ಒಂದು ಹೆಣ್ಣಾಗ್ಲಿ ಅಂತ ಪ್ರೆಗ್ನೆಂಟ್ ಆದ 3 ಗಂಡ್ಮಕ್ಕಳ ತಾಯಿಗೆ ಅಲ್ಟ್ರಾಸೌಂಡ್ ನಲ್ಲಿ ಶಾಕ್, ಈಗ ಹುಟ್ಟೋದು ಒಂದಲ್ಲ ಎರಡಲ್ಲ..!

Published : Nov 28, 2025, 05:03 PM IST
Triplets

ಸಾರಾಂಶ

ಮಹಿಳೆಯೊಬ್ಬಳ ಜೀವನದಲ್ಲಿ ಎಲ್ಲ ಪ್ಲಾನ್ ಉಲ್ಟಾ ಆಗಿದೆ. ಆಕೆ ಅಂದ್ಕೊಂಡಿದ್ದು ಒಂದು ಆಗಿದ್ದು ಇನ್ನೊಂದು. ಹೆಣ್ಣು ಮಗು ಬೇಕು ಅಂತ ನಾಲ್ಕನೇ ಮಗುವಿಗೆ ಟ್ರೈ ಮಾಡಿದ್ರೆ ಆಗಿದ್ದು ಇನ್ನೇನೋ. ಅವಳ ಕಥೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮನೆ ಅಂದ್ಮೇಲೆ ಮಕ್ಕಳಿರ್ಬೇಕು. ಹಿಂದೆ ಮನೆ ತುಂಬಾ ಮಕ್ಕಳಿರ್ತಾ ಇದ್ರು. ಈಗ ಸಂಖ್ಯೆ ಎರಡರಿಂದ ಒಂದಕ್ಕೆ ಇಳೀತಾ ಇದೆ. ಆರತಿಗೊಂದು, ಕೀರ್ತಿಗೊಂದು ಅಂತ ಎರಡು ಮಕ್ಕಳಾದ್ರೂ ಬೇಕು ಅಂತ ಹಿರಿಯರು ಸಲಹೆ ನೀಡ್ತಾರೆ. ದುಬಾರಿ ಲೈಫ್ ಸ್ಟೈಲ್ ನಲ್ಲಿ ಒಂದು ಮಗು ಸಾಕೋದೇ ಕಷ್ಟ. ಇನ್ನು ಎರಡು – ಮೂರಾದ್ರೆ ತಲೆಬಿಸಿ ಹೆಚ್ಚು. ಆದ್ರೆ ಹನ್ನಾ ಆಸೆ ಭಿನ್ನವಾಗಿತ್ತು. ಈಗಾಗಲೇ ಮೂರು ಮಕ್ಕಳ ತಾಯಿಯಾಗಿರುವ ಹನ್ನಾಗೆ ಇನ್ನೊಂದು ಹೆಣ್ಣು ಮಗು ಪಡೆಯುವ ಆಸೆ ಇತ್ತು. ತನ್ನ ಪಾರ್ಟನರ್ ಜಾಕೋಬ್ ಗೆ ಮದುವೆಗೂ ಮುನ್ನ ಇನ್ನೊಂದು ಮಗು ಆಗ್ಲಿ ಅಂತ ಹೇಳಿದ್ಲು. ಅದ್ರಂತೆ ಹನ್ನಾ ಈಗ ಪ್ರೆಗ್ನೆಂಟ್. ಆದ್ರೆ ಅಲ್ಟ್ರಾಸೌಂಡ್ ನಂತ್ರ ಹನ್ನಾ ಅಚ್ಚರಿಗೊಳಗಾಗಿದ್ದಾಳೆ.

ಮೂರು ಮಕ್ಕಳ ತಾಯಿಗೆ ಶಾಕ್ ನೀಡಿದ ಅಲ್ಟ್ರಾಸೌಂಡ್ :

ಹನ್ನಾ ಹಾಗೂ ಜಾಕೋಬ್ ಇನ್ನೂ ಮದುವೆ (marriage) ಆಗಿಲ್ಲ. ಹನ್ನಾ ಪ್ರೆಗ್ನೆಂಟ್ (pregnant) ಇನ್ನುವ ವಿಚಾರ ತಿಳಿದ್ಮೇಲೆ ಜಾಕೋಬ್ ಮದುವೆಗೆ ಪ್ರಪೋಸ್ ಮಾಡಿದ್ದಾನೆ. ಈಗಾಗಲೇ ಹನ್ನಾಗೆ 11 ವರ್ಷ, 4 ವರ್ಷ ಹಾಗೂ 1 ವರ್ಷದ ಗಂಡು ಮಕ್ಕಳಿವೆ. ನಾಲ್ಕನೇದು ಹೆಣ್ಣಾಗ್ಲಿ ಎನ್ನುವ ಕಾರಣಕ್ಕೆ ಹನ್ನಾ ಮಗು ಬಯಸಿದ್ಲು. ಅದ್ರಂತೆ ಹನ್ನಾ ಗರ್ಭಿಣಿ ಎನ್ನುವ ವಿಷ್ಯ ಗೊತ್ತಾಗಿದೆ. ಹನ್ನಾ ಹಾಗೂ ಜಾಕೋಬ್ ಖುಷಿಯಾಗಿದ್ದಾರೆ. ಇಬ್ಬರೂ ಅಲ್ಟ್ರಾಸೌಂಡ್ ಟೆಸ್ಟ್ ಗೆ ಹೋಗಿದ್ದಾರೆ. ಈ ವೇಳೆ ಹನ್ನಾ ಹೊಟ್ಟೆಯಲ್ಲಿ ಒಂದಲ್ಲ ಎರಡು ಮಗು ಇದೆ ಅನ್ನೋದು ಆರಂಭದಲ್ಲಿ ಗೊತ್ತಾಗಿದೆ. ಎರಡು ಮಗುವಾ ಅಂತ ಹನ್ನಾ ಅಚ್ಚರಿಗೊಳಗಾಗುವ ಮೊದಲೇ ಅಲ್ಟ್ರಾಸೌಂಡ್ ಪರೀಕ್ಷೆ ಮಾಡುವವರು ಶಾಕ್ ನೀಡಿದ್ದಾರೆ. ಎರಡಲ್ಲ ಮೂರು ಮಕ್ಕಳಿವೆ ಅಂದಿದ್ದಾರೆ. ಇದನ್ನು ಹನ್ನಾಗೆ ನಂಬಲು ಸಾಧ್ಯವಾಗ್ಲಿಲ್ಲ.

