ಬಟ್ಟೆ ಕಂಡರೆ ನಿಮಗೇನು? ಬಾತ್‌ರೂಂನಿಂದಲೇ ಮೀಟಿಂಗ್ ಹಾಜರಾದ ಜನಪ್ರತಿನಿಧಿ ಪ್ರಶ್ನೆಗೆ ಎಲ್ಲರೂ ದಂಗು

Published : Aug 07, 2026, 06:42 PM IST
Virtual Meeting from Bathroom

ಸಾರಾಂಶ

ಒಣಗಲು ಹಾಕಿದ ಒಳಉಡುಪಗಳು ಕಂಡರೆ ಏನ್ರಿ? ನಾನು ಕಾಣಿಸುತ್ತಿದ್ದೇನಾ, ನನ್ನ ನೋಡಿ ಎಂದು ಜನಪ್ರತಿನಿಧಿ ಆನ್‌ಲೈನ್ ಮೀಟಿಂಗ್‌ನಲ್ಲಿ ಖಡಕ್ ಆಗಿ ಹೇಳಿದ ಘಟನೆ ನಡೆದಿದೆ. ಕೌನ್ಸಿಲ್ ಮೀಟಿಂಗ್ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ವೆಲ್ಲಿಂಗ್ಟನ್ (ಆ.07) ಆನ್‌ಲೈನ್ ಮೀಟಿಂಗ್ ವೇಳೆ ನಡೆದ ಹಲವು ಎಡವಟ್ಟುಗಳು, ಕೆಲ ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸಿದೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಕೌನ್ಸಿಲ್ ಮೀಟಿಂಗ್‌ನಲ್ಲಿ ಜನಪ್ರತಿನಿಧಿ ಬಾತ್‌ರೂಂನಿಂದ ವರ್ಚುವಲ್ ಆಗಿ ಜಾಯಿನ್ ಆಗಿದ್ದಾರೆ. ಹಿಂಭಾಗದಲ್ಲಿ ಒಣಗಲು ಹಾಕಿದ್ದ ಒಳಉಡುಪುಗಳ ಕಂಡ ಮೇಯರ್ ಸೇರಿದಂತೆ ಇತರರು ದಂಗಾಗಿದ್ದಾರೆ. ಇತ್ತ ಮೇಯರ್ ನಿಮ್ಮ ಕ್ಯಾಮೆರಾ ಸ್ವಲ್ಪ ಸರಿಸಿ ಹಿಂಬದಿಯಲ್ಲ ನಿಮ್ಮ ಒಳಉಡುಪುಗಳು ಕಾಣುತ್ತಿದೆ ಎಂದು ಮುಜುಗರದಿಂದಲೇ ಮನವಿ ಮಾಡಿದ್ದಾರೆ. ಆದರೆ ಮಹಿಳಾ ಜನಪ್ರತಿನಿಧಿ, ನಾನು ಕಾಣುತ್ತಿದ್ದೇನಾ, ಅಕ್ಕ ಪಕ್ಕ ಏನೇ ಇರಲಿ ಎಂದು ಮಾತು ಮುಂದುವರಿಸಿದ ಘಟನೆ ನಡೆದಿದೆ.

ಆನ್‌ಲೈನ್ ಮೀಟಿಂಗ್‌ನಲ್ಲಿ

ನ್ಯೂಜಿಲೆಂಡ್ ನಗರ ಸಭೆಯ ಕೌನ್ಸಿಲ್ ಮೀಟಿಂಗ್‌ನ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಡ್ಯುನೆಡಿನ್ ಸಿಟಿಯ ಕೌನ್ಸಿಲ್ ಸಭೆಯಲ್ಲಿ ಈ ಘಟನೆ ನಡೆದಿದೆ. ಡ್ಯುನೆಡಿನ್ ನಗರ ಸಭೆಯ ಎಲ್ಲಾ ಜನಪ್ರತಿನಿಧಿಗಳು, ಮೇಯರ್, ಅಧಿಕಾರಿಗಳು ಕಚೇರಿಯಲ್ಲಿ ಹಾಜರಾಗಿದ್ದಾರೆ. ಆದರೆ ಮಹಿಳಾ ಕೌನ್ಸಿಲರ್ ಜೋ ಗೇಲರ್ ಆನ್‌ಲೈನ್ ಮೂಲಕ ಹಾಜರಾಗಿದ್ದಾರೆ. ಜೋ ಗೇಲರ್ ಬಾತ್‌ರೂಂನಲ್ಲಿದ್ದುಕೊಂಡು ಮೀಟಿಂಗ್‌ಗೆ ಹಾಜರಾಗಿ ಮೊದಲ ಎಡವಟ್ಟು ಮಾಡಿದ್ದಾರೆ. ಬಾತ್‌ರೂಂನಿಂದ ಮೀಟಿಂಗ್ ಹಾಜರಾದರೆ ತಪ್ಪೇನು ಇಲ್ಲ. ಆದರೆ ಜೋ ಗೇಲರ್ ಹಿಂಭಾಗದಲ್ಲಿ ಅವರ ಒಳಉಡುಪುಗಳು ಒಣಗಲು ಹಾಕಿರುವುದು ಕ್ಯಾಮೆರಾದಲ್ಲಿ ಕಾಣುತ್ತಿತ್ತು.

