
ಒಂದು ಮನೆಯಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುವ ಕೆಲಸದವರು ಫ್ಯಾಮಿಲಿ ಮೆಂಬರ್ ಆಗಿ ಬಿಡ್ತಾರೆ. ಅವರಿಗೆ ನಮ್ಮ ಕಷ್ಟಸುಖ ಗೊತ್ತಿರುತ್ತೆ. ಹಾಗೆ ಅವರ ಕಷ್ಟ ದುಃಖ ನಮಗೆ ಗೊತ್ತಿರುತ್ತೆ. ಪ್ರತಿದಿನದ ಒಡನಾಟ, ಪರಸ್ಪರ ನಂಬಿಕೆ ಮತ್ತು ಗೌರವದ ನಡುವೆ ಒಂದು ವಿಶೇಷ ಬಾಂಧವ್ಯ ಬೆಳೆದಿರುತ್ತೆ. ಆದ್ರೆ ಎಲ್ಲರೂ ನಮ್ಮ ಜೊತೆ ಸದಾ ಇರ್ಬೇಕು ಅಂದಿಲ್ಲ. ಹೆಚ್ಚು ಸಂಬಳ ಅಥವಾ ಉತ್ತಮ ಅವಕಾಶಕ್ಕೆ ಅವರು ಕೆಲ್ಸ ಬದಲಿಸೋ ನಿರ್ಧಾರ ತೆಗೆದುಕೊಳ್ತಾರೆ. ಇಂಥ ಸಂದರ್ಭದಲ್ಲಿ ನೋವಾಗೋದು ಸಹಜ. ಇತ್ತೀಚೆಗೆ ನಡೆದ ಒಂದು ಘಟನೆ ಇದಕ್ಕೆ ಉದಾಹರಣೆಯಾಗಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ X ನಲ್ಲಿ ಅಂಕಿತ್ ಪಾಂಡೆ ಹಂಚಿಕೊಂಡ ಒಂದು ಪೋಸ್ಟ್ ಭಾರೀ ವೈರಲ್ ಆಗಿದೆ. ನಾಲ್ಕು ವರ್ಷಗಳಿಂದ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಕೆಲಸದಾಕೆ ಏಕಾಏಕಿ, ಅಣ್ಣಾ, ನಾಳೆಯಿಂದ ನಾನು ಕೆಲಸಕ್ಕೆ ಬರಲ್ಲ ಎಂದು ಹೇಳಿದ ಘಟನೆ ಸಾವಿರಾರು ಜನರ ಮನಸ್ಸನ್ನು ಮುಟ್ಟಿದೆ. ಈ ಪೋಸ್ಟ್ ಉದ್ಯೋಗ, ಸಂಬಳ, ನಂಬಿಕೆ ಮತ್ತು ಸಂಬಂಧಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Google ಉದ್ಯೋಗ ಬಿಟ್ಟು ಬ್ರಷ್ ಹಿಡಿದ ಮಹಿಳೆ, ಹಣಕ್ಕಿಂತ ನೆಮ್ಮದಿಯೇ ಮುಖ್ಯ ಎಂ
ಅಂಕಿತ್ ಪಾಂಡೆ ಪೋಸ್ಟ್ ಪ್ರಕಾರ, ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದ ಮಹಿಳೆಗೆ ಅವರು ಸಂಬಳವನ್ನು ಪ್ರತಿವರ್ಷ ಶೇಕಡಾ 15ರಷ್ಟು ಹೆಚ್ಚಿಸುತ್ತಿದ್ದರು. ಪ್ರಸ್ತುತ ಅವರಿಗೆ ತಿಂಗಳಿಗೆ 15,500 ಸಂಬಳ ಸಿಗ್ತಾಯಿತ್ತು. ಹೋಳಿ, ದೀಪಾವಳಿ, ರಕ್ಷಾಬಂಧನ ಮತ್ತು ನವರಾತ್ರಿಯಂತಹ ಹಬ್ಬಗಳಲ್ಲಿ ಸೀರೆ, ಸಿಹಿ, ಉಡುಗೊರೆ, ಬೋನಸ್ ಹಾಗೂ ನಗದು ನೀಡ್ತಿದ್ರು. 