ಹೊಸ ಮನೆ ಗೃಹ ಪ್ರವೇಶಕ್ಕೆ ಹೋಮ-ಹವನ ಮಂತ್ರಗಳ ಜೊತೆಗೆ ಕುರಾನ್ ಪಠಣ; ಏನಿದು ಹೆಂಡತಿ ಡಿಮ್ಯಾಂಡ್

Published : Nov 16, 2026, 07:39 PM IST
Hindu Husband and Muslim Wife Hold Homa and Quran Recitation at Housewarming

ಸಾರಾಂಶ

ದೆಹಲಿಯ ಯೂಟ್ಯೂಬರ್ ಹಾನಿಯಾ ಮಂಜಾರ್ ಮತ್ತು ದೇವಾಂಶ್ ತಮ್ಮ ಹೊಸ ಮನೆಯ ಗೃಹಪ್ರವೇಶವನ್ನು ಹಿಂದೂ ಮತ್ತು ಇಸ್ಲಾಂ ಎರಡೂ ಧರ್ಮಗಳ ಸಂಪ್ರದಾಯಗಳಂತೆ ಆಚರಿಸಿದ್ದಾರೆ. ಹೋಮ-ಹವನ ಹಾಗೂ ಕುರಾನ್ ಪಠಣದ ಮೂಲಕ ಸಾಮರಸ್ಯ ಮೆರೆದ ಈ ಜೋಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನವದೆಹಲಿ (ನವೆಂಬರ್ 16): ಪ್ರೀತಿ ಮತ್ತು ಪರಸ್ಪರ ಗೌರವವಿದ್ದರೆ ಧರ್ಮಗಳ ಗಡಿ ದಾಟಿಯೂ ಸುಂದರವಾಗಿ ಬದುಕಬಹುದು. ಇದಕ್ಕೆ ದೆಹಲಿಯ ದಂಪತಿಯೊಂದು ಸಾಕ್ಷಿಯಾಗಿದೆ. ಪತ್ನಿ ಮುಸ್ಲಿಂ, ಪತಿ ಹಿಂದೂ! ಈ ಜೋಡಿ ಇತ್ತೀಚೆಗೆ ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ತುಂಬಾ ಸ್ಪೆಷಲ್ಲಾಗಿ ಮಾಡಿದೆ.

ಯಾರು ಅವರು?

ದೆಹಲಿಯ ಖ್ಯಾತ ಯೂಟ್ಯೂಬರ್ ಹಾಗೂ ಬ್ಯೂಟಿ ಬ್ಲಾಗರ್ ಹಾನಿಯಾ ಮಂಜಾರ್ ಮತ್ತು ಅವರ ಪತಿ ದೇವಾಂಶ್ ಇತ್ತೀಚೆಗೆ ಹೊಸದೊಂದು ಮನೆ ಖರೀದಿಸಿದ್ದಾರೆ. ಈ ಮನೆಯ ಗೃಹ ಪ್ರವೇಶದ ಸಂಭ್ರಮದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಒಂದೇ ಸೂರಿನಡಿ ನಡೆದ ಎರಡು ಧರ್ಮಗಳ ಆಚರಣೆಗಳು ಎಲ್ಲರ ಗಮನ ಸೆಳೆಯುತ್ತಿವೆ..

ನೂತನ ಗೃಹಪ್ರವೇಶದ ವೇಳೆ ಮನೆಯ ಒಂದು ಭಾಗದಲ್ಲಿ ಹಿಂದೂ ಸಂಪ್ರದಾಯದಂತೆ ಹೋಮ, ಹವನ ನೆರವೇರಿಸಲಾಗಿದ್ದರೆ.. ಮತ್ತೊಂದು ಭಾಗದಲ್ಲಿ ಇಸ್ಲಾಂ ಸಂಪ್ರದಾಯದಂತೆ ಕುರಾನ್ ಪಠಣ ಮತ್ತು ದುವಾ (ಪ್ರಾರ್ಥನೆ) ಮಾಡಲಾಗಿದೆ. ಎರಡೂ ಧರ್ಮಗಳ ಆಚರಣೆಗಳಿಗೆ ಸಮಾನ ಗೌರವ ನೀಡಿರುವ ಈ ದಂಪತಿ, ಗೃಹ ಪ್ರವೇಶದ ಫೋಟೋಗಳನ್ನು ಹಂಚಿಕೊಂಡು 'ಎರಡು ಸುಂದರ ಸಂಪ್ರದಾಯಗಳು ಮತ್ತು ತುಂಬಿದ ಹೃದಯದ ಕೃತಜ್ಞತೆಗಳು' ಎಂದು ಬರೆದುಕೊಂಡಿದ್ದಾರೆ.

