Viral Kid: ಜಸ್ಟ್ ಒಂದು ವಿಡಿಯೋ, 26 ತಿಂಗಳ ಮಗುವಿಗೆ ಒಲಿದ ಅದೃಷ್ಟ; ಬದಲಾಯ್ತು ಬದುಕು!

Published : Nov 16, 2026, 08:14 PM IST
Viral Boy Rudransh Sisodiya

ಸಾರಾಂಶ

ಹೊಸ ಹೋಂಡಾ ಸ್ಕೂಟರ್ ಖರೀದಿಸುವಾಗ 23 ತಿಂಗಳ ಮಗುವಿನ ಸ್ವಾಗ್ ಮತ್ತು ಮುಗ್ಧತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೋಂಡಾ ಶೋ ರೂಮ್ ಮಾಲೀಕರು ಮಗುವಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳ ಹಿಂದೆ 23 ತಿಂಗಳ ಮಗುವಿನ ವಯಸ್ಸಿನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಗು ತನ್ನ ಪೋಷಕರೊಂದಿಗೆ ಹೊಸ ಹೋಡಾ ಸ್ಕೂಟರ್ ಖರೀದಿಸಿದ್ದು, ಈ ಸಂದರ್ಭದಲ್ಲಿ ಕುಟುಂಬದೊಂದಿಗೆ ಗಾಡಿನ ಎದುರು ತನ್ನದೇ ಸ್ವಾನ್‌ನಲ್ಲಿ ಫೋಟೋ ಮತ್ತು ವಿಡಿಯೋಗಳಿಗೆ ಮಗು ಪೋಸ್ಟ್ ಕೊಟ್ಟಿದೆ.

ಹೊಸ ಸ್ಕೂಟರ್ ಖರೀದಿಯಲ್ಲಿ ಮಗುವಿನ ವೈರಲ್ ಸ್ವಾಗ್!

ಮಗು ಬಿಳಿ ಟಿ ಶರ್ಟ್, ಅದರ ಮೇಲೆ ಟುಕಾನ್ ಪಕ್ಷಿ ಚಿತ್ರವಿದೆ. ಕಪ್ಪು ಸನ್ ಗ್ಲಾಸ್, ಟೋರ್ಡ್ ಜೀನ್ಸ್ ಧರಿಸಿದ್ದು, ಎರಡು ಜೇಬಿನಲ್ಲಿ ಕೈ ಇಟ್ಟು ಸಖತ್ ಸ್ಟೈಲ್‌ ಆಗಿ ಲುಕ್ ಕೊಟ್ಟಿದ್ದಾನೆ. ಅದರಲ್ಲೂ ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ, ಆತ್ಮವಿಶ್ವಾಸದಿಂದ ಕ್ಯಾಮೆರಾ ಕಡೆಗೆ ನೋಡುತ್ತಾ ನಿಂತಿದ್ದ ಈ ದೃಶ್ಯ ಯಾವುದೋ ಸ್ಟಾರ್ ನಟನ ಫೋಟೋಶೂಟ್‌ ಮಾಡಿತ್ತಿರುವಂತೆ ಕಾಣುತ್ತಿತ್ತು.

ಸ್ಟಾರ್ ನಟರ ಸ್ವಾಗ್ ಮೀರಿಸಿದ ಬಾಲಕನ ಮುಗ್ಧತೆ

ಮಗುವಿನ ಈ ಚಾರ್ಮಿಂಗ್ ವಿಡಿಯೋ ನೋಡಿದ ನೆಟ್ಟಿಗರು ಆತನನ್ನು ರಾತ್ರೋರಾತ್ರಿ ದೇಶದಾದ್ಯಂತ ವೈರಲ್ ಮಾಡಿದ್ದರು. ಈ ವಿಡಿಯೋವನ್ನು ಮೊದಲು ಬೊಂಡೂ ಬಚ್ಚ ಎಂದಿರುವ ರುಧ್ರಾಂಶ ಠಾಕುರ್ ಎಂಬುವರ ಇನ್‌ಸ್ಟಾದಲ್ಲಿ ಹಂಚಿಕೊಳ್ಳಲಾಗಿತ್ತು. ವಿಡಿಯೋ ಅಪ್ ಲೋಡ್ ಆದ ಕೇವಲ 24 ಗಂಟೆಯಲ್ಲೇ ವಿಡಿಯೋಗೆ 10 ಲಕ್ಷ ವಿವ್ಯೂಸ್ ಹರಿದು ಬಂದಿತ್ತು.