ಸ್ಮೃತಿ ಮಂಧನಾ-ಪಲಾಶ್‌ ಮದುವೆ ಯಾವಾಗ? ಹುಡುಗನ ತಾಯಿ ನೀಡಿದ್ರು ಬಿಗ್‌ ಅಪ್‌ಡೇಟ್‌

ಭ್ರೂಣ ಪರೀಕ್ಷೆ ವೇಳೆ ಮತ್ತೊಂದು ಆಘಾತ :

ಹೊಟ್ಟೆಯಲ್ಲಿ ಮೂರು ಮಕ್ಕಳಿವೆ ಎಂಬುದನ್ನು ಅರಗಿಸಿಕೊಳ್ಳೋದೇ ಕಷ್ಟವಾಗಿತ್ತು. ಇನ್ನು ಭ್ರೂಣ ಪರೀಕ್ಷೆ ವೇಳೆ ಹನ್ನಾಗೆ ಬಿಗ್ ಶಾಕ್ ಆಗಿದೆ. ಹೊಟ್ಟೆಯಲ್ಲಿರುವ ಮೂರೂ ಮಕ್ಕಳು ಗಂಡು ಎಂಬುದು ಗೊತ್ತಾಗಿದೆ. ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದ ಹನ್ನಾ ಪ್ಲಾನ್ ತಲೆಗೆಳಗಾಗಿದೆ.

29 ವರ್ಷದ ಹನ್ನಾ ಹಾಗೂ 34 ವರ್ಷದ ಜಾಕೋಬ್, ಎರಡು ಮಕ್ಕಳು ಎಂದಾಗ, ಒಟ್ಟೂ ಐದು ಮಕ್ಕಳನ್ನು ಹೇಗಾದ್ರೂ ಸುಧಾರಿಸಬಹುದು ಅಂದ್ಕೊಂಡಿದ್ದರು. ಅದಕ್ಕೆ ಇನ್ನೊಂದು ಆಡ್ ಆದಾಗ ಸ್ವಲ್ಪ ಆತಂಕವಾಯ್ತು. ಈಗ ಎಲ್ಲ ಆರೂ ಮಕ್ಕಳು ಗಂಡು ಎಂದಾಗ ಆತಂಕ ಡಬಲ್ ಆಯ್ತು ಎಂದು ಹನ್ನಾ ತಮ್ಮ ಟಿಕ್ ಟಾಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಹನ್ನಾ ಹೊಟ್ಟೆಯಲ್ಲಿ ಮೂರು ಮಗು ಇದೆ ಎಂಬುದನ್ನು ಕೇಳಿ ಜಾಕೋಬ್ ಆರಂಭದಲ್ಲಿ ನಕ್ಕಿದ್ದನಂತೆ. ಇದು ತಮಾಷೆ ಅಂದ್ಕೊಂಡಿದ್ದನಂತೆ. ನಂತ್ರ ಆಘಾತವಾದ್ರೂ ಅವನ ನಗು ನಿಲ್ಲಲಿಲ್ಲ. ಪರದೆ ಮೇಲೆ ಭ್ರೂಣಗಳನ್ನು ನೋಡಿ ನಾನು ಅಳ್ತಾ ಇದ್ದೆ ಅಂತ ಹನ್ನಾ ಹೇಳಿದ್ದಾಳೆ.

Aishwarya Rai ಇನ್ನು ಆಯೇಷಾ! ಮತಾಂತರಕ್ಕೆ ಸಿದ್ಧನಾಗಿ ಮದ್ವೆಗೆ ರೆಡಿಯಾದ ಈ ಮಫ್ತಿ: ಏನ್​ ಹೇಳ್ದ ಕೇಳಿ

ಹನ್ನಾ ಟಿಕ್ ಟಾಕ್ ವಿಡಿಯೋ 5.8 ಮಿಲಿಯನ್ ವೀವ್ಸ್ ಪಡೆದಿದೆ. 5 ನೂರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಅನೇಕರು ಹನ್ನಾಗೆ ಧೈರ್ಯ ತುಂಬಿದ್ದಾರೆ. ತ್ರಿವಳಿ ಮಕ್ಕಳನ್ನು ಹೊಂದಿರುವ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತ್ರಿವಳಿ ಮಕ್ಕಳನ್ನು ಹೊಂದಿರುವವರ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಈಗ ಅವರ ಸಮೂಹಕ್ಕೆ ಸೇರಿದ್ದೇನೆ. ಹೊಸ ಮಾಹಿತಿ ಪಡೆಯುತ್ತಿದ್ದೇನೆ ಎಂದು ಹನ್ನಾ ಹೇಳಿದ್ದಾಳೆ.

PREV
Read more Articles on
click me!

Recommended Stories

ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್
ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!