ಮುಂಬೈನಿಂದ ಚೆನ್ನೈಗೆ ರಾಯಚೂರು ಮಾರ್ಗದಲ್ಲಿ 1500 ಕಿ.ಮೀ ಟ್ರಕ್‌ ರೈಡ್‌, 90 ಸಾವಿರ ರೂಪಾಯಿ ಬಾಡಿಗೆಯಲ್ಲಿ ಡ್ರೈವರ್‌ಗೆ ಉಳಿದಿದ್ದು ಎಷ್ಟು?

Published : Oct 27, 2026, 04:45 PM IST
Mumbai Chennai Truck Raid

ಸಾರಾಂಶ

ಮುಂಬೈನಿಂದ ಚೆನ್ನೈಗೆ 1,450 ಕಿ.ಮೀ. ಟ್ರಕ್ ಓಡಿಸಿದ ಚಾಲಕ ಸುರೇಶ್ ರಾಥೋಡ್ ತಮ್ಮ ಪ್ರಯಾಣದ ಆದಾಯ ಮತ್ತು ಖರ್ಚಿನ ಲೆಕ್ಕಾಚಾರವನ್ನು ಹಂಚಿಕೊಂಡಿದ್ದಾರೆ. ಈ ಟ್ರಿಪ್‌ನಿಂದ ಅವರಿಗೆ ಒಟ್ಟು ₹90,000 ಬಾಡಿಗೆ ಸಿಕ್ಕಿದ್ದು, ಡೀಸೆಲ್ ಮತ್ತು ಟೋಲ್ ಖರ್ಚು ಕಳೆದು ಉತ್ತಮ ಲಾಭ ಗಳಿಸಿದ್ದಾರೆ.

ಮುಂಬೈ (ಅ.27): ಸುಮಾರು 1,500 ಕಿಲೋಮೀಟರ್‌ಗಳಷ್ಟು ಸುದೀರ್ಘ ದೂರ ಟ್ರಕ್ ಓಡಿಸುವುದು ಸಣ್ಣ ಮಾತಲ್ಲ. ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸರಕುಗಳನ್ನು ತಲುಪಿಸುವಲ್ಲಿ ಟ್ರಕ್ ಚಾಲಕರ ಶ್ರಮ ಅಳತೆಗೆ ಮೀರಿದ್ದು. ಪ್ರತಿಯೊಂದು ವಸ್ತುವೂ ಪ್ರತಿಯೊಂದು ಜಾಗದಲ್ಲೂ ಸಿಗುವುದಿಲ್ಲವಾದ್ದರಿಂದ, ನಮಗೆ ಬೇಕಾದ ಸಾಮಗ್ರಿಗಳನ್ನು ತರಿಸಿಕೊಳ್ಳಲು ಲಾರಿಗಳೇ ಮುಖ್ಯ ಆಸರೆ. ಸದಾ ರಸ್ತೆಯಲ್ಲೇ ಸಂಚರಿಸುವ ಈ ಸುದೀರ್ಘ ಪ್ರಯಾಣದ ಟ್ರಕ್ ಚಾಲಕರ ನಿಜವಾದ ಆದಾಯ ಹಾಗೂ ಖರ್ಚು-ವೆಚ್ಚಗಳು ಹೇಗಿರುತ್ತವೆ ಎನ್ನುವುದನ್ನು ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಹಾಗೂ ಚಾಲಕರಾದ ಸುರೇಶ್ ರಾಥೋಡ್ ರೋಚಕವಾಗಿ ವಿವರಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ನಿರಂತರವಾಗಿ ತಮ್ಮ ಲಾರಿ ಪ್ರಯಾಣದ ವ್ಲಾಗ್‌ಗಳನ್ನು ಹಂಚಿಕೊಳ್ಳುವ ಸುರೇಶ್, ಇತ್ತೀಚೆಗೆ ಮುಂಬೈನಿಂದ ತಮಿಳುನಾಡಿನ ಚೆನ್ನೈಗೆ ನಡೆಸಿದ 1,450 ಕಿಲೋಮೀಟರ್ ಟ್ರಿಪ್‌ನ ಪೂರ್ಣ ಲೆಕ್ಕಾಚಾರವನ್ನು ಬಹಿರಂಗಪಡಿಸಿದ್ದಾರೆ.