ಶಿಕ್ಷಣದ ಭರವಸೆ ಕೊಟ್ಟ ಶೋ ರೂಮ್ ಮಾಲೀಕ!

ತಮ್ಮ ಮಗುವಿನ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆತನ ಪೋಷಕರು, ಆತನಿಗೆ ಬಹಳ ಇಷ್ಟ ಆದಾಗ ಈ ರೀತಿ ಪೋಸ್ ಕೊಡುತ್ತಾನೆ. ತಮ್ಮ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿ, ಮುಂದಿನ ದಿನಗಳಲ್ಲಿ ಆತನನ್ನು ಇಷ್ಟಪಟ್ಟರೆ ಕಂಟೆಂಟ್ ಕ್ರಿಯೇಟರ್ ಆಗಿಸುವ ಯೋಚನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು, ವೈರಲ್ ವಿಡಿಯೋಗೆ ಸಾವಿರಾರು ಮಂದಿ ಪ್ರತಿಕ್ರಿಯೇ ನಡಿದ್ದು, ಈತನ ಸ್ವಾಗ್ ಸಖತ್ ಇಷ್ಟವಾಯ್ತು, ಮಾಸ್ಟರ್ ಪೀಸ್, ಆತ ಮುಂದಿನ ದಿನಗಳಲ್ಲಿ ಎಲ್ಲಿಗೋ ಬೆಳೆಯುತ್ತಾನೆ, ಬ್ರೋ ವಿಲ್ ಗಾಯ್ ಎಂದೆಲ್ಲಾ ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ಆತ್ಮವಿಶ್ವಾಸ, ಮುಗ್ಧತೆಯಿಂದ ಫೋಟೋ ಮತ್ತು ವಿಡಿಯೋಗೆ ಪೋಸ್ ಕೊಟ್ಟಿರುವ ಆತನ ನಡೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಅಂದಹಾಗೇ, ವೈರಲ್ ಆದ ಬಾಲಕನ ಹೆಸರು ರುದ್ರಾನ್ಶ್ ಮಂಗೇಶ್ ಸಿಸೋಡಿಯಾ. ಜಸ್ಟ್ 24 ತಿಂಗಳು, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಬಾಲಕನಾಗಿದ್ದಾನೆ. ಹುಡುಗನ ಮುದ್ದಾದ ಹಾವಭಾವ ಮತ್ತು ವಿಶಿಷ್ಟ ಶೈಲಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರದ ಯವತ್ಮಾಳ್ ನಗರದ 'ಸಾಯಿ ಹೋಂಡಾ' ಶೋ ರೂಮ್ ಮಾಲೀಕ ಬಾಲಕನ ಕುಟುಂಬಕ್ಕೆ ಬಿಗ್ ಸರ್ಪೈಸ್ ನೀಡಿದ್ದಾರೆ. ಕುಟುಂಬ ಸಮೇತ ಬಾಲಕನನ್ನು ಶೋ ಬಳಿ ಕರೆತಂದು, ದೊಡ್ಡ ಕೇಕ್ ಕಟ್ ಮಾಡಿಸಿದ್ದಾರೆ. ಅಲ್ಲದೇ, ಆತನ ಶಿಕ್ಷಣ ಸಂಪೂರ್ಣ ವೆಚ್ಚವನ್ನು ತಾವೇ ವಹಿಸಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಯುಕೆಜಿಯಿಂದ ಪದವಿ ಶಿಕ್ಷಣದ ವರೆಗೂ ಆತನ ಶಿಕ್ಷಣಕ್ಕೆ ಆಗುವ ಖರ್ಚನ್ನು ಭರಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

PREV
Read more Articles on
click me!

Recommended Stories

ಒಂದು ಊಟಕ್ಕೆ 4,800 ರೂಪಾಯಿ ಬಿಲ್! ನನ್ನ 7 ದಿನದ ಸಂಬಳ ಖಾಲಿ ಎಂದು ಗೋಳಾಡಿದ ಯುವತಿ!
ಕಾಂಗ್ರೆಸ್ ನಾಯಕಿ ಕುಸುಮಾ ನೋಡಿ ಗಿಲ್ಲಿ ಫುಲ್ ಕನ್ಫ್ಯೂಸ್, ತುಂಬಿದ ಸಭೆಯಲ್ಲಿ Bigg Boss ಸ್ಟಾರ್ ಸ್ವಾರಸ್ಯಕರ ಮಾತು