ಕಲಿಯುಗದ ಶ್ರವಣಕುಮಾರ, ದಿವ್ಯಾಂಗ ಪೋಷಕರಿಗೆ ಮಗಳ ಸಾಥ್‌

Published : May 02, 2026, 12:56 PM IST
Modern Shravankumar

ಸಾರಾಂಶ

Modern day Shravan Kumar : ಮಕ್ಕಳಿಗೆ ಅಪ್ಪ – ಅಮ್ಮನೇ ಎಲ್ಲ. ಅವರ ಜೊತೆ ಊರೂರು ಸುತ್ತುತ್ತೇವೆ. ಏನೇ ಬೇಕಿದ್ರೂ ಅಪ್ಪ – ಅಮ್ಮನನ್ನು ಕೇಳ್ತೇವೆ. ಆದ್ರೆ ಕೆಲ ಮಕ್ಕಳು ಅಪ್ಪ ಅಮ್ಮನಿಗೆ ಆಸರೆಯಾಗ್ತಾರೆ. ಸಣ್ಣವರಿರುವಾಗ್ಲೇ ಜವಾಬ್ದಾರಿ ತೆಗೆದುಕೊಂಡು ಎಲ್ಲರ ಮೆಚ್ಚುಗೆ ಗಳಿಸ್ತಾರೆ. ಅದಕ್ಕೆ ಈ ವೈರಲ್ ವಿಡಿಯೋ ಉತ್ತಮ ನಿದರ್ಶನ. 

ಕ್ಕಳು ದೊಡ್ಡವರಾದ್ಮೇಲೆ ನಮ್ಮನ್ನು ಸಾಕ್ತಾರೆ ಎನ್ನುವ ಬಲವಾದ ನಂಬಿಕೆ ಪಾಲಕರಲ್ಲಿರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮದ ಸಂಖ್ಯೆ ಹೆಚ್ಚಾಗ್ತಿದೆ. ಕೆಲ ಮಕ್ಕಳು, ಪಾಲಕರನ್ನು ಬೀದಿಗೆ ತಳ್ತಿದ್ದಾರೆ. ಆದ್ರೆ ಈ ಬಾಲಕಿ ಮಾತ್ರ ಈಗ್ಲೇ ಅಪ್ಪ ಅಮ್ಮನ ಆಸೆ ಈಡೇರಿಸ್ತಿದ್ದಾಳೆ. ದಿವ್ಯಾಂಗ ದಂಪತಿಗೆ ಮಗಳೇ ಕಲಿಯುಗದ ಶ್ರವಣಕುಮಾರನಾಗಿದ್ದಾಳೆ.

ಅಪ್ಪ – ಅಮ್ಮನಿಗೆ ಮಗಳೇ ಆಸ್ತಿ

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಫೋಟೋಗ್ರಾಫರ್ ಒಬ್ಬರು ಆದಿಯೋಗಿಯಲ್ಲಿ ಒಂದು ಮುದ್ದಾದ ಫ್ಯಾಮಿಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಎಲ್ಲರ ಮನಸ್ಸಿಗೆ ನಾಟಿದೆ. ಅಪ್ಪ ಹಾಗೂ ಅಮ್ಮ ಇಬ್ಬರಿಗೂ ಮಾತು ಬರೋದಿಲ್ಲ. ಕಿವಿ ಕೂಡ ಕೇಳಿಸೋದಿಲ್ಲ. ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ದೊಡ್ಡ ಮಗಳೇ ಈಗ ತಂದೆ ತಾಯಿಯ ಕಿವಿ – ಬಾಯಿ.

