Mumbai Rains: ₹1 ಲಕ್ಷ ಮನೆ ಬಾಡಿಗೆ ಕೊಟ್ಟು , 30ನೇ ಮಹಡಿಗೆ ಮೆಟ್ಟಿಲು ಹತ್ತುವ ಮುಂಬೈ ನಟನ ವಿಡಿಯೋ ವೈರಲ್, ಇದೇನಿದು ಗೋಳು?

Published : Jun 27, 2026, 10:34 AM IST
Pays Rs 1 Lakh Rent Still Climbs 30 Floors Mumbai Actors Viral Rant Goes Viral rav

ಸಾರಾಂಶ

ಮುಂಬೈನ ನಟನೊಬ್ಬ ಹಂಚಿಕೊಂಡ ವಿಡಿಯೋ ಭಾರೀ ವೈರಲ್ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟುವ ಐಷಾರಾಮಿ ಮನೆ ಅದು. ಆದರೆ ದಿನನಿತ್ಯ ಮೂವತ್ತು ಮಹಡಿ ಹತ್ತಿ ಇಳಿಯಬೇಕಾದ ಪರಿಸ್ಥಿತಿ. ಯಾಕೆ ಅಷ್ಟೊಂದು ಮಹಡಿ ಮೆಟ್ಟಿಲು ಹತ್ತಬೇಕು ಅಂತೀರಾ? ಲಿಫ್ಟ್ ಇದೆ ಆದರೆ..

ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಬಾಡಿಗೆ ಕಟ್ಟುವ ಮನೆ ಎಷ್ಟೊಂದು ಐಷಾರಾಮಿ ಇರುತ್ತಲ್ಲವೇ? ಆದರೆ ಮುಂಬೈನ ನಟನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ಭಾರೀ ವೈರಲ್ ಆಗಿದೆ ಅಲ್ಲದೇ ನೆಟಿಜನ್ ಆಕ್ರೋಶಕ್ಕೂ ಕಾರಣವಾಗಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಷ್ಟೊಂದು ಬಾಡಿಗೆ ಕೊಟ್ಟು ಹತ್ತಾರು ಮಹಡಿಗೆ ಮೆಟ್ಟಿಲು ಹತ್ತುವುದು ಏಕೆ? ಅಂತೀರಾ ಅಲ್ಲೇ ಇದೆ ಸಮಸ್ಯೆ.

ಮುಂಬೈನಲ್ಲಿ ಇತ್ತೀಚೆಗೆ ಭಾರೀ ಮಳೆಯಾಗಿದೆ, ಆಗುತ್ತಿದೆ. ವಿಪರೀತ ಮಳೆಯಿಂದ ನಗರದಲ್ಲಿ ಜನ ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಸಾಮಾನ್ಯ ಜನರ ಪಾಡಂತೂ ಹೇಳತೀರದು. ಆದರೆ ಐಷಾರಾಮಿ ಮನೆಗಳಲ್ಲಿ ವಾಸಿಸುವ ಶ್ರೀಮಂತರದು ಇದೇ ಸಮಸ್ಯೆ. ಸುಖವಾಗಿರಬಹುದು ಅಂತಾ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಿ ಐಷಾರಾಮಿ ಮನೆಗಳಿದ್ದರೂ ಮಳೆಗಾಲದಲ್ಲಿ ನೀರು ನುಗ್ಗಿ ಲಿಫ್ಟ್ ಕೆಟ್ಟು ನಿಂತಿವೆ! ಮೂವತ್ತು ಅಂತಸ್ತುಗಳ ಬಿಲ್ಡಿಂಗ್‌ನಲ್ಲಿ ಲಿಫ್ಟ್ ಕೆಟ್ಟರೆ ಮೇಲಿನ ಮಹಡಿಯಲ್ಲಿರುವವರ ಪರಿಸ್ಥಿತಿ ಏನಾಗಬೇಡ? ನಟ ಮೋಹಿತ್ ಹಿರಾನಂದನಿ ಹಂಚಿಕೊಂಡಿರುವ ವಿಡಿಯೋ ನೋಡಿ..

