ರೀಲ್ಸ್‌ ಮಾಡುವಾಗ ಹುಡುಗಿಯ ಮೇಲೆ ಹಠಾತ್ ದಾಳಿ ಮಾಡಿದ ಕೋತಿ, ಕೊನೆಗೇನಾಯ್ತು ನೋಡಿ..

Published : Nov 17, 2025, 03:57 PM ISTUpdated : Nov 17, 2025, 04:01 PM IST
trending viral video

ಸಾರಾಂಶ

Monkey attack video: ಕೆಲವೇ ಸೆಕೆಂಡುಗಳ ನಂತರ ಒಂದು ಸಣ್ಣ ಮಂಗ ಇದ್ದಕ್ಕಿದ್ದಂತೆ ಮರದ ಮೇಲಿನಿಂದ ಅತಿ ವೇಗದಲ್ಲಿ ಇಳಿದು ನೇರವಾಗಿ ಹುಡುಗಿಯ ಹೊಟ್ಟೆಯ ಮೇಲೆ ಬೀಳುತ್ತದೆ. ಇದೆಲ್ಲವೂ ಇದ್ದಕ್ಕಿದ್ದಂತೆ ಸಂಭವಿಸುತ್ತೆ. ಆಗ ಹುಡುಗಿ… 

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು, ಇದು ಸಿಕ್ಕಾಪಟ್ಟೆ ತಮಾಷೆಯಾಗಿದೆ. ಈ ವಿಡಿಯೋದಲ್ಲಿ ಒರ್ವ ಹುಡುಗಿ ಮರದ ಕೊಂಬೆಯ ಮೇಲೆ ಆರಾಮಾಗಿ ಮಲಗಿ ರೀಲ್ಸ್‌ ಮಾಡುವಾಗ ಕ್ಯಾಮೆರಾವನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು. ಆದರೆ ಕೆಲವೇ ಸೆಕೆಂಡುಗಳ ನಂತರ ಒಂದು ಸಣ್ಣ ಮಂಗ ಇದ್ದಕ್ಕಿದ್ದಂತೆ ಮರದ ಮೇಲಿನಿಂದ ಅತಿ ವೇಗದಲ್ಲಿ ಇಳಿದು ನೇರವಾಗಿ ಹುಡುಗಿಯ ಹೊಟ್ಟೆಯ ಮೇಲೆ ಬೀಳುತ್ತದೆ. ಇದೆಲ್ಲವೂ ಇದ್ದಕ್ಕಿದ್ದಂತೆ ಸಂಭವಿಸುತ್ತೆ. ಆಗ ಹುಡುಗಿ ತಕ್ಷಣ ಗಾಬರಿಗೊಳ್ಳುತ್ತಾಳೆ. ಅವಳ ನಗುವೂ ಮಾಯವಾಗುತ್ತದೆ. ಆಕೆ ತಕ್ಷಣ ಕೆಳಗೆ ಹಾರಿ ಜೋರಾಗಿ ಕಿರುಚುತ್ತಾಳೆ.

ಜನಪ್ರಿಯ ಪ್ರವಾಸಿ ತಾಣದಲ್ಲಿ ಆಕೆ ರೀಲ್ಸ್‌ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಸುತ್ತಲೂ ಹೆಚ್ಚು ಜನಸಂದಣಿ ಇಲ್ಲ. ಅಲ್ಲಿನ ವಾತಾವರಣ ನೋಡಿದರೆ ಕುಟುಂಬದೊಂದಿಗೆ ಭೇಟಿ ನೀಡುತ್ತಿರುವಂತೆ ಕಾಣುತ್ತದೆ. ಕೋತಿ ಸಮೀಪಿಸುತ್ತಿರುವುದನ್ನು ಅವಳು ಬಹುಶಃ ಗಮನಿಸಿರಲಿಲ್ಲ. ಅದಕ್ಕಾಗಿಯೇ ಆಕೆಯ ಪ್ರತಿಕ್ರಿಯೆ ಅಷ್ಟು ಗಾಬರಿಯಾಗಿತ್ತು.

ಕೊನೆಗೆ ಆಕೆ ಕಿರುಚುತ್ತಾ ತನ್ನ ಕುಟುಂಬದ ಕಡೆಗೆ ಓಡಿದಾಗ ನೋಡುಗರು ಆರಂಭದಲ್ಲಿ ಭಯಭೀತರಾದರೂ ನಂತರ ನಗುತ್ತಿದ್ದರು. ಅವರ ಮುಖ ನೋಡಿದರೆ ಅಲ್ಲಿನ ಪರಿಸ್ಥಿಯನ್ನ ತುಂಬಾ ತಮಾಷೆಯಾಗಿ ತೆಗೆದುಕೊಂಡಿರುವುದು ಗೊತ್ತಾಗುತ್ತದೆ. ಹುಡುಗಿ ರೀಲ್ಸ್‌ ಮಾಡುವುದರಲ್ಲಿ ತುಂಬಾ ಮಗ್ನಳಾಗಿದ್ದರಿಂದ ಅವಳ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನ ಆಕೆ ಗಮನಿಸಲಿಲ್ಲ ಎಂಬುದು ಅವರಿಗೆ ವಿಚಿತ್ರವೆನಿಸಿತು. ಕೋತಿ ಮೈ ಮೇಲೆ ಜಿಗಿದಾಗ ನಡುಗುವುದು ಸಾಮಾನ್ಯ ಮಾನವ ಪ್ರತಿಕ್ರಿಯೆ. ಆದರೆ ಅದು ಎಷ್ಟು ಬೇಗನೆ ಸಂಭವಿಸಿತು ಎಂದರೆ ನೋಡುಗರು ಸಹ ಒಂದು ಕ್ಷಣ ಬೆಚ್ಚಿಬಿದ್ದರು.

ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಬೇಗನೆ ವೈರಲ್ ಆಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು. ಜನರ ಪ್ರತಿಕ್ರಿಯೆಗಳು ಸಹ ಹಾಸ್ಯಮಯವಾಗಿದ್ದವು. "ಕೋತಿ ಇಡೀ ಚಿತ್ರೀಕರಣವನ್ನು ಹಾಳುಮಾಡಿದೆ" ಎಂದು ಯಾರೋ ತಮಾಷೆಯಾಗಿ ಹೇಳಿದರೆ, ರೀಲ್ಸ್‌ ಮೇಲಿನ ಉತ್ಸಾಹವು ಕೆಲವೊಮ್ಮೆ ಮನುಷ್ಯರಿಗೆ ಅಪಾಯವನ್ನು ಅರ್ಥಮಾಡಿಕೊಳ್ಳದ ಸಂದರ್ಭಗಳನ್ನು ಸೃಷ್ಟಿಸಬಹುದು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅನೇಕ ಜನರು ಹುಡುಗಿಗೆ ಜಾಗರೂಕರಾಗಿರಲು ಸಲಹೆ ನೀಡುತ್ತಿರುವುದು ಕಂಡುಬಂದಿದೆ. ಅಂತಹ ಸ್ಥಳಗಳಲ್ಲಿ ಪ್ರಾಣಿಗಳಿಂದ ದೂರವಿರುವುದು ಉತ್ತಮ. ಏಕೆಂದರೆ ಅವುಗಳ ನಡವಳಿಕೆ ಅನಿರೀಕ್ಷಿತವಾಗಿರುತ್ತದೆ ಎಂದೆಲ್ಲಾ ತಿಳಿಸಿದ್ದಾರೆ.

ಈ ವಿಡಿಯೋ ಮನರಂಜನೆ ಮತ್ತು ಪಾಠ ಎರಡನ್ನೂ ನೀಡುವುದರಿಂದ ಗಮನ ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಹಿರಿಯರು ರೀಲ್ಸ್‌ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಅವರು ಆಗಾಗ್ಗೆ ಸುತ್ತಮುತ್ತಲಿನ ಪ್ರದೇಶಗಳನ್ನು ಸಹ ನಿರ್ಲಕ್ಷಿಸುತ್ತಾರೆ. ವಿಶೇಷವಾಗಿ ಕಾಡು ಅಥವಾ ಪ್ರಾಣಿಗಳು ಇರುವ ಪ್ರವಾಸಿ ತಾಣಗಳಲ್ಲಿ ಸ್ವಲ್ಪ ಅಜಾಗರೂಕತೆಯು ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು. ಅಂದಹಾಗೆ ಹುಡುಗಿ ತನ್ನ ರೀಲ್ಸ್‌ನಲ್ಲಿ ಸಂಪೂರ್ಣವಾಗಿ ಮುಳುಗಿದ್ದು, ಕೋತಿ ಸಮೀಪಿಸುತ್ತಿರುವುದನ್ನು ಗಮನಿಸಲಿಲ್ಲ ಎಂಬುದನ್ನ ನಾವಿಲ್ಲಿ ನೋಡಬಹುದು.

ಇಲ್ಲಿದೆ ನೋಡಿ ವಿಡಿಯೋ 

 

ಪ್ಯಾಂಟ್ ಕಳಚಿಬಿದ್ರೂ ಡಾನ್ಸ್‌ ಮಾಡಿದ ಬಾಲಕ

ಇತ್ತೀಚೆಗಷ್ಟೇ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಅದೊಂದು ದೊಡ್ಡ ವೇದಿಕೆ. ಅಲ್ಲಿ ಕಾರ್ಯಕ್ರಮ ನಡೆಯುತ್ತಿರುತ್ತದೆ. ಒಂದೇ ರೀತಿಯ ವೇಷಭೂಷಣಗಳನ್ನು ಧರಿಸಿದ ಹುಡುಗರ ಗುಂಪು ನೃತ್ಯ ಮಾಡುತ್ತಿತ್ತು. ಇದ್ದಕ್ಕಿದ್ದಂತೆ ಓರ್ವ ಹುಡುಗನ ಪ್ಯಾಂಟ್‌ ಕಳಚಿ ಇದ್ದಕ್ಕಿದ್ದಂತೆ ಕೆಳಗೆ ಬೀಳುತ್ತದೆ. ಪ್ರೇಕ್ಷಕರು ಮೊದಲು ಶಾಕ್ ಆದರು. ಆದರೆ ನಂತರ ನಗೆಗಡಲಲ್ಲಿ ತೇಲಿದರು.

ಸದ್ದಿಲ್ಲದೆ ನೃತ್ಯ ಮುಗಿಸಿದ ಹುಡುಗ

ಪ್ಯಾಂಟ್ ಮೊಣಕಾಲಿನಿಂದ ಕೆಳಗೆ ಇಳಿದಿದ್ದರೂ ಹುಡುಗ ಯಾವುದೇ ಆತಂಕವಿಲ್ಲದೆ ತನ್ನ ನೃತ್ಯವನ್ನು ಮುಂದುವರಿಸಿದನು. ವೃತ್ತಿಪರತೆಯನ್ನ ಮೆರೆದನು. ಹುಡುಗ ಸಂಪೂರ್ಣ ಆತ್ಮವಿಶ್ವಾಸದಿಂದ ಡಾನ್ಸ್ ಮಾಡುತ್ತಾ ದೃಢನಿಶ್ಚಯದಿಂದ ಎಲ್ಲರನ್ನೂ ಮೆಚ್ಚುಗೆಗೆ ಪಾತ್ರವಾದನು.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್