ಮಧ್ಯರಾತ್ರಿ ಸೊಸೆಯ ಬೆಡ್ ರೂಮಿಗೆ ಬಂದುಹೋಗುವ ಅತ್ತೆ; ನಿಮ್ಮನೆಲೂ ಹಿಂಗೇನಾ ಎಂದ ನೆಟ್ಟಿಗರು!

Published : Jun 03, 2025, 08:07 PM IST
Viral Video Part

ಸಾರಾಂಶ

ರಾತ್ರಿ ವೇಳೆ ಮಗ-ಸೊಸೆ ಮಲಗಿದ್ದಾಗ ಅತ್ತೆ ಕೋಣೆಗೆ ನುಸುಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅತ್ತೆಯ ನಡೆಯನ್ನು ಕಂಡು ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.

ಮದುವೆಯಾದ ನಂತರ ಹೆಣ್ಣುಮಕ್ಕಳಿಗೆ ಅತ್ತೆ ಅಂದರೆ ಒಂಥರಾ ಭಯ ಭಕ್ತಿ ಇರುತ್ತದೆ. ಭಾರತೀಯ ಸಂಪ್ರದಾಯಲ್ಲಿ ಅತ್ತೆ-ಸೊಸೆ ಜಗಳ ಅಂತೂ ಕಾಮನ್. ಆದರೆ ಈ ಸೊಸೆ ಮಾತ್ರ ತನ್ನ ಅತ್ತೆಯ ಬಗ್ಗೆ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ.

ಜನವರಿಯಲ್ಲಿ ಹಾಕಿದ್ದ ವಿಡಿಯೋ ಇನ್‌ಸ್ಟಾಗ್ರಾಮ್, ಎಕ್ಸ್‌ನಲ್ಲಿ ವೈರಲ್ ಆಗಿದೆ. ಆದರೆ, ಈ ವಿಡಿಯೋ ವೈರಲ್ ಆಗುತ್ತಾ ಆಗುತ್ತಾ ಇನ್‌ಸ್ಟಾಗ್ರಾಮ್ ಮತ್ತು ಟ್ವಿರ್ ಖಾತೆಗಳಲ್ಲಿ ಬೇರೆಯದೇ ಅರ್ಥ ಬರುವಂತೆ ಮಾರ್ಪಾಡಾಗಿದೆ. ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೇವಲ ಒಂದು ಚಿತ್ರ ಮಾತ್ರ ಬಳಸಲಾಗಿದೆ. ನೀವು ನೋಡುತ್ತಿರುವ ಚಿತ್ರದಲ್ಲಿ ಒಬ್ಬ ಮಹಿಳೆ ಮಲಗಿರುವ ತನ್ನ ಗಂಡನೊಂದಿಗೆ ತಬ್ಬಿಕೊಂಡು ಮಲಗಿರುವುದನ್ನು ನೀವು ನೋಡಬಹುದು. ಜೊತೆಗೆ ಇದೇ ಫೋಟೋದ ಒಂದು ಪಕ್ಕದಲ್ಲಿ ಮಹಿಳೆಯೊಬ್ಬರು ನಿಂತು ಮಲಗಿದವರನ್ನು ನೋಡುತ್ತಿರುವುದನ್ನು ಕಾಣಬಹುದು.

ರಾತ್ರಿಯಲ್ಲಿ ದಂಪತಿಗಳು ಮಲಗಿದ್ದಾಗ ಅತ್ತೆ ಕೋಣೆಗೆ ನುಸುಳುತ್ತಿರುವ ವಿಡಿಯೋವನ್ನು ಸೊಸೆ ಹಂಚಿಕೊಂಡಿದ್ದಾರೆ' ಈ ಪೋಸ್ಟ್‌ಗೆ ಶೀರ್ಷಿಕೆ ಬರೆಯಲಾಗಿತ್ತು. ಮಗ-ಸೊಸೆ ಕೋಣೆಯಲ್ಲಿ ಮಲಗಿದ್ದಾಗ ಎಂಬುದನ್ನು ನೋಡುವುದಕ್ಕೆ ಅತ್ತೆ ಬಂದಿದ್ದಾರೆ. ಇಂತಹ ಅತ್ತೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದರು. ತನ್ನ ಮಗನೊಂದಿಗೆ ಸೊಸೆ ಮಲಗಿದ್ದನ್ನು ನೋಡುತ್ತಾ ಅತ್ತೆಯೇ ತಮ್ಮ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ಕೆಲವರು ಬರೆದಿದ್ದಾರೆ. ಆದರೆ ವಾಸ್ತವ ಬೇರೆಯದೇ ಆಗಿತ್ತು.