1,450 ಕಿ.ಮೀ. ಟ್ರಿಪ್‌ಗೆ ಸಿಕ್ಕ ಬಾಡಿಗೆ ₹90,000

ಸುರೇಶ್ ನೀಡಿದ ಮಾಹಿತಿಯಂತೆ, ಅವರು ಮುಂಬೈನಲ್ಲಿ ಸಂಪೂರ್ಣ ಸರಕನ್ನು ಟ್ರಕ್‌ಗೆ ಲೋಡ್ ಮಾಡಿಕೊಂಡು 1,450 ಕಿಲೋಮೀಟರ್ ದೂರದ ಚೆನ್ನೈಗೆ ಪ್ರಯಾಣ ಬೆಳೆಸಿದರು. ಈ ಬೃಹತ್ ಟ್ರಿಪ್‌ಗಾಗಿ ಕಂಪನಿಯು ಅವರಿಗೆ ಒಟ್ಟು ₹90,000 ಬಾಡಿಗೆ (Rent) ನಿಗದಿಪಡಿಸಿತ್ತು.

ಮುಂಬೈನಿಂದ ಹೊರಟ ಅವರು ಇಡೀ ಹಾದಿಯಲ್ಲಿ ಪಾವತಿಸಿದ ಒಟ್ಟು ಟೋಲ್ (Toll charges) ವೆಚ್ಚ ₹5,000. ಮಹಾರಾಷ್ಟ್ರದಿಂದ ಕರ್ನಾಟಕದ ಗಡಿ ದಾಟುವಾಗ ಟ್ರಕ್‌ನ ಡೀಸೆಲ್ ಟ್ಯಾಂಕ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿಸಿಕೊಂಡಿದ್ದು, ಅದಕ್ಕಾಗಿ ಬರೋಬ್ಬರಿ ₹30,000 ಡೀಸೆಲ್ ವೆಚ್ಚವಾಗಿದೆ. ಅದಾದ ಬಳಿಕ ರಾಯಚೂರು ಮಾರ್ಗವಾಗಿ ಅವರು ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕಡೆಗೆ ಪ್ರಯಾಣ ಮುಂದುವರಿಸಿದರು.

ಖರ್ಚು ಕಳೆದು ಸಿಕ್ಕ ನಿವ್ವಳ ಲಾಭ ಎಷ್ಟು?

ಕರ್ನಾಟಕದ ಭೀಮಾ ನದಿಯ ಮೇಲ್ಸೇತುವೆಯ (Flyover) ಮೂಲಕ ಸಾಗಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಂತ್ರಾಲಯದ ಹಾದಿಯಾಗಿ ಅವರು ಚೆನ್ನೈನ ಗಮ್ಯಸ್ಥಾನದ ಕಂಪನಿಗೆ ತಲುಪಿ ಸರಕನ್ನು ಅನ್‌ಲೋಡ್ ಮಾಡಿದರು. ಈ ಇಡೀ ಪ್ರಯಾಣದ ಅವಧಿಯಲ್ಲಿ ತಮ್ಮ ಊಟ-ತಿಂಡಿ ಹಾಗೂ ವೈಯಕ್ತಿಕ ಖರ್ಚಿಗಾಗಿ ಒಟ್ಟು ₹3,000 ವಿನಿಯೋಗಿಸಿದ್ದಾರೆ.

₹90,000 ಒಟ್ಟು ಆದಾಯದಲ್ಲಿ ಟೋಲ್, ಡೀಸೆಲ್ ಹಾಗೂ ಊಟದ ವೆಚ್ಚ ಸೇರಿದಂತೆ ಒಟ್ಟು ರಸ್ತೆ ಖರ್ಚು ₹40,000 ಆಗಿದೆ. ಅಂತಿಮವಾಗಿ ತಮ್ಮ ಕೈಗೆ ನಿವ್ವಳ ಲಾಭವಾಗಿ (Net Profit) ಬರೋಬ್ಬರಿ ₹50,000 ಉಳಿದಿದೆ ಎಂದು ಸುರೇಶ್ ರಾಥೋಡ್ ಹರ್ಷ ವ್ಯಕ್ತಪಡಿಸಿದ್ದಾರೆ.

