ಇವ್ರು ನಮ್ಮ ಚೀಫ್ ಆಫೀಸರ್, ಮೆಟ್ರೋ ನಿಲ್ದಾಣದ ವೈರಲ್ ಬೆಕ್ಕಿಗೆ ಹುದ್ದೆ ಕೊಟ್ಟ ಮೆಟ್ರೋ ಲಿಮಿಟೆಡ್

Published : Aug 22, 2026, 01:56 PM IST
Viral Metro Station Cat Gets an Official Position

ಸಾರಾಂಶ

ಇವ್ರು ನಮ್ಮ ಚೀಫ್ ಫೀಲೈನ್ ಆಫೀಸರ್, ಪ್ರಯಾಣಿಕರ ಮೇಲೆ ನಿಗಾ ಇಡುವುದು ಸೇರಿದಂತೆ ಹಲವು ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡುತ್ತಿದೆ ಎಂದು ಮೆಟ್ರೋ ಕಾರ್ಪೋರೇಶನ್ ಹೇಳಿದೆ. ಮೆಟ್ರೋ ನಿಲ್ದಾಣದಲ್ಲಿರುವ ಬೆಕ್ಕಿನ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಮೆಟ್ರೋ ಈ ಪ್ರತಿಕ್ರಿಯೆ ನೀಡಿದೆ.

ಮೆಟ್ರೋ ನಿಲ್ದಾಣಕ್ಕೆ ಎಂಟ್ರಿಕೊಡುತ್ತಿದ್ದಂತೆ ಈ ಬೆಕ್ಕು ನಿಮ್ಮನ್ನು ಸ್ವಾಗತಿಸುತ್ತದೆ. ಪ್ರತಿಯೊಬ್ಬ ಪ್ರಯಾಣಿಕರ ಮೇಲೆ ಗಮವಿಡುತ್ತದೆ. ಹಲವು ಬಾರಿ ಅತೀಯಾದ ಕೆಲಸದಿಂದ ಆರಾಮಾಗಿ ನಿದ್ರಿಸುತ್ತದೆ. ಆದರೆ ತನ್ನ ಕರ್ತವ್ಯ ಸಮಯದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಹೀಗಾಗಿ ಈ ಬೆಕ್ಕು ಪ್ರಯಾಣಿಕರ ಗಮನಸೆಳೆದಿದೆ. ಈ ಪೈಕಿ ಒರ್ವ ಪ್ರಯಾಣಿಕ ಈ ಬೆಕ್ಕಿನ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಮೆಟ್ರೋ ಕಾರ್ಪೋರೇಶನ್ ಈ ಬೆಕ್ಕಿನ ಕುರಿತು ವಿವರಣೆ ನೀಡಿ ಪ್ರಯಾಣಿಕರ ಮನಗೆದ್ದಿದೆ. ಈ ಬೆಕ್ಕು ನಮ್ಮ ಚೀಫ್ ಫೀಲೈನ್ ಆಫೀಸರ್. ಇವರ ಕೆಲಸ ಪರ್ಫೆಕ್ಟ್ ಎಂದು ಪ್ರತಿಕ್ರಿಯಿಸಿದೆ.

ಮೆಟ್ರೋ ನಿಲ್ದಾಣದಲ್ಲಿ ಸ್ವಾಗತ ಕೋರುವ ಬೆಕ್ಕು

ಇದು ಮುಂಬೈ ಮೆಟ್ರೋ ನಿಲ್ದಾಣದಲ್ಲಿರುವ ಬೆಕ್ಕು. ಗುಂಡುವಳಿ ಮೆಟ್ರೋ ನಿಲ್ದಾಣದ ಆರಂಭದಲ್ಲಿರುವ ಜಾಗದಲ್ಲಿ ಬೆಕ್ಕು ಆರಾಮವಾಗಿ ನಿದ್ರಿಸುತ್ತದೆ. ಇಲ್ಲೇ ಕುಳಿತುಕೊಂಡಿರುತ್ತದೆ. ಪ್ರತಿ ದಿನ ಪ್ರಯಾಣಿಕರಿಗೆ ಈ ಬೆಕ್ಕು ಕಾಣಸಿಗುತ್ತದೆ. ಪ್ರತಿ ದಿನ ಈ ಬೆಕ್ಕು ನೋಡುತ್ತಾ ಹಲವರು ಸಾಗುತ್ತಾರೆ. ಈ ಪೈಕಿ ಮೆಟ್ರೋ ಪ್ರಯಾಣಿಕ ಸಂದೇಶ್ ಸಾಮಂತ್ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಶುದ್ಧ ಆತ್ಮಕ್ಕೆ ಮೆಟ್ರೋದಿಂದ ಅಧಿಕೃತ ಹುದ್ದೆ ನೀಡಬೇಕು ಎಂದು ಮುಂಬೈ ಮೆಟ್ರೋ ಕಾರ್ಪೋರೇಶನ್‌ಗೆ ಮನವಿ ಮಾಡಿದ್ದರು. ಇದು ಯಾವುದೇ ವೇತನವಿಲ್ಲದೆ ಕೆಲಸ ಮಾಡುತ್ತಿದೆ ಎಂದು ಸಾವಂತ್ ಹೇಳಿದ್ದರು.

