ಬೆಂಗಳೂರಲ್ಲಿ ಸಲೂನ್‌ ತೆರೆದು ಲಕ್ಷ ಲಕ್ಷ ಗಳಿಸುವ ಕ್ಷೌರಿಕ; ಎದ್ದು-ಬಿದ್ದು ಕೆಲಸ ಮಾಡೋ ಟೆಕ್ಕಿಗಳಿಗಿಂತ ಇವರೇ ವಾಸಿ!

Published : Aug 19, 2026, 03:08 PM IST
Bengaluru barber Shop

ಸಾರಾಂಶ

ಬೆಂಗಳೂರಿನ ಸಲೂನ್‌ಗೆ ಹೋದಾಗ, ಅಲ್ಲಿನ ಮಾಲೀಕ ತಿಂಗಳಿಗೆ ₹1 ಲಕ್ಷಕ್ಕೂ ಹೆಚ್ಚು ನಿವ್ವಳ ಲಾಭ ಗಳಿಸುವುದನ್ನು ಕೇಳಿ ಆಶ್ಚರ್ಯಚಕಿತಳಾಗಿದ್ದಾಳೆ. ಸಾಮಾನ್ಯ ಕ್ಷೌರಿಕನಾಗಿ ವೃತ್ತಿ ಆರಂಭಿಸಿ ಇಂದು ನಾಲ್ಕು ಸಲೂನ್‌ಗಳ ಮಾಲೀಕರಾಗಿರುವ ಇವರ ಯಶೋಗಾಥೆ, ಟೆಕ್ ಸ್ಟಾರ್ಟಪ್‌ಗಳಿಗಿಂತ ಸಾಂಪ್ರದಾಯಿಕ ಬ್ಯುಸಿನೆಸ್‌ಗಳೇ ಹೆಚ್ಚು ಲಾಭದಾಯಕವೇ ಎಂಬ ಚರ್ಚೆಯನ್ನು ರೆಡ್ಡಿಟ್‌ನಲ್ಲಿ ಹುಟ್ಟುಹಾಕಿದೆ.

ಬೆಂಗಳೂರು (ಆ.19): ನಾವು ಸಾಮಾನ್ಯವಾಗಿ ಕಟಿಂಗ್ ಶಾಪ್ ಅಥವಾ ಸಲೂನ್‌ಗಳಿಗೆ ಹೋಗಿ ಹೇರ್ ಕಟ್ ಮಾಡಿಸಿಕೊಂಡು ಬಿಲ್ ಕೊಟ್ಟು ಬರುತ್ತೇವೆ. ಆದರೆ, ಬೆಂಗಳೂರಿನ ಯುವತಿಯೊಬ್ಬಳು ಸಲೂನ್‌ಗೆ ಹೋದಾಗ ಅಲ್ಲಿನ ಮಾಲೀಕನ ತಿಂಗಳ ಆದಾಯ ಮತ್ತು ಬ್ಯುಸಿನೆಸ್ ಮಾಡೆಲ್ ಕೇಳಿ ದಂಗಾಗಿದ್ದಾಳೆ! ಐಟಿ ಸಿಟಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗಿಂತಲೂ ಅಧಿಕ ಲಾಭ ಗಳಿಸುತ್ತಿರುವ ಸಲೂನ್ ಮಾಲೀಕರೊಬ್ಬರ ಯಶೋಗಾಥೆ ಇದೀಗ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ (Reddit) ಭಾರಿ ಚರ್ಚೆಗೆ ನಾಂದಿ ಹಾಡಿದೆ.

ರೆಡ್ಡಿಟ್‌ನ r/indiasocial ಪೇಜ್‌ನಲ್ಲಿ ಯುವತಿಯೊಬ್ಬಳು ಹಂಚಿಕೊಂಡಿರುವ 'ನನ್ನ ಗೆಳತಿ ಹೇರ್‌ಕಟ್‌ಗೆ ಹೋಗಿ ಆಕಸ್ಮಿಕವಾಗಿ ಅದ್ಭುತ ಬ್ಯುಸಿನೆಸ್ ಮಾಡೆಲ್ ಕಂಡುಕೊಂಡಳು' ಎಂಬ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.

ಒಂದು ಸಲೂನ್‌ನಿಂದ ತಿಂಗಳಿಗೆ ₹1 ಲಕ್ಷ ನಿವ್ವಳ ಲಾಭ!:

ಆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿವರಗಳ ಪ್ರಕಾರ:

ತಿಂಗಳ ವಹಿವಾಟು (Revenue): ಬೆಂಗಳೂರಿನ ಆ ಸಲೂನ್‌ನಲ್ಲಿ ಪ್ರತಿ ತಿಂಗಳು ಸರಾಸರಿ ₹2 ಲಕ್ಷ ವಹಿವಾಟು ನಡೆಯುತ್ತದೆ.

ಖರ್ಚು-ವೆಚ್ಚಗಳು: ಅಂಗಡಿಯ ಬಾಡಿಗೆ, ಕೆಲಸಗಾರರ ಸಂಬಳ ಮತ್ತು ಕಮಿಷನ್ ಎಲ್ಲವನ್ನೂ ಕಳೆದ ನಂತರವೂ...

ನಿವ್ವಳ ಲಾಭ (Net Profit): ಮಾಲೀಕನಿಗೆ ಪ್ರತಿ ತಿಂಗಳು ₹80,000 ದಿಂದ ₹1,00,000 ರೂಪಾಯಿ ಲಾಭ ಉಳಿಯುತ್ತದೆ!

