ಸಿನಿಮಾ ಹಾಲ್​ನಲ್ಲಿ ಇದೇನಿದು? ಒಂದೇ ಸಲಕ್ಕೆ ಇಬ್ಬರ ಜೊತೆ ರೊಮಾನ್ಸ್​- ಆತಂಕಕಾರಿ ವಿಡಿಯೋ ವೈರಲ್​

Published : Jan 26, 2026, 01:05 PM IST
Cinema Hall

ಸಾರಾಂಶ

ಸಿನಿಮಾ ಥಿಯೇಟರ್​ನಲ್ಲಿ ಯುವಕನೊಬ್ಬ ಇಬ್ಬರು ಯುವತಿಯರೊಂದಿಗೆ ಏಕಕಾಲದಲ್ಲಿ ರೊಮ್ಯಾನ್ಸ್​ನಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಡಿಜಿಟಲ್ ಯುಗದಲ್ಲಿ ಯುವಜನತೆಯ ವರ್ತನೆ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಮೂಡುತ್ತಿರುವ ಆತಂಕವನ್ನು ಎತ್ತಿ ತೋರಿಸುತ್ತದೆ.

ಪ್ರೀತಿ,ಪ್ರೇಮ, ಕಾಮ ಇದ್ಯಾವುದೂ ಇಂದು ನಿನ್ನೆಯ ಮಾತಲ್ಲ. ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ ಎಂದು ಹೇಳುವ ದೊಡ್ಡ ವರ್ಗವೇ ಇದೆ. ಆಗಲೂ ಇವೆಲ್ಲಾ ಇತ್ತು, ಈಗಲೂ ಇದೆ, ಮುಂದೆಯೂ ಇರಬಹುದು. ಆದರೆ ಡಿಜಿಟಲ್​ ಯುಗದಿಂದಾಗಿ ಈಗ ಇಂಥ ವಿಡಿಯೋಗಳು ಸಾರ್ವತ್ರಿಕಗೊಳ್ಳುತ್ತಿವೆ. ಅಂದು ಕದ್ದುಮುಚ್ಚಿ ಎಲ್ಲರನ್ನೂ ಮಾಡ್ತಿದ್ದ ಜೋಡಿಗಳು, ಇಂದು ಸಿಸಿಟಿವಿ ಇರೋದನ್ನೇ ಮರೆತು ಖುಲ್ಲಂಖುಲ್ಲಾ ಮಾಡುತ್ತಿದ್ದಾರೆ ಅಷ್ಟೇ. ಅದರಲ್ಲಿಯೂ ಸಿನಿಮಾ ವೀಕ್ಷಣೆಗೆ ಬರುವ ಯುವ ಜನರು ಅಲ್ಲಿಗೆ ಏಕೆ ಬರುತ್ತಾರೆ ಎನ್ನುವುದು ಕೂಡ ತಿಳಿಯುವುದು ಕಷ್ಟ ಎನ್ನುವ ರೀತಿಯಲ್ಲಿ, ಪಾರ್ಕ್​ನಲ್ಲಿ ಮಾಡುವ ಕ್ರಿಯೆಗಳನ್ನೇ ಸಿನಿಮಾ ಥಿಯೇಟರ್​ಗಳಲ್ಲಿಯೂ ಯಾವುದೇ ಮುಜುಗರ ಇಲ್ಲದೇ ಮಾಡುತ್ತಿದ್ದಾರೆ.

ಆತಂಕದ ವಿಡಿಯೋ ವೈರಲ್

ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದ್ದು, ಇದರಲ್ಲಿ ಒಬ್ಬ ಯುವಕ ಅಕ್ಕ ಪಕ್ಕ ಇರುವ ಯುವತಿಯರ ಜೊತೆ ಒಂದೇ ಬಾರಿಗೆ ರೊಮಾನ್ಸ್​ನಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಬಹುದಾಗಿದೆ. ಇದು ಅಶ್ಲೀಲ ಎನ್ನುವಂತೆಯೂ ಇದೆ. ಇದೇ ವಿಡಿಯೋದಲ್ಲಿ ಈ ಪುಣ್ಯಾತ್ಮನ ಎದುರಿಗೇನೇ ಇನ್ನೊಂದು ಜೋಡಿ ಕೂಡ ಈ ಲೋಕದ ಅರಿವೇ ಇಲ್ಲದೇ ತೊಡಗಿಸಿಕೊಂಡಿರೋದನ್ನು ನೋಡಬಹುದು. ಆದರೆ ಈ ಯುವಕ ಇಬ್ಬರು ಯುವತಿಯರನ್ನು ಮೆಂಟೇನ್​ ಮಾಡುತ್ತಿರುವ ಕಾರಣ, ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಹೆಣ್ಣುಮಕ್ಕಳೇ ಒಂದು ಹೆಜ್ಜೆ ಮುಂದೆ...

