ಗಂಟಲಿನಲ್ಲಿ ಸಿಕ್ಕಿಬಿದ್ದ ಮೀನಿನ ಮೂಳೆ, ಸಸ್ಯಹಾರಿ ಅಜ್ಜನ ಮಾಂಸಹಾರದ ಗುಟ್ಟು ಬಯಲು

Published : Nov 16, 2026, 11:34 AM IST
fish bones

ಸಾರಾಂಶ

ಸುಳ್ಳು ಒಂದಲ್ಲ ಒಂದು ಟೈಂನಲ್ಲಿ ಹೊರ ಬಂದೇ ಬರುತ್ತೆ. ಅದಕ್ಕೆ ಈ ಅಜ್ಜ ಕೂಡ ಹೊರತಾಗಿಲ್ಲ. ಪಾಪ, ಮನೆಯವರ ಕಣ್ಣುತಪ್ಪಿಸಿ ಕದ್ದು ಮುಚ್ಚಿ ಮೀನು ತಿನ್ನುತ್ತಿದ್ದ ಸಸ್ಯಹಾರಿ ಅಜ್ಜನ ಗುಟ್ಟು ಈಗ ಹೊರ ಬಂದಿದೆ.

ನಮಗಿಷ್ಟವಾದ ಆಹಾರ ಸೇವಿಸುವ ಸ್ವಾತಂತ್ರ್ಯ ನಮಗಿದೆ. ಅನೇಕ ಸಸ್ಯಹಾರಿಗಳು, ಕದ್ದುಮುಚ್ಚಿ ಮಾಂಸಹಾರ ಸೇವನೆ ಮಾಡ್ತಾರೆ. ಕೆಲವೊಮ್ಮೆ ಈ ಕಿತಾಪತಿ ಮಾಡಲು ಹೋಗಿ ಸಿಕ್ಕಿಬೀಳೋದಿದೆ. ಈಗ ಕಾನ್ಪುರದ ಅಜ್ಜನೊಬ್ಬನ ಮಾಂಸಹಾರದ ರಹಸ್ಯ ಮೀನಿನಿಂದ ಹೊರ ಬಿದ್ದಿದೆ.

ಗಂಟಲಿನಲ್ಲಿ ಮೀನಿನ ಮೂಳೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. 77 ವರ್ಷದ ವೃದ್ಧರೊಬ್ಬರು ಸಸ್ಯಾಹಾರಿ ಕುಟುಂಬದಿಂದ ಬಂದವರು. ಅವರ ಕುಟುಂಬಸ್ಥರು ಮಾಂಸಾಹಾರ ಸೇವಿಸ್ತಿರಲಿಲ್ಲ. ಆದ್ರೆ ಅಜ್ಜನಿಗೆ ಮೀನು ತಿನ್ನುವ ಆಸೆಯಿತ್ತು. ಮನೆಯವರಿಗೆ ತಿಳಿಯದೆ ಮೀನು ತಿಂದಿದ್ದಾರೆ. ಆದ್ರೆ ತಿಂದ ಮೀನಿನ ಮೂಳೆ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಅವರಿಗೆ ತೀವ್ರ ಅಸ್ವಸ್ಥತೆ ಉಂಟಾಗಿದೆ. ಗಂಟಲಿನಲ್ಲಿ ಏನೋ ಸಿಲುಕಿಕೊಂಡ ಅನುಭವವಾಗಿದ್ದು, ಆಹಾರ ನುಂಗಲು ತೊಂದ್ರೆಯಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವೃದ್ಧರನ್ನು ಪರೀಕ್ಷಿಸಿದ ವೈದ್ಯರಿಗೆ ಗಂಟಲಿನಲ್ಲಿ ಮೀನಿನ ಮುಳ್ಳು ಸಿಲುಕಿರುವುದು ಗೊತ್ತಾಗಿದೆ. ಬಳಿಕ ವೈದ್ಯರು ಎಂಡೋಸ್ಕೋಪಿ ವಿಧಾನವನ್ನು ಬಳಸಿಕೊಂಡು ಗಂಟಲಿನಲ್ಲಿ ಸಿಲುಕಿದ್ದ ಮುಳ್ಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಸಾಮಾನ್ಯವಾಗಿ ಮೀನು ತಿನ್ನುವಾಗ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಸಣ್ಣ ಮುಳ್ಳು ಕೂಡ ನೋವು, ನುಂಗಲು ತೊಂದರೆ ಹಾಗೂ ಗಾಯಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಕೈಯಿಂದ ಮುಳ್ಳನ್ನು ತೆಗೆಯಲು ಪ್ರಯತ್ನಿಸುವುದು ಅಥವಾ ಅನ್ನದ ಉಂಡೆಯನ್ನು ನುಂಗಿ ಮುಳ್ಳನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸುವುದು ಅಪಾಯಕಾರಿ. ಬದಲಿಗೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಮುಖ್ಯ. ಒಟ್ಟಿನಲ್ಲಿ, ಮನೆಯವರಿಗೆ ತಿಳಿಯದಂತೆ ಮೀನು ತಿನ್ನಲು ಹೋದ 77 ವರ್ಷದ ವೃದ್ಧರಿಗೆ ಕೊನೆಗೆ ಮೀನಿನ ಮುಳ್ಳೇ ದೊಡ್ಡ ಸಂಕಷ್ಟ ತಂದಿಟ್ಟಿದೆ.

PREV
Read more Articles on
click me!

Recommended Stories

ಸರ್ ನನ್ನ ಮಗನನ್ನ ಹಿಡ್ಕೊಳ್ಳಿ: ಫಸ್ಟ್ ಮ್ಯಾಚ್‌ಲ್ಲಿ ಟೀಂ ಇಂಡಿಯಾ ವೇಗಿ ಯಶ್‌ ಠಾಕೂರ್‌ಗೆ ಆಗಿದ್ದೇನು?
‘ನೀನು ವರ್ಷಕ್ಕೆ 12 ಲಕ್ಷ ದುಡಿ, ನಾನು ಮನೆ ನೋಡಿಕೊಳ್ತೀನಿ!’ ಹೌಸ್‌ಹಸ್ಬೆಂಡ್ ಆಗಲು ಯುವಕನ ವಿಚಿತ್ರ ಬೇಡಿಕೆ!