ಮುಂಬೈ ಮೆಟ್ರೋದಿಂದ ಅಧಿಕೃತ ಹುದ್ದೆ

ಈ ಪೋಸ್ಟ್‌ಗೆ ಮುಂಬೈ ಮೆಟ್ರೋ ಪ್ರತಿಕ್ರಿಯೆ ನೀಡಿದೆ. ಇವರು ನಮ್ಮ ಮುಖ್ಯ ಫೀಲೈನ್ ಆಫೀಸರ್ ಎಂದು ಮೆಟ್ರೋ ಕಾರ್ಪೋರೇಶನ್ ಪ್ರತಿಕ್ರಿಯಿಸಿದೆ. ಈ ಅಧಿಕಾರಿಯ ಮುಖ್ಯಕೆಲಸವನ್ನು ಮಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣ ಪರಿಶೀಲನೆ, ಪ್ರಯಾಣಿಕರ ಮೇಲೆ ನಿಗಾ ಇಡುವುದು, ಎಲ್ಲರನ್ನು ಮೆಚ್ಚುವಂತೆ ಸರಿಯಾದ ಸ್ಥಳದಲ್ಲಿ ಕುಳಿತು ಎಲ್ಲರನ್ನು ಸ್ವಾಗತಿಸುವುದು ಎಲ್ಲವೂ ಈ ಅಧಿಕಾರಿಯ ಜವಾಬ್ದಾರಿಯಾಗಿದೆ. ಇಲ್ಲೀವರೆಗೆ ಈ ಅಧಿಕಾರಿಯ ಕೆಲಸ ಪರ್ಫೆಕ್ಟ್ ಎಂದು ಮುಂಬೈ ಮೆಟ್ರೋ ಕಾರ್ಪೋರೇಶನ್ ತಮಾಷೆ ಮಾಡಿದೆ.

ಮುಂಬೈ ಕಾರ್ಪೋರೇಶನ್ ಈ ಪ್ರತಿಕ್ರಿಯೆ ನೀಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಹಲವು ನಗೆಗಡಲಲ್ಲಿ ತೇಲಾಡಿದ್ದಾರೆ. ತಾವು ಕೂಡ ಈ ಬೆಕ್ಕು ನೋಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬೆಕ್ಕು ಇಲ್ಲಿದೆ. ಈ ಬೆಕ್ಕಿಗೆ ಸಂಗಾತಿ ಇತ್ತು. ಆದರೆ ಇತ್ತೀಚೆಗೆ ಈ ಸಂಗಾತಿ ಕಾಣಿಸುತ್ತಿಲ್ಲ. ಕಳೆದ ಮೂರು ವರ್ಷಗಳ ಪ್ರೊಬೇಷನ್ ಪಿರಿಯೆಡ್ ಬಳಿಕ ಇದೀಗ ಅಧಿಕೃತವಾಗಿ ಆನ್‌ರೋಲ್ ಹುದ್ದೆ ಗಿಟ್ಟಿಸಿಕೊಂಡಿದೆ. ಅಭಿನಂದನೆಗಳು ಎಂದು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಕಾಶಿಗಾಂವ್ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಬೆಕ್ಕು ಕರ್ತವ್ಯದಲ್ಲಿದೆ ಎಂದಿದ್ದಾರೆ.

ಈ ಆಫೀಸರ್ ತುಂಬಾ ಮುದ್ದಾಗಿದ್ದಾರೆ. ಇದರಿಂದ ನಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಕರ್ತವ್ಯ ಲೋಪದಡಿ ದಂಡ ವಿಧಿಸಬೇಕು ಎಂದು ಹಲವರು ಸೂಚಿಸಿದ್ದಾರೆ. ಬೆಕ್ಕಿನ ಫೋಟೋ ಅನುಮತಿ ಇಲ್ಲದೆ ಪಡೆಯಲಾಗಿದೆ. ನಾಳೆ ಫೀಲೈನ್ ಆಫೀಸರ್ ದಂಡ ಹಾಕುವ ಸಾಧ್ಯತೆ ಎಂದು ಎಚ್ಚರಿಸಿದ್ದಾರೆ.

PREV
Read more Articles on
click me!

Recommended Stories

ಸಿಎಂ ಹೆಗಲ ಮೇಲೆ ಕೈ ಹಾಕಿ ಜಪಾನ್ ವಿದ್ಯಾರ್ಥಿಗಳು ಸೆಲ್ಫಿ ಫೋಟೋ! ವೈರಲ್ ವಿಡಿಯೋ
"ನನಗೂ ಇಂಥದ್ದೇ ಕಷ್ಟ ಬರಲಿ ದೇವ್ರೇ!" ₹92 ಲಕ್ಷ ಆಫರ್‌ನಿಂದ ಗೊಂದಲಕ್ಕೀಡಾದ ಬೆಂಗಳೂರು ಟೆಕ್ಕಿಯ ಕಥೆ!