ಅಷ್ಟಕ್ಕೂ ಬಹುತೇಕ ಇಂಥ ವಿಡಿಯೋಗಳಲ್ಲಿ ಅಥವಾ ಇನ್ನಾವುದೇ ಷೋಗಳಲ್ಲಿ (ಅದರಲ್ಲಿಯೂ ಹೆಚ್ಚಾಗಿ ಯಾವುದೇ ಭಾಷೆಗಳ ರಿಯಾಲಿಟಿ ಷೋಗಳನ್ನು) ಸೂಕ್ಷ್ಮವಾಗಿ ಗಮನಿಸಿದರೆ, ಹೆಣ್ಣುಮಕ್ಕಳೇ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿರುವುದನ್ನು ಗಮನಿಸಬಹುದಾಗಿದೆ. ತಮ್ಮ ಭವಿಷ್ಯವನ್ನೂ ಅರಿಯದೇ ಯೌವನದಲ್ಲಿ ತೇಲಾಡುತ್ತಿರುವ ಇಂಥ ಹೆಣ್ಣುಮಕ್ಕಳನ್ನು ನೋಡಿದಾಗ ಬಹುತೇಕ ಪೋಷಕರು ಆತಂಕ ಪಟ್ಟುಕೊಳ್ಳುವುದು ಇದೆ. ಏಕೆಂದರೆ ಈ ವಿಡಿಯೋದಲ್ಲಿ ಕೂಡ ಆ ಯುವಕ ತನ್ನ ಕೆಲಸವನ್ನು ತಾನು ಮಾಡುತ್ತಿದ್ದಾನೆ. ಆದರೆ ಒಂದು ಕಡೆ ಇರುವ ಯುವತಿ ಇವನ ಮೈಮೇಲೆ ಬಿದ್ದುಕೊಂಡಿದ್ದರೆ, ಇನ್ನೊಂದು ಕಡೆ ಇರುವಾಕೆ, ಆ ಯುವಕ ಮಾಡ್ತಿರೋ ಘನಕಾರ್ಯ ಯಾರಿಗೂ ತಿಳಿಯಬಾರದು ಎಂದು ಕಾಲಿನ ಮೇಲೆ ಹೊದಿಕೆ ಹಾಕಿಕೊಂಡಿರುವುದನ್ನು ನೋಡಬಹುದಾಗಿದೆ!

ಮುಳ್ಳು ಸೆರಗ ಮೇಲೆ ಬಿದ್ದರೂ...

ಮುಳ್ಳು ಸೆರಗ ಮೇಲೆ ಬಿದ್ದರೂ, ಸೆರಗು ಮುಳ್ಳಿನ ಮೇಲೆ ಬಿದ್ದರೂ... ಎನ್ನುವ ಗಾದೆ ಮಾತು ಸಿಕ್ಕಾಪಟ್ಟೆ ಹಳತಾಯಿತು. ಆದರೆ, ಇಂದಿನ ಪೀಳಿಗೆಯವರಿಗೆ ಆ ಕ್ಷಣದ ಸುಖ ಬೇಕು ಅಷ್ಟೇ. ಮುಂದಿನದ್ದು ಯಾರಿಗೆ ಬೇಕು ಎನ್ನುವ ಮನಸ್ಥಿತಿ ಇದ್ದಂತೆ ಕಾಣಿಸುತ್ತಿದೆ. ಮಕ್ಕಳ ಮೇಲೆ ಪೋಷಕರು ನಿಗಾ ವಹಿಸಬೇಕು, ಅವರ ನಡವಳಿಕೆಯನ್ನು ಎಚ್ಚರದಿಂದ ಗಮನಿಸಬೇಕು, ಅವರ ಮೇಲೆ ಕಣ್ಣು ಇಡಬೇಕು ಎಂದು ಭಾಷಣ ಮಾಡುವುದು ಬಲು ಸುಲಭ. ಆದರೆ ಇಂದಿನ ಅಪ್ಪ-ಅಮ್ಮಂದಿರಿಗೇ ತಮ್ಮ ಮೊಬೈಲ್​ ಬಿಟ್ಟು ಅತ್ತಿತ್ತ ನೋಡಲು ಟೈಮ್​ ಇಲ್ಲದೇಇರುವಾಗ, ಹಣ ಮಾಡುವ ಕಾಯಕದಲ್ಲಿ ತೊಡಗಿರುವಾಗ ಇವೆಲ್ಲ ಎಲ್ಲಿ ಸಾಧ್ಯ ಹೇಳಿ, ಒಂದು ವೇಳೆ ಮಕ್ಕಳ ಮೇಲೆ ಗಮನ ಹರಿಸಲು ಹೋದರೆ, ಪಾಲಕರು ಚಾಪೆ ಕೆಳಗೆ ನುಸುಳಿದರೆ, ಮಕ್ಕಳು ರಂಗೋಲಿ ಕೆಳಗೆ ನುಸುಳುವುದೂ ಇದೆಯಲ್ಲವೆ? ಆದರೆ ಇಂಥ ವಿಡಿಯೋ ನೋಡಿದಾಗ ಮಾತ್ರ ಪಾಲಕರಲ್ಲಿ ಆತಂಕ ಮೂಡುವುದು ಸಹಜವಾಗಿದೆ. indiaego ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್ ಆಗಿರೋ ಈ ಆತಂಕಕಾರಿ ವಿಡಿಯೋ ನೋಡಿ: 

 

 

PREV
Read more Articles on
click me!

Recommended Stories

85 ಶತಕೋಟಿ ಡಾಲರ್​ ಮೌಲ್ಯದ 1 ಸಾವಿರ ಟನ್​ ಚಿನ್ನದ ನಿಧಿ ಪತ್ತೆ! ಭೂಮಿಯೊಳಗೆ ಸಿಕ್ಕ ಅನ್ಯಗ್ರಹದ ಲೋಹಗಳು
ನಟಿಯರು ಬೆಳ್ಳಿತೆರೆಯ ಮಿಂಚಲು ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ.. ನೇರ ಮಾತು ಹೊಸ ವಿವಾದ ಹುಟ್ಟುಹಾಕುತ್ತಾ?