ವಿಡಿಯೋದಲ್ಲಿ ನಟ ಮೋಹಿತ್ ಹಿರಾನಂದಾನಿ ಹೇಳುತ್ತಾರೆ, 'ನಾವು ವಾಸವಿರುವುದು 'ಲಕ್ಸುರಿ' ಅಪಾರ್ಟ್‌ಮೆಂಟ್ ಅಂತಾನೇ ಇಲ್ಲಿ ಹೆಸರವಾಸಿ. ಅದೇ ಕಾರಣಕ್ಕೆ ಇಲ್ಲಿ ಬಂದು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟು ನೆಲೆಸಿದರೂ ಮುಂಬೈನಲ್ಲಿ ಮಳೆ ಬಂದಾಗೆಲ್ಲ ಲಿಫ್ಟ್ ಕೆಟ್ಟು ಹೋಗಿ ದಿನನಿತ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಪ್ರತಿ ತಿಂಗಳು ಲಕ್ಷಗಟ್ಟಲೆ ಬಾಡಿಗೆ ಕಟ್ಟಿದರೂ ಈ ಪರಿಸ್ಥಿತಿ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ಭಾರೀ ಮಳೆಯಿಂದಾಗಿ ಅವರ ಕಟ್ಟಡದಲ್ಲಿದ್ದ ಐದೂ ಲಿಫ್ಟ್‌ಗಳು ಕೆಟ್ಟು ಹೋಗಿದ್ದವು. ಹೀಗಾಗಿ ಅವರು ಮೆಟ್ಟಿಲುಗಳನ್ನು ಬಳಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ದಿನವಿಡೀ ದುಡಿದು ಸುಸ್ತಾಗಿ ಮನೆಗೆ ಬಂದರೆ, ಸುಮಾರು 30 ಮಹಡಿಗಳನ್ನು ಹತ್ತಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಡಿಯೋದ ಮೇಲಿನ ಬರಹದಲ್ಲೂ ಬಾಡಿಗೆ ಹೆಚ್ಚು ಆದರೆ ಸೌಲಭ್ಯ ತುಂಬಾ ಕೆಟ್ಟದ್ದು ಅನ್ನೋದನ್ನೇ ಹೇಳಿದ್ದಾರೆ. 'ತಿಂಗಳಿಗೆ ಸುಮಾರು 1 ಲಕ್ಷ ರೂ. ಬಾಡಿಗೆ ಕಟ್ಟಿ 'ಲಕ್ಸುರಿ' ಬಿಲ್ಡಿಂಗ್‌ನಲ್ಲಿ ವಾಸ. ಆದರೆ ಮಳೆ ಬಂದ ತಕ್ಷಣ ಐದೂ ಲಿಫ್ಟ್‌ಗಳು ಕೈಕೊಡುತ್ತವೆ. ಈಗ ಟ್ರೆಕ್ಕಿಂಗ್ ಹೊರಟವರಂತೆ 30 ಮಹಡಿಗಳನ್ನು ಹತ್ತಬೇಕು..!

ಕೊನೆಗೂ ಕಷ್ಟಪಟ್ಟು ಮನೆ ತಲುಪಿದ ಮೇಲೂ ಅವರ ಸಮಸ್ಯೆ ಬಗೆಹರಿದಿರಲಿಲ್ಲ. ಮನೆಗೆ ಬಂದಾಗ ನಲ್ಲಿಯಲ್ಲಿ ನೀರು ಕೂಡ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ವಿಡಿಯೋಗೆ ಶೀರ್ಷಿಕೆ ನೀಡಿದ ಅವರು, ಮನೆಗೆ ತಲುಪಿದ ಮೇಲೆ ನೋಡಿದರೆ ನೀರಿಲ್ಲ. ವಾವ್ ಮುಂಬೈ ಲೈಫ್! ಎಂದು ಬರೆದುಕೊಂಡಿದ್ದಾರೆ.

ವಿಡಿಯೋಗೆ ನೋಡಿ

 

ನೆಟಿಜನ್ಸ್ ಏನಂದ್ರು?

ಈ ವಿಡಿಯೋ ಆನ್‌ಲೈನ್‌ನಲ್ಲಿ, ಅದರಲ್ಲೂ ವಿಶೇಷವಾಗಿ ದೊಡ್ಡ ನಗರಗಳ ಎತ್ತರದ ಕಟ್ಟಡಗಳಲ್ಲಿ ವಾಸಿಸುವವರ ನಡುವೆ ವೇಗವಾಗಿ ವೈರಲ್ ಆಗಿದೆ. ವಿಡಿಯೋದಲ್ಲಿ ತೋರಿಸಿರುವ ಸಮಸ್ಯೆಗಳು ತಮಗೂ ಎದುರಾಗಿವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಮುಂಬೈನಲ್ಲಿ ಲಕ್ಸುರಿ ಬಿಲ್ಡಿಂಗ್‌ಗಳು ಕೇವಲ ಬ್ರೋಶರ್‌ಗಳಲ್ಲಿ ಮಾತ್ರ ಲಕ್ಸುರಿಯಾಗಿರುತ್ತವೆ ಅನ್ನೋದಕ್ಕೆ ಇದೇ ಕಾರಣ' ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೊಬ್ಬರು, 'ಇಷ್ಟೊಂದು ಬಾಡಿಗೆ ಕಟ್ಟಿ, ಲಿಫ್ಟ್ ಮತ್ತು ನೀರಿನ ಸಮಸ್ಯೆ ಎದುರಿಸುವುದೇ ನಿಜವಾದ ಮುಂಬೈ ಲೈಫ್' ಎಂದಿದ್ದಾರೆ. ಮತ್ತೊಬ್ಬರು, 'ದಿನವಿಡೀ ದುಡಿದು ಬಂದು 30 ಮಹಡಿ ಮೆಟ್ಟಿಲು ಹತ್ತುವುದು ಶಿಕ್ಷೆಯಂತೆ ಇದೆಯೇ ಹೊರತು, ಮನೆಗೆ ಬಂದ ಹಾಗೆ ಅನಿಸುವುದಿಲ್ಲ..' ಎಂದು ಕಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

Deepika Padukone-Indrajit Lankesh: 'ಐಶ್ವರ್ಯ' ಚಿತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!
ಇಂಡಿಯಾದಲ್ಲಿ 40 ಸಾವಿರ, ಸ್ವಿಟ್ಜರ್ಲೆಂಡ್‌ನಲ್ಲಿ 7 ಲಕ್ಷ! ಜೀವನ ನಡೆಸಲು ಯಾವ ದೇಶ ಬೆಸ್ಟ್? ದಂಪತಿ ವಿಡಿಯೋ ವೈರಲ್!