PM Modi Apology Video: ಪ್ರಧಾನಿ ವಿರುದ್ಧ ನಿಂದನೆ, ತಪ್ಪಿನ ಅರಿವಾಗಿ ಕೈಮುಗಿದು ಕ್ಷಮೆ ಕೋರಿದ ಯುವತಿ!

Ravi Janekal   | CMS
Published : Aug 01, 2026, 03:00 PM IST
Teenage Girl Apologizes in Viral Video for Remarks Against Prime Minister

ಸಾರಾಂಶ

ಪ್ರಧಾನ ಮಂತ್ರಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾಳೆ ಎನ್ನಲಾದ ಯುವತಿಯೊಬ್ಬಳು, ತಾನು 'ಕ್ಷಮಿಸಲಾಗದ ತಪ್ಪು' ಮಾಡಿದ್ದಾಗಿ ಕೈಮುಗಿದು ಕ್ಷಮೆ ಕೋರಿದ್ದಾಳೆ. ಈ ಯುವತಿಯ ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ದೆಹಲಿಯ ಜಂತರ್‌ ಮಂತರ್ ನಲ್ಲಿ ನಡೆದ ಪ್ರತಿಭಟನೆ ವೇಳೆ, ಹಿಂಸಾಚಾರ, ಪೊಲೀಸರ ಮೇಲೆ ಕಲ್ಲು ತೂರಾಟ ಒಂದೆಡೆಯಾದರೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನ ನಿಂದಿಸಿ ಮಾಡಿದ ವಿಡಿಯೋಗಳು ನೋಡಿದ್ರೆ 'ಇವರೆಲ್ಲ ಮಕ್ಕಳಾ? ವಿದ್ಯಾರ್ಥಿಗಳಾ ಎಂಬ ಅನುಮಾನ ಮೂಡಿಸುವಂತಿದ್ದವು. ಪ್ರಧಾನಿ ಮೋದಿಯನ್ನೇ ಟಾರ್ಗೆಟ್ ಮಾಡಿದ ಕೆಲವರು ತುಚ್ಛವಾಗಿ ನಿಂದಿಸಿ ವಿಡಿಯೋ ಹರಿಬಿಟ್ಟರು. ಇದೀಗ ಪ್ರಧಾನ ಮಂತ್ರಿಯವರ ವಿರುದ್ಧ ಅವಹೇಳನಕಾರಿ ಮಾತನಾಡಿದ್ದ ಯುವತಿಯೊಬ್ಬಳಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಕ್ಷಮಿಯಾಚಿಸಿದ್ದಾಳೆ. ಯುವತಿಯ ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕ್ಷಮಿಸಲಾಗದ ತಪ್ಪು ಮಾಡಿದ್ದೇನೆ..

ಪ್ರಧಾನ ಮಂತ್ರಿಯವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ಯುವತಿಯೊಬ್ಬಳು ಇದೀಗ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾಳೆ. ನಾನು ತಪ್ಪು ಮಾಡಿದ್ದು, ಈ ತಪ್ಪಿಗೆ ಕ್ಷಮೆ ಇಲ್ಲ ಆದರೂ ಕ್ಷಮಿಸುವಂತೆ ಯುವತಿ ಪ್ರಧಾನಿ ಮೋದಿಯವರಿಗೆ ಕೈಮುಗಿದು ಯುವತಿ ತನ್ನ ತಪ್ಪಿಗೆ ಪಶ್ಚತ್ತಾಪ ಪಟ್ಟಿದ್ದಾಳೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಯುವತಿ ಎರಡೂ ಕೈಗಳನ್ನು ಮುಗಿದು ನಿಂತಿರುವುದನ್ನು ಕಾಣಬಹುದು. ತನ್ನ ಹಿಂದಿನ ವರ್ತನೆಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಯುವತಿ, 'ನಾನು ದೊಡ್ಡ ತಪ್ಪು ಮಾಡಿದ್ದೇನೆ. ಈ ತಪ್ಪಿಗೆ ಕ್ಷಮೆ ಇಲ್ಲ, ಈ ಒಂದು ವಾಕ್ಯವೇ ಆಕೆಯ ಪಶ್ಚಾತ್ತಾಪದ ತೀವ್ರತೆಯನ್ನು ಹೇಳಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ. ಆದರೆ ಈ ಯುವತಿ ಯಾರು, ಎಲ್ಲಿಯವಳು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಯುವತಿಯ ಕ್ಷಮಾಪಣೆಯಿಂದ ಹೊಸ ಚರ್ಚೆ

ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಅವರಿಗೆ ನಿಂದಿಸಿ ವಿಡಿಯೋ ಮಾಡಿದ್ದಳು ಎಂದು ಆರೋಪಿಸಲಾಗಿದೆ. ಆದರೆ ವಿಡಿಯೋದಲ್ಲಿ ಏನು ಹೇಳಿದ್ದಳು, ಯಾವ ಸಂದರ್ಭದಲ್ಲಿ ಹೇಳಿದ್ದಳು ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ ತಾನಾಡಿದ ಮಾತಿಗೆ ಪ್ರಧಾನಿ ಬಳಿ ಕ್ಷಮೆ ಕೇಳಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಯುವತಿ ಏನು ಮಾತನಾಡಿದ್ದಳೋ ಇಷ್ಟೊಂದು ಗಮನ ಸೆಳೆದಿರಲಿಲ್ಲ. ಆದರೀಗ ಪ್ರಧಾನಿ ಬಳಿ ಕ್ಷಮೆ ಕೇಳಿ ಮಾಡಿದ ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಇದೇ ರೀತಿ ಬಾಹ್ಯ ಪ್ರಚೋದನೆಗೆ ಒಳಗಾಗಿ ಅದೆಷ್ಟೊ ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ನಿಂದಿಸಿದ್ದಾರೆ, ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ. ನೀಟ್ ಹೆಸರಲ್ಲಿ ನಡೆದ ಹೋರಾಟದ ನಿಜಬಣ್ಣ ಈಗ ವಿದ್ಯಾರ್ಥಿಗಳಿಗೆ ನಿಧಾನವಾಗಿ ಅರಿವಾಗುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಜೆನ್‌ ಜಿ 'ಜಿರಳೆ' ಪೋಸ್ಟ್‌ಗೆ ಸಮರ್ಥನೆ; ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಟ್ಟ ಕಂಗನಾ!
ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗ ಜಯಕೃಷ್ಣಗೆ ಬೆಂಬಲ ನೀಡದ 'ಪ್ರಿನ್ಸ್‌' ಹಿಂದಿರೋದು ಆ 'ರಹಸ್ಯ ಕಾರಣ'ವೇ?