ಈ ವಿಡಿಯೋ ಮೊದಲು ಚೀನಾದ ಸಾಮಾಜಿಕ ಮಾಧ್ಯಮ ತಾಣ ಡೌಯಿನ್‌ನಲ್ಲಿ ಶೇರ್ ಆಗಿತ್ತು. ಪ್ರತಿದಿನ ರಾತ್ರಿ ಗಂಡ-ಹೆಂಡತಿ ಮಲಗಿದಾಗ ತಮ್ಮ ಬೆಡ್ ರೂಮಿಗೆ ಯಾರೋ ಬಂದು ಹೋದಂತೆ ಅಥವಾ ಪ್ರೇತ ಬಂದು ಹೋದಂತೆ ಭಾಸವಾಗುತ್ತಿದ್ದಂತೆ. ಆದ್ದರಿಂದ ಭಯಗೊಂಡ ಸೊಸೆ ಗಂಡನಿಗೆ ಹೇಳಿ ತಮ್ಮ ರೂಮ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದರಂತೆ. ಆದರೆ, ಸಿಸಿಟಿವಿಯಲ್ಲಿ ಅತ್ತೆ ಕಾಣಿಸಿಕೊಂಡಿದ್ದು ನೋಡಿ ಶಾಕ್ ಆಗಿದ್ದಾರೆ.

 

ಆದರೆ, ಈ ವಿಡಿಯೋದಲ್ಲಿ ವಾಸ್ತವವಾಗಿ ಅತ್ತೆಯು ಮಗ-ಸೊಸೆ ಮಲಗಿದ್ದ ವೇಳೆ ಮಗುವಿನ ಅಳುವನ್ನು ಕೇಳಿದ ನಂತರ ಅತ್ತೆ ಕೋಣೆಗೆ ಬಂದರು. ಮಗುವಿನ ಅಳು ತನ್ನ ಮಗ ಮತ್ತು ಸೊಸೆಯ ನಿದ್ರೆಗೆ ಭಂಗ ತರಬಾರದು ಎಂದು ಭಾವಿಸಿದ ತಾಯಿ, ರಾತ್ರಿಯಲ್ಲಿ ಮಗುವನ್ನು ಮಲಗಿಸಿ ಮತ್ತೆ ಅವರ ಕೋಣೆಗೆ ಹೋಗುತ್ತಾರೆ. ಇದಾದ ನಂತರ ವೀಡಿಯೋದ ಇತರ ಭಾಗಗಳನ್ನು ಕತ್ತರಿಸಿ ಮಹಿಳೆಯ ಫೋಟೋ ಚಿತ್ರದೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅತ್ತೆ ಸಹಾಯಕ್ಕೆ ಬರುವ ವಿಡಿಯೋ ಹಂಚಿಕೊಂಡು ಶ್ಲಾಘನೆ ತೋರಿದ್ದಾರೆ.

ಆದರೆ, ಇದೀಗ ವೈರಲ್ ಆಗಿರುವ ಫೋಟೋ, ವಿಡಿಯೋವನ್ನು ಅಪಾರ್ಥ ಮಾಡಿಕೊಳ್ಳಲು ಎಷ್ಟು ಬೇಕೋ ಅಷ್ಟು ಕತ್ತರಿಸಿ ಹಂಚಿಕೊಂಡಿದ್ದಾರೆ. ಇಲ್ಲಿ ಮೂಲವಾಗಿ ವಿಡಿಯೋ ಹಂಚಿಕೊಂಡಿರುವ ಮಹಿಳೆಯ ಉದ್ದೇಶವನ್ನೇ ತಿರುಚಿ, ಸಂಪೂರ್ಣವಾಗಿ ಭಿನ್ನವಾದ ಹಾಗೂ ವಿರುದ್ಧವಾದ ಉದ್ದೇಶ ಬರುವಂತೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಮಾಹಿತಿಯು ಎಷ್ಟು ದಾರಿತಪ್ಪಿಸುತ್ತದೆ ಎಂಬುದಕ್ಕೆ ಈ ವೀಡಿಯೊ ಮತ್ತೊಂದು ಉದಾಹರಣೆಯಾಗಿದೆ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್