ಇನ್ನೇನು ಸತ್ತೇ ಹೋಯಿತು ಎನ್ನುವಷ್ಟರಲ್ಲಿ ಗೂಳಿಯನ್ನು ರಕ್ಷಿಸಿದ ಲೋಕೋ ಪೈಲಟ್; ನಮ್ಮದೊಂದು ಸಲಾಂ ಎಂದ ಜನ

Published : Jul 31, 2026, 02:29 PM IST
Loco Pilot Saves Bull

ಸಾರಾಂಶ

Loco Pilot Saves Bull: ರೈಲ್ವೆ ಹಳಿಗಳ ಮಧ್ಯೆ ಸಿಲುಕಿ ಸಾವಿನ ದವಡೆಯಲ್ಲಿದ್ದ ಮೂಕಜೀವಿಯನ್ನು ಉಳಿಸಲು ಸಮಯಪ್ರಜ್ಞೆ ಮೆರೆದ ಲೋಕೋ ಪೈಲಟ್ ಈಗ ನೆಟ್ಟಿಗರ ಪಾಲಿನ 'ರಿಯಲ್ ಹೀರೋ' ಆಗಿದ್ದಾರೆ. ಗೂಳಿಯನ್ನು ರಕ್ಷಿಸಲು ವೇಗವಾಗಿ ಬರುತ್ತಿದ್ದ ರೈಲನ್ನೇ ನಿಲ್ಲಿಸಿದ ಈ ಮನಮಿಡಿಯುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಲೋಕೋ ಪೈಲಟ್‌ನ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಮಾನವೀಯತೆಯನ್ನು ಪ್ರತಿಬಿಂಬಿಸುವ ವಿಡಿಯೋವೊಂದು ಲಕ್ಷಾಂತರ ಜನರ ಮನಗೆಲ್ಲುತ್ತಿದೆ. ಒಂದು ಮೂಕ ಜೀವಿಯ ಪ್ರಾಣ ಉಳಿಸಲು ಲೋಕೋ ಪೈಲಟ್ ತೆಗೆದುಕೊಂಡ ನಿರ್ಧಾರಕ್ಕೆ ನೆಟ್ಟಿಗರು ಮನಸಾರೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸಮಯಪಾಲನೆಗಿಂತಲೂ ಜೀವ ರಕ್ಷಣೆ ಮುಖ್ಯ ಎಂದು ಸಾರುವ ಈ ಘಟನೆಯ ವಿಡಿಯೋ ಅತಿ ವೇಗವಾಗಿ ವೈರಲ್ ಆಗುತ್ತಿದೆ.

ಏನಿದು ಘಟನೆ?

ವೈರಲ್ ಆಗಿರುವ ವಿಡಿಯೋದಲ್ಲಿ, ಗೂಳಿಯೊಂದು ಚಲಿಸುತ್ತಿದ್ದ ರೈಲಿಗೆ ಅಡ್ಡ ಬಂದಿದೆ. ರೈಲು ಟಚ್ ಆದ ನಂತರ ಆ ಎತ್ತು ಇಂಜಿನ್ ಮುಂಭಾಗ ಮತ್ತು ರೈಲ್ವೇ ಹಳಿಗಳ ನಡುವೆ ಸಿಲುಕಿಕೊಂಡಿದೆ. ತೀವ್ರವಾಗಿ ಭಯಗೊಂಡ ಗೂಳಿ ಅಲ್ಲಿಂದ ಹೊರಬರಲು ಪದೇ ಪದೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಈ ದೃಶ್ಯವನ್ನು ಗಮನಿಸಿದ ಹಳಿಯ ಅಕ್ಕಪಕ್ಕದ ಜನರು ಆತಂಕಕ್ಕೊಳಗಾಗಿ, ಹೇಗಾದರೂ ಮಾಡಿ ಗೂಳಿಯನ್ನು ರಕ್ಷಿಸುವಂತೆ ಲೋಕೋ ಪೈಲಟ್‌ಗೆ ಸಿಗ್ನಲ್ ನೀಡಿದರು.

ಪರಿಸ್ಥಿತಿಯ ಗಂಭೀರತೆಯನ್ನು ತಕ್ಷಣವೇ ಅರಿತುಕೊಂಡ ಲೋಕೋ ಪೈಲಟ್, ಯಾವುದೇ ವಿಳಂಬ ಮಾಡದೆ ರೈಲನ್ನು ನಿಲ್ಲಿಸಿದರು. ಬಳಿಕ ಇಂಜಿನ್‌ನಿಂದ ಕೆಳಗೆ ಇಳಿದು ಗೂಳಿ ಪರಿಸ್ಥಿತಿಯನ್ನು ಪರಿಶೀಲಿಸಿ, ಅದನ್ನು ಸುರಕ್ಷಿತವಾಗಿ ಹೊರತೆಗೆಯುವ ಪ್ರಯತ್ನಗಳಿಗೆ ಪೂರ್ಣ ಸಹಕಾರ ನೀಡಿದರು. ರೈಲ್ವೇ ಟ್ರ್ಯಾಕ್‌ನ ಇಕ್ಕೆಲಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಗೂಳಿ ಹಳಿಗಳ ಮಧ್ಯದಿಂದ ಹೊರಕ್ಕೆ ಬರುತ್ತಿದ್ದಂತೆ ನಿಟ್ಟುಸಿರುಬಿಟ್ಟರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಸುರಿಮಳೆ

ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದ '@gharkekalesh' ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಸಾವಿರಾರು ಜನರ ಗಮನ ಸೆಳೆದಿದೆ. ವಿಡಿಯೋಗೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಸ್ ಹರಿದುಬರುತ್ತಿದ್ದು, ಕಾಮೆಂಟ್ ಬಾಕ್ಸ್ ಪ್ರಶಂಸೆಗಳಿಂದ ತುಂಬಿಹೋಗಿದೆ. "ಇದೇ ನಿಜವಾದ ಮಾನವೀಯತೆ", "ಪ್ರತಿಯೊಂದು ಜೀವವೂ ಅಮೂಲ್ಯ", "ಲೋಕೋ ಪೈಲಟ್‌ಗೆ ನಮ್ಮದೊಂದು ಸಲಾಂ" ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, "ಎಲ್ಲಾ ಹೀರೋಗಳು ಕೆಪ್ (Cape) ಧರಿಸಿ ಬರುವುದಿಲ್ಲ, ಕೆಲವರು ಇಂತಹ ರೈಲುಗಳನ್ನೂ ಓಡಿಸುತ್ತಾರೆ" ಎಂದು ಮಾರ್ಮಿಕವಾಗಿ ಕಾಮೆಂಟ್ ಮಾಡಿದ್ದಾರೆ.

ಈ ವಿಡಿಯೋ ಎಲ್ಲಿ ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ, ಒಂದು ಮೂಕ ಪ್ರಾಣಿಯ ಜೀವ ಉಳಿಸಲು ಲೋಕೋ ಪೈಲಟ್ ತೋರಿದ ಕಾಳಜಿ ಮತ್ತು ಜಾಗರೂಕತೆ ಎಲ್ಲರ ಹೃದಯ ಸ್ಪರ್ಶಿಸಿದೆ. ಪ್ರತಿಯೊಂದು ಜೀವವೂ ಶ್ರೇಷ್ಠ ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ಜಗತ್ತಿಗೆ ಸಾರಿದೆ.

ಘಟನೆಯಿಂದ ತಿಳಿದುಬರುವುದೇನು?

ಈ ಘಟನೆಯು ಕೇವಲ ಮಾನವೀಯತೆಯನ್ನಷ್ಟೇ ಅಲ್ಲದೆ, ಒಂದು ಎಚ್ಚರಿಕೆಯನ್ನೂ ನೀಡಿದೆ. ರೈಲ್ವೆ ಹಳಿಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾನುವಾರುಗಳ ಮಾಲೀಕರು ಎಚ್ಚರದಿಂದ ಇರಬೇಕು. ಸಣ್ಣ ನಿರ್ಲಕ್ಷ್ಯವು ಮೂಕಪ್ರಾಣಿಗಳ ಬಲಿ ಪಡೆಯಬಹುದು ಎಂಬುದು ಇಲ್ಲಿ ಗಮನಾರ್ಹ. ಒಟ್ಟಾರೆಯಾಗಿ, ಲೋಕೋ ಪೈಲಟ್‌ನ ಈ ಕಾರ್ಯವು "ಮಾನವೀಯತೆ ಇಂದಿಗೂ ಜೀವಂತವಾಗಿದೆ" ಎಂಬುದಕ್ಕೆ ಸಾಕ್ಷಿಯಾಗಿದೆ.

ಇಲ್ಲಿದೆ ವಿಡಿಯೋ 

PREV
Read more Articles on
click me!

Recommended Stories

ನೆನಪಿದೆಯಾ ಈ ವೈರಲ್ ಕೇಸ್..? ಬ್ರಿಟಿಷ್ ರ್‍ಯಾಪರ್ 'ಯಂಗ್ ಫಿಲ್ಲಿ'ಗೆ ಸ್ವಲ್ಪ ಸಿಹಿ ಸ್ವಲ್ಪ ಕಹಿ.. ಅಷ್ಟಕ್ಕೂ ಏನ್ ಆಗಿತ್ತು?
ವಿದೇಶಗಳಲ್ಲೂ ಕನ್ನಡದ 'ಕರಾವಳಿ' ಕರಾಮತ್ತು.. 6 ದಿನಗಳಲ್ಲಿ ಸಿನಿಮಾ ಕಲೆಕ್ಷನ್‌ ಎಷ್ಟಾಯ್ತು?