ಸಾಮಾನ್ಯ ಕ್ಷೌರಿಕನಿಂದ 4 ಸಲೂನ್‌ಗಳ ಮಾಲೀಕ!:

ಈ ಕಥೆಯ ಅಸಲಿ ತಿರುವು ಇರುವುದೇ ಇಲ್ಲಿ. ಈ ಸಲೂನ್ ಮಾಲೀಕ ಯಾವುದೇ ದೊಡ್ಡ ಬಂಡವಾಳಶಾಹಿ ಅಥವಾ ಹೂಡಿಕೆದಾರನಲ್ಲ. ಮೂಲತಃ ತಾವೇ ಸ್ವತಃ ಕ್ಷೌರಿಕನಾಗಿ ಕೆಲಸ ಆರಂಭಿಸಿದ ಇವರು, ಹಂತ-ಹಂತವಾಗಿ ಬೆಳೆದು ಇಂದು ಬೆಂಗಳೂರಿನಲ್ಲಿ ಬರೋಬ್ಬರಿ 4 ಸಲೂನ್‌ಗಳ ಮಾಲೀಕರಾಗಿದ್ದಾರೆ! ಅಂದರೆ, ನಾಲ್ಕೂ ಶಾಖೆಗಳಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ನಿವ್ವಳ ಆದಾಯ ಇವರ ಜೇಬು ಸೇರುತ್ತಿದೆ.

ಟೆಕ್ ಸ್ಟಾರ್ಟಪ್ ವರ್ಸಸ್ ಸಾಂಪ್ರದಾಯಿಕ ಬ್ಯುಸಿನೆಸ್:

ಈ ವಿಚಾರವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡ ಬಳಕೆದಾರರು, ‘ನಾವು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ, ತಿಂಗಳುಗಟ್ಟಲೆ ಕಷ್ಟಪಟ್ಟು ಟೆಕ್ ಅಥವಾ ಸಾಫ್ಟ್‌ವೇರ್ (SaaS) ಸ್ಟಾರ್ಟಪ್ ಶುರು ಮಾಡುವ ಕನಸು ಕಾಣುತ್ತೇವೆ. ಆದರೆ, ಜನರ ನಿತ್ಯಜೀವನಕ್ಕೆ ಅಗತ್ಯವಿರುವ ಇಂತಹ ಸರಳ ಆಫ್‌ಲೈನ್ ಬ್ಯುಸಿನೆಸ್‌ಗಳು ಯಾವುದೇ ಸದ್ದುಗದ್ದಲವಿಲ್ಲದೆ ಭರ್ಜರಿ ಆದಾಯ ತಂದುಕೊಡುತ್ತವೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬೋರಿಂಗ್ ಬ್ಯುಸಿನೆಸ್‌ನಲ್ಲೇ ಅತಿ ಹೆಚ್ಚು ದುಡ್ಡು!:

ಈ ಪೋಸ್ಟ್‌ಗೆ ನೆಟ್ಟಿಗರಿಂದ ಬಗೆಬಗೆಯ ಕಾಮೆಂಟ್‌ಗಳು ಹರಿದುಬಂದಿವೆ. ಒಬ್ಬರು 'ನೋಡಲು ಸಾಮಾನ್ಯವೆನಿಸುವ (Boring) ಸಾಂಪ್ರದಾಯಿಕ ಉದ್ಯಮಗಳೇ ನಿರಂತರ ಹಾಗೂ ಸ್ಥಿರವಾದ ಆದಾಯವನ್ನು ತಂದುಕೊಡುತ್ತವೆ. 'ಜಾವೇದ್ ಹಬೀಬ್ ಸೇರಿದಂತೆ ದೇಶದ ದೊಡ್ಡ ದೊಡ್ಡ ಸಲೂನ್ ಬ್ರ್ಯಾಂಡ್‌ಗಳು ಬೆಳೆದಿದ್ದೇ ಇದೇ ಬ್ಯುಸಿನೆಸ್ ಮಾಡೆಲ್ ಮೂಲಕ. ಇದು ಕ್ಷೌರಿಕ ಸಮುದಾಯದ ಬುದ್ಧಿವಂತಿಕೆ' ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಕೇವಲ ಕಾರ್ಪೊರೇಟ್ ಅಥವಾ ಟೆಕ್ ಕ್ಷೇತ್ರದಲ್ಲಷ್ಟೇ ಅಲ್ಲದೆ, ಸರಿಯಾದ ನಿರ್ವಹಣೆ ಮತ್ತು ಪರಿಶ್ರಮವಿದ್ದರೆ ಸರಳ ಕಾಯಕಗಳಲ್ಲೂ ಬೃಹತ್ ಯಶಸ್ಸು ಮತ್ತು ಆದಾಯ ಗಳಿಸಬಹುದು ಎಂಬುದಕ್ಕೆ ಬೆಂಗಳೂರಿನ ಈ ಸಲೂನ್ ಮಾಲೀಕ ಸಾಕ್ಷಿಯಾಗಿದ್ದಾರೆ.

PREV
Read more Articles on
click me!

Recommended Stories

'ಬ್ರೇಕಪ್‌ ಸತ್ಯ' ಎಂದ ಅನುಪಮಾ ಆರೋಪಕ್ಕೆ ಎಕ್ಸ್‌-ಬಾಯ್‌ಫ್ರೆಂಡ್‌ ನಟ ಧ್ರುವ ವಿಕ್ರಮ್ ಹೇಳಿರೋ 'LOVE' ಸೀಕ್ರೆಟ್ ಇದು..!
10:15 ಆದ್ರೂ ಬೆಂಗಳೂರು ಆಫೀಸಲ್ಲಿ ಒಬ್ರೂ ಇಲ್ವಲ್ಲಪ್ಪಾ! ಫೋಟೋ ಹಂಚಿಕೊಂಡು ಸಿಇಒ ಹೇಳಿದ್ದೇನು ಗೊತ್ತಾ?