Mumbai Viral Video: 'ನಾನೂ ಹ್ಯಾಂಡಿಕ್ಯಾಪ್, ನನಗೂ ದುಡ್ಡು ಕೊಡು!' ವಿದೇಶಿಗನಿಗೆ ಮಹಿಳೆ ಅವಾಜ್! ಮುಂದೇನಾಯ್ತು ನೋಡಿ!

Published : Aug 19, 2026, 03:43 PM IST
Mumbai Woman Confronts Foreigner for Giving Money to Disabled Man

ಸಾರಾಂಶ

ಮುಂಬೈನಲ್ಲಿ ವಿದೇಶಿ ಪ್ರಜೆಯೊಬ್ಬರು ವಿಕಲಚೇತನ ವ್ಯಕ್ತಿಗೆ ₹100 ಕೊಟ್ಟಿದ್ದಕ್ಕೆ ಮಹಿಳೆಯೊಬ್ಬರು ಜಗಳಕ್ಕಿಳಿದಿದ್ದಾರೆ. "ನಾನೂ ಹ್ಯಾಂಡಿಕ್ಯಾಪ್, ನನಗೂ ಸಹಾಯ ಬೇಕು" ಎಂದು ಪಟ್ಟು ಹಿಡಿದಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕವಾಗಿ ದಾನ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ.

ಮುಂಬೈನಲ್ಲಿ ಈ ವಾರ ವಿಚಿತ್ರ ಘಟನೆಯೊಂದು ನಡೆದಿದೆ. ವಿದೇಶಿ ವ್ಲಾಗರ್ ಒಬ್ಬರು ದಿವ್ಯಾಂಗ ವ್ಯಕ್ತಿಯೊಬ್ಬರಿಗೆ ₹100 ಸಹಾಯ ಮಾಡಿದ್ದರು. ಇದನ್ನು ನೋಡಿದ ಮಹಿಳೆಯೊಬ್ಬರು ತಕ್ಷಣವೇ ಮಧ್ಯಪ್ರವೇಶಿಸಿ, 'ನಾನೂ ಹ್ಯಾಂಡಿಕ್ಯಾಪ್, ನನಗೂ ಹಣಕಾಸಿನ ಸಹಾಯ ಮಾಡು' ಎಂದು ವಿದೇಶಿಗನೊಂದಿಗೆ ರಂಪಾಟ ಮಾಡಿದ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ದಾನ ಮಾಡುವುದು ಮತ್ತು ಕರುಣೆ ತೋರುವ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಮುಂಬೈನ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತನ್ನ ಪ್ರಯಾಣದ ಅನುಭವಗಳನ್ನು ದಾಖಲಿಸುವ ಈ ವಿದೇಶಿ ವ್ಲಾಗರ್, ದೈಹಿಕವಾಗಿ ಅಸಹಾಯಕರಾಗಿದ್ದ ವ್ಯಕ್ತಿಯೊಬ್ಬರಿಗೆ ₹100 ನೀಡಿದ್ದಾರೆ. ಹಣ ಕೈ ಸೇರುವ ಮುನ್ನವೇ ಆ ಮಹಿಳೆ ಮುಂದೆ ಬಂದು 'ನನಗೂ ಊಟ, ಔಷಧಿಗೆ ತಕ್ಷಣ ಹಣ ಬೇಕು, ನನಗೂ ಸಹಾಯ ಮಾಡಿ' ಎಂದು ಏರುದನಿಯಲ್ಲಿ ವಾದಿಸಿದ್ದಾರೆ. ದಿವ್ಯಾಂಗನಿಗೆ ಒಂದು ಸಣ್ಣ ಸಹಾಯ ಮಾಡಲು ಹೋಗಿ ದೊಡ್ಡ ರಂಪಾಟವೆ ನಡೆದುಹೋಗಿದೆ.

ಈ ವಿಡಿಯೋ ಹಂಚಿಕೊಂಡ ವ್ಲಾಗರ್, ಮುಂಬೈನಲ್ಲಿ ಈ ವ್ಯಕ್ತಿಯನ್ನು ನೋಡಿದಾಗ, ಅವರಿಗೆ ನಿಜವಾಗಿಯೂ ಸಹಾಯದ ಅಗತ್ಯವಿದೆ ಎಂದು ನನಗೆ ಅನಿಸಿತು. ಹಾಗಾಗಿ ₹100 ಕೊಟ್ಟೆ. ಆಗ ಇನ್ನೊಬ್ಬ ಮಹಿಳೆ ನನ್ನೊಂದಿಗೆ ವಾದ ಮಾಡಲು ಶುರುಮಾಡಿದರು... ಪರಿಸ್ಥಿತಿ ಬೇಗನೆ ಕೈಮೀರಿ ಹೋಯಿತು. ಕೊನೆಗೆ ನಾನು ಆ ವ್ಯಕ್ತಿಗೆ ಮತ್ತೆ ₹100 ಕೊಟ್ಟೆ. ನೀವಾಗಿದ್ದರೆ ಏನು ಮಾಡುತ್ತಿದ್ದಿರಿ?' ಎಂದು ಬರೆದುಕೊಂಡಿದ್ದಾರೆ.

