
ನೈನಿತಾಲ್ (ಆ.22) ಫುಡ್ ಡೆಲಿವರಿಯಲ್ಲಿ ಅತೀ ಹೆಚ್ಚು ಆರ್ಡರ್ ಮಾಡುವ ಆಹಾರಗಳಲ್ಲಿ ಪಿಝಾ ಮುಂಚೂಣಿಯಲ್ಲಿದೆ. ಪಿಝಾ ಶಾಪ್, ಆನ್‌ಲೈನ್ ಮೂಲಕವೂ ಜನರು ಅತೀ ಹೆಚ್ಚು ಇಷ್ಟಪಟ್ಟು ಸವಿಯುತ್ತಾರೆ. ಹೀಗೆ ಗ್ರಾಹಕ ಫಿಝಾ ತಿನ್ನುವ ಮನಸ್ಸಾಗಿ 505 ರೂಪಾಯಿ ಮೌಲ್ಯದ ಪಿಝಾ ಆರ್ಡರ್ ಮಾಡಿದ್ದಾನೆ. ಗ್ರಾಹಕನಿಗೆ ಫಿಜಾ ತಲುಪಿದೆ. ಆದರೆ ಗ್ರಾಹಕ ಅಸಮಾಧಾನಗೊಂಡಿದ್ದಾನೆ. ಕಾರಣ ತಾನು ಆರ್ಡರ್ ಮಾಡಿದ್ದು 10 ಇಂಚು ಗಾತ್ರದ ಪಿಝಾ, ಆದರೆ ಕೊಟ್ಟಿರೋದು 7 ಇಂಚಿನ ಪಿಝಾ. 3 ಇಂಚು ಕಡಿಮೆ ಎಂದು ಗ್ರಾಹಕ ಸುಮ್ಮನಾಗಲಿಲ್ಲ. ತಕ್ಷಣವೇ ಪಿಝಾಗೆ ಕರೆ ಮಾಡಿ ದೂರು ನೀಡಿದರೂ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಕಾನೂನು ಹೋರಾಟದ ಮೊರೆ ಹೋಗಿದ್ದಾನೆ. ಪರಿಣಾಮ ಈತನಿಗೆ 10520 ರೂಪಾಯಿ ಪರಿಹಾರ ನೀಡಲು ಗ್ರಾಹಕರ ವೇದಿಕೆ ಆದೇಶಿಸಿದೆ.
ಆ್ಯಪ್ ಮೂಲಕ 505 ರೂಪಾಯಿ ಮೌಲ್ಯದ ಪಿಝಾ ಆರ್ಡರ್ ಮಾಡಿದ್ದಾನೆ. 10 ಇಂಚಿನ ಪಿಝಾ ಮನೆಗೆ ಬಂದಾಗ 7 ಇಂಚು ಆಗಿತ್ತು. ದೂರು ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಪೋರ್ಟಲ್ ಮೂಲಕ ದೂರು ದಾಖಲಿಸಿದರು. ಗ್ರಾಹಕ ಸೇವಾ ವೇದಿಕೆ ಈ ಪ್ರಕರಣವನ್ನು ಕೈಗೆತ್ತಿಕೊಂಡಿತು. ಗ್ರಾಹಕ ವೇದಿಕೆ ಈ ಪ್ರಕರಣ ಸಂಬಂಧ ಪಿಝಾ ಔಟ್‌ಲೆಟ್‌ಗೆ ನೋಟಿಸ್ ನೀಡಿತ್ತು. ತಾನು ರೆಸ್ಟೋರೆಂಟ್ ಹಾಗೂ ಗ್ರಾಹಕನ ನಡುವೆ ವಿತರಣಾ ವೇದಿಕೆ ಮಾತ್ರ. ಪಿಝಾ ಗಾತ್ರದಲ್ಲಿ ತನ್ನ ಪಾತ್ರ ಇಲ್ಲ ಎಂದು ವಾದಿಸಿತು. ಆದರೆ ಆರ್ಡರ್ ಮಾಡಿದ ಪಿಝಾ ಬದಲು ಬೇರೆ ಪಿಝಾ ನೀಡಲಾಗಿದೆ. ಇದು ಸೇವೆಯಲ್ಲಿ ಆದ ವ್ಯತ್ಯಯ. ಹೀಗಾಗಿ ಪರಿಹಾರ ನೀಡಬೇಕು ಎಂದು ಆಯೋಗ ಹೇಳಿತು.
ಗ್ರಾಹಕರು ಆರ್ಡರ್ ಮಾಡಿದ ಉತ್ಪನ್ನ ಸರಿಯಾಗಿ ವಿತರಣೆಯಾಗಬೇಕು. ಸೇವೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ಥರ್ಡ್ ಪಾರ್ಟಿ ಆ್ಯಪ್ ಹೊಣೆಯಾಗಲಿದೆ. ಹೀಗಾಗಿ ಪ್ರತಿ ಸೇವೆಯಲ್ಲೂ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಗ್ರಾಹಕರ ವೇದಿಕೆ ಸೂಚಿಸಿದೆ.