ಹಾನಿಯಾ ಮತ್ತು ದೇವಾಂಶ್ ಪ್ರೇಮ ಕಥೆ ಕೂಡ ಯಾವ ಸಿನಿಮಾಗೂ ಕಡಿಮೆಯಿಲ್ಲ. ಇಬ್ಬರೂ ತಮ್ಮ 15ನೇ ವಯಸ್ಸಿನಲ್ಲೇ ಭೇಟಿಯಾಗಿ ಪ್ರೀತಿಸಲು ಶುರು ಮಾಡಿದ್ದರು. ಆದರೆ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರಿಂದ ಮದುವೆಯ ಸಮಯದಲ್ಲಿ ಎರಡೂ ಕುಟುಂಬಗಳಿಂದ ವಿರೋಧ ಎದುರಿಸಬೇಕಾಯಿತು. ಕೊನೆಗೆ ಇವರ ಪ್ರೀತಿಗೆ ಸೋತ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ನೀಡಿದರು.

ಪ್ರಸ್ತುತ ಈ ದಂಪತಿಗೆ ಒಬ್ಬ ಮಗನಿದ್ದಾನೆ. ಇವರ ಮನೆಯಲ್ಲಿ ಪ್ರೀತಿ ಮತ್ತು ಸಾಮರಸ್ಯವೇ ಪ್ರಧಾನವಾಗಿದೆ. ಈದ್ ಆಗಿರಲಿ ಅಥವಾ ದೀಪಾವಳಿಯಾಗಿರಲಿ, ಇಡೀ ಕುಟುಂಬ ಒಟ್ಟಾಗಿ ಸೇರಿ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತದೆ. ಹಾನಿಯಾ ಅವರು ಹಿಂದೂ ಸಂಪ್ರದಾಯದಂತೆ 'ಕರ್ವಾ ಚೌತ್' ವ್ರತವನ್ನೂ ಆಚರಿಸುತ್ತಾರೆ.

ಗೃಹಪ್ರವೇಶದ ಈ ಸುಂದರ ಚಿತ್ರಗಳನ್ನು ನೋಡಿದ ನೆಟ್ಟಿಗರು ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ಇಬ್ಬರು ವ್ಯಕ್ತಿಗಳು ಪರಸ್ಪರರ ಧರ್ಮ ಮತ್ತು ನಂಬಿಕೆಗಳನ್ನು ಗೌರವಿಸುತ್ತಾ ಸಂತೋಷದಿಂದ ಬದುಕುತ್ತಿರುವಾಗ, ಅದರ ಬಗ್ಗೆ ಬೇರೆಯವರಿಗೆ ಯಾಕೆ ಅಸಮಾಧಾನವಿರಬೇಕು? ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಗಳಲ್ಲಿನ ನಿಜವಾದ ಪ್ರೀತಿ ಮತ್ತು ಪರಸ್ಪರ ಗೌರವಕ್ಕೆ ಹಾನಿಯಾ-ದೇವಾಂಶ್ ದಂಪತಿ ಮಾದರಿಯಾಗಿದ್ದಾರೆ.

ಎಲ್ಲರಿಗೂ ಮಾದರಿಯಾಗಿ ಹೊಸ ಮನೆಗೆ ಪ್ರವೇಶ ಮಾಡಿರುವ ದಂಪತಿಗೆ ಅಭಿಮಾನಿಗಳು ಪ್ರೀತಿಯಿಂದ ಶುಭ ಹಾರೈಸುತ್ತಿದ್ದಾರೆ. ನಿಮ್ಮ ಕನಸು ಮತ್ತು ಕನಸಿನ ಮನೆಗೆ ಒಳ್ಳೆಯದಾಗಿಲಿ. ನೂರು ಕಾಲ ಹೀಗೆ ಅನೋನ್ಯವಾಗಿ ಇರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

PREV
Read more Articles on
click me!

Recommended Stories

ಗಂಟಲಿನಲ್ಲಿ ಸಿಕ್ಕಿಬಿದ್ದ ಮೀನಿನ ಮೂಳೆ, ಸಸ್ಯಹಾರಿ ಅಜ್ಜನ ಮಾಂಸಹಾರದ ಗುಟ್ಟು ಬಯಲು
ಸರ್ ನನ್ನ ಮಗನನ್ನ ಹಿಡ್ಕೊಳ್ಳಿ: ಫಸ್ಟ್ ಮ್ಯಾಚ್‌ಲ್ಲಿ ಟೀಂ ಇಂಡಿಯಾ ವೇಗಿ ಯಶ್‌ ಠಾಕೂರ್‌ಗೆ ಆಗಿದ್ದೇನು?