ಬೆಚ್ಚಿಬೀಳಿಸುತ್ತೆ ಈ ಹಳ್ಳಿ ಹುಡುಗನ ಸಾಹಸ! ಕಿವಿಯಿಂದ ಹೋದ ತಂತಿ ಮೂಗಿನಿಂದ ಬಂತು.. ವಿಡಿಯೋ ನೋಡಿ ಫುಲ್ ಶಾಕ್!

Published : Jan 09, 2026, 11:28 PM IST
Shocking Stunt Village Boy Pulls Wire from Nose to Ear Watch Viral Video

ಸಾರಾಂಶ

ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದರಲ್ಲಿ, ಹಳ್ಳಿಯ ಹುಡುಗನೊಬ್ಬ ತೆಳುವಾದ ತಂತಿಯನ್ನು ತನ್ನ ಕಿವಿಯೊಳಗೆ ಹಾಕಿ ಮೂಗಿನಿಂದ ಹೊರತೆಗೆಯುವ ನಂಬಲಸಾಧ್ಯವಾದ ಸಾಹಸವನ್ನು ಮಾಡಿದ್ದಾನೆ.  ಈ ವಿಡಿಯೋ ಇಂಟರ್ನೆಟ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

ಇಂಟರ್ನೆಟ್ ಲೋಕದಲ್ಲಿ ಪ್ರತಿನಿತ್ಯ ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಆದರೆ, ಈ ಹಳ್ಳಿ ಹುಡುಗ ಮಾಡಿರುವ ಸಾಹಸ ಮಾತ್ರ ವೈದ್ಯಕೀಯ ಲೋಕವನ್ನೇ ಬೆಚ್ಚಿಬಿಳಿಸಿದೆ. ಇತ್ತೀಚೆಗೆ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರು ಬೆಕ್ಕಸಬೆರಗಾಗಿ ನೋಡುವಂತಾಗಿದೆ.

ನಂಬಲಸಾಧ್ಯ ಸಾಹಸ: ಕಿವಿಯಿಂದ ಒಳಹೋದ ತಂತಿ ಮೂಗಿನಿಂದ ಹೊರಕ್ಕೆ!

ಹಳ್ಳಿಯ ಈ ಹುಡುಗ ಮಾಡಿರುವ ವಿಚಿತ್ರ ಸಾಹಸ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ವೀಡಿಯೋದಲ್ಲಿ ಹುಡುಗ ತೆಳುವಾದ ತಂತಿಯಂತಹ ವಸ್ತುವನ್ನು ತನ್ನ ಕಿವಿಯೊಳಗೆ ತೂರಿಸುತ್ತಾನೆ. ನೋಡುಗರು 'ಅಯ್ಯೋ ಏನಾಗುತ್ತದೋ' ಎಂದು ಭಯಪಡುವುಷ್ಟರಲ್ಲಿ, ಆ ತಂತಿ ಸರಾಗವಾಗಿ ಆತನ ಮೂಗಿನ ಹೊಳ್ಳೆಯಿಂದ ಹೊರಬರುತ್ತದೆ! ಇದು ಕೇವಲ ಮ್ಯಾಜಿಕ್ ಅಲ್ಲ, ಆತನ ವಿಶಿಷ್ಟ ದೈಹಿಕ ಕೌಶಲ್ಯ ಎಂದು ಹೇಳುತ್ತಿದ್ದಾರೆ.

ಹುಡುಗನ ಮುಖದಲ್ಲಿ ಭಯವಿಲ್ಲ, ಅಚ್ಚರಿ ಇಲ್ಲ!