10 ರಿಂದ 15 ದಿನ ರಜೆ ತೆಗೆದುಕೊಂಡ್ರೂ ಸಂಬಳ ಕಟ್ ಆಗ್ತಿರಲಿಲ್ಲ. ಇಷ್ಟೆಲ್ಲ ಇದ್ರೂ ಮಹಿಳೆ ಕೆಲ್ಸ ಬಿಡಲು ಕಾರಣ ಹೇಳಿದಾಗ ಸ್ವಲ್ಪ ಶಾಕ್ ಆಯ್ತು. ಬೇರೆ ಮನೆಯಲ್ಲಿ ಹೆಚ್ಚು ಸಂಬಳ ಸಿಗ್ತಿರೋದ್ರಿಂದ ಅವರು ಈ ಕೆಲ್ಸ ಬಿಡುವ ನಿರ್ಧಾರಕ್ಕೆ ಬಂದಿದ್ದರು. ಅವರಷ್ಟೇ ಸಂಬಳ ನಾನು ಕೊಡ್ತೇನೆ ಅಂತ ಅಂಕಿತ್ ಹೇಳಿದ್ರೆ, ಅದನ್ನು ನಿರಾಕರಿಸಿದ ಕೆಲಸದಾಕೆ, ಈಗಾಗಲೇ ಹೊಸ ಮನೆಯಿಂದ ಅಡ್ವಾನ್ಸ್ ಪಡೆದಿರೋದಾಗಿ ಹೇಳಿದ್ರು. ನಾಲ್ಕು ವರ್ಷಗಳ ಸಂಬಂಧ ಕೇವಲ ಎರಡು ನಿಮಿಷಗಳ ಮಾತುಕತೆಯಲ್ಲಿ ಅಂತ್ಯವಾಯಿತು ಅಂತ ಅಂಕಿತ್ ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಜನರು ಇದ್ರ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ವರ್ಷಗಳ ನಂಬಿಕೆ ಮತ್ತು ಸಂಬಂಧಕ್ಕೂ ಮೌಲ್ಯ ಇರಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಹೆಚ್ಚು ಸಂಬಳ ಮತ್ತು ಉತ್ತಮ ಅವಕಾಶಕ್ಕಾಗಿ ಕೆಲಸ ಬದಲಾಯಿಸುವುದು ಪ್ರತಿಯೊಬ್ಬರ ಹಕ್ಕು ಎಂದು ಮತ್ತೊಂದಿಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಕಾರ್ಪೊರೇಟ್ ಉದ್ಯೋಗಿಗಳಂತೆ ಮನೆ ಸಹಾಯಕರು ಕೂಡ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮತ್ತು ಉತ್ತಮ ಜೀವನಕ್ಕಾಗಿ ಹೊಸ ಅವಕಾಶಗಳನ್ನು ಹುಡುಕುವುದು ಸಹಜ ಎಂದಿದ್ದಾರೆ. ಅಮೂಲ್ಯ ಪಾಠ
ಗಂಭೀರ ಸ್ಥಿತಿಯಲ್ಲಿ ಹಾಸಿಗೆ ಮೇಲಿರುವ ಪತಿ- ಪಕ್ಕದಲ್ಲಿ ನಿಂತು ಮಹಿಳೆ ರೀಲ್ಸ್: ಹುಚ್ಚಾಟದ ವಿಡಿಯೋ ವೈರಲ್
ಅಂಕಿತ್ ತಮ್ಮ ಸ್ಟೋರಿಯಲ್ಲಿ, ಈ ಘಟನೆ ನಮಗೆ ಒಂದು ಅಮೂಲ್ಯವಾದ ಜೀವನ ಪಾಠವನ್ನು ಕಲಿಸುತ್ತದೆ. ನಾವು ಒಂದು ಸಂಬಂಧಕ್ಕೆ ಕೊಡುವ ಮಹತ್ವವನ್ನು ಎದುರಿನ ವ್ಯಕ್ತಿಯೂ ಅದೇ ರೀತಿಯಲ್ಲಿ ಕೊಡಬೇಕಿಂದಿಲ್ಲ ಅಂತ ಬರೆದುಕೊಂಡಿದ್ದಾರೆ. ಪ್ರತಿಯೊಬ್ಬರ ಆದ್ಯತೆಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಸಂಬಂಧ ಮುಖ್ಯವಾಗಿದ್ದರೆ, ಇನ್ನೂ ಕೆಲವರಿಗೆ ಕುಟುಂಬದ ಭವಿಷ್ಯ, ಆರ್ಥಿಕ ಭದ್ರತೆ ಮತ್ತು ಉತ್ತಮ ಆದಾಯ ಮುಖ್ಯವಾಗಿರಬಹುದು. ಆದ್ದರಿಂದ ಯಾವುದೇ ಸಂಬಂಧದಲ್ಲಿ ಗೌರವ, ಕೃತಜ್ಞತೆ ಮತ್ತು ಮಾನವೀಯತೆ ಇರಬೇಕು. ಆದರೆ ಬದಲಾವಣೆ ಜೀವನದ ಸಹಜ ಭಾಗ ಎಂಬುದನ್ನು ಒಪ್ಪಿಕೊಳ್ಳುವುದೂ ಅಷ್ಟೇ ಮುಖ್ಯ.