76 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದ ವೀಡಿಯೊ

ಲಾರಿ ಚಾಲಕರ ಶ್ರಮ ಮತ್ತು ರಸ್ತೆ ಜೀವನಕ್ಕೆ ಸಂಬಂಧಿಸಿದ ವೀಡಿಯೊಗಳಿಗೆ ಹೆಸರುವಾಸಿಯಾಗಿರುವ ಸುರೇಶ್ ರಾಥೋಡ್ ಅವರ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಪ್ರಸ್ತುತ ಈ ವೀಡಿಯೊವನ್ನು 76 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು (Views), 3 ಲಕ್ಷಕ್ಕೂ ಅಧಿಕ ಲೈಕ್ ಬಂದಿದೆ ಹಾಗೂ ನೂರಾರು ಜನರು ಕಮೆಂಟ್ ಮಾಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಪ್ರಯಾಣ ಮತ್ತು ಆದಾಯದ ಲೆಕ್ಕಾಚಾರ ನೋಡಿ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ:

'ನನ್ನ ತಂದೆಯವರೂ ಟ್ರಕ್ ಚಾಲಕರು. ಅವರು ಹೆಚ್ಚಾಗಿ ಪಂಜಾಬ್‌ನಿಂದ ಮುಂಬೈ ಅಥವಾ ಅಹಮದಾಬಾದ್‌ಗೆ ಲಾರಿ ಓಡಿಸುತ್ತಾರೆ, ಅವರ ಶ್ರಮ ನನಗೆ ಗೊತ್ತು" ಎಂದು ಭಾವುಕರಾಗಿದ್ದಾರೆ. ಸಹೋದರ, ನಿಮ್ಮ ಟ್ರಕ್ ಎಷ್ಟು ಮೈಲೇಜ್ ನೀಡುತ್ತದೆ? ಕೇವಲ ₹30,000 ಡೀಸೆಲ್‌ನಲ್ಲಿ ಇಷ್ಟು ದೂರ ಹೇಗೆ ಸಾಗಿತು? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಲಾರಿ ಲೀಟರ್‌ಗೆ 4.8 ಕಿ.ಮೀ. ಮೈಲೇಜ್ ಕೊಡುತ್ತದೆಯೇ?" ಎಂದು ಲೆಕ್ಕಾಚಾರ ಹಾಕಿದ್ದಾರೆ. ಸುದೀರ್ಘ ಹಾದಿಯ ಶ್ರಮಕ್ಕೆ ಸಿಕ್ಕ ಈ ಲಾಭವೇನೂ ಕಡಿಮೆಯಿಲ್ಲ, ಉತ್ತಮ ಸಂಪಾದನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುರೇಶ್ ರಾಥೋಡ್ ಅವರು ಆಗಾಗ ಇಂತಹ ಸಾಹಸಮಯ ಬೃಹತ್ ಟ್ರಿಪ್‌ಗಳನ್ನು ಮಾಡುತ್ತಾ, ಭಾರತದ ಸಾರಿಗೆ ರಂಗದ ಚಾಲಕರ ಶ್ರಮ ಹಾಗೂ ಗಳಿಕೆಯ ನೈಜ ಚಿತ್ರಣವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ.

PREV
Read more Articles on
click me!

Recommended Stories

1 ಕಿ.ಮೀ ಆಳಕ್ಕೆ ಬೋರ್‌ವೆಲ್ ಕೊರೆದರೆ ಏನಾಗುತ್ತದೆ? 40 ವರ್ಷದಿಂದ ಭೂಮಿಯಿಂದ ಉಕ್ಕುತ್ತಿದೆ ಬಿಸಿ ನೀರು!
50 ಲಕ್ಷದ ಕಾರು 50 ಸೆಕೆಂಡ್​ನಲ್ಲಿ ಮಾಯ: ಕುಂಟುತ್ತ ಬಂದ, ಎಗರಿಸಿಕೊಂಡು ಹೋದ- ಶಾಕಿಂಗ್​ ವಿಡಿಯೋ ವೈರಲ್