ಆ ಮಹಿಳೆ ಕೇವಲ ತನಗಾಗಿ ವಾದ ಮಾಡಿದ್ದಲ್ಲ, ವ್ಲಾಗರ್‌ನಿಂದ ಸಹಾಯ ಪಡೆದ ವಿಕಲಚೇತನ ವ್ಯಕ್ತಿಯ ಮೇಲೆ ಗಂಭೀರ ಆರೋಪವನ್ನೂ ಮಾಡಿದ್ದಾರೆ. 'ಅವನು ಭಿಕ್ಷೆ ಬೇಡಿ ದಿನಕ್ಕೆ ₹2000 ಸಂಪಾದಿಸುತ್ತಾನೆ' ಎಂದು ಆ ಮಹಿಳೆ ಆರೋಪಿಸಿದ್ದಾರೆ. ಆತ ನಿಜವಾದ ಸಂತ್ರಸ್ತನಲ್ಲ, ಜನರ ಅನುಕಂಪವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ

ಈ ವೈರಲ್ ವಿಡಿಯೋ ನೋಡಿ ನೆಟಿಜನ್ ಸುಮ್ಮನಿರಬೇಕು. ಸೋಷಿಯಲ್ ಮೀಡಿಯಾದ್ಲಲೂ ಪರ ವಿರೋಧ ಚರ್ಚೆಗಳು ನಡೆದಿವೆ.

ವ್ಲಾಗರ್ ಆ ವ್ಯಕ್ತಿಗೆ ಮತ್ತೆ 100 ರೂಪಾಯಿ ನೀಡಿದ್ದಾರೆ. ಇದಕ್ಕೆ ಒಬ್ಬ ಬಳಕೆದಾರ, 'ಚಲಿಸಲಾಗದ ಮನುಷ್ಯ vs ಚಲಿಸಬಲ್ಲ ಮಹಿಳೆ' ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು, ತನ್ನ ಈ ಪರಿಸ್ಥಿತಿಗೆ ಆತನೇ ಕಾರಣ ಎಂಬಂತೆ ಆಕೆ ವರ್ತಿಸುತ್ತಿದ್ದಾಳೆ. ಹಣ ಕೇಳಲು ಇಷ್ಟೊಂದು ಜೋರಾಗಿ ಧ್ವನಿ ಎತ್ತುವ ಧೈರ್ಯ ನೋಡಿ' ಎಂದು ಬರೆದಿದ್ದಾರೆ.

ಮತ್ತೊಬ್ಬರು, 'ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಿಯೂ ಆ ಮಹಿಳೆ ಭಿಕ್ಷೆ ಬೇಡುತ್ತಾ, ತಾನು ಹ್ಯಾಂಡಿಕ್ಯಾಪ್ ಎನ್ನುತ್ತಾರೆ. ಭಾರತೀಯರಿಗೂ ಭಾರತ ಸರಿ ಇಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

ತನ್ನ ಕಾಲುಗಳನ್ನು ಕಿವಿಯ ಪಕ್ಕ ಇಟ್ಟುಕೊಂಡಿರುವ ವ್ಯಕ್ತಿಗಿಂತ ತಾನೇ ಹೆಚ್ಚು ಅಂಗವಿಕಲೆ ಎಂದು ಆಕೆ ವಾದಿಸುತ್ತಿರುವುದನ್ನು ನಂಬಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.

PREV
Read more Articles on
click me!

Recommended Stories

ಕೇವಲ 46 ಪೈಸೆ ಕಮ್ಮಿ ಕಟ್ಟಿದ್ದಕ್ಕೆ ₹1,200 ದಂಡ! HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕನ ಪೋಸ್ಟ್ ವೈರಲ್
ಬೆಂಗಳೂರಲ್ಲಿ ಸಲೂನ್‌ ತೆರೆದು ಲಕ್ಷ ಲಕ್ಷ ಗಳಿಸುವ ಕ್ಷೌರಿಕ; ಎದ್ದು-ಬಿದ್ದು ಕೆಲಸ ಮಾಡೋ ಟೆಕ್ಕಿಗಳಿಗಿಂತ ಇವರೇ ವಾಸಿ!