
ನಾವು ತುಂಬಾ ಇಷ್ಟಪಡುವ ಮತ್ತು ಆರಾಧಿಸುವ ವ್ಯಕ್ತಿಗಳಿಂದ ಮೆಚ್ಚುಗೆ ಪಡೆಯುವುದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ. ಅಂತಹದ್ದೊಂದು ಸಂತೋಷವನ್ನು ಗಳಿಸಿದ ಖುಷಿಯಲ್ಲಿರುವ ಡಬ್ಲ್ಯುಡಬ್ಲ್ಯುಇ (WWE) ಅಭಿಮಾನಿ ಬಾಲಕ. ತನ್ನ ನೆಚ್ಚಿನ ಡಬ್ಲ್ಯುಡಬ್ಲ್ಯುಇ ತಾರೆ ಅಂಡರ್‌ಟೇಕರ್‌ರಿಂದ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಪಡೆದ ಖುಷಿಯಲ್ಲಿದ್ದಾನೆ ಈ ಬಾಲಕ. ಕೆಲವು ದಿನಗಳ ಹಿಂದೆ ತನ್ನ ತಂದೆಯೊಂದಿಗೆ ಈ ಬಾಲಕ ಮಾಡಿದ ವಿಡಿಯೋ ಅಂಡರ್‌ಟೇಕರ್‌ರ ಗಮನ ಸೆಳೆಯಿತು. ವಿಡಿಯೋ ನೋಡಿದ ಅವರು 'ವೆಲ್ ಡನ್ ಯಂಗ್ ಮ್ಯಾನ್' ಎಂದು ಕಾಮೆಂಟ್ ಮಾಡಿದ್ದಾರೆ.
ಜುಲೈ ನಾಲ್ಕರಂದು ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯಿತು. ಬಾಲಕ ಮತ್ತು ಅವನ ತಂದೆ ವಿಡಿಯೋ ಕಂಟೆಂಟ್ ಕ್ರಿಯೇಟರ್‌ಗಳಾಗಿದ್ದಾರೆ. ಅವರು ಮಾಡಿರುವ ಈ ವಿಡಿಯೋದಲ್ಲಿ, ತಂದೆ ಹಿನ್ನೆಲೆಯಲ್ಲಿ ಹಾರ್ಮೋನಿಯಂ ನುಡಿಸುತ್ತಿರುತ್ತಾರೆ. ಆಗ ಅಂಡರ್‌ಟೇಕರ್ ಡಬ್ಲ್ಯೂಡಬ್ಲ್ಯೂಇ ರಿಂಗ್‌ಗೆ ನಡೆದುಕೊಂಡು ಬರುವ ಸ್ಟೈಲ್‌ನಲ್ಲಿಯೇ ಅವರ ಮಗ ಬಾಗಿಲಿನಿಂದ ಒಳಗೆ ಬಂದು ಅಂಡರ್‌ಟೇಕರ್ ಅವರ ಎಲ್ಲ ವರ್ತನೆಗಳನ್ನು ಇಮಿಟೇಟ್ ಮಾಡುತ್ತಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಬೇಗನೆ ವೈರಲ್ ಆಗಿದೆ. ಈ ವಿಡಿಯೋವನ್ನು ಸಾವಿರಾರು ಜನರು ಮರು ಶೇರ್ ಮಾಡಿಕೊಂಡಿದ್ದಾರೆ. ಲಕ್ಷಾಂತರ ಜನರು ಲೈಕ್ ಮಾಡಿದ್ದು, ಸಾವಿರಾರಿ ಜನರು ಕಾಮೆಂಟ್ ಕೂಡ ಮಾಡಿದ್ದಾರೆ. ಹೀಗೆ ಅದು ಕೊನೆಗೆ ಈ ವಿಡಿಯೋ ಮಾಡಿರುವುದು ಡಬ್ಲ್ಯೂಡಬ್ಲ್ಯೂಇ ತಾರೆ ಅಂಡರ್‌ಟೇಕರ್ ಅವರಿಗೂ ತಲುಪಿದೆ. ಈ ವಿಡಿಯೋ ನೋಡಿದ ತಕ್ಷಣವೇ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಿಂದ ಬಾಲಕನನ್ನು ಮೆಚ್ಚಿಕೊಂಡು ಕೆಲವು ಸಾಲು ಬರೆದು ಶುಘ ಕೋರಿದ್ದಾರೆ.
ವೈರಲ್ ಆದ ಈ ವಿಡಿಯೋವನ್ನು ಮೊದಲು @gauravsarwan ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿತ್ತು. ನಂತರ @gharkekalesh ಎಂಬ ಜನಪ್ರಿಯ ಸಾಮಾಜಿಕ ಮಾಧ್ಯಮ ಖಾತೆಯಿಂದ ವಿಡಿಯೋವನ್ನು ಹಂಚಿಕೊಳ್ಳಲಾಯಿತು. 10 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋ ಮತ್ತು ಅಂಡರ್‌ಟೇಕರ್‌ರ ಪ್ರತಿಕ್ರಿಯೆ ಬಹಳ ಬೇಗನೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಯಿತು. ನಿಜವಾಗಿಯೂ ಅಂಡರ್‌ಟೇಕರ್ ಪ್ರತಿಕ್ರಿಯಿಸಿದ್ದಾರಾ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಡಬ್ಲ್ಯೂಡಬ್ಲ್ಯೂಇ ಆಟಗಾರ ಅಂಡರ್‌ಟೇಕರ್ ಮತ್ತು ವಿಡಿಯೋ ನೋಡಿದ ಎಲ್ಲರಿಗೂ ಬಾಲಕ ಮತ್ತು ಅವನ ತಂದೆ ಧನ್ಯವಾದ ಹೇಳಿ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.