ಕ್ಯಾಮೆರಾ ಸ್ವಲ್ಪ ಸರಿಸಿ ಎಂದ ಮೇಯರ್

ಮಹಿಳಾ ಜನಪ್ರತಿನಿಧಿ ಬಾತ್‌ರೂಂ ಆನ್‌ಲೈನ್ ಮೀಟಿಂಗ್‌ನಲ್ಲಿ ಜಗಜ್ಜಾಹೀರಾಗಿತ್ತು. ಮೇಯರ್ ಸೋಫಿ ಬಾರ್ಕರ್ ಸೇರಿದಂತೆ ಎಲ್ಲರು ಮುಜುಗರಗೊಂಡಿದ್ದಾರೆ. ಕೆಲವರು ನಕ್ಕಿದ್ದಾರೆ. ಯಾಕೆ ಏನಾಯಿತು ಎಂದು ಗೇಲರ್ ಪ್ರಶ್ನಿಸಿದ್ದಾರೆ. ತಕ್ಷಣವೇ ಮೇಯರ್ , ನಿಮ್ಮ ಕ್ಯಾಮೆರಾ ಸರಿಸಿ, ಹಿಂಭಾಗದ ಒಳ ಉಡುಪುಗಳು ಕಾಣುತ್ತಿದೆ ಎಂದು ಸೂಚಿಸಿದ್ದಾರೆ.

ಏನು ಸಮಸ್ಯೆ, ನಾನು ಕಾಣಿಸುತ್ತಿದ್ದೇನಾ?

ನನ್ನ ಬಟ್ಟೆ ಕಂಡರೆ ಏನು ಸಮಸ್ಯೆ, ನಾನು ಕಾಣಿಸುತ್ತಿದ್ದೇನಾ, ನನ್ನ ಧ್ವನಿ ಕೇಳಿಸುತ್ತಿದೆಯಾ ಎಂದು ಗೇಲರ್ ಕೂಲ್ ಆಗಿ ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಿದ್ದಾರೆ. ಇಷ್ಟೇ ಅಲ್ಲ ಬಟ್ಟೆ ಕಾಣುವುದು ಉತ್ತಮ ವಿಷಯ. ಯಾಕೆಂದರೆ ಈ ಮೀಟಿಂಗ್‌ನಲ್ಲಿ ನೀವು ಬಟ್ಟೆಯನ್ನು ನೋಡಬಹುದು, ನನ್ನನ್ನೂ ಕಾಣಬಹದು. ಇದರಲ್ಲಿ ನನಗೆ ಸಮಸ್ಯೆ ಎಂದು ಅನಿಸುತ್ತಿಲ್ಲ. ನನಗೆ ಯಾವುದೇ ಸಮಸ್ಯೆ ಇಲ್ಲ ಎಂದ ಮೇಲೆ ನಿಮಗೇನು ಎಂದು ಗೇಲರ್ ಪ್ರಶ್ನಿಸಿದ್ದಾರೆ. ಈ ಮೂಲಕ ಸಭೆ ಮುಂದುವರಿದಿದೆ. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗುತ್ತಿದ್ದಂತೆ ಸಮಸ್ಯೆ ತೀವ್ರಗೊಂಡಿದೆ.

ಬಾತ್ ರೂಂ ಒಳಗೆ ಯಾರಿದ್ದಾರೆ, ಪತಿಯೋ ಅಥವಾ ಇನ್ಯಾರೋ?

ಬಾತ್ ರೂಂ ವೀಡಿಯೋ ಕಾಲ್ ಮೀಟಿಂಗ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರಮುಖ ವಿಷಯ ಗಮನಿಸಿದ್ದಾರೆ. ಮೀಟಿಂಗ್ ನಡುವೆ ಬಾತ್ ರೂಂ ಗಾಜಿನ ಹಿಂಭಾಗದಲ್ಲಿ ವ್ಯಕ್ತಿಯೊಬ್ಬರು ಚಲಿಸುತ್ತಿರುವುದು ಗೋಚರಿಸುತ್ತಿದೆ. ಬಾತ್ ರೂಂನಲ್ಲಿ ನಿಮ್ಮ ಪತಿಯೋ ಅಥವಾ ಇನ್ಯಾರಾದರೂ ಇದ್ದಾರೋ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

PREV
Read more Articles on
click me!

Recommended Stories

ಬರ್ತಡೇ ಕೇಕ್ ಆರ್ಡರ್ ಮಾಡಿದರೆ, ಡೆತ್ ಡೇ ಕೇಕ್ ಕೊಟ್ಟ ರೆಸಾರ್ಟ್; ಕೀಟ, ಬೂಸ್ಟ್ ಕಟ್ಟಿದ ಕೇಕ್ ತಿಂದವರು ಹರೋಹರ!
ಇಡೀ ದೇಶ ಆಗಸ್ಟ್ 15ಕ್ಕೆ ಸ್ವತಂತ್ರ ದಿನಾಚರಣೆ ಆಚರಿಸಿದರೆ, ಈ ಊರಿಲ್ಲಿ ಆಗಸ್ಟ್ 16ಕ್ಕೆ ಆಚರಿಸುತ್ತಾರೆ, ಗೊತ್ತಾ?