ವರ್ಷ 41 ಆದ್ರೂ ಮನೆಯಲ್ಲಿ ಮದುವೆ ಮಾಡ್ತಿಲ್ಲ, ವರನನ್ನು ಹುಡುಕಿಕೊಡಿ –ಪೊಲೀಸರಿಗೆ ಮಹಿಳೆ ಮನವಿ

ಒಡಿಸಾದಿಂದ ಬೆಂಗಳೂರಿಗೆ ಅವರು ಬಂದಿದ್ದಾರೆ. ಬೆಂಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡ್ತಿರುವ ಅವರು ಆದಿಯೋಗಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಫೋಟೋಗ್ರಾಫರ್ ಅವರನ್ನು ಪ್ರಶ್ನೆ ಮಾಡಿದಾಗ, ಇಬ್ಬರೂ ಕೈ ಸನ್ನೆ ಮಾಡಿ ತೋರಿಸಿದ್ದಾರೆ. ನಮಗೆ ಮಾತು ಬರೋದಿಲ್ಲ ಅಂತ ತಂದೆ ಹೇಳಿದ್ರೆ, ಕಿವಿ ಕೂಡ ಕೇಳಿಸೋದಿಲ್ಲ ಅಂತ ತಾಯಿ ಸನ್ನೆ ಮಾಡಿದ್ದಾರೆ. ಅಲ್ದೆ ಮಗಳ ಕಡೆ ಕೈ ತೋರಿಸಿದ್ದಾರೆ. ಅಲ್ಲಿಗೆ ಬಂದ ಮಗಳು, ಎಲ್ಲ ಜವಾಬ್ದಾರಿ ವಹಿಸಿಕೊಂಡು ಮಾತನಾಡಿದ್ದಾಳೆ. ಸುಮಾರು ಆರೇಳು ವರ್ಷದ ಈ ಬಾಲಕಿ ಹೆಸರು ಲಿಪ್ಸಾ. ಅವರ ತಾಯಿ ಗೃಹಿಣಿ. ತಂದೆ ಬ್ಯಾಂಕ್ ನಲ್ಲಿ ಕೆಲ್ಸ ಮಾಡ್ತಾರೆ. ಈ ಎಲ್ಲ ಮಾಹಿತಿಯನ್ನು ಲಿಪ್ಸಾ ನೀಡಿದ್ದಾಳೆ.

ಬಾಲಕಿಗೆ ಪ್ರೀತಿಯ ಮಳೆ

ಬಾಲಕಿ ಪ್ರೌಢತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಎಲ್ಲ ಜವಾಬ್ದಾರಿಯನ್ನು ಮಗಳು ವಹಿಸಿಕೊಂಡಂತಿದೆ. ದೊಡ್ಡವಳಾದ್ಮೇಲೆ ಪಾಲಕರು ಹೆಮ್ಮೆ ಪಡುವ ಕೆಲ್ಸವನ್ನು ಈಕೆ ಮಾಡ್ತಾಳೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ಅಪ್ಪ- ಅಮ್ಮನನ್ನು ಮಾತ್ರವಲ್ಲ ತಮ್ಮನನ್ನೂ ಅತಿ ಕಾಳಜಿಯಿಂದ ನೋಡಿಕೊಳ್ತಿರುವ ಲಿಪ್ಸಾ ಕುಟುಂಬ ಸದಾ ಖುಷಿಯಾಗಿರಲಿ ಅಂತ ನೆಟ್ಟಿಗರು ಹರಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂಥ ವಿಡಿಯೋ, ಕಥೆಗಳು ಅಪರೂಪಕ್ಕೆ ವೈರಲ್ ಆಗ್ತಿರುತ್ತವೆ. ಇಂಥ ಮಕ್ಕಳನ್ನು ನೋಡಿ ನೆಟ್ಟಿಗರು ಕರಗಿ ಹೋಗ್ತಾರೆ. ಲಿಪ್ಸಾಳನ್ನು ಕಲಿಯಗದ ಶ್ರವಣ ಕುಮಾರ ಅಂತ ಕರೆಯಲಾಗ್ತಿದೆ.

ಗಂಡಂದಿರ ಎಕ್ಸ್​ಚೇಂಜ್​ಗೆ ಕೋರಿ ಹೈಕೋರ್ಟ್​ಗೆ ಹೋದ ಅಕ್ಕ-ತಂಗಿ! ಆಗಿದ್ದೇನು? ಕೋರ್ಟ್​ ಕೊಟ್ಟ ತೀರ್ಪೇನು

hellosidhu_kannada ಹೆಸರಿನ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಫೋಟೋಗ್ರಾಫರ್ ಕೊನೆಯಲ್ಲಿ ಲಿಪ್ಸಾ ಹಾಗೂ ಅವಳ ತಮ್ಮ ಹಾಗೂ ತಂದೆ ತಾಯಿ ಜೊತೆ ಒಂದಿಷ್ಟು ಫೋಟೋ ಕ್ಲಿಕ್ಕಿಸಿದ್ದಾರೆ. ಐದು ದಿನಗಳ ಹಿಂದೆ ಪೋಸ್ಟ್‌ ಆದ ಈ ವಿಡಿಯೋ 1.5 ಮಿ ವೀವ್ಸ್‌ ಪಡೆದಿದೆ. ಅನೇಕರು ವಿಡಿಯೋಕ್ಕೆ ಕಮೆಂಟ್‌ ಮಾಡಿದ್ದಾರೆ.

 

 

 

PREV
Read more Articles on
click me!

Recommended Stories

Malaika Arora :ವಯಸ್ಸಿನ ಬಗ್ಗೆ ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ತೀರಾ? ಗಂಡಸರಿಗೊಂದು ನ್ಯಾಯ, ಹೆಂಗಸರಿಗೊಂದು ನ್ಯಾಯವೇ?
ವರ್ಷ 41 ಆದ್ರೂ ಮನೆಯಲ್ಲಿ ಮದುವೆ ಮಾಡ್ತಿಲ್ಲ, ವರನನ್ನು ಹುಡುಕಿಕೊಡಿ –ಪೊಲೀಸರಿಗೆ ಮಹಿಳೆ ಮನವಿ