ಸಾಮಾನ್ಯವಾಗಿ ಕಿವಿಯೊಳಗೆ ಏನಾದರೂ ಹೋದರೆ ನಮಗೆ ತೀವ್ರ ನೋವು ಮತ್ತು ಆತಂಕವಾಗುತ್ತದೆ. ಆದರೆ, ಈ ಹುಡುಗ ಈ ವಿಚಿತ್ರ ಸಾಹಸ ಮಾಡುವಾಗ ನಗುತ್ತಿರುವುದು ಜನರನ್ನು ಮತ್ತಷ್ಟು ಅಚ್ಚರಿಗೊಳಿಸಿದೆ. ಆತನಿಗೆ ಇದು ಆಟದಷ್ಟೇ ಸುಲಭ ಎಂಬಂತಿದೆ. ಸುತ್ತಮುತ್ತಲಿದ್ದ ಜನರು ಈ ಸಾಹಸ ಕಂಡು ದಿಗ್ಭ್ರಮೆಗೊಂಡು ವಿಡಿಯೋ ಮಾಡುತ್ತಿದ್ದರೆ, ಹುಡುಗ ಮಾತ್ರ ಕೂಲ್ ಆಗಿ ಪೋಸ್ ನೀಡಿದ್ದಾನೆ.

 

ನೆಟ್ಟಿಗರ ಶಾಕ್; ತಮಾಷೆಯ ಕಮೆಂಟ್‌ಗಳ ಸುರಿಮಳೆ

ಎಕ್ಸ್ (X) ನಲ್ಲಿ ಈ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ. ವಿಡಿಯೋ ನೋಡಿದ ಒಬ್ಬ ಬಳಕೆದಾರ, 'ದೇವರಿಗೇ ಪ್ರೀತಿ ಈ ಹುಡುಗನ ವಿಚಿತ್ರ ಬಾಡಿ' ಎಂದು ಉದ್ಗರಿಸಿದರೆ, ಇನ್ನೊಬ್ಬರು 'ವೈದ್ಯರು ಈ ವಿಡಿಯೋ ನೋಡಿದರೆ ರಾಜೀನಾಮೆ ಕೊಡುವುದು ಖಚಿತ!' ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು 'ಇದು ಅಪಾಯಕಾರಿ, ದಯವಿಟ್ಟು ಯಾರೂ ಮನೆಯಲ್ಲಿ ಪ್ರಯತ್ನಿಸಬೇಡಿ' ಎಂದು ಎಚ್ಚರಿಕೆ ನೀಡಿದ್ದಾರೆ.

ಲಕ್ಷಾಂತರ ವೀಕ್ಷಣೆ ಪಡೆದ 'ವೈರ್' ಹುಡುಗ

@manz39754 ಎಂಬ ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್ಸ್ ಗಿಟ್ಟಿಸಿಕೊಂಡಿದೆ. ಹಳ್ಳಿಯ ಮೂಲೆಯಲ್ಲಿದ್ದ ಪ್ರತಿಭೆ ಇಂಟರ್ನೆಟ್ ಮೂಲಕ ಜಗತ್ತನ್ನೇ ಆಕರ್ಷಿಸುತ್ತಿದೆ. ಈ ಸಾಹಸದ ಹಿಂದೆ ಏನಾದರೂ ವೈಜ್ಞಾನಿಕ ಕಾರಣವಿದೆಯೇ ಅಥವಾ ಇದು ಕೇವಲ ಕಣ್ಣುಕಟ್ಟಿನ ತಂತ್ರವೇ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

PREV
Read more Articles on
click me!

Recommended Stories

ಜಾನ್ ಅಬ್ರಹಾಂ ಬೆನ್ನಿನ ಮೇಲೆಲ್ಲಾ ರಕ್ತದ ಗೆರೆಗಳು.. ನಾನಂತೂ... ದೆಹಲಿ ಘಟನೆ ಬಗ್ಗೆ ಹೇಳಿದ ಚಿತ್ರಾಂಗದಾ ಸಿಂಗ್!
ಬೆಂಗಳೂರಿಗೆ ಡೆಲಿವರಿ ಬಾಯ್ ಕೆಲಸಕ್ಕೆ ಬಂದ ಬಿಹಾರ ಕಾರ್ಮಿಕ; ತನ್ನದಲ್ಲದ ತಪ್ಪಿಗೆ ಪೆಟ್ಟುತಿಂದು ವಾಪಸ್ ಹೋದ!