ಜರ್ಮನಿಯನ್ನು ಮೀರಿಸಿದ ಭಾರತ! ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದು ವಿದೇಶಿ ಹೇಳಿದ್ದೇನು ಗೊತ್ತಾ?

Published : Jul 30, 2026, 06:08 PM IST
german tourist

ಸಾರಾಂಶ

ಜರ್ಮನಿಯ ಪ್ರವಾಸಿಗ ಮತ್ತು ಕಂಟೆಂಟ್ ಕ್ರಿಯೇಟರ್ ಡೇವಿಡ್ ನೆಬೆಲ್ ಭಾರತದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಕ್ಕಂತಹ ಉಚಿತ ಚಿಕಿತ್ಸೆಯನ್ನು ಶ್ಲಾಘಿಸಿದ್ದು, ಜೊತೆಗೆ ಜರ್ಮನಿಯಲ್ಲಿ ಅಪಾಯಿಂಟ್‌ಮೆಂಟ್‌ಗೆ ತಿಂಗಳು ಕಾಯಬೇಕು ಎಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಭಾರತದ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜರ್ಮನ್ ವ್ಯಕ್ತಿ ಹೇಳಿದ್ದೇನು ಗೊತ್ತಾ?

ಭಾರತದ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ವಿದೇಶಿಯೊಬ್ಬರು ವ್ಯಕ್ತಪಡಿಸಿದ ಮೆಚ್ಚುಗೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜರ್ಮನಿಯಿಂದ ಭಾರತಕ್ಕೆ ಬಂದಿದ್ದ ಪ್ರವಾಸಿಗನೊಬ್ಬ ಗುಜರಾತಿನ ಸೂರತ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಪಡೆದ ಉಚಿತ ಚಿಕಿತ್ಸೆ ಮತ್ತು ತ್ವರಿತ ವೈದ್ಯಕೀಯ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾನೆ.

ಕಳೆದ ಒಂಬತ್ತು ವರ್ಷಗಳಿಂದ ಪ್ರಪಂಚವನ್ನು ಸುತ್ತುತ್ತಿರುವ ಜರ್ಮನಿಯ ಡೇವಿಡ್ ನೆಬೆಲ್ ಇದೀಗ ಭಾರತದಲ್ಲಿದ್ದಾರೆ, ಈಗ ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಆತ ಹೇಳಿರುವತೆ ಆತನಿಗೆ ಸೌಮ್ಯ ತಲೆನೋವು ಮತ್ತು ಶೀತ ನಡುಕ ಉಂಟಾಗಿದ್ದು, ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾನೆ. ಖಾಸಗಿ ಆಸ್ಪತ್ರೆಗೆ ಭೇಟಿ ನೀಡುವ ಬದಲು, ನೆಬೆಲ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿದೇಶಿಯರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಅವಕಾಶವಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಅವರು ತಲೆನೋವಿನ ಬಗ್ಗೆ ಹೇಳಿದಾಗ, ವೈದ್ಯರು ಮಲೇರಿಯಾ ಮತ್ತು ಡೆಂಗ್ಯೂ ತಪಾಸಣೆಗಳನ್ನು ಸಹ ಶಿಫಾರಸು ಮಾಡಿದರು. ಅಲ್ಲದೇ ವೈದ್ಯರು ಮಲೇರಿಯಾ ಮತ್ತು ಡೆಂಗ್ಯೂ ಪರೀಕ್ಷೆಗಳನ್ನು ಉಚಿತವಾಗಿ ನಡೆಸಿದ್ದಾರೆ. ಪರೀಕ್ಷೆಗಳ ನಂತರ ಯಾವುದೇ ಸೋಂಕು ಇಲ್ಲ ಎಂದು ದೃಢಪಟ್ಟಿದ್ದು, ಅಗತ್ಯ ಔಷಧಿಗಳನ್ನೂ ಆಸ್ಪತ್ರೆಯಲ್ಲೇ ನೀಡಲಾಗಿದೆ. ಇದಕ್ಕಾಗಿ ಯಾವುದೇ ಶುಲ್ಕ ವಸೂಲಿ ಮಾಡಲಾಗಿಲ್ಲ. ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ.

ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ನೆಬೆಲ್

ಈ ಅನುಭವವನ್ನು ಹಂಚಿಕೊಂಡ ಜರ್ಮನ್ ಪ್ರವಾಸಿಗ, "ಇದು 'ಏಕ್ ನಂಬರ್' ಅನುಭವ. "ನಾನು ವಿದೇಶಿಯಾಗಿದ್ದರೂ ಈ ಸೇವೆಯನ್ನು ನನಗೆ ಉಚಿತವಾಗಿ ಒದಗಿಸಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ. ಅಲ್ಲದೇ ಜರ್ಮನಿಯಲ್ಲಿ ಇದೇ ಪರೀಕ್ಷೆಗಾಗಿ ಮೊದಲು ವೈದ್ಯರ ಅಪಾಯಿಂಟ್‌ಮೆಂಟ್ ಪಡೆಯಲು ಹಲವು ತಿಂಗಳು ಕಾಯಬೇಕಾಗುತ್ತಿತ್ತು. ಆದರೆ ಭಾರತದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲೇ ತಕ್ಷಣ ಪರೀಕ್ಷೆ ನಡೆಸಿ ಉಚಿತ ಚಿಕಿತ್ಸೆ ನೀಡಿದರು," ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಅನೇಕರು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮೆಚ್ಚಿಕೊಂಡಿದ್ದಾರೆ. ಕೆಲವರು ಭಾರತದಲ್ಲಿನ ಸರ್ಕಾರಿ ಆಸ್ಪತ್ರೆಗಳ ಸೇವೆ ಉತ್ತಮವಾಗುತ್ತಿರುವುದಕ್ಕೆ ಇದು ಉದಾಹರಣೆ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ವಿವಿಧ ರಾಜ್ಯಗಳಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟ ಒಂದೇ ರೀತಿಯಲ್ಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

PREV
Read more Articles on
click me!

Recommended Stories

ಊಟಕ್ಕೆ ಗಂಡನಿಗೂ ಚಾರ್ಜ್​ ಮಾಡ್ತಾಳೆ: 1 ಸಾವಿರ ಕೊಟ್ರೆ ಮಾತ್ರ ಫುಲ್​ ಮೀಲ್ಸ್​- ರಾತ್ರೋರಾತ್ರಿ ಸ್ಟಾರ್​ ಆದವಳ ಸ್ಟೋರಿ
ಬೆಂಗಳೂರಲ್ಲಿ ಬ್ರಿಟೀಷ್ ಗವರ್ನರ್ ವಾರನ್ ಹೇಸ್ಟಿಂಗ್ ಸಹಿಯುಳ್ಳ 230 ವರ್ಷಗಳ ಹಿಂದಿನ ಚೆಕ್ ಪತ್ತೆ!