಶ್‌ರೂಮ್' ಎಂದು ದಪ್ಪ ಅಕ್ಷರಗಳಲ್ಲಿ ಕಾಣುತ್ತದೆ.
ಈ ವಿಡಿಯೋವನ್ನು @be_mewadi ಎಂಬ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವೀಡಿಯೊವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸಿದ್ದಾರೆ, ಅನೇಕರು ಅದನ್ನು ಇಷ್ಟಪಟ್ಟಿದ್ದಾರೆ. ನೆಟಿಜನ್ ಫುಲ್ ಕಾಮಿಡಿ ಕಾಮೆಂಟ್ ಹಾಕಿದ್ದಾರೆ. 'ಇದು ಸರ್ಕಾರದ ನಿರ್ಲಕ್ಷ್ಯವೋ ಅಥವಾ ಪವಾಡವೋ? ನೆಟಿಜನ್ ತಮಾಷೆ ಮಾಡಿದ್ದಾರೆ. ಪುರುಷರ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಹೇಗೆ ಬಂತು? ಯಾಕೆ ಹಾಕಿದ್ರು? ಈ ವೀಡಿಯೊ ನಿಜವಾಗಿಯೂ ಉತ್ತರಾಖಂಡದಲ್ಲಿ ನಡೆದಿರೋದಾ? ಅಥವಾ ಬೇರೆ ಸ್ಥಳದ್ದ ಎಂಬ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಇದನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಬಳಕೆದಾರರು Unexpected ending! ಅಂತ ಬರೆದುಕೊಂಡಿದ್ದಾರೆ. ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.